ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಸೀರೆಯ ಸೆರಗು

ಶಿವಲೀಲಾ ಹುಣಸಗಿ

ಸೀರೆ ಎಂದರೆ ಸಾಕೇ ? ಸೀರೆ ನೀರೆ ೨. | ಸೌಂದರ್ಯ ಮತ್ತು ಕಾಳಜಿ,ಸೀರೆ_ನೀರೆ ,Kannada |  ಮೊಮ್ಸ್ಪ್ರೆಸೊ

ಸೀರೆಗೊಂದು ಸೆರಗು ಮನಸಿಗೆ ಮೆರಗು
ಅತ್ತು ಕರೆವಾಗ ಕಣ್ಣೊರೆಸುವ ಸಾಧನವು
ಕಂಬನಿಯು ಮುತ್ತಾಗಿ ಅರಳಿದ ಸೊಬಗು
ಆಟಪಾಟಕೆ ಬೆವೆತ ಮೈಮನಕೆ ಬೆರಗು
ಬೀಸಕೆಯಾಗಿ ಕೈಯಂಚಲಿಹುದು ಸೆರಗು
ಆಸತ್ತು ಬೆಸತ್ತ ಬೆವರಿಗಿದೋ ಪ್ಯಾನು!
ಅಡಿಗೆಮನೆಯ ಸಿದಾಸಾದಾ ಮಸಿಅರಿವೆ
ತಲೆನೆಂದು ಬಂದವಗೆ ಟವಾಲ್ ಯಿದು
ನೇಸರನ ತಾಪಕೆ ಕೊಡೆಯಂತೆ ಅರಳಿಹುದು
ನಾಚಿ ನೀರಾಗೋ ಗಳಿಗೆಗೆ ಬಳ್ಳಿಯಾಗಿಹುದು
ಹೊಸಬರೆದುರು ಅಸ್ತ್ರದಂತೆ ಈ ಸೆರಗು
ಉಡಿಯಕ್ಕಿ,ಬಾಗಿನ ಪಡೆವ ಸೌಭಾಗ್ಯವಿದು
ಹೂಗಳ ಸೆಳೆತಕ್ಕೆ ಬುಟ್ಟಿಯಂತಾಗಿಹುದು
ತಿಂಡಿತಿಸುಗಳ ಬಚ್ಚಿಡಲು ಜೊತೆಗಿಹುದು
ತಲಿಮ್ಯಾಲೆ ಗೌರವದ ಕಿರೀಟದಂತಿಹುದು
ಅಮ್ಮನ ಸೆರಗಿನ ಅಂಚಿಡಿದು ಹೊಂಟರೆ
ವಿಶ್ವಪರ್ಯಟನವಾದಂತೆಯೇ..ಸರಿ!
ಸೆರಗೊಂದು ಮಾಂತ್ರಿಕ ದಂಡದಂತೆ
ಗಿರಗಿಟ್ಲಿತರ ಸುತ್ತುವ ಅಪ್ಪನೆ ಚಂದ
ಸಿಟ್ಟಿಗೆದ್ದು ಸೊಂಟಕೆ ಸೆರಗ ಕಟ್ಟಿದಳೆಂದರೆ
ಎದುರಿಗಿದ್ದವರು ನಾಪತ್ತೆಯಾದಂತೆ
ಪ್ರೀತಿಯಲಿ ಸೆರಗೊಡ್ಡಿ ಬೇಡಿದಳೆಂದರೆ
ಕಲ್ಲುಕರಗಿ ಹೂವಾಗುವುದೆಲ್ಲ..
ಸೆರಗಿನಲ್ಲಿಹುದು ಪ್ರೇಮಾಮೃತವಿಲ್ಲಿ.
ಹೆಣ್ಣಿಗೊಂದು ಅಂದ ತರುವುದು ಸೀರೆ
ಸೀರೆಗೊಂದು ಸೆರಗೆ ಜೀವಾಮೃತವಿಲ್ಲಿ

*************

About The Author

5 thoughts on “ಸೀರೆಯ ಸೆರಗು”

  1. ಸೆರಗಿನ ಮೆರಗಿನ ಸೊಬಗನ್ನು ಬಲು ಸವಿಯಾಗೀ ಬರೆದಿರುವಿರೀ ಮೇಡಂ.ಓದಲು ತುಂಬಾ ಖುಷಿ ಆಯ್ತು.ಅಭಿನಂದನೆಗಳು.

  2. ಶ್ರೀರಂಗ ಕಟ್ಟಿ ಯಲ್ಲಾಪುರ

    ಸೀರೆಯ ಸೆರಗಿನ ಮಹತಿಯನ್ನು ಬಹಳ ಸುಂದರವಾಗಿ ಅಭಿವ್ಯಕ್ತಿಸಿದ ಶಿವಲೀಲಾ ನಿನಗೆ ಅಭಿನಂದನೆಗಳು..

  3. Zubeda begum. Attar

    ಸೀರೆಯ ಅಂಚಿನ ವಿವಿಧ ಬಗೆಯ ವೈಶಿಷ್ಟ್ಯಪೂರ್ಣ ಸಮಯೋಚಿತ ಉಪಯೋಗಗಳ ಬಗ್ಗೆ ಮಾರ್ಮಿಕವಾಗಿ ಬರೆದಿದ್ದೀಯ

  4. ಹಸೀನಾ ಎಂ ಸಿದ್ದಾಪುರ ಗದಗ

    ಶೇರಗಿನ ಮಹತ್ವ ತುಂಬಾ ಚೆನ್ನಾಗಿ ಬರೆದಿದ್ದೀರಾ ಅಭಿನಂದನೆ ಗಳು ಮೇಡಂ

Leave a Reply

You cannot copy content of this page

Scroll to Top