ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಕೋರಿಕೆ

ಧನಂಜಯ ಕುಂಬ್ಳೆ

Dalit Art: An Endeavour In Exploring Notions Of Caste Boundaries

ದಯವಿಟ್ಟು ನನ್ನ ಜಾತಿ
ಕೇಳಬೇಡಿ
ನಾನೆಂದೂ ಅದನ್ನು ಮೆಟ್ಟಿಲು ಮಾಡಿಕೊಂಡವನಲ್ಲ

ನನ್ನ ಊರು ಕೇಳಬೇಡಿ
ಅದು ನನ್ನ ಹೆಸರಿನ ಜೊತೆಗಿದೆ

ನನ್ನ ಧರ್ಮ ಯಾವುದು ಎಂದು ಕೇಳಬೇಡಿ
ನನ್ನ ಉಸಿರಲ್ಲಿ ಭಾರತವಿದೆ

ಇನ್ನೂ ಕೆದಕಬೇಕೆಂದರೆ ಕೆದಕಿ
ತಳದಲ್ಲಿ ಉದ್ದಂಡ
ಐದಡಿ ಗಾತ್ರದ
ನನ್ನ ರೂಪದ ಕೇಕ್ ಮಲಗಿದೆ

ನಿಮ್ಮ ಚೂರಿಯಲಿ
ಬೇಕಾದ ಭಾಗವನ್ನು
ಕತ್ತರಿಸಿ
ತಿಂದು ತೇಗಿ


About The Author

Leave a Reply

You cannot copy content of this page

Scroll to Top