ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಅಮರೇಶ ಎಂಕೆ

Tears Drawing, Pencil, Sketch, Colorful, Realistic Art Images | Drawing  Skill

ಮುಳುಗಿಸಿ ಮೋಜು ನೋಡುತ್ತಿರಬಹುದು ಮೋಡಗಳು
ಆಸರೆಯಾಗಲು ಕೈಚಾಚುತ್ತಿರಬಹುದು ಗಿಡಗಂಟೆಗಳು

ಉರಿಬಿಸಿಯೆಲ್ಲಾ ತಣ್ಣಗಾಗಿ ಮೌನಕ್ಕೆ ಮೊರೆ ಹೋಗಿದೆ
ಕ್ರಿಮಿಕೀಟಗಳ ಆಟ ಗಮನಿಸುತ್ತಿರಬಹುದು ಮರಗಳು

ನೀಲಿ ಬಾನಿಗೆ ಬಿಳಿ ಪರದೆ ಎಳೆದು ಓಡಾಟ ನಡೆದಿದೆ
ಮತ್ತೆ ಮಳೆಯಾದರೆ ಆಳ ತಿಳಿಸಬಹುದು ಕಂಬಗಳು

ನೆಲ ನುಂಗಿದ ಬೇರುಗಳನು ನೀರು ನುಂಗಿರಬಹುದೇ
ವಾಸ್ತವ ಅರಿಯಲು ದಡಕ್ಕೆ ಕರೆತರಬಹುದು ಜನಗಳು

ಇಷ್ಟೊಂದು ನೀರು ಮಳೆ ನೀರಲ್ಲ ನೋಡು ‘ಅಮರ’
ದುಃಖದಿ ಮಡುಗಟ್ಟಿ ನಿಂತಿರಬಹುದು ಕಣ್ಣ ಹನಿಗಳು

************************

About The Author

1 thought on “ಗಜಲ್”

Leave a Reply

You cannot copy content of this page

Scroll to Top