ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ನೀನಿನ್ನೂ ಅಪರಿಚಿತನೇನು….?

ಅನುವಾದಿತ ಕವಿತೆ ನೀನಿನ್ನೂ ಅಪರಿಚಿತನೇನು….? ಇಂಗ್ಲೀಷ್ ಮೂಲ-ವಿಜಯಲಕ್ಷ್ಮೀ ಪುಟ್ಟಿ ಕನ್ನಡಕ್ಕೆ-ಸಮತಾ ಆರ್. ನೀನಿನ್ನೂ ಅಪರಿಚಿತನೇನು….? ಇತ್ತೀಚೆಗೆ ಯಾಕೋನೀ ಅಪರಿಚಿತ ಅನಿಸತೊಡಗಿಮತ್ತಿನ್ನೊಮ್ಮೆ ನಂಟು ಬೆಳೆಸಲು ಯತ್ನಿಸಿದರೂಎದೆಯಲ್ಲಿ ಏನೋಪ್ರಶ್ನೆಯೊಂದುತಡಕುತಿದೆಏನಾಯಿತು?ಯಾಕೀ ಕೋಪ?ನನ್ನ ತಪ್ಪೇನು?ಎದುರಾದಾಗ ಹೇಗೆ ದಿಟ್ಟಿಸಲಿ ನಿನ್ನ ಕಣ್ಣ ? ಆದರೂ ಹೊಸ ಭರವಸೆ,ಹೊಸ ಪಯಣ,ಹೊಸ ಪ್ರಮಾಣ ಕಾಯುತಿರುವೆಹೃದಯತುಂಬಿ ನಾ..ಯಾರದೋ ಆಗಮನಅರಿಯದ ತಳಮಳ ಗಲಿಬಿಲಿ ಸುಗಂಧವೊಂದು ಗಾಳಿಯಲಿ ತೇಲಿದಂತೆ ನಿನ್ನ ಸಾವಿರಾರು ನೆನಪುಗಳು. ಇಂದೇನಿದು ನನ್ನಲ್ಲಿ,ಯಾವತ್ತೂ ನಾನರಿಯದ ಈ ಚಡಪಡಿಕೆ.ಹಿಂದೆಂದೂ ಇರದಿದ್ದ ಮನೋಕಾಮನೆ.ಕಾತುರದ ಕಂಗಳು ಹುಡುಕುತ್ತಿವೆ ನಿನ್ನನ್ನೇ.ಎನ್ನ ಜೀವನದ ಹೊತ್ತಿಗೆಯ ಚಿತ್ರಪಟವಾದಅವನಿಗಾಗಿ ಮಾತ್ರ ಈ ಭಾವನೆ. ನನಗಾಗಿಯೇ,ನನ್ನ ಸಹಚರ್ಯಕ್ಕಾಗಿಯೇಸ್ವರ್ಗದಿಂದಿಳಿದು ಬಂದಂತಹ ಜಾಣ್ಮೆಯ ಮೂರ್ತಿ.ಈ ರಾಗ ರಂಗಿನಲಿ,ನನ್ನೆಡೆಗೆ ಬೀರುವ ಕಡೆಗಣ್ಣ ನೋಟಮಂಜುಗಟ್ಟಿದ ನನ್ನ ತುಟಿಗಳಲ್ಲಿನುಡಿಯದ ಭಾವಗಳು ನೂರುನನ್ನೆದೆಯ ಮಿಡಿತ ತಪ್ಪಿಸಿತೇ ನಿನಗಾಗಿ ಪದವೊಂದ..ಹುಡುಕುತ್ತಿರುವೆಇನ್ನೂ ಹುಡುಕುತ್ತಲೇ ಇರುವೆ.. *************** Are you still a stranger.. Feeling Unacquainted as strangersTrying to build a bond againBut there’s a question lingers in my heart..What happenedWhy this wrath?what’s my folly?How should I face you after we meet? But Waiting for new hopes, new joynew promises,A strange fragrance fills the airWith the coming of some oneFor whom I waited with all my heart What is this restlessnessI feel todayNever was I in this state of mind before..Eyes eagerly searching for youThis feeling is for him aloneThe one I picturedIn the book of my life.. Like an icon of intelligenceDescended from heavenHas come only for me to favor me to assist me.. In this splendorStealing furtive glances at meCausedUnspoken words upon my frozen lipsDid my heart miss a word for you..Searching..Still searching..

ನೀನಿನ್ನೂ ಅಪರಿಚಿತನೇನು….? Read Post »

ಕಥಾಗುಚ್ಛ

ನಿರಾಕರಣ

ಕಥೆ ನಿರಾಕರಣ ಎಸ್.ನಾಗಶ್ರೀ ರಾಮಕ್ಕನವರು ಅವರ ರೇಷ್ಮೆಸೀರೆಗಳನ್ನೆಲ್ಲಾ ನೆಂಟರಿಷ್ಟರಿಗೆ, ಆಪ್ತರಿಗೆ ಹಂಚಿ ಇನ್ನು ಮೇಲೇನಿದ್ದರೂ ಹತ್ತಿ ಸೀರೆಯಷ್ಟೇ ಉಡುವುದೆಂಬ ನಿರ್ಧಾರ ಪ್ರಕಟಿಸಿದಾಗ ಅವರಿಗೆ ಎಪ್ಪತ್ತೈದಾಗಿತ್ತು. ಹಾಲಿಗೆ ಅರಿಶಿನ ಬೆರೆಸಿದಂತಹ ಮೈಬಣ್ಣ, ಕಡುಗಪ್ಪು ಕಣ್ಣು, ತುಸು ಉದ್ದವಾದ ಮೂಗು, ತುಂಬುದುಟಿ, ಪುಟ್ಟ ಚೆಂಡಿನ ಗಾತ್ರದ ತುರುಬಿನ ರಾಮಕ್ಕ ನೋಡಿದರೆ, ಮತ್ತೆ ತಿರುಗಿ ನೋಡಬೇಕೆನ್ನಿಸುವ ಲಕ್ಷಣವಂತೆ. ಮುತ್ತೈದೆಯಾಗಿದ್ದಾಗಿನ ಕಾಲದಲ್ಲಿ ಮಹಾಲಕ್ಷ್ಮಿಯೇ ಎಂದು ಜನ ಕೈಯೆತ್ತಿ ಮುಗಿಯುತ್ತಿದ್ದರಂತೆ. ಕರಿಮಣಿ ಸರ, ಕಾಲುಂಗುರ ತೆಗೆದರೂ ಚಿನ್ನದ ಸರ, ವಜ್ರದ ಮೂಗುತಿ, ಚಿನ್ನದ ಎರಡೆರಡು ಬಳೆ ಧರಿಸಿದ ರಾಮಕ್ಕನವರ ಪ್ರಭೆ ಇದ್ದ ಹಾಗೇ ಇತ್ತು. ಐವತ್ತನೆಯ ವಯಸ್ಸಿನಲ್ಲಿ ಗಂಡ ತೀರಿಕೊಂಡಾಗ ಬೆಳೆದ ಮಕ್ಕಳಿದ್ದರು. ಹೆಣ್ಣುಮಕ್ಕಳ ಮದುವೆಯಾಗಿತ್ತು. ಮೂರು ಗಂಡುಮಕ್ಕಳಿಗೆ ಮುತುವರ್ಜಿಯಿಂದ ಒಳ್ಳೆ ಕಡೆ ಹೆಣ್ಣು ತಂದು ಮದುವೆ ಮಾಡಿ, ಮೊಮ್ಮಕ್ಕಳನ್ನು ಲಾಲಿಸಿ, ಹೆಮ್ಮೆಯಿಂದ ಹರಸುವುದರಲ್ಲಿ ಕಾಲ ಮುಂದಕ್ಕೆ ಓಡಿದ್ದು ಸುಳ್ಳೆನಿಸುತ್ತಿತ್ತು.  ತನಗಿಂತ ಇಪ್ಪತ್ತು ವರ್ಷ ಹಿರಿಯನಾದ ಹುಡುಗನಿಗೆ ಮೂರನೆ ಹೆಂಡತಿಯಾಗಿ ರಮಾ ಮದುವೆಯಾಗಿ ಬಂದಾಗ, ಮನೆ ತುಂಬಾ ಅತ್ತೆ, ಮಾವ, ಓರಗಿತ್ತಿ, ಭಾವಂದಿರು, ಮೈದುನರು ಮತ್ತು ಅವರ ಮಕ್ಕಳು. ಇವರಿಗೆ ಮದುವೆಯಾಗಿ ಬಂದ ಹೆಂಡಿರಿಬ್ಬರೂ ಚೊಚ್ಚಲ ಹೆರಿಗೆಯಲ್ಲಿ ತೀರಿಕೊಂಡಿದ್ದರು. ತಾಯಿ ದಿಕ್ಕಿಲ್ಲದ ಮನೆಯ ಹಿರಿ ಹುಡುಗಿ ಅಂತ ಮಾವನವರು ಸ್ವಲ್ಪ ಹೆಚ್ಚೇ ಪ್ರೀತಿ ತೋರಿಸುತ್ತಿದ್ದರು. ಗಂಡನಿಗೆ ಹದಿನಾಲ್ಕರ ಎಳೆ ಹುಡುಗಿ ತನ್ನನ್ನು ನಂಬಿ ಬಂದಿದ್ದಾಳಲ್ಲ ಎಂಬ ಕನಿಕರ. ದುಡ್ಡಿಗೆ ಬಡತನವಿಲ್ಲದ ಮನೆ. ರೂಪವತಿ ಹೆಂಡತಿ. ಹೆಂಡತಿಗೆ ಇಷ್ಟವಾಗಬಹುದೆಂದು ತರತರದ ಸೀರೆ, ಕುಪ್ಪುಸದ ಬಟ್ಟೆ ತಂದು ತಂದು ಹಾಕುತ್ತಿದ್ದರು. ಮೈಮೇಲೆ ಒಂದು ಜೊತೆ , ದಂಡದ ಮೇಲೆ ಒಂದು ಜೊತೆ ಎಂದು ಎಣಿಸಿದಂತೆ ಬಟ್ಟೆಯಿದ್ದ ಅಮ್ಮನ ಮನೆಗಿಂತ ಈ ಮನೆ ಖುಷಿ ಕೊಡುತ್ತಿತ್ತು. ಅದೇ ಖುಷಿಯಲ್ಲೇ ಹದಿನಾರನೇ ವಯಸ್ಸಿನಲ್ಲಿ ಚೊಚ್ಚಲ ಬಸುರಿಯೆಂದು ತಿಳಿದಾಗ, ಅಪ್ಪನಿಗೆ ಆನಂದ. ಅತ್ತೆ ಮನೆಯಲ್ಲಿ ಆತಂಕ. ಪ್ರತಿದಿನ ಪೂಜೆ, ಹರಕೆಗಳ ಬಾಬತ್ತು. ಬಹಳ ಮುಗ್ಧ ಮನಸ್ಸಿನ ರಮಾಗೆ ಆನಂದ, ಆತಂಕಗಳಾವುದೂ ಅಷ್ಟಾಗಿ ತಟ್ಟದಿದ್ದರೂ, ಒಂದೊಮ್ಮೆ ತಾನೂ ಹೆರಿಗೆಯಲ್ಲಿ ಸತ್ತರೆ ಎಂಬ ಭಯ ಆಗಾಗ ಆವರಿಸುತ್ತಿತ್ತು. ಆದರೆ ಜೋತಿಷಿಯಾದ ಅಪ್ಪನೇ ಹೇಳುತ್ತಿದ್ದಂತೆ ದೀರ್ಘಾಯುಷ್ಯ ದ ಜಾತಕ ನನ್ನದು ಎಂಬ ಧೈರ್ಯ ಸಾಂತ್ವನ ನೀಡುತ್ತಿತ್ತು. ಅಂತೂ ಹೆರಿಗೆ ಸುಸೂತ್ರವಾಗಿ ಮಗು ಬಾಣಂತಿ ಮನೆಗೆ ಬಂದಾಗ ಎಲ್ಲರಿಗೂ ನೆಮ್ಮದಿಯ ನಿಟ್ಟುಸಿರು. ಬಹಳ ಮುದ್ದಿನಿಂದ ಮಗಳಿಗೆ ‘ಆನಂದಿ’ ಎಂದು ಕರೆದರು. ಹಿರಿಮಗಳಾದ್ದರಿಂದ ತಮ್ಮ, ತಂಗಿಯರ ಜವಾಬ್ದಾರಿಯೂ ಹೆಗಲೇರಿ ರಮಾ , ಎಲ್ಲರ ಬಾಯಲ್ಲೂ ರಮಕ್ಕ, ರಮಕ್ಕ ಅಂತ ಕರೆಸಿಕೊಳ್ತಾ ಕಡೆಗೆ ನಾಲಿಗೆ ಹೊರಳಿದಂತೆ ರಾಮಕ್ಕನಾದಳು. ರಮಾದೇವಿಯೆಂಬ ಹೆಸರು ಹದಿನಾರನೇ ವಯಸ್ಸಿಗೇ ಕಳಚಿಕೊಂಡಿತು. ಗಂಡ ಮಾತ್ರ ಆಗಾಗ ದೇವಿ…ದೇವಿ…ಎಂದುಸುರುತ್ತಾ ಹತ್ತಿರವಾದ ಕ್ಷಣಗಳು ಆಗೀಗ ನೆನಪಾಗಿ ಕಣ್ತುಂಬುವುದು.ತುಂಬಿದ ಸಂಸಾರದ ಕಟ್ಟುಪಾಡು, ತವರಿಗೆ ಆಸರೆಯಾಗಬೇಕಾದ ಅನಿವಾರ್ಯ, ತನ್ನ ಆರು ಮಕ್ಕಳ ಜವಾಬ್ದಾರಿ, ವಯಸ್ಸಿನಲ್ಲಿ ತುಂಬಾ ಹಿರಿಯನೆನನ್ನಿಸುವ ಗಂಡ ಇವುಗಳಲ್ಲಿ ಮುಳುಗೇಳುತ್ತಾ ರಾಮಕ್ಕ ವಯಸ್ಸಿಗೆ ಮೀರಿದ ಪ್ರಬುದ್ಧತೆ ಸಂಪಾದಿಸಿಕೊಂಡಿದ್ದಳು. ತೆರೆದ ಕಣ್ಣು, ಕಿವಿಗಳಿಂದ ಜಗತ್ತನ್ನು ನೋಡುತ್ತಲಿದ್ದರೆ ಸಾಕು. ಯಾವ ವಿದ್ಯಾಭ್ಯಾಸವೂ ನೀಡದಷ್ಟು ವಿವೇಕವನ್ನು ಜಗತ್ತು ಕಲಿಸುತ್ತದೆಂದು ನಂಬಿದ್ದಳು. ಅದರಂತೆಯೇ ರಕ್ತಗತವಾಗಿದ್ದ ಧೈರ್ಯ, ಏನಾದರೂ ಸಾಧಿಸಿಬಿಡುವ ಛಾತಿಯಿಂದಲೂ ಮನೆಯಲ್ಲಿ ಗೌರವ, ಪ್ರತ್ಯೇಕ ಸ್ಥಾನವನ್ನು ಗಳಿಸಿದ್ದ ಆಕೆಯ ಮಾತಿಗೆ ಎದುರಾಡುವರೇ ಇರಲಿಲ್ಲ. ಈಗಲೂ ಒಂದು ಬೀರು ಭರ್ತಿಯಿದ್ದ ಕಂಚಿ, ಬನಾರಸಿ, ಇಳಕಲ್, ಮೊಳಕಾಲ್ಮೂರು, ಮೈಸೂರ್ ಸಿಲ್ಕ್ ಸೀರೆಗಳನ್ನು ಎಲ್ಲರಿಗೂ ಹಂಚುತ್ತಿದ್ದರೂ ಯಾರೊಬ್ಬರೂ ಪ್ರಶ್ನಿಸಲಾಗಲಿಲ್ಲ. ಎಪ್ಪತ್ತು ಎಂಭತ್ತು ಸೀರೆಗಳು ಒಂದೊಂದೂ ಐದಾರು ಸಾವಿರಕ್ಕೆ ಕಮ್ಮಿ ಹೇಗಾದೀತು? ಅದರಲ್ಲೂ ಹಳೆ ಸೀರೆಗಳ ಅಂಚಿನಲ್ಲಿ ಬೆಳ್ಳಿ, ಬಂಗಾರವಿರದೆ ಇರುತ್ತದೆಯೇ? ಮನುಷ್ಯನಿಗೆ ಎಷ್ಟು ಆಸ್ತಿಪಾಸ್ತಿಯಿದ್ದರೂ ಹೆತ್ತವರ ಸ್ವತ್ತು ಪರರ ಪಾಲಾಗುವುದನ್ನು ನೋಡಿ ಸಹಿಸಲು ಸಾಧ್ಯವೇ? ರಾಮಕ್ಕನವರ ಈ ದಿಢೀರ್ ಬದಲಾವಣೆ ಅಷ್ಟು ಸುಲಭಕ್ಕೆ ಯಾರಿಗೂ ನಿಲುಕಲಿಲ್ಲ. ನಿನ್ನೆ ಮೊನ್ನೆಯವರೆಗೂ ಕುಟುಂಬದ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಕಡೆಗೆ ಒಂದು ಹೋಟೆಲ್ಗೆ ಹೋಗುವಾಗಲೂ ರೇಷ್ಮೆ ಸೀರೆ, ಅದಕ್ಕೊಪ್ಪುವ ರವಿಕೆ, ಎರಡೆಳೆ ಚಿನ್ನದ ಸರದ ಜೊತೆಗೆ ಮುತ್ತಿನ ಸರ, ಅಥವಾ ಹವಳದ ಸರ ತೊಟ್ಟು ಒಂದು ಬಗೆಯ ಗಾಂಭೀರ್ಯದಿಂದ ನಡೆದು ಬರುತ್ತಿದ್ದ ತಮ್ಮ ತಾಯಿ ಈಗ ಸಾದಾ ಸೀರೆ ಬಿಟ್ಟು ಮತ್ಯಾವುದೂ ಬೇಡವೆಂದಿದ್ದು ಗುಲ್ಲಾಗಿತ್ತು. ಮೂವರು ಸೊಸೆಯರು ತಮ್ಮಲ್ಲೂ ಸೀರೆಗಳ ರಾಶಿ ಹೊಂದಿದ್ದರೂ, ಅವರು ತಮ್ಮ ಮಕ್ಕಳ ಚೌಲ, ಉಪನಯನ, ಮದುವೆ, ಗೃಹಪ್ರವೇಶ ಇತ್ಯಾದಿಗಳಲ್ಲಿ ಪಾದಪೂಜೆಗೆಂದು ನಾಲ್ಕಾರು ಅಂಗಡಿ ಸುತ್ತಿ, ಸಾವಿರಾರು ರುಪಾಯಿ ಖರ್ಚು ಮಾಡಿ ತಂದ ಸೀರೆಗಳನ್ನು ಬೇಕೆಂದವರಿಗೆ ಕೊಟ್ಟುಬಿಡುತ್ತಿರುವುದು ಸರಿ ಕಂಡಿರಲಿಲ್ಲ. ಇನ್ನು ಕೆಲವು ಸೀರೆಗಳು ಕೊಡುವುದಾದರೆ ತಮಗೇ ಕೊಡಲಿ ಎನ್ನಿಸುವಷ್ಟು ಚೆಂದಿದ್ದವು. ಗಿಣಿಹಸುರಿಗೆ ಗಾಢನೀಲಿ ಅಂಚಿದ್ದ ಕಂಚಿ ಸೀರೆ, ನೇರಳೆ ಬಣ್ಣದ ಬನಾರಸಿ ಸೀರೆ, ಹತ್ತಾರು ಬಣ್ಣದ ಮೈಸೂರ್ ಸಿಲ್ಕ್ ಗಳ ಮೇಲೆ ಆಸೆಯಿಟ್ಟುಕೊಂಡಿದ್ದ ಸೊಸೆಯರು ಆಡಲೂ ಆಗದೆ , ಸುಮ್ಮನಿರಲೂ ಆಗದೆ ತಳಮಳಿಸುವಾಗಲೇ ರಾಮಕ್ಕನವರು ಸೊಸೆಯರು, ಹೆಣ್ಣುಮಕ್ಕಳು, ಮೊಮ್ಮಕ್ಕಳು ಎಲ್ಲರೂ ಒಂದು ಶನಿವಾರ ತಾವಿರುವಲ್ಲಿಗೆ ಬನ್ನಿರೆಂದು ಕರೆದರು. ಏನಿದ್ದರೂ ಫೋನಿನಲ್ಲಿ ವಾರಕ್ಕೊಂದೆರಡು ಸಲ ತಮ್ಮತಮ್ಮಲ್ಲೇ ಮಾತಾಡಿಕೊಂಡಿರುತ್ತಿದ್ದ ಸೊಸೆಯರು, ಹೆಣ್ಣು ಮಕ್ಕಳು ಒಟ್ಟಾಗಿ ಸೇರಿ ಆರುತಿಂಗಳ ಮೇಲೇ ಆಗಿತ್ತು. ಆನಂದಿ ತೀರಿಕೊಂಡಾಗ ತಿಥಿ, ವೈಕುಂಠ ಅಂತ ಹೋದ ಹದಿನೈದು ದಿನಗಳೊಳಗೆ ಜೊತೆಯಾಗಿ ಹೋಗಿ ಬಂದಿದ್ದಷ್ಟೇ. ಆಮೇಲೆ ಸಿಗುವ ಸಂದರ್ಭ ಒದಗಿಬರಲಿಲ್ಲ. ಮಾತು ಹೇಗೆ ತಿರುಗಿದರೂ ಆನಂದಿಯ ವಿಷಯಕ್ಕೇ ಬಂದು ನಿಂತು ನಿರ್ವಾತ ಕವಿಯುತ್ತಿತ್ತು. ಆ ಮುಜುಗರದಿಂದ ಪಾರಾಗಲೋ ಎಂಬಂತೆ ಮೇಲೆಮೇಲೆ ಕುಶಲ ಸಂಭಾಷಣೆ ನಡೆಸಿ ಫೋನಿಟ್ಟುಬಿಡುವ ದಾರಿ ಹಿತವಾಗಿತ್ತು. ಈಗ ಶುರುವಾದ ಸೀರೆ ವಿವಾದ ಮತ್ತು ರಾಮಕ್ಕನ ಕರೆ ಗಮನವನ್ನು ಬೇರೆಡೆಗೆ ಹೊರಳಿಸಿದ್ದು ಕೂಡ ಒಳಿತೇ ಆಯಿತು. ರಾಮಕ್ಕರ ಆರು ಮಕ್ಕಳ ಪೈಕಿ ಆನಂದಿಯೇ ವಿಭಿನ್ನ. ಮೌನಿ. ಧಾರಾಳಿ. ಆದರೆ ಸದಾ ಕೊರಗನ್ನು ಹಚ್ಚಿಕೊಂಡೇ ಬಾಳಿದ ಹೆಣ್ಣು. ಒಳ್ಳೆಯ ಗಂಡ, ಮುದ್ದಾದ ಮಕ್ಕಳು, ಸ್ವಂತ ಮನೆ, ಸ್ವಾತಂತ್ರ್ಯ ಎಲ್ಲ ಇದ್ದೂ ತಾನು ಕನಸಿದ್ದ ಬಾಳು ಇದಲ್ಲ ಎಂದು ನಿರಾಕರಣೆಯಲ್ಲೇ ದಿನದೂಡಿದಳು. ಅಮ್ಮನೊಂದಿಗೆ ಆಡಿದ ಕೆಲವೇ ಮಾತುಗಳಲ್ಲೂ ಅತೃಪ್ತಿಯ ಅಂಶಗಳಿದ್ದವೇ ಹೊರತು ಜೀವನಪ್ರೀತಿಯಲ್ಲ. ಆನಂದಿಯ ಮುಖದಲ್ಲಿ ನಗುವನ್ನು ಮೂಡಿಸಲು ರಾಮಕ್ಕ ಪಟ್ಟಪಾಡು ಒಂದೆರಡಲ್ಲ. ಅವಳಿಗಿಷ್ಟದ ತಿಂಡಿ, ಬಟ್ಟೆ, ಪ್ರವಾಸ, ನೆಮ್ಮದಿ ತರಬಹುದಾದ ಮಾತು, ಸಂಗೀತ, ಬೆಚ್ಚನೆ ತವರು ಎಲ್ಲವನ್ನೂ ಪ್ರಯತ್ನಿಸಿ ಕಡೆಗೆ ಮಾನಸಿಕ ವೈದ್ಯರ ಹತ್ತಿರವೂ ತೋರಿಸಿ , ಚಿಕಿತ್ಸೆಯಾಯಿತು. ಔಷಧಿಯ ಪ್ರಭಾವದಿಂದ ಸ್ವಲ್ಪ ಚೇತರಿಕೆ ಕಂಡಂತಾದರೂ ಮತ್ತೆ ಯಥಾಸ್ಥಿತಿಗೆ ಮರಳುತ್ತಿದ್ದ ಮಗಳು ಜೀವನದ ಸವಾಲಾಗಿದ್ದಳು.ಅವಳಿಗೆಂದು ಆಸೆಯಿಂದ ಕೊಂಡುಹೋದ ತಿಂಡಿ, ಹಣ್ಣು, ಬಟ್ಟೆ, ಒಡವೆ ಯಾವುದನ್ನೂ ಆಕೆ ತನಗಾಗಿ ಉಳಿಸಿಕೊಳ್ಳುತ್ತಲೇ ಇರಲಿಲ್ಲ. ಎಲ್ಲವನ್ನೂ ಹಂಚಿ, ತಾನು ಮಾತ್ರ ಹಿಡಿಯನ್ನ, ನಾಲ್ಕಾರು ಸಾದಾ ಸೀರೆ, ಮಂಕಾದ ರವಿಕೆಯಲ್ಲೇ ಜೀವನ ಸವೆಸಿಬಿಟ್ಟಳು. ಏಕೆಂದು ಘಟ್ಟಿಸಿ ಕೇಳುವಂತಿಲ್ಲ. ನನಗೇನು ರೂಪ, ವಿದ್ಯೆ, ಅಧಿಕಾರ ಇದೆಯೇ? ನಿನ್ನಂತೆ ಮೆರೆಯಲು… ಕೊಟ್ಟ ಮೇಲೆ ಅದು ನನ್ನದೆನ್ನುವ ಹಾಗಿದ್ರೆ ಕೊಡು. ಇಲ್ಲದಿದ್ದರೆ ತರುವ ಉಸಾಬರಿಯೇ ನಿನಗೆ ಬೇಡವೆನ್ನುತ್ತಿದ್ದಳು. ಸಮಾರಂಭಗಳಲ್ಲಿ ಉಳಿದವರೆಲ್ಲಾ ಮಿಂಚುತ್ತಿದ್ದರೆ, ತಾನೊಂದು ಮೂಲೆಯಲ್ಲಿ ಇವರಾರಿಗೂ ಸಂಬಂಧಿಸಿಯೇ ಇಲ್ಲವೆಂಬ ನಿರ್ಲಿಪ್ತ ಭಾವದಲ್ಲಿ ಕುಳಿತಿರುತ್ತಿದ್ದಳು. ನಾನು ಹಳೆಸೀರೆಯುಟ್ಟು ಬರುವುದು ನಿಮಗೆ ಇರುಸುಮುರುಸಾದೀತೆಂದು ಜನ ಸೇರುವಲ್ಲಿಗೆ ಬರುವುದನ್ನೇ ಬಿಟ್ಟಳು. ಒಂಟಿಯಾಗಿರುತ್ತ ಅದೇನನ್ನು ಧೇನಿಸುತ್ತಿದ್ದಳೋ? ಮಗಳೇ ಆದರೂ ರಾಮಕ್ಕನಿಗೆ ಅವಳ ಅಂತರಂಗವನ್ನು ಅರಿಯುವುದು ಅಸಾಧ್ಯ. ಉಳಿದೈದು ಮಕ್ಕಳಿಗೆ ಸೇರಿ ತೋರುವ ಕಾಳಜಿಗಿಂತ ಎರಡು ಪಟ್ಟು ಹೆಚ್ಚೇ ಕಾಳಜಿ ತೋರಿದರೂ, ಆನಂದಿಗೆ ಪ್ರಸನ್ನತೆಯಿರಲಿಲ್ಲ. ಇದ್ದಕ್ಕಿದ್ದಂತೆ ಹೃದಯ ಸ್ತಂಭನವುಂಟಾಗಿ ತೀರಿಕೊಂಡ ಆಕೆಯ ಸಾವು ರಾಮಕ್ಕನನ್ನು ಬಲವಾಗಿ ತಟ್ಟಿತ್ತು. ಐವತ್ತೊಂಭತ್ತು ಸಾಯುವ ವಯಸ್ಸೇ? ಎಪ್ಪತ್ತೈದರ ತನಗೇ ಈ ಬದುಕಿನ ಸವಿಯನ್ನು ಇನ್ನಷ್ಟು ಸವಿಯಬೇಕೆನ್ನಿಸುವಾಗ ನಿರಾಕರಣೆಯಲ್ಲೇ ಬದುಕು ದೂಡಿದ ಆಕೆ ಅನುಭವಿಸಿದ್ದಾದರೂ ಏನನ್ನು?   ಬದುಕಿನ ಹಂಬಲ ಅಪರೂಪವೇ? ತನ್ನನ್ನು ಈ ಬದುಕಿಗೆ ಕಟ್ಟಿಹಾಕಿರುವುದಾದರೂ ಏನು? ವಯಸ್ಸಾದಂತೆ ಮೋಹ ಕಳಚಿಕೊಳ್ಳಬೇಕೆನ್ನುತ್ತಾರೆ. ತನಗೇಕೆ ವೈರಾಗ್ಯ ಸೋಕಿಲ್ಲ? ಹೀಗೆ ನೂರಾರು ಪ್ರಶ್ನೆಗಳು ತಲೆತಿನ್ನುತ್ತಿತ್ತು. ಇದುವರೆಗೂ ಕೂಡಿಟ್ಟುಕೊಳ್ಳುವುದರಲ್ಲಿ, ಉಂಡುಟ್ಟು ಸಂಭ್ರಮಿಸುವುದರಲ್ಲಿ ಕಳೆದ ಕಾಲದ ಬಗ್ಗೆ ವಿಷಾದವಿಟ್ಟುಕೊಳ್ಳದೆ, ಮುಂದೆ ಸರಳವಾಗುತ್ತಾ ಸಾಗಲು ಪ್ರಯತ್ನಿಸಬೇಕೆನ್ನಿಸಿತು. ಆನಂದಿಯ ಸಾವು , ತನ್ನ ಮೊದಲ ಕರುಳಕೂಸಿನ ಅಗಲುವಿಕೆ ತನ್ನ ಬದುಕಿನ ಮತ್ತೊಂದು ತಿರುವು. ಉದಾರವಾಗಿ ಕೊಡುವುದರಲ್ಲಿ ತೃಪ್ತಿಯನ್ನು ಕಂಡಿದ್ದ, ಮೌನವಾಗಿ ಕಾರ್ಯ ಸಾಧಿಸುತ್ತಿದ್ದ ಮಗಳು ಬದುಕಿನ ಸವಾಲಾಗಿರಲಿಲ್ಲ. ಗುರುವಾಗಿದ್ದಳೆನ್ನಿಸಿ ಗಂಟಲುಬ್ಬಿ ಬಂದಿತು. ಅವಳಿದ್ದಷ್ಟು ದಿನವೂ ಅವಳಿಗೆ ಹೊರಗಿನಿಂದ ನೆಮ್ಮದಿಯನ್ನು ಹುಡುಕಿಕೊಡುವ ಸಕಲ ಸಾಹಸಗಳನ್ನು ಮಾಡಿದೆನೇ ಹೊರತು, ಅವಳಾಗಿಯೇ ಬದುಕನ್ನು ಅರ್ಥೈಸಿಕೊಳ್ಳಲು ಬಿಡಲೇ ಇಲ್ಲವೆನಿಸಿತು. ಅಥವಾ ಅವಳು ಕಂಡುಕೊಂಡಿದ್ದ ಅರ್ಥವನ್ನು ತನಗೆ ದಾಟಿಸದೆ ಹೊರಟಳೇನೋ ಎಂದು ವ್ಯಥೆಯಾಯಿತು. ತನಗೆಂದು ಏನನ್ನೂ ಶೇಖರಿಸದೆ, ಇರುವಾಗಲೇ ಎಲ್ಲವನ್ನೂ ಕೊಟ್ಟು ಹಾಯಾಗಿ ಹೊರಟುಬಿಟ್ಟ ಮಗಳು ಬಾಳಿ ಹೋದ ಪಾಠವನ್ನು ಕಲಿಯಲು ರಾಮಕ್ಕ ಮನಸ್ಸು ಮಾಡಿದ್ದಳು. ಮಕ್ಕಳು , ಸೊಸೆ, ಮೊಮ್ಮಕ್ಕಳೆಲ್ಲಾ ಸೇರಿ ಅಂದು ಹಬ್ಬದ ವಾತಾವರಣ ಮೂಡಿತ್ತು. ಹತ್ತು ಹದಿನೈದು ಸೀರೆಗಳನ್ನು ಅವರಿವರಿಗೆ ಕೊಟ್ಟಿದ್ದರು ಬಿಟ್ಟರೆ ಬಹುಪಾಲು ಸೀರೆಗಳು ಬೀರುವಿನಲ್ಲಿ ಭದ್ರವಾಗಿ ಕೂತಿದ್ದವು. ಬಂದವರಿಗೆಲ್ಲಾ ಅವರಿಗಿಷ್ಟದ ಸೀರೆ ಆಯ್ದುಕೊಳ್ಳುವಂತೆ ಸೂಚಿಸಿ, ಅವರ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಾ ಹೋದಂತೆ ಅತ್ಯಂತ ಸಂತೃಪ್ತ ಭಾವ ಮೈದುಂಬಿತ್ತು. ಬದುಕು ಮಗ್ಗುಲು‌ ಬದಲಿಸುತ್ತಿತ್ತು. ……..

ನಿರಾಕರಣ Read Post »

ಅಂಕಣ ಸಂಗಾತಿ, ನೆಲಸಂಪಿಗೆ

ನಮ್ಮ ನಡುವಿನ  ಜೀವಪರ ಕಾಳಜಿಯ ಕವಯಿತ್ರಿ ವಿಜಯಶ್ರೀ ಹಾಲಾಡಿಯವರು  ಸಂಗಾತಿಗಾಗಿ ಬರೆಯುತ್ತಿದ್ದಾರೆ. ಅಂಕಣದ ಮೊದಲ ಕಂತು ನಿಮ್ಮ ಮುಂದಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಈ ಅಂಕಣ ಪ್ರಕಟವಾಗಲಿದೆ

Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-35 ಗುರೂಜಿಯವರು ರೋಹಿತ್ ನ ನಿರುತ್ಸಾಹವನ್ನು ಗಮನಿಸಿದರಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ, ‘ದಾರಿ ಬಹಳ ಸುಲಭದ್ದೇ ರೋಹಿತರೇ. ನಮ್ಮ ಜನಸಾಮಾನ್ಯರಲ್ಲಿ ಯಾವೊಂದು ಹೊಸ ಬದಲಾವಣೆ ತರಬೇಕಿದ್ದರೂ ಅಥವಾ ಅವರು ತಮ್ಮ ಜೀವನದಲ್ಲಿ ಯಾವುದೇ ಲಾಭ, ಯಶಸ್ಸು ಗಳಿಸಬೇಕಿದ್ದರೂ ಅಂಥವರೊಳಗೆ ಯಾವುದಾದರೊಂದು ವಿಷಯದಲ್ಲಿ ಅತಿಯಾದ ಭಯವಿರಬೇಕು. ಆಗಲೇ ಅವರು, ನಮ್ಮ ದೇವರು ದಿಂಡರುಗಳ ಮೊರೆ ಹೋಗಲು ಸಾಧ್ಯ ಎಂಬುವುದನ್ನು ನಾವು ಅನುಭವದಿಂದಲೇ ಕಂಡಿದ್ದೇವೆ. ಹೀಗಾಗಿ ಅವರಲ್ಲಿ ಅಂಥ ಸಾತ್ವಿಕ ಭಯವೊಂದನ್ನು ನಾವು ಸೃಷ್ಟಿಸಬೇಕು. ಅದು ಹೇಗೆ? ಅಂತನೂ ಬಹಳ ಚಿಂತಿಸಿದೆವು. ಕೊನೆಗೆ ಒಂದು ಉಪಾಯ ಹೊಳೆಯಿತು. ಆದರೆ ಅದಕ್ಕೆ ನಿಮ್ಮದೂ ಸಂಪೂರ್ಣ ಸಹಕಾರ ಬೇಕಾಗುತ್ತದೆ. ಮಾಡಬಲ್ಲಿರಾ…?’ ಎಂದು ನಗುತ್ತ ಅಂದವರು, ‘ಹ್ಞಾಂ, ಅದನ್ನು ನೀವು ಪುಕ್ಕಟೆಯಾಗಿ ಮಾಡಬೇಕಾಗಿಲ್ಲ ರೋಹಿತರೇ. ಪ್ರತಿಫಲವಾಗಿ ನಾವೇನು ಕೊಡಬೇಕೆಂದಿದ್ದೇವೋ ಅದು ಕೂಡಲೇ ನಿಮಗೆ ದಕ್ಕುತ್ತದೆ!’ ಎಂದರು ನಯವಾಗಿ. ಆದರೆ ರೋಹಿತ್ ಒಮ್ಮೆಲೇ ಗೊಂದಲಕ್ಕೆ ಬಿದ್ದು, ‘ನನ್ನಿಂದೆಂಥ ಸಹಕಾರ ಸರ್ ನಿಮಗೆ…?’ ಎಂದು ನಕ್ಕವನು, ‘ಪರ್ವಾಗಿಲ್ಲ, ವಿಷಯ ಏನೆಂದು ಬಿಡಿಸಿ ಹೇಳಿ. ಸಾಧ್ಯವಾದರೆ ಮಾಡುತ್ತೇನೆ!’ ಎಂದ. ‘ಅಯ್ಯೋ, ಅದು ಅಂಥ ದೊಡ್ಡ ಕೆಲಸವೇನಲ್ಲ ರೋಹಿತರೇ. ನಾಡಿದ್ದು ಮಸಣದಗುಡ್ಡೆಯಲ್ಲಿ ಒಂದು ದೊಡ್ಡ ನಾಗಬನವು ನಮ್ಮ ಉಸ್ತುವಾರಿಯಲ್ಲಿಯೇ ಜೀರ್ಣೋದ್ಧಾರಗೊಳ್ಳಲಿದೆ. ಅಂದಿನ ನಮ್ಮ ವಿಶೇಷ ಪೂಜೆಯು ಸಂಪನ್ನಗೊಂಡು ಪೂರ್ಣಾಹುತಿಯಾಗುವ ಸಮಯಕ್ಕೆ ಸರಿಯಾಗಿ ನೀವೊಂದು ಏಳೆಂಟು ಅಥವಾ ಅದಕ್ಕಿಂತಲೂ ಹೆಚ್ಚಿದ್ದರೂ ಪರವಾಗಿಲ್ಲ, ದೊಡ್ಡ ದೊಡ್ಡ ನಾಗರಹಾವುಗಳನ್ನು ತಂದು ಭಕ್ತಾದಿಗಳ ನಡುವೆ ಅವರಿಗೆ ತಿಳಿಯದಂತೆ ಬಿಟ್ಟುಬಿಡಬೇಕು. ಆ ಹಾವುಗಳೆಲ್ಲ ಒಮ್ಮೆಲೇ ಜನರ ನಡುವೆ ನುಗ್ಗಿ ಎಲ್ಲರಿಗೂ ಕಾಣಿಸಿಕೊಳ್ಳಬೇಕು. ಆಗಲೇ ನಮ್ಮ ಜನರಲ್ಲಿ ನಾಗನ ಮೇಲೆ ಭಯಭಕ್ತಿ ಹೆಚ್ಚಾಗಲು ಸಾಧ್ಯ! ಜೊತೆಗೆ ಆ ವಿಷಯ ಕೂಡಲೇ ಪ್ರಚಾರವಾಗಿ ಊರಿನ ಒಂದಷ್ಟು ನಾಸ್ತಿಕರ ಬಾಯಿ ಮುಚ್ಚಿಸುವ ಕೆಲಸವೂ ಆಗುತ್ತದೆ. ಅಲ್ಲದೆ ನಾವು ನೀವು ಕೂಡಿಯೇ ಸಮಾಜದ ಧಾರ್ಮಿಕ ಸ್ವಾಸ್ಥ್ಯವನ್ನು ಕಾಪಾಡಿದಂತಾನೂ ಆಗುತ್ತದೆ. ಆದ್ದರಿಂದ ಈ ವಿಶೇಷ ಕಾರ್ಯವನ್ನು ನೀವು ಕೂಡಾ ಇದೇ ಉದ್ದೇಶದಿಂದ ಮಾಡಬೇಕು ಏನಂತೀರೀ…?’ ಎಂದು ಗುರೂಜಿಯವರು ಬಹಳ ಗಂಭೀರವಾಗಿ ಹೇಳಿದರು.    ಗುರೂಜಿಯವರ ಪ್ರಳಯಾಂತಕ ಯೋಜನೆಯನ್ನು ಕೇಳಿದ ರೋಹಿತ್ ಗೆ ಆಘಾತಯಿತು! ಥೂ! ಈ ಮನುಷ್ಯ ಇಂಥ ವಂಚಕನೇ…? ಹಾಗಾದರೆ ಇಷ್ಟರವರೆಗೆ ಹಿಂದೂಧರ್ಮ, ದೈವ ದೇವರು, ಶಾಸ್ತ್ರ ಸಂಪ್ರದಾಯ ಅಂತೆಲ್ಲ ಸಂಭಾವಿತನಂತೆ ಮಾತಾಡಿದೆಲ್ಲ ಬರೇ ಬೊಗಳೆಯೇ…? ಇವನಂಥವರು ಇರುವವರೆಗೆ ಯಾವ ಧರ್ಮವೂ ಉದ್ಧಾರವಾಗಲು ಸಾಧ್ಯವಿಲ್ಲ. ನಾನಿವನ ಸ್ನೇಹ ಮಾಡಿದ್ದೇ ದೊಡ್ಡ ತಪ್ಪಾಯಿತು. ಈಗಿಂದೀಗಲೇ ಇವನನ್ನು ಇಲ್ಲಿಂದ ಓಡಿಸಿಬಿಡಬೇಕು ಎಂದು ಜಿಗುಪ್ಸೆಯಿಂದ ಅಂದುಕೊಂಡವನು, ‘ಓಹೋ ಇದಾ ಸರ್ ನಿಮ್ಮ ಸಮಾಜ ಸುಧಾರಣೆಯ ಹೊಸ ಉಪಾಯ? ಇದು ಬಹಳ ಮೇಲ್ಮಟ್ಟದ್ದೇ ಬಿಡಿ. ಆಯ್ತು, ಆಯ್ತು. ಈ ಸಹಾಯವನ್ನು ಖಂಡಿತಾ ಮಾಡಬಲ್ಲೆ. ಏಳೆಂಟೇನು ಬೇಕಿದ್ದರೆ ಹತ್ತು, ಹದಿನೈದು ಹಾವುಗಳನ್ನಾದರೂ ತಂದು ನೀವು ಹೇಳಿದಲ್ಲಿ ಕಣ್ಣುಮುಚ್ಚಿ ಬಿಡಬಲ್ಲೆ. ನಾಗಾರಾಧನೆಗೆ ಪ್ರಸಿದ್ಧವಾಗಿರುವ ನಮ್ಮ ಈ ಈಶ್ವರಪುರದಲ್ಲಿ, ನಾಗರಹಾವುಗಳನ್ನು ಕಂಡಕಂಡಲ್ಲಿ ಕೈಮುಗಿದು ಕಾಪಾಡುವ ಮುಗ್ಧ ಭಕ್ತರಿರುವಾಗ ಆ ಹಾವುಗಳಿಗೇನು ಕೊರತೆ ಬಿಡಿ. ಹೌದು ನೀವು ಹೇಳಿದಂತೆ ಈ ನಮ್ಮ ಕೆಲಸದಿಂದ ನಾಗಭಕ್ತರ ಸಂಖ್ಯೆಯೇನೋ ದಿಢೀರ್ ಹೆಚ್ಚಳವಾಗುತ್ತದೆ. ಅದರೊಂದಿಗೆ ನಿಮ್ಮ ಹೆಸರು ಮತ್ತು ಕೀರ್ತಿಪತಾಕೆಯೂ ಎತ್ತರೆತ್ತರಕ್ಕೆ ಹಾರಾಡತೊಡಗುತ್ತದೆ. ಅದೂ ಸಂತೋಷದ ಸಂಗತಿಯೇ! ಆದರೆ ಅದರ ನಡುವೆ ಒಂದೆರಡು ಸಣ್ಣಪುಟ್ಟ ಅನಾಹುತಗಳೂ ನಡೆಯುತ್ತವೆಯಲ್ಲ, ಅದಕ್ಕೆ ಯಾರನ್ನು ಹೊಣೆ ಮಾಡುತ್ತೀರಿ…?’ ಎಂದು ರೋಹಿತ್ ನಗುತ್ತಲೇ ಪ್ರಶ್ನಿಸಿದ. ಅವನ ವ್ಯಂಗ್ಯ ತುಂಬಿದ ಮಾತಿನಿಂದ ಗುರೂಜಿ ತುಸು ಅವಕ್ಕಾದರು. ‘ಅನಾಹುತವೇ… ಅದೆಂಥದು ರೋಹಿತರೇ…?’ ಎಂದರು ಕಳವಳದಿಂದ. ‘ಹಾಗೆ ಕೇಳಿ ಮತ್ತೇ…! ನಿಮ್ಮ ಪೂಜಾಕಾರ್ಯ ಮುಗಿದು ಮಂಗಳಾರತಿಯ ಹೊತ್ತಿಗೆ ನಾನು ಬಿಡುವ ಸರ್ಪಗಳು ಭಯದಿಂದ ಕಂಗೆಟ್ಟು ಓಡುವ ಧಾವಂತದಲ್ಲಿ ಜನರ ನಡುವೆಯೇ ನುಗ್ಗುತ್ತವಲ್ಲವೇ? ಆವಾಗ ಅವುಗಳು ಅವರ ಕಾಲ್ತುಳಿತಕ್ಕೂ ಸಿಲುಕಿ ತೀವ್ರ ಗಾಯಗೊಳ್ಳುತ್ತವೆ. ಆ ನೋವಿನಲ್ಲಿ ಅವು ಸಿಕ್ಕಸಿಕ್ಕವರನ್ನು ಕಚ್ಚುತ್ತಲೂ ತೊಡಗುತ್ತವೆಯಲ್ಲ! ಆದರೆ ಅದರಿಂದ ಹೆಚ್ಚೇನಿಲ್ಲ, ಕೆಲವು ವಯಸ್ಸಾದ ಹಿರಿಯ ನಾಗಭಕ್ತರು ಕೂಡಲೇ ನಾಗದೇವನ ಪಾದ ಸೇರಿ ಪುನೀತರಾಗುವುದು ಖಚಿತ! ಹ್ಞಾಂ, ಅದೇನೂ ದೊಡ್ಡ ವಿಚಾರವಲ್ಲ ಬಿಡಿ. ಅದಕ್ಕಿಂತ ಹೆಚ್ಚಿನ ಭಕ್ತರು ಇಹಲೋಕ ತ್ಯಜಿಸಿದಂತೆ ಮಾಡಲು ನಾವು ಮೊದಲೇ ನಾಲ್ಕೈದು ಆಂಬುಲೆನ್ಸ್ಗಳನ್ನು ತರಿಸಿಕೊಂಡು ದೂರದ ಮರೆಯಲ್ಲೆಲ್ಲಾದರೂ ನಿಲ್ಲಿಸಿಕೊಂಡರಾಯ್ತು!’ ಎಂದು ವಿಷಾದದಿಂದ ನಗುತ್ತ ಅಂದ ರೋಹಿತ್ ನ ಮಾತಿಗೆ ಗುರೂಜಿ ಝಿಲ್ಲನೆ ಬೆವರಿಬಿಟ್ಟರು. ಬಳಿಕ, ‘ಓಹೋ ಹೌದಲ್ಲವಾ…!’ ಎಂದು ಉದ್ಗರಿಸಿದರು. ‘ಅಷ್ಟೇ ಅಲ್ಲ ಸರ್, ಆ ನಂತರ ಇನ್ನೊಂದು ಮಾರಿಹಬ್ಬವೂ ನಡೆಯುತ್ತದೆ ನೋಡಿ. ಅದರ ಬಗ್ಗೆಯೂ ಸ್ವಲ್ಪ ವಿವರಿಸುತ್ತೇನೆ ಕೇಳಿ. ನಾಡಿನ ಪ್ರಸಿದ್ಧ ಧಾರ್ಮಿಕ ಪ್ರಮುಖರಾದ ಶ್ರೀ ಏಕನಾಥ ಗುರೂಜಿಯವರ ವಿಶೇಷವಾದ ಯಾಗ, ಯಜ್ಞಾದಿಗಳಿಂದ ನಾಗದೇವನು ಸಂಪೂರ್ಣ ಸಂತುಷ್ಟನಾಗಿದ್ದಾನೆ. ಆದರೂ ಅವನಿಗೆ ತಾನೇ ಭೂಮಿಗಿಳಿದು ಬಂದು ಗುರೂಜಿಯವರನ್ನೂ ತನ್ನ ಭಕ್ತಾದಿಗಳನ್ನೂ ಆಶೀರ್ವದಿಸಲು ಸಮಯದ ಕೊರತೆಯಿಂದಾಗಿ ಅವನು ತನ್ನ ಗಣಗಳನ್ನು ಕಳುಹಿಸಿಕೊಟ್ಟಿದ್ದಾನೆ. ಆ ಗಣಗಳೆಲ್ಲ ಗುರೂಜಿಯವರ ಪೂಜಾಕಾರ್ಯದ ಅಂತ್ಯದಲ್ಲಿ ದಿಢೀರ್ ಪ್ರತ್ಯಕ್ಷವಾಗಿ ತಮ್ಮ ಒಡೆಯನ ಭಕ್ತಾದಿಗಳನ್ನು ಕಂಡಕಂಡಲ್ಲಿ ಹಿಡಿದ್ಹಿಡಿದು ನೀಡಿದ ವಿಷ ಪ್ರಸಾದದ ಮಹಿಮೆಗೆ ಭಕ್ತಾದಿಗಳಲ್ಲಿ ಅನೇಕರು ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಮತ್ತು ಅವರ ಮನೆಮಂದಿಯೆಲ್ಲ, ‘ಓ ನಾಗದೇವನೇ… ನಿನ್ನನ್ನು ಪೂಜಿಸಲು ಬಂದ ನಮ್ಮಂಥ ಬಡಪಾಯಿಗಳಿಗೆ ನೀನು ನೀಡುವ ಪ್ರತಿಫಲ ಇದೇನಾ…? ದಯವಿಟ್ಟು ನಮ್ಮವರನ್ನು ಕಾಪಾಡು ದೇವಾ…!’ ಎಂದು ಬೊಬ್ಬಿಡುವ ಸುದ್ದಿಯು ನೀವು ಹೇಳಿದ ಹಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರವಾಗುತ್ತದೆ. ಆಗ ಆ ಅಪರೂಪದ ವಿಚಾರವು ಪೊಲೀಸ್ ಇಲಾಖೆಗೂ ತಲುಪದಿರುತ್ತದೆಯೇ? ‘ನಾಗನ ಪೂಜೆಯ ಸಮಯದಲ್ಲಿಯೇ ಅಷ್ಟೊಂದು ಹಾವುಗಳು ಒಟ್ಟಿಗೆ ಕಾಣಿಸಿಕೊಳ್ಳುವುದೆಂದರೇನು? ಅದೂ ಕಿಕ್ಕಿರಿದ ಜನರ ಸಂದಣಿಯ ನಡುವೆಯೇ ಹಾವುಗಳು ನುಗ್ಗಿವೆ ಎಂದರೆ ಯಾರಾದರೂ ನಂಬುವ ವಿಚಾರವೇ..!?’ ಎಂದು ಪೊಲೀಸ್ ಅಧಿಕಾರಿಗಳೂ ಯೋಚಿಸುತ್ತಾರಲ್ಲವೇ. ಆಗ ಅವರಲ್ಲೂ ಆ ಕುರಿತು ಸಣ್ಣದೊಂದು ಅನುಮಾನ ಹುಟ್ಟದಿರುತ್ತದೆಯೇ? ಆಮೇಲೆ ಅವರು ಸುಮ್ಮನಿರುತ್ತಾರೆಯೇ? ಏನಿದರ ಒಳಮರ್ಮ? ಎಂದುಕೊಂಡು ಸತ್ಯಶೋಧನೆಗೆ ಹೊರಟೇ ಬಿಡುತ್ತಾರೆ. ಆಗ ಅವರಿಗೆ ಮೊದಲು ನೆನಪಾಗುವುದು ಯಾರು ಸರ್…? ನೀವು ಈಗಾಗಲೇ ಹೇಳಿದಂತೆ ಹಾವುಗಳ ವಿಷಯದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ನಾನೇ ಅಲ್ಲವೇ! ಅಷ್ಟಲ್ಲದೇ ಈ ಪ್ರಕರಣವು ವನ್ಯಜೀವಿ ಕಾಯ್ದೆಯಡಿಯಲ್ಲೂ ಬರುವುದರಿಂದ ಪೊಲೀಸ್ ಇಲಾಖೆಯವರು ಅರಣ್ಯಾಧಿಕಾರಿಗಳನ್ನೂ ಜೊತೆಗೂಡಿಸಿಕೊಂಡೇ ನನ್ನ ಮನೆಗೆ ನುಗ್ಗುತ್ತಾರೆ. ಆಮೇಲೇನಾಗುತ್ತದೆಯೆಂದರೆ, ಆವತ್ತು ನೀವು ಬಂದು ನನ್ನನ್ನು ಎಷ್ಟೊಂದು ಗೌರವಾದರದಿಂದ ಸನ್ಮಾನಿಸಿ ಹಣದ ಸಹಾಯವನ್ನೂ ನೀಡಿದ್ದಿರೋ ಅದೇ ಮಾದರಿಯಲ್ಲಿ ಅಲ್ಲದಿದ್ದರೂ ಎರಡೂ ಇಲಾಖೆಯವರು ಕೂಡಿ ನನ್ನ ನೆರೆಕರೆಯವರೆಲ್ಲ ಸಮ್ಮುಖದಲ್ಲಿ ತಮ್ಮದೇ ಆದ ರೀತಿಯಿಂದ ನನ್ನನ್ನು ಸತ್ಕರಿಸುತ್ತಾರೆ. ಆಗ ನನ್ನ ಈ ಘನಕಾರ್ಯದ ರೂವಾರಿಯಾದಂಥ ತಮ್ಮ ನಾಮಧೇಯವನ್ನು ನಾನವರಿಗೆ ತಿಳಿಸದೇ ಇರಲು ಸಾಧ್ಯವೇ? ಆದರೆ ಅವರು ಅಷ್ಟುಬೇಗ ನಿಮ್ಮಂಥ ದೊಡ್ಡ ಮನುಷ್ಯರ ಹೆಸರು ಹಾಳು ಮಾಡಲಿಚ್ಛುಸುತ್ತಾರೆಯೇ ಖಂಡಿತಾ ಇಲ್ಲ! ಹಾಗಾಗಿ ಅದಕ್ಕೆಲ್ಲ ಅವರು ಸಾಕ್ಷಿ, ಪುರಾವೆಗಳನ್ನೂ ಕೇಳುತ್ತಾರೆ. ಆವಾಗ ನಾನೇನು ಕೊಡಬಲ್ಲೆ ಎಂದು ನೀವೂ ಯೋಚಿಸುತ್ತಿರಬಹುದಲ್ಲವೇ? ನಾನದರ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇನೆ ಸರ್. ಏನೆಂದು ಕೇಳುತ್ತೀರಾ…? ಇಷ್ಟರವರೆಗೆ ತಾವು ನನ್ನೊಂದಿಗೆ ಮಾತಾಡುತ್ತಿದ್ದ ವಿಚಾರವನ್ನೆಲ್ಲ ಈ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೇನೆ. ಹೀಗಿರುವಾಗ ಇದನ್ನು ಅವರಿಗೆ ಒದಗಿಸದೆ ಬೇರೆ ವಿಧಿ ಉಂಟಾ ಹೇಳಿ? ಆಗ ನಮ್ಮಿಬ್ಬರ ಮೇಲೂ ಜಂಟಿ ಕೇಸುಗಳು ದಾಖಲಾಗುತ್ತವೆ. ಅವು ಕೋರ್ಟು ಮೆಟ್ಟಲೇರಿ ನಮ್ಮ ಆರೋಪವೂ ಸಾಬೀತಾಗುತ್ತದೆ ಎಂದಿಟ್ಟುಕೊಳ್ಳಿ. ಆಮೇಲೆ ನಾವಿಬ್ಬರೂ ಬಳ್ಳಾರಿ ಜೈಲಿನಲ್ಲಿ ಒಟ್ಟಿಗೆ ಕುಳಿತುಕೊಂಡು ಒಂದು ಹತ್ತು, ಹದಿನಾಲ್ಕು ವರ್ಷಗಳ ಕಾಲ ಜೀವನದ ಸಕಲ ತಾಪತ್ರಯಗಳನ್ನೂ ಮರೆತು ರಾಶಿ ರಾಶಿ ತೆಂಗಿನ ಸಿಪ್ಪೆಗಳನ್ನು ಬಡಿಬಡಿದು ಹದಗೊಳಿಸಿಕೊಡುವಂಥ ಗುಡಿಕೈಗಾರಿಕೆಯಲ್ಲಿ ತೊಡಗಿಕೊಂಡು ನೆಮ್ಮದಿಯಿಂದ ಬದುಕಬಹುದು ಏನಂತೀರಿ…!?’ ಎಂದು ತಿರಸ್ಕಾರದಿಂದ ನಗುತ್ತ ಹೇಳಿದ.    ರೋಹಿತ್ ನ ಅಷ್ಟೂ ಮಾತುಗಳನ್ನು ಚಡಪಡಿಸುತ್ತ ಕೇಳಿಸಿಕೊಂಡ ಗುರೂಜಿಯವರಿಗೆ ಕೊನೆಯಲ್ಲಿ ಕೊಂಬರ್ ಚೇಳು ಕುಟುಕಿದಷ್ಟು ವೇದನೆಯಾಯಿತು. ಜೊತೆಗೆ ಅವಮಾನದಿಂದಲೂ ಕುದಿಯುತ್ತ, ‘ಓಹೋ ರೋಹಿತರೇ, ನಮ್ಮ ಆ ಒಂದು ಸಣ್ಣ ಕಾರ್ಯದಿಂದ ಇಷ್ಟೆಲ್ಲ ತೊಂದರೆಗಳಾಗುತ್ತವಾ…? ಇದು ನಮಗೆ ಹೊಳೆದೇ ಇರಲಿಲ್ಲ ನೋಡಿ! ಹಾಗಾದರೆ ಖಂಡಿತಾ ಆ ಕೆಲಸವೇ ಬೇಡ ಬಿಡಿ’ ಎಂದು ಆತಂಕದಿಂದ ಅಂದವರು, ‘ಓ ನಾಗದೇವನೇ…! ನಮ್ಮ ತಪ್ಪನ್ನು ಕ್ಷಮಿಸಿಬಿಡಪ್ಪಾ…!’ ಎಂದು ಬಹಳ ನೊಂದವರಂತೆ ಪ್ರಾರ್ಥಿಸಿಕೊಂಡವರು ಬಳಿಕ, ‘ಏನೋ ನಮ್ಮ ಹಿರಿಯರ ನಂಬಿಕೆ ಆಚರಣೆಗಳಿಗೂ ಮತ್ತು ಈಗಿನ ಜನರಿಗೂ ಒಂದಿಷ್ಟು ಒಳ್ಳೆಯದಾಗಲಿ ಅಂತಲೇ ನಾವು ಹಾಗೆಲ್ಲ ಯೋಚಿಸಿದೆವೆಯೇ ಹೊರತು ಬೇರೆ ಯಾವ ದುರುದ್ದೇಶವೂ ನಮ್ಮಲ್ಲಿಲ್ಲ ರೋಹಿತರೇ. ಆದರೂ ನಿಮಗೆ ನಮ್ಮಿಂದ ನೋವಾಗಿದೆ. ಅದಕ್ಕಾಗಿ ದಯವಿಟ್ಟು ಕ್ಷಮಿಸಬೇಕು. ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡುವ!’ ಎಂದು ಚಿಂತೆಯಿಂದ ಹೇಳಿದವರು, ‘ನಮಸ್ಕಾರ ನಾವಿನ್ನು ಹೊರಡುತ್ತೇವೆ. ಆದರೂ ನಮ್ಮ ಸ್ನೇಹ ಇನ್ನು ಮುಂದೆಯೂ ಹೀಗೆಯೇ ಇರಬೇಕೆಂದು ನಮ್ಮಾಸೆ. ಮುಂದೆ ನಮ್ಮಿಂದ ಯಾವ ಸಹಾಯ ಬೇಕಿದ್ದರೂ ಸಂಕೋಚಪಡದೆ ತಿಳಿಸುತ್ತಿರಿ. ನಾವು ಸದಾ ನಿಮ್ಮೊಂದಿಗಿದ್ದೇವೆ!’ ಎಂದು ಹೇಳಿ ಒತ್ತಾಯಪೂರ್ವಕ ನಕ್ಕು ಹೊರಡಲನುವಾದರು. ಅಷ್ಟರಲ್ಲಿ ರೋಹಿತನಿಗೇನೋ ನೆನಪಾಯಿತು. ‘ಹ್ಞಾಂ, ಸ್ವಲ್ಪ ಇರಿ ಸರ್. ಈಗ ಬಂದೆ…’ ಎಂದವನು ಒಳಗೆ ಹೋಗಿ ಮೂರು ಸಾವಿರ ರೂಪಾಯಿಗಳನ್ನು ತಂದು ಅವರ ಕೈಗಿತ್ತು, ‘ಇದು ನಿಮ್ಮ ಹಣ. ಇದರ ಅವಶ್ಯಕತೆ ನನಗೆ ಬೀಳಲಿಲ್ಲ!’ ಎಂದು ಅವರಿಗೆ ಕೊಟ್ಟು, ‘ನಮಸ್ಕಾರ ಹೋಗಿಬನ್ನಿ…!’ ಎಂದು ಕೈಮುಗಿದ. ಅದನ್ನು ತೆಗೆದುಕೊಂಡ ಗುರೂಜಿಯವರು ಅವನನ್ನೊಮ್ಮೆ ಬೇಸರದಿಂದ ದಿಟ್ಟಿಸಿ ಸರಸರನೇ ಹೊರಟು ಹೋದರು. ಆಗ ರೋಹಿತನೂ ವಿಷಾದದಿಂದ ಒಳಗೆ ನಡೆದ.                                                                               * ರೋಹಿತ್ನ ಸಹಾಯದಿಂದ ಮಸಣದಗುಡ್ಡೆಯ ಜೀರ್ಣೋದ್ಧಾರವನ್ನು ಊರ ಸಮಸ್ತರು ವಿಸ್ಮಯಪಡುವ ರೀತಿಯಿಂದ ಮಾಡಬೇಕೆಂದುಕೊಂಡಿದ್ದ ಗುರೂಜಿಯವರ ಉಪಾಯ ವ್ಯರ್ಥವಾಯಿತು. ಆದರೂ ಅವರು ಧೃತಿಗೆಡಲಿಲ್ಲ. ಅದಕ್ಕೆ ಬದಲಾಗಿ ಅವರ ಯೋಚನೆ ಹೀಗೆ ಹರಿಯಿತು: ಯಾವುದೇ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಮೇಲೇರಲು ಹೊರಟನೆಂದರೆ ಅವನ ವಿರುದ್ಧ ಅನೇಕ ಶತ್ರುಗಳು ಸೃಷ್ಟಿಯಾಗಿ ಅವನ ಕಾಲೆಳೆಯಲು ಪ್ರಯತ್ನಿಸುವುದು ಸಾಮಾನ್ಯ ಸಂಗತಿ. ಆದ್ದರಿಂದ ರೋಹಿತನೂ ಒಂದು ವೇಳೆ ತಮ್ಮ ಬಗ್ಗೆ ಅಪಪ್ರಚಾರ ಮಾಡಲು ಹೊರಟನೆಂದರೆ ಅವನನ್ನೂ ತಮ್ಮ ಶತ್ರುಗಳ ಪಟ್ಟಿಯಲ್ಲಿ ಸೇರಿಸಿ ತಾವೂ ಅವನ ತೇಜೋವಧೆಯನ್ನು ಮಾಡತೊಡಗಿದರಾಯ್ತು! ಎಂದು ನಿರ್ಧರಿಸಿ ಧೈರ್ಯ ತಂದುಕೊಂಡರು. ಇದಾದ ಮುಂದಿನ ತಿಂಗಳಲ್ಲಿ ಮಸಣದಗುಡ್ಡೆಯ ನಾಗಬನದ ನೂರಾರು ವರ್ಷಗಳಷ್ಟು ಪುರಾತನವಾದ ಹೆಮ್ಮರಗಳನ್ನು ನಿಷ್ಕರುಣೆಯಿಂದ ಕಡಿದುರುಳಿಸಿ ಆ ಜಾಗವನ್ನು ಸಮತಟ್ಟುಗೊಳಿಸಿ ಭವ್ಯವಾದ ನಾಗಭವನವನ್ನು ನಿರ್ಮಿಸಿ ಅದ್ಧೂರಿಯಿಂದ ಜೀರ್ಣೋದ್ಧಾರ ಕಾರ್ಯವನ್ನೂ ಮಾಡಿ ಮುಗಿಸಿದವರು ಆ ನಾಗಕ್ಷೇತ್ರಕ್ಕೂ ತಾವೇ ಅರ್ಚಕರು ಮತ್ತು ಮೇಲ್ವಿಚಾರಕರೂ ಆಗಿ ಅಧಿಕಾರವಹಿಸಿಕೊಂಡರು. ಪ್ರವೀಣ ಆ ಕ್ಷೇತ್ರದ ಕಜಾಂಚಿಯಾಗಿ ಮತ್ತು ಶಂಕರ ಕಾರ್ಯದರ್ಶಿಯಾಗಿ ಧಾರ್ಮಿಕ ಹುದ್ದೆಗಳನ್ನಲಂಕರಿಸಿದರು. ಆ ನಾಗಭವನವು ಪೇಟೆಗೆ ಸಮೀಪವಿದ್ದುದರಿಂದಲೂ ಮತ್ತದರ ಆಸುಪಾಸು ಸಾವಿರಾರು ನಿರಾಶ್ರಿತರೂ ಮಧ್ಯಮವರ್ಗದವರೂ ಹಾಗೂ ಬಹಳಷ್ಟು ಶ್ರೀಮಂತರೂ ವಾಸಿಸುತ್ತಿದ್ದುದರಿಂದಲೂ ಗುರೂಜಿಯವರು ಆ ನಾಗಮಂದಿರದಲ್ಲಿ ಪ್ರತಿನಿತ್ಯವೂ ಪೂಜಾ ಕೈಂಕರ್ಯಗಳನ್ನು ನಡೆಸತೊಡಗಿದರು. ಆದ್ದರಿಂದ ಈಗ ಅವರ ಕೈಯಲ್ಲಿ ಎರಡು ಬೃಹತ್ ನಾಗಬನಗಳ ಅಧಿಕಾರ ಮತ್ತು ಜವಾಬ್ದಾರಿ ಇತ್ತು. ಅದರಿಂದ ಅವರ ವರಮಾನವೂ ವೃದ್ಧಿಸತೊಡಗಿತು.  ಆ ಬಗ್ಗೆಯೇ ಸಂತೋಷ, ನೆಮ್ಮದಿಯಿಂದ ತೇಲಾಡಿದ ಗುರೂಜಿಯವರು ಮಸಣದಗುಡ್ಡೆಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪ್ರವೀಣನನ್ನೂ

Read Post »

You cannot copy content of this page

Scroll to Top