ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಸುಜಾತಾ ರವೀಶ್

ತಿಳಿದಷ್ಟು ಸುಲಭವಿಲ್ಲ ಜಗವಿದು ಕನಲುತಿದೆ ಹೃದಯ
ಇಳಿದಷ್ಟು ಹೂಳುತಿರುವ ಕೆಸರಲಿ ಕದಲುತಿದೆ ಹೃದಯ

ಆಪ್ತೇಷ್ಟರ ಬಂಧುಮಿತ್ರರ ಪುರಸ್ಕಾರ ಸಮಯಕೆ ಅನುಸಾರ
ಅನಿಷ್ಟದ ಕಸದ ಹಾಗೆ ತಿರಸ್ಕಾರ ಕಮರುತಿದೆ ಹೃದಯ

ಎಳನೀರ ಸವಿಯಿತ್ತು ಸೊಗವಿತ್ತು ಮನದಲಿ ತಂಪಾಗಿ
ತಿಳಿನೀರ ಬಗೆಯುತ್ತಾ ಬಗ್ಗಡದೆ ಕದಡುತಿದೆ ಹೃದಯ

ವಿಶ್ವಾಸಕ್ಕೆ ಮಾನದಂಡ ಏನೆಂದು ಯಾರಿಗಾದರೂ ಗೊತ್ತೆ
ನಿಶ್ವಾಸದೆ ಕಹಿಯೆಲ್ಲ ಹೊರಸೂಸಿ ಕರಗುತಿದೆ ಹೃದಯ

ಇಂಚಿಂಚೇ ಕುಗ್ಗಿಸುತ ಬಲಹೀನ ಮಾಡುತಲಿದೆ ಲೋಕ
ಪ್ರಪಂಚವೇ ಸಾಕೆನ್ನುವ ಸುಜಿಯನು ಕರೆಯುತಿದೆ ಹೃದಯ


About The Author

1 thought on “ಗಝಲ್”

  1. ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಅನಂತ ಧನ್ಯವಾದಗಳು

    ಸುಜಾತಾ ರವೀಶ್

Leave a Reply

You cannot copy content of this page

Scroll to Top