ಗಝಲ್
ವಿಶ್ವಾಸಕ್ಕೆ ಮಾನದಂಡ ಏನೆಂದು ಯಾರಿಗಾದರೂ ಗೊತ್ತೆ
ನಿಶ್ವಾಸದೆ ಕಹಿಯೆಲ್ಲ ಹೊರಸೂಸಿ ಕರಗುತಿದೆ ಹೃದಯ
ಇತ್ತೀಚೆಗೆ ಛತ್ತೀಸಘಡದ ಬುಡಕಟ್ಟಿನ ಜಶ್ಪುರ್ ಎಂಬಲ್ಲಿ ಸರಕಾರ ನಡೆಸುವ ಕಿವುಡು-ಮೂಕ ವಸತಿಯಲ್ಲಿ ಜರುಗಿದ ಘೋರ ಘಟನೆಯ ನೋವಿಂದ ಈ ಪದ್ಯ.
ಆ ರಕ್ಕಸ ರಾತ್ರಿಗಳು. Read Post »
ಅಂಕಣ ಬರಹ
‘ ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ.
ಸಾಧಕಿಯರ ಯಶೋಗಾಥೆ
ಅಂಕಣ ಬರಹ ಗಾಂಧಿ ಹಾದಿ ಸ್ವಾತಂತ್ರ ಮತ್ತು ಸಮಾನತೆಯ : ಗಾಂಧೀಜಿಯ ದೃಷ್ಟಿಕೋನ ದೇಶಾದ್ಯಂತ ಕೋವಿಡ್-೧೯ ಎರಡನೆಯ ಅಲೆ ಮುಗಿದು ಮೂರನೆಯ ಅಲೆಯ ಭೀತಿಯಲ್ಲಿ ಇದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ೧೫ನೇ ಆಗಸ್ಟ್,೨೦೨೧ಕ್ಕೆ ೭೫ ವಸಂತಗಳು ಪೂರ್ಣಗೊಳ್ಳಲಿದೆ. ಇದರ ಸವಿನೆನಪಿಗಾಗಿ ಕೇಂದ್ರ ಸರಕಾರದ ನಿರ್ದೇಶನದಂತೆ ೧೨ನೇ ಮಾರ್ಚ್೨೦೨೧ ರಂದು ದೇಶದ ೭೫ ಐತಿಹಾಸಿಕ ಸ್ಥಳಗಳಲ್ಲಿ ’೭೫ನೇ ಸ್ವಾತಂತ್ರ್ಯೋತ್ಸವದ ಆಜಾದ್ ಕಾ ಅಮೃತ ಮಹೋತ್ಸವ’ ದ ಕಾರ್ಯಕ್ರಮಗಳು ಜರುಗಿತು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವು ಮಹನೀಯರ ತ್ಯಾಗ, ಬಲಿದಾನ ಅಡಗಿದ್ದು, ಮಹಾತ್ಮ ಗಾಂಧೀಜಿಯವರ ನಾಯಕತ್ವದಲ್ಲಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಅಹಿಂಸಾತ್ಮಕ ಹೋರಾಟದಿಂದ ೧೫ನೇ ಆಗಸ್ಟ, ೧೯೪೭ರಂದು ಭಾರತವು ಸ್ವತಂತ್ರವಾಯಿತು. ಅದರ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡುವ, ಅವರಲ್ಲಿ ದೇಶಭಕ್ತಿಯನ್ನು ಬಿತ್ತುವ ಸದುದ್ದೇಶದಿಂದ ದೇಶದ ೭೫ ಐತಿಹಾಸಿಕ ಸ್ಥಳಗಳಲ್ಲಿ ೭೫ ವಾರಗಳ ವರೆಗೆ ರಾಷ್ಟ್ರದಾದ್ಯಂತ ವಿವಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು. ೭೫ ವಾರಗಳ ವರೆಗೆ ರಾಷ್ಟ್ರದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಮೃತ ಮಹೋತ್ಸವದ ಸಂಭ್ರಮಾಚರಣೆಯನ್ನು ಆಚರಿಸಲಾಗುವದು. ಈ ಐತಿಹಾಸಿಕ ಕಾರ್ಯಕ್ರಮ ವಿಶೇಷವಾಗಿರುವದು . ನಮ್ಮ ಗತಕಾಲವನ್ನು ಸ್ಮರಿಸುವದು ಅಗತ್ಯವಾದುದು. ದೇಶದ ಹಿರಿಮೆ- ಗರಿಮೆ , ವೈವಿಧ್ಯತೆ, ಸಾರ್ವಭೌಮತೆ ಹಾಗೂ ಸ್ವಾತಂತ್ರ್ಯದ ಬಗೆಗಿನ ಚರಿತ್ರೆ ಸ್ವಾರಸ್ಯಕರ ಹಾಗೂ ಅರ್ಥಗರ್ಭಿತವಾದುದು. ಪ್ರತಿ ದೇಶದ ಸ್ವಾತಂತ್ರ್ಯ ಚರಿತ್ರೆಯಲ್ಲಿ ಸ್ವಾತಂತ್ರ್ಯ ಪಡೆಯಲು ಹುತಾತ್ಮರಾದವರನ್ನು ತ್ಯಾಗ- ಬಲಿದಾನ ಮಾಡಿದವರನ್ನು ನೆನೆಯುವದು ಹಾಗೂ ಸ್ಮರಿಸುವದು ಹಾಗೂ ದೇಶದ ಸ್ವಾತಂತ್ರ್ಯ ಪ್ರೇಮ, ಪ್ರಜಾಸತ್ತಾತ್ಮಕತೆ ಹಾಗೂ ಸಾರ್ವಭೌಮತೆಯನ್ನು ರಕ್ಷಿಸಿಕೊಂಡು ಹೋಗುವದು ಪ್ರತಿ ಪ್ರಜೆಯ ಆದ್ಯ ಕರ್ತವ್ಯ. ರಾಜಕೀಯ ಸ್ವಾತಂತ್ರ್ಯವು ಗಾಂಧೀಜಿಯವರಿಗೆ ಸ್ವರಾಜ್ಯವಾಗಿತ್ತು. ಸ್ವರಾಜ್ಯವನ್ನು ಕೂಡಾ ಸತ್ಯ ಮತ್ತು ಅಹಿಂಸಾ ಮಾರ್ಗದಿಂದ ಪಡೆಯುವದಾಗಿತ್ತು. ಸತ್ಯವೇ ದೇವರು ಎಂಬುದು ಗಾಂಧೀಜಿಯವರ ಭಾವನೆ ರಾಜಕೀಯ ಸ್ವಾತಂತ್ರ್ಯವೆಂ ದರೇನು, ಸ್ವರಾಜ್ಯ ಎಂಬುದು ಗಾಂಧೀಜಿಯವರ ವಾದ. ಸ್ವರಾಜ್ಯವನ್ನು ಸತತ ಹೋರಾಟ ಮತ್ತು ಪ್ರಯತ್ನದಿಂದ ಪಡೆಯುವುದು ಮತ್ತು ಬ್ರಿಟಿಷ್ ಸರ್ಕಾರದ ವಿರುದ್ಧ ಅತೃಪ್ತಿಯೆಂಬ ದ್ವೇಷದ ಅಲೆಯನ್ನು ಎಬ್ಬಿಸುವುದು, ಪ್ರತಿಯೊಬ್ಬ ಭಾರತೀಯನ ಧರ್ಮಯುತವಾದ ಕಾರ್ಯ ಎಂದು ಹೇಳಿ ಅಂದಿನ ಬಲಿಷ್ಠ ರಾಷ್ಟ್ರಗಳಿಗೆ ಎದುರಾಗಿ ಎದೆ ತಟ್ಟಿ ನಿಲ್ಲುವಂತೆ ಗಾಂಧೀ ಕರೆ ಕೊಟ್ಟರು. ಇದರಿಂದ ಬಲಿಷ್ಠ ರಾಷ್ಟ್ರಗಳ ನೈತಿಕತೆಗೆ ಧಕ್ಕೆ ತರುವದೇ ಅವರ ಉದ್ದೇಶವಾಗಿತ್ತು. ಗಾಂಧೀಜಿಯವರು ತಮ್ಮ ರಾಜಕೀಯದ ಬಗ್ಗೆ ಹೇಳುತ್ತಾ ವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಿ ಯಾವುದೇ ಸಮಾಜ ನಿರ್ಮಾಣವಾಗುವುದು ಸಾಧ್ಯವಿಲ್ಲ. ಇದು ವ್ಯಕ್ತಿ ಸ್ವಭಾವಕ್ಕೆ ವಿರುದ್ದವಾಗಿದೆ. ವ್ಯಕ್ತಿ ತನ್ನದೇ ಆದ ಮನಸ್ಸನ್ನು ಹೊಂದಿರದೆ ವ್ಯಕ್ತಿ ಜೀವಿಸಲು ಸಾಧ್ಯವಿಲ್ಲ. ಸಮಾನವಾದ ಸಾಮಾಜಿಕ ಮತ್ತು ಆರ್ಥಿಕವಾದ ಅವಕಾಶಗಳನ್ನು ಹೊಂದಿರಬೇಕು ಕರ್ತವ್ಯದ ಜೊತೆಗೆ ಸ್ವಾತಂತ್ರ್ಯ ನಿಕಟ ಸಂಬಂಧ ಹೊಂದಿರುತ್ತದೆ. ಮತ್ತು ಪ್ರತಿಯೊಬ್ಬರು ಆ ಬಗೆಯ ಸಮಾನ ಅವಕಾಶಗಳಿಗೆ ಜವಾಬ್ದಾರರಾಗಬೇಕು ಎಂದು ಗಾಂಧೀಜಿಯವರು ಹೇಳಿದರು. ಗಾಂಧೀಜಿಯವರು ಸ್ವಾತಂತ್ರ್ಯದ ಬಗ್ಗೆ ಹೊಂದಿದ್ದ ಅಭಿಪ್ರಾಯಗಳು ಆಂಗ್ಲೋ ಅಮೆರಿಕನ್ ಉದಾರವಾದಿ ಸಾಂಪ್ರದಾಯವಾದಿಗಳು ಸ್ವಾತಂತ್ರ್ಯದ ಬಗ್ಗೆ ಹೊಂದಿದ್ದ ತತ್ವಗಳಿಗಿಂತ ಭಿನ್ನವಾಗಿತ್ತು. ಸಾಂಪ್ರದಾಯಿಕ ಅರ್ಥದಲ್ಲಿ ಹೇಳುವುದಾದರೆ ತಮ್ಮದೇ ಆದ ಆಪೇಕ್ಷೆಗಳನ್ನು ಅಭಿಪ್ರಾಯಗಳನ್ನು ಅಥವಾ ವಿರೋದಗಳನ್ನು ವ್ಯಕ್ತಪಡಿಸಲು ಹೊಂದಿರುವುದೇ ಸ್ವಾತಂತ್ರ್ಯ, ತಮ್ಮ ಹಕ್ಕುಗಳ ಮೂಲಕ ಸ್ವಾಭಾವಿಕವಾಗಿಯೇ ತಮ್ಮ ಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಕೂಡ ಸ್ವತಂತ್ರರು ಎಂಬ ಅರ್ಥವನ್ನೂಳಗೊಂಡಿದೆ. ಈ ಅರ್ಥದಲ್ಲಿ ಸ್ವಾತಂತ್ರ್ಯವೆಂದರೆ ಪ್ರತಿಯೊಬ್ಬರು ಯಾವುದೇ ಅಡೆತಡೆಯಿಲ್ಲದೆ ತಮ್ಮದೇ ಆದ ಹಿತಾಸಕ್ತಿಗಳನ್ನ ಈಡೇರಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಸಾಮರ್ಥವನ್ನು ಸ್ವಾತಂತ್ರ್ಯ ಎಂದು ಹೇಳಲಾಗಿದೆ. ಈ ಬಗೆಯ ನಿರ್ಭಂಧ ರಹಿತ ಸ್ವಾತಂತ್ರ್ಯ ಹಾಲ್ಸ್ ಪ್ರತಿಪಾದಿಸಿದ ಸ್ವಾಭಾವಿಕ ರಾಜ್ಯದ ಸ್ಥಿತಿಗೆ ಕೊಂಡೊಯುತ್ತದೆ. ಅಂತಹ ರಾಜ್ಯದಲ್ಲಿ ಅರಾಜಕತೆ, ಅಸ್ಥಿರತೆ, ಕೊಲೆ, ಸುಲಿಗೆ, ದ್ವೇ಼ಷ ಮತ್ತು ಅಸೂಯೆಗಳು ಕಂಡು ಬರುತ್ತದೆ. ಈ ತತ್ಪರಿಣಾಮಗಳಿಂದಲೇ ಸ್ವಾತಂತ್ರ್ಯವನ್ನು ನಿರ್ಬಂಧಿಸಲು ದಾರಿಯಾಗುತ್ತದೆ. ಬಹುತೇಕ ಉದಾರವಾದಿ ಬರಹಗಾರರು ಸರಕಾರವು ವ್ಯಕ್ತಿಗಳ ಕೆಲವು ನಿರ್ದಿಷ್ಟವಾದ ಹಕ್ಕುಗಳಲ್ಲಿ ಮಾತ್ರ ಮಧ್ಯಸ್ಥಿಕೆ ವಹಿಸಬೇಕು ಹಾಗೂ ಯಾರು ಹಕ್ಕುಗಳನ್ನು ಉಲ್ಲಂಘಿಸುತ್ತಾರೆಯೋ ಅಂತಹವರ ವಿರುದ್ದ ಬಲತ್ಕಾರವನ್ನು ಕೂಡ ಬಳಸಬಹುದು ಎಂದಿದ್ದಾರೆ.ಈ ಬಗೆಯ ಸ್ವಾತಂತ್ರ್ಯಕ್ಕಾಗಿ ಬಳಸಿರುವ ಮಾರ್ಗಗಳು ಗಾಂಧೀಜಿಯವರ ಅರ್ಥದಲ್ಲಿ ಹಲವಾರು ನ್ಯೂನತೆ ಅಥವಾ ದೋಷಗಳನ್ನೂ ಒಳಗೊಂಡಿದೆ. ಪ್ರಥಮವಾಗಿ ಇದು ಸರಕಾರದಿಂದ ಹಿಂಸೆಯನ್ನು ಅನುಮೋದಿಸುತ್ತದೆ. ಕೆಲವೊಂದು ಹಕ್ಕುಗಳನ್ನು ಆಚರಣೆಗೆ ತರಲು ಬಲಾತ್ಕಾರವನ್ನು ಉಪಯೋಗಿಸಲು ರಾಜ್ಯಕ್ಕೆ ಅಧಿಕಾರವನ್ನು ನೀಡುತ್ತದೆ. ಗಾಂಧೀಜಿಯವರ ಪ್ರಕಾರ ಇದು ವ್ಯಕ್ತಿಯ ನೈತಿಕ ಸ್ವಾಯತ್ತತೆಯನ್ನು ಹಾಳು ಮಾಡುತ್ತದೆ. ಪ್ರಾರಂಭದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ರಾಜ್ಯದಿಂದ ಒದಗಿ ಬಂದಂತಹ ದೊಡ್ಡ ಅಪಾಯವನ್ನು ಉದಾರವಾದ ಕಂಡುಕೊಂಡಿತ್ತು. ಆದರೆ ಗಾಂಧೀಜಿಯವರು ಸ್ವಾತಂತ್ರ್ಯದ ಬಗೆಗಿನ ಅಭಿಪ್ರಾಯವನ್ನು ಒಪ್ಪಲಾದರೂ. ಅವರ ಸ್ವಾತಂತ್ರ್ಯದ ಕಲ್ಪನೆ ಅಪರಿಪೂರ್ಣವಾಗಿತ್ತು. ಸ್ವಾತಂತ್ರ್ಯದ ಬಗ್ಗೆ ಸಾಂಪ್ರದಾಯಿಕ ಆರ್ಥಿಕ ಉದಾರವಾದಿಗಳು ಹೊಂದಿದ್ದ ನಿಲುವಿಗಿಂತ ಭಿನ್ನವಾಗಿ ಗಾಂಧೀಜಿಯವರು ಹೊಂದಿದ್ದರು. ಕೇವಲ ರಾಜ್ಯದಿಂದ ಮಾತ್ರವಲ್ಲದೆ ಸ್ವಾತಂತ್ರ್ಯ ಹಲವಾರು ಶಕ್ತಿಗಳಿಗಿಂತ ಅಘಾತಕ್ಕೊಳಪಟ್ಟಿದೆ. ಆರ್ಥಿಕ ಅಸಮಾನತೆ ಇನ್ನಿತರರ ಮೇಲೆ ಅವಲಂಬಿಸಿರುವಂತೆ ಮಾಡಿರುವುದು ಕೈಗಾರೀಕರಣ, ನಿರುದ್ಯೋಗವನ್ನು ಸೃಷ್ಟಿಸಿರುವುದು ಅನಮ್ಯ ಜಾತಿ ವ್ಯವಸ್ಥೆ ಮತ್ತು ಅಸ್ಫೃಶ್ಯತೆಗಳು ಜನತೆಗೆ ಅವರ ಸ್ವಾಯುತ್ತತೆಯನ್ನು ನಿರಾಕರಿಸಿದೆ. ವಸಾಹತುಶಾಹಿ ವ್ಯವಸ್ಥೆಯೂ ಕೂಡ ಸಮೃದ್ಧ ಅವಕಾಶಗಳನ್ನು ಕನಿಷ್ಠಗೊಳಿಸಿದೆ ಎಂದು ಗಾಂಧೀಜಿಯವರು ನಂಬಿದ್ದರು. ಸ್ವಾತಂತ್ರ್ಯ ಎಂಬುದು ಸಾಮಾಜಿಕ ಸಮಾನತೆಯನ್ನು ಒಳಗೊಂಡಿದ್ದು ಹಲವಾರು ಮೂಲಗಳಿಂದ ಸ್ವಾತಂತ್ರ್ಯಕ್ಕೆ ಅಡೆತಡೆಗಳು ಬರುತ್ತವೆ. ಆದ್ದರಿಂದ ಸ್ವಾತಂತ್ರ್ಯಕ್ಕೆ ಕನಿಷ್ಠ ಪ್ರಮಾಣದ ಅಡೆತಡೆಗಳು ಉಂಟಾಗುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.ಗಾಂಧೀಜಿಯವರ ಪ್ರಕಾರ ಉದಾರವಾದಿ ಸ್ವಾತಂತ್ರ್ಯದ ರಚನೆಯು ಕೂಡ ದೋಷ ಪೂರಿತವಾಗಿದೆ. ಸಾಮಾಜಿಕ ಆಧಾರಿತ ಮಾನವೀಯ ಜೀವನದ ಪ್ರಾಮುಖ್ಯತೆಯನ್ನ ಉದಾರವಾದಿ ಸ್ವಾತಂತ್ರ್ಯ ತಿರಸ್ಕರಿಸುತ್ತದೆ. ನಮ್ಮ ಎಲ್ಲಾ ಕ್ರಿಯೆಗಳಿಗೆ ಕೆಲಸಗಳಿಗೆ ಅಥವಾ ಚಟುವಟಿಕೆಗಳಿಗೆ ನಾವೇ ಜವಾಬ್ದಾರಿಯಾಗಿರಬೇಕು. ಹಕ್ಕುಗಳು ಮತ್ತು ಜವಾಬ್ದಾರಿಗಳೆರಡೂ ಪರಸ್ಪರ ಅನ್ಯೋನತೆಯಿಂದ ಕೂಡಿವೆ. ಇವೆರಡರಲ್ಲಿ ಯಾವುದಾದರೂ ಒಂದು ಇಲ್ಲದಿದ್ದಲ್ಲಿ ಅದರ ನಿಜವಾದ ಸತ್ವವನ್ನು ಕಳೆದುಕೊಳ್ಳುತ್ತದೆ, ಹಕ್ಕು ಮತ್ತು ಕರ್ತವ್ಯಗಳೆರಡು ಪರಸ್ಪರ ಅನ್ಯೋನ್ಯತೆಯಿಂದ ಕೂಡಿದ್ದು ನಿರಂತರವಾಗಿರುತ್ತವೆ. ಜನರು ತಾವು ಮಾಡುವ ಪ್ರತಿಯೊಂದು ಕೆಲಸ ಹಾಗೂ ಚಟುವಟಿಕೆಗಳ ಪರಿಣಾಮಗಳೇನು ಎಂಬುದನ್ನು ಚೆನ್ನಾಗಿ ಅರಿತಿರಬೇಕು. ಜವಾಬ್ದಾರಿ ಮತ್ತು ಸ್ವಾತಂತ್ರ್ಯಗಳೆರಡು ಅತ್ಯಂತ ಹೆಚ್ಚಿನ ನಿಕಟ ಸಂಬಂಧವನ್ನು ಹೊಂದಿವೆ. ಜವಾಬ್ದಾರಿಯಿಲ್ಲದ ಸ್ವಾತಂತ್ರ್ಯ ಅರ್ಥ ರಹಿತವಾದದ್ದು.ಗಾಂಧೀಜಿಯವರ ಪ್ರಕಾರ ಪ್ರತಿಯೊಬ್ಬ ನಾಗರಿಕನು ತನ್ನ ಸರ್ಕಾರದ ಪ್ರತಿಯೊಂದು ಜವಾಬ್ದಾರಿಗಳ ಬಗ್ಗೆಯು ತಿಳಿದಿರಬೇಕು. ಎಲ್ಲಿಯ ತನಕ ಸರ್ಕಾರದ ಚಟುವಟಿಕೆಗಳು ಸಮಂಜಸವಾಗಿರುತ್ತವೆಯೋ ಅಲ್ಲಿಯವರೆಗೂ ಸರ್ಕಾರಕ್ಕೆ ಬೆಂಬಲವನ್ನು ಕೊಡಬೇಕು. ವಿಧೇಯತೆಯನ್ನ ವ್ಯಕ್ತಪಡಿಸಬೇಕು. ಆದರೆ ಯಾವಾಗ ಸರಕಾರದ ವ್ಯಕ್ತಿ ಮತ್ತು ರಾಷ್ಟ್ರಕ್ಕೆ ಹಾನಿಯನ್ನುಂಟು ಮಾಡಿದರೆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ಸು ಪಡೆಯುವುದು ಅವರ ಕರ್ತವ್ಯ ಎuಟಥಿ ೧೯೨೦) ಎಂದು ಹೇಳಿದ್ದಾರೆ. ಗಾಂಧೀಜಿಯವರು ಸತ್ಯಾಗ್ರಹದಿಂದ ಸಾಮಾಜಿಕ ಕ್ರಾಂತಿಯನ್ನ ತಂದರು. ಆಧುನಿಕರ ನೈತಿಕ ಅಧ: ಪತನದಿಂದಲೇ ನಾಗರಿಕತೆಯು ಹಾಳಾಗುತ್ತದೆ ಎಂದರು. ಯುದ್ಧ ತಡೆಯುವ ಅಂತಿಮವಾದ ಉಪಾಯವೆಂದರೆ ಯುದ್ಧ ರಹಿತ ಸಮಾಜ ನಿರ್ಮಾಣ ಆಧ್ಯಾತ್ಮಿಕ ಅಥವಾ ಪಾರಮಾರ್ಥಿಕ ತತ್ವದ ತಳಹದಿಯಿಂದ ಮಾತ್ರ ಶಾಂತ ಸಮಾಜ ಸ್ಥಾಪನೆ ಎಂದರು. ಗಾಂಧೀಜಿಯವರು ವಾಸ್ತವಿಕತೆಯ ಆಧಾರದ ಮೇಲೆ ವ್ಯಕ್ತಿಯನ್ನಾಗಲಿ ವ್ಯಕ್ತಿಯ ಸ್ವಭಾವವನ್ನಾಗಲಿ ರಾಜ್ಯವನ್ನಾಗಲಿ ನೋಡದೇ ಆದರ್ಶದ ಆಧಾರದ ಮೇಲೆಯೇ ಪ್ಲೇಟೊನಂತೆ ನೋಡಿ ಸಿದ್ದಾಂತಗಳನ್ನು ಉಪದೇಶ ರೂಪದಲ್ಲಿ ಕೊಟ್ಟಿದ್ದಾರೆ. ಗಾಂಧೀಜಿ ಮತ್ತು ಪ್ಲೇಟೊ ಇಬ್ಬರು ಇತಿಹಾಸವನ್ನೂ ಆಧ್ಯಾತ್ಮಿಕ ದೃಷ್ಟಿಕೋನದಲ್ಲಿಯೇ ಕಂಡಿದ್ದಾರೆ. ಸ್ವಾತಂತ್ರ್ಯವನ್ನು ಆಂತರಿಕ ಪಾವಿತ್ರದಿಂದ ಮಾತ್ರ ಪಡೆಯಬೇಕೆಂಬುದೇ ಇಬ್ಬರ ವಾದ. ಗಾಂಧೀಜಿ ಮಾನವವತಾವಾದಿಗಳು ಎಲ್ಲ ಜೀವಿಗಳ ಬಗ್ಗೆ ಕಾಳಜಿಯನ್ನೂ ಹೊಂದಿದ್ದರು. ವೈರಿಯನ್ನು ಪ್ರೀತಿಸುವುದು ಎಂಬ ಗುಜರಾತಿ ಗಾದೆಮಾತಿನ ಪ್ರಭಾವ ಅವರ ಮೇಲೆ ಇತ್ತು. ವಿಶ್ವ ಮಾನವರೆಲ್ಲ ಒಂದು. ವಿಶ್ವವೆಲ್ಲ ಒಂದು ಎಂಬ ಅವರ ವೈಚಾರಿಕತೆ ಗ್ರೀನ್ ಮತ್ತು ಬೊಸಂಕ್ಯೂಟ್ (ಃosಚಿಟಿqueಣ) ಅವರನ್ನು ಹೋಲುತ್ತದೆ ಎಂದು ಹೇಳುವರು. “೭೫ನೇ ಸ್ವಾತಂತ್ರ್ಯೋತ್ಸವದ ಆಜಾದ್ ಕಾ ಅಮೃತಮಹೋತ್ಸವ”ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯ ಕ್ರಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಸಂಭ್ರಮದಲ್ಲಿ ಭಾಗವಹಿಸುವ ಮತ್ತು ದೇಶಭಕ್ತಿಯನ್ನು ಆಲಿಸುವ ಉತ್ಸಾಹವನ್ನು ತುಂಬುತ್ತದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ, ಅವರ ತ್ಯಾಗವು ಸ್ವತಂತ್ರ ರಾಷ್ಟ್ರದಲ್ಲಿ ಬದುಕಲು ನಮಗೆ ಸಹಾಯ ಮಾಡಿದೆ. ಸ್ವಾತಂತ್ರ್ಯ ಹೋರಾಟದ ತತ್ವವು ಆಧುನಿಕ ಭಾರತದ ಅಡಿಪಾಯವನ್ನು ರೂಪಿಸುತ್ತದೆ ಮತ್ತು ದೇಶದ ದೂರದೃಷ್ಟಿಯುಳ್ಳ ನಾಯಕರು ಒಂದು ಸಾಮಾನ್ಯ ರಾಷ್ಟ್ರೀಯ ಮನೋಭಾವವನ್ನು ರೂಪಿಸಲು ವಿಶ್ವ ದೃಷ್ಟಿಕೋನಗಳ ವೈವಿಧ್ಯತೆಯನ್ನು ಒಟ್ಟುಗೂಡಿಸಿದ್ದಾರೆ. ಅವರು ಭಾರತ ಮಾತೆಯನ್ನು ದಬ್ಬಾಳಿಕೆ ವಿದೇಶಿ ಅಡಳಿತದಿಂದ ಮುಕ್ತಗೊಳಿಸಲು ಮತ್ತು ಭವಿಷ್ಯವನ್ನು ಸುಭದ್ರಗೊಳಿಸಲು ಬದ್ದರಾಗಿದ್ದರು. ಅವರ ಆಲೋಚನೆಗಳು ಮತ್ತು ಕಾರ್ಯಗಳು ಭಾರತದ ಆಧುನಿಕ ರಾಷ್ಟ್ರದ ಗುರುತನ್ನು ರೂಪಿಸಿವೆ. ಮಹಾತ್ಮ ಗಾಂಧೀಜಿಯವರು ನಮ್ಮ ಸ್ವಾತಂತ್ರ್ಯ ಚಳುವಳಿಯ ಮಾರ್ಗದರ್ಶಕರಾರು ಎಂದು ನಾವು ಅದೃಷ್ಟವಂತರಾಗಿದ್ದೇವೆ. ಒಬ್ಬ ರಾಜಕೀಯ ನಾಯಕನಾಗಿ, ಅವರು ಕೇವಲ ಭಾರತದಲ್ಲಿ ಮಾತ್ರ ಸಂಭವಿಸಬಹುದಾದ ಒಂದು ವಿದ್ಯಮಾನ. ಸಾಮಾಜಿಕ ಕಲಹ, ಆರ್ಥಿಕ ಸಮಸ್ಯೆಗಳು ಮತ್ತು ಹವಾಮಾನ ಬದಲಾವಣೆಯಿಂದ ತೊಂದರೆಗೊಳಗಾದ ಜಗತ್ತು ಗಾಂಧಿಯ ಬೋದನೆಗಳಲ್ಲಿ ಪರಿಹಾರವನ್ನು ಬಯಸುತ್ತಿದೆ. ಸಮಾನತೆ ಮತ್ತು ನ್ಯಾಯಕ್ಕಾಗಿ ಅವರ ಅನ್ವೇಷಣೆ ನಮ್ಮ ಸ್ವಾತಂತ್ರ್ಯ ಮಂತ್ರವಾಗಿದೆ.—————————— ಡಾ. ಎಸ್.ಬಿ. ಬಸೆಟ್ಟಿ ಡಾ.ಎಸ್.ಬಿ.ಬಸೆಟ್ಟಿಯವರು ದಾರವಾಡದ ಕರ್ನಾಟಕ ವಿ.ವಿ.ಯ ಗಾಂಧೀ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿದ್ದಾರೆ. ಸಾಹಿತ್ಯ ಶ್ರೀ- ರಾಷ್ಟ್ರ ಮಟ್ಟದ ಪ್ರಶಸ್ತಿ, ವಿದ್ಯಾಭೂಷಣ- ಅಂತರಾಷ್ಟ್ರೀಯ ಮಟ್ಟದು, ಕನಕ ಶ್ರೀ, ಸಮಾಜ ರತ್ನ, ರಾಷ್ಟ್ರ ರತ್ನ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆಲೋಕಮಾನ್ಯ ಬಾಲಗಂಗಾದರ ತಿಳಕರ ಸ್ವರಾಜ್ಯ ಕಲ್ಪನೆ,ಲೋಕಮಾನ್ಯ ಬಾಲಗಂಗಾದರ ತಿಳಕರ ದೃಷ್ಠಿಯಲ್ಲಿ ರಾಷ್ಟ್ರೀಯತೆ,ಭಾರತದ ರಾಷ್ಟ್ರದ್ವಜ: ವಿಕಾಸ ಹಾಗು ಸಂಹಿತೆ -ಇವರ ಕೃತಿಗಳು.ಗಾಂಧೀ ಕುರಿತು ೨೦ ಲೇಖನ ಅಂತರಾಷ್ಟ್ರೀಯ, ರಾಷ್ಟ್ರೀಯ ನಿಯತಕಾಲಿಕೆ, ಮಾಸಿಕ ಪತ್ರಿಕೆ ಗಳು ಮತ್ತು ದಿನ ಪತ್ರಿಕೆಯಲ್ಲಿ ಪ್ರಕಟವಾಗಿವೆ.ಸಾಹಿತ್ಯ ಶ್ರೀ- ರಾಷ್ಟ್ರ ಮಟ್ಟದ ಪ್ರಶಸ್ತಿ, ವಿದ್ಯಾಭೂಷಣ- ಅಂತರಾಷ್ಟ್ರೀಯ ಮಟ್ಟದು, ಕನಕ ಶ್ರೀ, ಸಮಾಜ ರತ್ನ, ರಾಷ್ಟ್ರ ರತ್ನ ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ
ಗಜಲ್ ಅರುಣಾ ನರೇಂದ್ರ ನಿನ್ನ ಕಿರು ನಗೆ ನನ್ನೊಂದಿಗೆ ಮುನಿಸಿಕೊಂಡಾಗ ನಾ ಯಾರಿಗೆ ಹೇಳಲಿತೋಳ ತಲೆದಿಂಬು ಸರಿಸಿ ಹೊರಳಿ ಮಲಗಿಕೊಂಡಾಗ ನಾ ಯಾರಿಗೆ ಹೇಳಲಿ ಮುತ್ತಿನಲಿ ಸಿಂಗರಿಸಿ ಮುಖ ನೋಡಿ ಹಿಗ್ಗುತ್ತಿದ್ದವನು ನೀನುಪ್ರೀತಿಯ ಕರೆ ಧ್ವನಿ ಕಳೆದುಕೊಂಡಾಗ ನಾ ಯಾರಿಗೆ ಹೇಳಲಿ ಹೂವಾಗುವ ಮೊಗ್ಗಿನ ನಿದ್ರೆಯಲಿ ಬರಿ ಚಿಟ್ಟೆಯದೇ ಕನಸುಸತ್ಯ ಮುಸುಕು ಹಾಕಿಕೊಂಡಾಗ ನಾ ಯಾರಿಗೆ ಹೇಳಲಿ ನದಿಯಾಗಿ ನಿನ್ನೆದೆಯೊಳಗೆ ಹರಿದ ಧನ್ಯತೆ ಇದೆ ಸಾಜನ್ಬೆಳಕನೆ ಕುಡಿದು ಮತ್ತೇರಿಸಿಕೊಂಡಾಗ ನಾ ಯಾರಿಗೆ ಹೇಳಲಿ ಮತ್ತೆ ಮತ್ತೆ ಸೋಲುತ್ತಾಳೆ ಅರುಣಾ ಸಹನೆ ಪರಕಿಸುವ ನಿನ್ನ ಸಾಹಸಕ್ಕೆಒಲವು ಮಿಡಿವ ಹೃದಯದಿ ಸೂತಕ ಆವರಿಸಿಕೊಂಡಾಗ ಯಾರಿಗೆ ಹೇಳಲಿ
ಲೇಖನ ಹಿರಿಯರು ಹೊರೆಗಳಾಗದಿರಲಿ ವಿಶ್ವನಾಥ ಎನ್ ನೇರಳಕಟ್ಟೆ [6:36 am, 26/09/2021] ಸಂಗಾತಿ ಸಾಹಿತ್ಯ ಪತ್ರಿಕೆ: ಸುರಕ್ಷಾ ವೃದ್ಧಾಶ್ರಮ’ ಹೀಗೆಂದು ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಬೋರ್ಡನ್ನು ನೆತ್ತಿ ಮೇಲೆ ಹೊತ್ತುಕೊಂಡಂತೆ ಕುಳಿತಿದ್ದ ನಾರಾಯಣರಾಯರ ಕಣ್ಣಿನ ತುಂಬ ಅಸಹಾಯಕತೆಯಿತ್ತು. ‘ಎರಡು ದಿನಗಳ ಇಲ್ಲಿಯ ಬದುಕೇ ಸಾಕಾಗಿಹೋದಂತಿದೆ ನಿಮಗೆ’, ಪಕ್ಕದಲ್ಲಿ ಕುಳಿತಿದ್ದ ವೃದ್ಧರು ಪ್ರಶ್ನಿಸಿದರು. ಉತ್ತರಿಸಬೇಕೆಂದು ಇವರಿಗೆ ಅನಿಸಲಿಲ್ಲ. ಮಗ ತನ್ನನ್ನು ಇಲ್ಲಿ ಬಿಟ್ಟುಹೋದ ಸನ್ನಿವೇಶ ಅವರ ಕಣ್ಣೆದುರು ತಾಂಡವವಾಡತೊಡಗಿತ್ತು. “ಅಪ್ಪಾ, ನಿಧಾನಕ್ಕೆ ಬನ್ನಿ. ಅಲ್ಲಿ ಮೆಟ್ಟಿಲು ಇದೆ ನೋಡಿ. ನನ್ನ ಕೈ ಗಟ್ಟಿ ಹಿಡಿದುಕೊಳ್ಳಿ”, ವೃದ್ಧಾಶ್ರಮಕ್ಕೆ ಕರೆತರುವಾಗ ಕಾಳಜಿಯ ಮುಖವಾಡ ಹೊತ್ತು ಮಗನಾಡಿದ ಮಾತು ಅವರ ಕಿವಿ ತಮಟೆಯನ್ನು ಈಗಲೂ ಕತ್ತರಿಸತೊಡಗಿತ್ತು. “ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂಬ ತೋರಿಕೆಯ ಮಾತು ಬೇರೆ. ಯಾವ ಕರ್ಮಕ್ಕೆ ಆರೋಗ್ಯ?” ನಾರಾಯಣರಾಯರು ಗೊಣಗಿಕೊಂಡದ್ದು ಮಾತ್ರ. ಅದ್ಯಾವುದೋ ಮಾಯೆಯಲ್ಲಿ ಪಕ್ಕದಲ್ಲಿದ್ದ ವೃದ್ಧರಿಗೆ ಸ್ಪಷ್ಟವಾಗಿ ಕೇಳಿಸಿತು. “ನಿಮ್ಮ ಮಗನಾದರೋ ನಿಮ್ಮನ್ನು ಇಲ್ಲಿಗೆ ಕರೆತಂದು ಬಿಟ್ಟು ಹೋಗಿದ್ದಾನೆ. ನನ್ನ ಮಗ ರಾತ್ರೆ ಹೊತ್ತಿಗೆ ಮನೆಯಿಂದ ಹೊರದಬ್ಬಿ ಬಾಗಿಲು ಹಾಕಿಕೊಂಡ. ಅದು ಚಳಿಗಾಲ ಬೇರೆ. ನಾನು ಅನುಭವಿಸಿದ ಸಂಕಟ ದೇವರಿಗೇ ಪ್ರೀತಿ…” ಉಕ್ಕಿಬಂದ ಕಣ್ಣೀರು ಅವರ ಮಾತಿಗೆ ಅರೆಕ್ಷಣದ ಬ್ರೇಕ್ ಹಾಕಿತು. “ಐದು ವರ್ಷ ಆಗಿದೆ ನಾನಿಲ್ಲಿಗೆ ಬಂದು. ಒಂದು ದಿನವೂ ಬಂದದ್ದಿಲ್ಲ, ವಿಚಾರಿಸಿದ್ದಿಲ್ಲ. ನಾಳೆ ನಾನು ಸತ್ತರೂ ಬರಲಿಕ್ಕಿಲ್ಲವೇನೋ…” ದುಃಖದ ಮಹಾಪ್ರವಾಹದಲ್ಲಿ ಅವರಿಗೆ ಮಾತು ಮುಂದುವರಿಸಲಾಗಲಿಲ್ಲ. ನಾರಾಯಣರಾಯರನ್ನೂ ದುಃಖ ಪರವಶಗೊಳಿಸಿತ್ತು. ಮೌನವೇ ನಡೆದುಹೊರಟಂತೆ ತಮ್ಮ ರೂಮನ್ನು ಹೊಕ್ಕರು. ‘ಹೊತ್ತು ಹೋಗುತ್ತಿಲ್ಲ’ ಎಂದು ಅಂದುಕೊಂಡವರು ಬ್ಯಾಗಿನೊಳಗಿದ್ದ ಡೈರಿಯನ್ನು ಎತ್ತಿಕೊಂಡರು. ‘ಒಳ್ಳೆಯದಾಗಲಿ’ ಡೈರಿಯ ಮೊದಲ ಪುಟದಲ್ಲಿ ತಂದೆ ಬರೆದಿದ್ದ ಈ ಪದ ನಾರಾಯಣರಾಯರನ್ನು ಭಾವನಾತ್ಮಕವಾಗಿಸಿತು. “ನನ್ನ ತಂದೆಯನ್ನು ನಾನು ಅಂದು ವೃದ್ಧಾಶ್ರಮಕ್ಕೆ ಕಳಿಸಬಾರದಿತ್ತು. ಚೆನ್ನಾಗಿ ನೋಡಿಕೊಂಡಿದ್ದರೆ ಇಂದು ನನ್ನ ಮಗ ನನ್ನನ್ನು ವೃದ್ಧಾಶ್ರಮದ ಪಾಲಾಗಿಸುತ್ತಿರಲಿಲ್ಲ” ಭೂತಕಾಲದ ಯೋಚನೆ ನಾರಾಯಣರಾಯರ ಸ್ಮøತಿಪಟಲದಲ್ಲಿ ಓಡಾಡತೊಡಗಿತು. ಗೋಡೆಯ ಮೇಲೆ ತೂಗಾಡುತ್ತಿದ್ದ ಕ್ಯಾಲೆಂಡರ್ 2050ನೇ ಇಸವಿಯನ್ನು ಸಾರಿ ಹೇಳುತ್ತಿತ್ತು. ************************************* ‘ವಸುಧೈವ ಕುಟುಂಬಕಂ’ ಎಂದು ಜಗತ್ತಿಗೇ ಸಾರಿದ ರಾಷ್ಟ್ರ ನಮ್ಮದು. ‘ಭೂಮಿಯೇ ಒಂದು ಕುಟುಂಬ; ಭೂಮಿಯಲ್ಲಿರುವ ಎಲ್ಲರೂ ನಮ್ಮವರು’ ಎನ್ನುವ ಈ ತತ್ತ್ವದ ಮೂಲಕವೇ ಭಾರತ ಗುರುತಿಸಿಕೊಂಡಿದೆ, ಬೆಳೆದಿದೆ; ಜ್ಞಾನದ ಹಣತೆಯನ್ನು ಜಗತ್ತಿನುದ್ದಕ್ಕೂ ಬೆಳಗಿದೆ. ಆದರೆ ಆಧುನಿಕತೆಯ ಕಪಿಮುಷ್ಟಿಗೆ ಸಿಲುಕಿಕೊಂಡ ನಾವು ಇಂದು ತೀರಾ ಭಿನ್ನ ನೆಲೆಯಲ್ಲಿ ಸಾಗುತ್ತಿದ್ದೇವೆ. ಕೌಟುಂಬಿಕ ಬಾಂಧವ್ಯಗಳನ್ನೂ ವ್ಯಾವಹಾರಿಕತೆಯ ದೃಷ್ಟಿಕೋನದಿಂದ ಗಮನಿಸಿಕೊಳ್ಳುತ್ತಿದ್ದೇವೆ. ನಮ್ಮ ಕುಟುಂಬದವರನ್ನೂ ನಮ್ಮವರು ಎಂದು ಅಂದುಕೊಳ್ಳದ ಸಂಕುಚಿತ ಮನಃಸ್ಥಿತಿಗೆ ಒಳಗಾಗುತ್ತಿದ್ದೇವೆ. ‘ಸರ್ವೇಜನಃ ಸುಖಿನೋ ಭವಂತು’ ಎಂದು ಬೋಧಿಸಿದ ರಾಷ್ಟ್ರದ ಕಸದ ತೊಟ್ಟಿಯಲ್ಲಿ ವೃದ್ಧೆಯನ್ನು ಕಾಣುವಂತಾಗುತ್ತದೆ. ಅವರ ಮಕ್ಕಳೇ 50 ಲಕ್ಷದ ಕಾರಿನಲ್ಲಿ ಕರೆತಂದು ಎಸೆದುಹೋಗಿರುತ್ತಾರೆ. ಚಳಿಗೆ ಮರಗಟ್ಟಿರುವ ಅವಳ ಸ್ಥಿತಿ ಸಮಾಜದ ಅದೆಷ್ಟೋ ಜನರ ಕಣ್ಣೀರಿಗೆ ಕಾರಣವಾಗುತ್ತದೆ. ಆದರೆ ಅವರ ಮಕ್ಕಳ ಕಣ್ಣು ತೆರೆಯುವುದೇ ಇಲ್ಲ. ಭಾರತವನ್ನು ಕಂಡು ವಿದೇಶಿಯರು ಅಚ್ಚರಿಪಟ್ಟಿದ್ದರು. ಇಲ್ಲಿನ ಕುಟುಂಬ ವ್ಯವಸ್ಥೆ ಅವರಲ್ಲಿ ದಿಗ್ಭಮೆಯನ್ನು, ಕುತೂಹಲವನ್ನು ಹುಟ್ಟುಹಾಕಿತ್ತು. ಹತ್ತಿಪ್ಪತ್ತು ಜನ ಒಂದೇ ಸೂರಿನಡಿಯಲ್ಲಿ ಬಾಳುವುದು ಅವರ ಪಾಲಿಗೆ ಇನ್ನಿಲ್ಲದ ಅದ್ಭುತವಾಗಿತ್ತು. ಭಾರತದ ಕುಟುಂಬ ವ್ಯವಸ್ಥೆಯೊಳಗಿನ ಬಾಂಧವ್ಯ, ಸಂಬಂಧಗಳ ನಡುವಿನ ಪರಸ್ಪರ ನಂಬಿಕೆಯನ್ನು ಕೂಗಿ ಹೇಳುವ ರೀತಿಯಲ್ಲಿ ಬದುಕಿದ ವಿಧಾನ ಒಂದು ಅನುಕರಣೀಯ ಮಾದರಿಯನ್ನು ಹುಟ್ಟುಹಾಕಿತ್ತು. ಕೌಟುಂಬಿಕ ಮೌಲ್ಯಗಳ ಅದಃಪತನವು ಎಂತಹ ತಲೆಮಾರನ್ನು ರೂಪುಗೊಳಿಸಬಹುದು ಎನ್ನುವುದಕ್ಕೆ ನಿದರ್ಶನವೆಂಬಂತೆ ಒಂದು ಅರ್ಥಪೂರ್ಣ ಕಥೆಯಿದೆ. ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಮಾತು ಕೇಳಿ ತನ್ನ ವೃದ್ಧ ತಂದೆಯನ್ನು ಮನೆಯಿಂದ ಹೊರಹಾಕುತ್ತಾನೆ. ರಕ್ತವನ್ನೂ ಹೆಪ್ಪುಗಟ್ಟಿಸಬಲ್ಲಂತಹ ಚಳಿಗಾಲದ ರಾತ್ರಿಯದು. “ಮೈ ಮುಚ್ಚಿಕೊಳ್ಳುವುದಕ್ಕೆ ಒಂದು ಕಂಬಳಿಯನ್ನಾದರೂ ಕೊಡು” ಎಂದು ಆ ವೃದ್ಧ ತನ್ನ ಮಗನಲ್ಲಿ ಅಂಗಲಾಚುತ್ತಾನೆ. ಅರೆಬರೆ ಹರಿದ, ಹಳೆಯ ಕಂಬಳಿಯೊಂದನ್ನು ಮನೆಯೊಳಗಿಂದ ತಂದ ಮಗ ಋಣವೇ ಮುಗಿಯಿತೆಂಬಂತೆ ತಂದೆಯ ಮುಖಕ್ಕೆ ಅದನ್ನು ಎಸೆಯುತ್ತಾನೆ. ಈ ಎಲ್ಲಾ ವಿದ್ಯಮಾನವನ್ನೂ ಗಮನಿಸುತ್ತಿದ್ದ ಆ ವೃದ್ಧನ ಮೊಮ್ಮಗ, ಎಂಟು ವರ್ಷದವನು, ತಕ್ಷಣ ತನ್ನ ಅಜ್ಜನ ಬಳಿಗೆ ಓಡುತ್ತಾನೆ. ಅಜ್ಜನ ಮೈಮೇಲೆ ಹರಡಿದ್ದ ಕಂಬಳಿಯನ್ನು ಅರ್ಧ ಭಾಗ ಮಾಡಿ ಒಂದು ಭಾಗವನ್ನು ತೆಗೆದುಕೊಳ್ಳುತ್ತಾನೆ. ಆ ಹಳೇ ಕಂಬಳಿ ಏಕೆ ಎಂದು ತಂದೆ ಕೇಳಿದ್ದಕ್ಕೆ ಆ ಪುಟ್ಟ ಹುಡುಗ ಹೇಳಿದ್ದಿಷ್ಟು- “ಇನ್ನು ಸ್ವಲ್ಪ ವರ್ಷಗಳಾದ ಮೇಲೆ ನೀವು ಮುದುಕರಾಗುತ್ತೀರಿ. ಆಗ ನಾನೂ ನಿಮ್ಮನ್ನು ಇದೇ ರೀತಿ ಮನೆಯಿಂದ ಹೊರಹಾಕುತ್ತೇನೆ. ಆಗ ನೀವು ಕಂಬಳಿ ಬೇಕೆಂದು ಕೇಳಿದರೆ ಕೊಡುವುದಕ್ಕೆ ಬೇಕಲ್ಲಾ.” ಮಕ್ಕಳು ಹೇಳಿಕೊಟ್ಟದ್ದನ್ನು ಅನುಸರಿಸುವುದಕ್ಕಿಂತಲೂ ಕಂಡದ್ದನ್ನು ಕಂಡ ಹಾಗೆಯೇ ಅನುಸರಿಸುತ್ತಾರೆ. ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವುದನ್ನು ಇಂದಿನ ಮಕ್ಕಳು ಕಾಣುವಂತಾಗಬಾರದು, ಕಲಿಯುವಂತಾಗಬಾರದು. ಪ್ರಪಂಚದ ಹಲವು ದೇಶಗಳು ಆರ್ಥಿಕವಾಗಿ ಮುಂದುವರಿದಿವೆ ನಿಜ. ಆದರೆ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ ಅವುಗಳ ನಡೆ ಪ್ರಶ್ನಾರ್ಹವಾದುದು. ನಮಗೆ ಗೊತ್ತಿದೆ, ಹಲವು ದೇಶಗಳಲ್ಲಿ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ತಮ್ಮ ಹೆತ್ತವರಿಂದ ಹಣವನ್ನು ಅಪೇಕ್ಷಿಸುವಂತಿಲ್ಲ. ಒಂದುವೇಳೆ ಹಣವನ್ನು ಪಡೆದುಕೊಂಡರೆ ಅದನ್ನು ಹಿಂದಿರುಗಿಸಬೇಕು. ಮಕ್ಕಳು ಹಣ ಗಳಿಕೆ- ನಿರ್ವಹಣೆಯ ಮಹತ್ವವನ್ನು ಮನಗಾಣುವಂತಾಗಲು ಈ ವ್ಯವಸ್ಥೆಯನ್ನು ಹೆತ್ತವರು ರೂಪಿಸಿಕೊಂಡಿದ್ದಾರೆ ನಿಜ. ಉದ್ದೇಶ ಒಳ್ಳೆಯದೇ. ಆದರೆ ಅದು ಉಂಟುಮಾಡುವ ಪರಿಣಾಮ? ಹೆತ್ತವರಿಂದಲೇ ಸಾಲ ಪಡೆದುಕೊಂಡ ಮಕ್ಕಳು ಹೆತ್ತವರನ್ನು ವ್ಯಾವಹಾರಿಕತೆಯ ಆಯಾಮದಿಂದಲೇ ಗಮನಿಸಿಕೊಳ್ಳತೊಡಗುತ್ತಾರೆ. ಅವರ ಜೊತೆಗಿನ ಭಾವನಾತ್ಮಕತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಭಾರತ ಹಾಗಲ್ಲ. ಬದುಕಿನ ಬಿಂದು ಬಿಂದುಗಳಲ್ಲಿಯೂ ಭಾವನಾತ್ಮಕತೆಯನ್ನು ಬಚ್ಚಿಟ್ಟುಕೊಂಡ ಭವ್ಯತೆ ಭಾರತದ್ದು. ಆದರೆ ಆಧುನಿಕತೆಯೆಂಬ ಮಾಯೆ ಭಾರತದ ಕೌಟುಂಬಿಕ ವ್ಯವಸ್ಥೆಯೊಳಗಿನ ಭಾವನಾತ್ಮಕತೆಯನ್ನು ಮೂಲೆಗುಂಪು ಮಾಡುತ್ತಿದೆ ಎನ್ನುವುದು ಸತ್ಯ. ಆಧುನಿಕತೆಯ ಪರಿಣಾಮವಾಗಿ ವೃದ್ಧರು ವೃದ್ಧಾಶ್ರಮಗಳ ಪಾಲಾಗುತ್ತಿದ್ದಾರೆ. ಜಾಗತೀಕರಣದ ಪರಿಣಾಮವಾಗಿ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಕುಟುಂಬದ ಬೆಂಬಲವನ್ನು ಕಳೆದುಕೊಂಡ ಹಿರಿಯರ ಬದುಕಿನಲ್ಲಿ ಭರವಸೆಯನ್ನು ಹುಟ್ಟಿಸಬೇಕಾದದ್ದು ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ವೃದ್ಧಾಶ್ರಮಗಳ ಮುಖ್ಯಸ್ಥರು, ಸಿಬ್ಬಂದಿಗಳ ಸೇವೆ ಗಮನಾರ್ಹವಾದದ್ದು. ನೆಲೆ ಕಳೆದುಕೊಂಡವರ ಮನಸ್ಸಿನ ಅಲೆಯನ್ನು ಕಾಪಿಡುವ ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿ ವಂಚಿತರ ಬದುಕನ್ನು ಪ್ರೀತಿಯ ಹಾದಿಯಲ್ಲಿಯೇ ಮುನ್ನಡೆಸಲು ಶ್ರಮಿಸುವ ಅವರ ಕಾಯಕ ನಿಷ್ಠೆಗೆ ಸಲಾಂ ಹೇಳಬೇಕಾಗಿದೆ.
ಹಿರಿಯರು ಹೊರೆಗಳಾಗದಿರಲಿ Read Post »
ನೆನಪು ಮಿಸ್ ಯೂ ಡ್ಯಾಡಿ ಮೌಲ್ಯಗಳ ಸಂಪುಟ ನನ್ನಪ್ಪ ಎಪ್ರಿಲ್ ತಿಂಗಳ ಸಮಯ ಬೆಂಗಳೂರಿನ ಸೆಂಟ್ರಲ್ ಸ್ಕೂಲಲ್ಲಿ ಇಂಗ್ಲಿಷ್ ಮೌಲ್ಯಮಾಪನ ನಡೆದಿತ್ತು.ನನ್ನ ತಂದೆ ಮಲ್ಲಣ್ಣ ಭರಮಪ್ಪ ತಿರ್ಲಾಪುರ ಇಂಗ್ಲಿಷ್ ಪ್ರಾಧ್ಯಾಪಕರು, ಮಾಮಲೆ ದೇಸಾಯಿ ಹೈಸ್ಕೂಲ್ ಶಿಗ್ಗಾವಿ, ಮೌಲ್ಯಮಾಪನಕ್ಕೆ ಅಲ್ಲಿ ಹಾಜರಿದ್ದರು. ಬೆಂಗಳೂರಿಗೆ ಬರುವಾಗ ತುಂಬು ಗರ್ಭಿಣಿಯಾದ ಕಿರಿ ವಯಸ್ಸಿನ ಹೆಂಡತಿಯನ್ನು ಅರೆಮನಸ್ಸಿನಿಂದಲೇ ಬಿಟ್ಟು ಬಂದಿದ್ದರು. ಬೆಂಗಳೂರಿಗೆ ಬಂದು ಒಂದು ವಾರಕ್ಕೆ ಅವರಿಗೆ ಒಂದು ಪತ್ರ ಬರುತ್ತದೆ. ಅದು ಮೊದಲ ಮಗುವಿನ ಜನನದ ಕುರಿತಾದ ಪತ್ರ. ಅಕಸ್ಮಾತಾಗಿ ಆ ಪತ್ರ ಮೊದಲು ಗೆಳೆಯರ ಕೈಸೇರುತ್ತದೆ. ಗೆಳೆಯರು ತಾವೇ ಪತ್ರವನ್ನು ಹರಿದು ಓದಿ ಕಂಗ್ರಾಜುಲೇಷನ್ಸ್ ನಿಮಗೆ ಗಂಡು ಮಗುವಾಗಿದೆ ಪಾರ್ಟಿ ಕೊಡಿ ಎಂದು, ದೊಡ್ಡ ಹೋಟೆಲಿಗೆ ಕರೆದೊಯ್ದು ಹೊಟ್ಟೆ ಬಿರಿಯೆ ಪಾರ್ಟಿ ತಿಂದಮೇಲೆ, ಕ್ಷಮಿಸಿ ತಿರ್ಲಾಪುರ ನಿಮಗೆ ಮಗಳು ಹುಟ್ಟಿದ್ದಾಳೆ ಅಂದರಂತೆ. ಆಗ ನನ್ನ ತಂದೆ ಕೊಂಚವೂ ವಿಚಲಿತವಾಗದ ಅರೆ ನನಗೆ ಇನ್ನೂ ಖುಷಿಯಾಯಿತು ಲಕ್ಷ್ಮಿ ನನ್ನ ಮನೆಗೆ ಬಂದಿದ್ದಾಳೆಅವಳಿಗೆ ನಾನು ವಿಜಯಲಕ್ಷ್ಮಿ ಎಂದು ಹೆಸರಿಡುತ್ತೇನೆ ಅವಳನ್ನು ನಾನು ಇಂಗ್ಲೀಷ್ ಪ್ರೊಫೇಸರ್ ಮಾಡುತ್ತೇನೆ ನೋಡುತ್ತೀರಿ ಅಂದಿದ್ದರಂತೆ. ..ಮುಂದೆ ಅದರಂತೆ ತಮ್ಮ ಮಗಳನ್ನು ಅವರು ಬೆಳಗಾವಿಯಮರಾಠಾ ಮಂಡಳ ಪದವಿ ಮಹಾವಿದ್ಯಾಲಯದ ಇಂಗ್ಲೀಷ್ ಉಪನ್ಯಾಸಕಿ ಯನ್ನಾಗಿ ಮಾಡಿದ್ದು ಈಗ ಇತಿಹಾಸ…. ನಾನು ಪ್ರೀತಿಯಿಂದ ಅಪ್ಪನನ್ನು ಡ್ಯಾಡಿ ಡ್ಯಾದೂಸ್, ಗೋಬಸ್ ಏನೆಲ್ಲಾ ವಿಚಿತ್ರ ಹೆಸರುಗಳಿಂದ ಕರೆಯುತ್ತಿದ್ದೆ. ಅವರು ಮಾತ್ರ ನನ್ನನ್ನು, “ಎಸ್ ಮೈ ಡಿಯರ್ ಡಾಟರ್ ವಿಜಯಲಕ್ಷ್ಮಿ” ಎಂದು ಯಾವಾಗಲೂ ಪ್ರೀತಿಯಿಂದಲೇ ಸಂಬೋಧಿಸುತ್ತಿದ್ದರು. ನನ್ನ ಮಗಳು ತುಂಬಾ ಜಾಣೆ, ಪಾಕಪ್ರವೀಣೆ, ಒಳ್ಳೆಯ ಗಾಯಕಿ ಎಲ್ಲದರಲ್ಲಿಯೂ ಅವಳದು ಎತ್ತಿದ ಕೈ ಅವಳನ್ನು ಮದುವೆಯಾಗುವ ತುಂಬಾ ಪುಣ್ಯವಂತ ಎಂದು ಸದಾ ನನ್ನನ್ನು ಒಳ್ಳೆಯ ಮಾತುಗಳಿಂದ ಹುರಿದುಂಬಿಸುತ್ತಿದ್ದರು. ಅಪ್ಪನೆಂದರೆ ನನ್ನ ಭಾವ, ನನ್ನ ಜೀವ ,ನನ್ನ ಜೀವನ ಕಟ್ಟಿದ ಶಿಲ್ಪಿ, ನನ್ನ ಆತ್ಮೀಯ ಗೆಳೆಯ, ನನ್ನ ತಾಯಿ, ನನ್ನ ಬಂಧು, ನನ್ನ ಸಲಹೆಗಾರ …ಒಂದೇ ಎರಡೇ ಎಲ್ಲಕ್ಕಿಂತ ಹೆಚ್ಚಾಗಿದೊಡ್ಡ ಸಹನಾಮೂರ್ತಿ. ಅವರಲ್ಲಿರುವ ತಾಳ್ಮೆಗೆ ಯಾರು ಸರಿಸಾಟಿ ಅಲ್ಲ ಸಹೃದಯಿ, ಪರೋಪಕಾರಿ, ಕಷ್ಟಸಹಿಷ್ಣು, ಮಕ್ಕಳನ್ನು ಒಂದು ಪೆಟ್ಟು ಹಾಕದೆ ಅತ್ಯಂತ ಪ್ರೀತಿಯಿಂದ ಬೆಳೆಸಿದ ಕರುಣಾಮಯಿ. ತಂದೆಯೆಂದರೆ ನಮಗೆ ಪ್ರೀತಿ, ತಂದೆಯೆಂದರೆ ಸಲುಗೆ ,ಆತ್ಮೀಯತೆ, ಹಠ….. ಶಿಗ್ಗಾವಿ ಮಾಮಲೆ ದೇಸಾಯಿ ಹೈಸ್ಕೂಲಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು ಯಾವಾಗಲೂ ಮಕ್ಕಳಲ್ಲಿ ಉನ್ನತ ವಿಚಾರಗಳನ್ನು ತುಂಬುತ್ತಿದ್ದರು. ಸದಾ ಮನೆಯಲ್ಲಿ ಒಂದು ಆರೋಗ್ಯಕರ ಶೈಕ್ಷಣಿಕ ಧಾರ್ಮಿಕ ಸಾಂಪ್ರದಾಯಿಕ ಗೌರವಯುತವಾದ ಪರಿಸರವನ್ನು ಕಟ್ಟಿಕೊಟ್ಟಿದ್ದರು.”ಸಣ್ಣ ಗುರಿ ಅಪರಾಧ”, “Low aim is crime” ಹಾಗಾಗಿ ಉನ್ನತ ಗುರಿಯನ್ನು ನೀವು ಇಡಬೇಕು ಎಂದು ನಮಗೆ ಯಾವಾಗಲೂ ತಿಳಿಹೇಳುತ್ತಿದ್ದರು. ಹಾಗಾಗಿ ಇವತ್ತು ಅವರ ಹಿರಿಯ ಮಗಳಾದ ನಾನು ಬೆಳಗಾವಿಯ ಮರಾಠ ಮಂಡಳ ಕಾಲೇಜಿನ ನಲ್ಲಿ ಇಂಗ್ಲಿಷ್ವಿಭಾಗದ ಮುಖ್ಯಸ್ಥೆಯಾಗಿ ಯುಜಿಸಿ ಸಂಬಳವನ್ನು ಪಡೆಯುತ್ತಿದ್ದೇನೆ. ನನ್ನ ಮೊದಲನೆಯ ತಮ್ಮ ರವಿ ಎಂ ತಿರ್ಲಾಪುರ ಈಗ ಸ್ಪೆಷಲ್ ಡಿಸಿ ಆಗಿ ಬೆಂಗಳೂರಿನಲ್ಲಿಉನ್ನತ ಹುದ್ದೆಯಲ್ಲಿ ತಂದೆಯ ಎಲ್ಲ ಆದರ್ಶ ಮತ್ತು ಆಶಯಗಳನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಎರಡನೆಯ ತಮ್ಮ ಡಾಕ್ಟರ್ ಮೃತ್ಯುಂಜಯ ತಿರ್ಲಾಪುರ ತಮ್ಮದೇ ನರ್ಸಿಂಗ್ ಹೋಮ್ ನಡೆಸುತ್ತಿದ್ದು ಜೊತೆಜೊತೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಮತ್ತು ವೃದ್ದಾಶ್ರಮ ನಡೆಸುತ್ತ ಪತ್ನಿ ಡಾಕ್ಟರ್ ರಾಣಿ ತಿರ್ಲಾಪುರ ಅವರೊಂದಿಗೆ ಸಮಾಜಮುಖಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. 1990 ರಲ್ಲಿ ಒಂದು ಘಟನೆ ನಡೆಯುತ್ತೆ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಮೇಜರ್ ತೆಗೆದುಕೊಂಡು ಪ್ರಥಮ ದರ್ಜೆಯಲ್ಲಿ ನಾನು ಬಿಎ ಪಾಸಾಗಿದ್ದೆ. ಮುಂದೇನು? ಎನ್ನುವ ಪ್ರಶ್ನೆಗೆ ನಾನು ಡ್ಯಾಡಿ ನಾನು B.ed ಮಾಡಿ ನಿಮ್ಮಂತೆ ಹೈಸ್ಕೂಲ್ ಶಿಕ್ಷಕಿ ಆಗುತ್ತೇನೆ ಎಂದೆ. ಆದರೆ ನನ್ನ ತಂದೆ ಇಲ್ಲ ನೀನು ನನ್ನಂತೆ ಆಗುವುದು ಬೇಡ ನನಗಿಂತ ಎತ್ತರಕ್ಕೆ ಬೆಳೆಯಬೇಕು ತಂದೆಯನ್ನು ಮೀರಿ ಬೆಳೆದ ಮಗಳಾಗಬೇಕು ಆದ್ದರಿಂದ ನೀನು ಯೂನಿವರ್ಸಿಟಿ ಅಥವಾ ಡಿಗ್ರಿ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಆಗಬೇಕೆನ್ನುವುದು ನನ್ನ ಆಸೆ ಎಂದರು. ಅವರ ಮಾತನ್ನು ನಾನು ಕೇಳದೆ ಹಠ ಮಾಡತೊಡಗಿದೆ, ಕೊನೆಗೆ ಅನಿವಾರ್ಯವಾಗಿ ಧಾರವಾಡದಲ್ಲಿಯ ಕೆಎಲ್ಇ ಬಿಎಡ್ ಕಾಲೇಜಿಗೆ ನನ್ನ ಕರೆದುಕೊಂಡು ಹೋದರು ಅಲ್ಲಿ ಏನಾಯಿತೋ ಗೊತ್ತಿಲ್ಲ ಆ ಮಹಾವಿದ್ಯಾಲಯದ ಪ್ರಾಚಾರ್ಯರು ಕೂಡ ನೀನು ಬಿ ಎಡ ಮಾಡುವುದು ಬೇಡ ನಿಮ್ಮ ತಂದೆಯ ಮಾತನ್ನು ಕೇಳು ಇಂಗ್ಲಿಷ್ನಲ್ಲಿ MA ಮಾಡು ಎಂದು ಉಪದೇಶಿಸಿದರು..ಬೇರೆ ದಾರಿ ಕಾಣದೆ ಅವರಿಬ್ಬರ ಮಾತುಗಳಿಗೆ ನಾನು ತಲೆಬಾಗಿ ಮುಂದೆ ಇಂಗ್ಲಿಷ್ನಲ್ಲಿ MA ಮಾಡಿ ಇದೀಗ ಬೆಳಗಾವಿಯ ಪ್ರತಿಷ್ಠಿತ ಡಿಗ್ರಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕಿ ಅದು ಕೂಡ ಈಗ ಇತಿಹಾಸ…ಪ್ರತಿಯೊಬ್ಬರು ಜೀವನದಲ್ಲಿ ಉನ್ನತ ಧ್ಯೇಯವನ್ನೇ ಇಟ್ಟುಕೊಳ್ಳಬೇಕು ಎನ್ನುವುದು ನನ್ನ ತಂದೆಯ ಅಭಿಲಾಷೆ ಇದೀಗ ಅವರ ಆಶಯದಂತೆಎಲ್ಲ ಮೊಮ್ಮಕ್ಕಳು ಕೂಡ ನಡೆಯುತ್ತಿದ್ದಾರೆ. ನನ್ನ 45ನೆಯ ವಯಸ್ಸಿನ ಆಸುಪಾಸಿನಲ್ಲಿ ಕಾಲೇಜಿನ ಕೆಲಸದ ಒತ್ತಡ ಮನೆ ಕೆಲಸಗಳು ಸಾಮಾಜಿಕ ಕಾರ್ಯಕ್ರಮಗಳು ಬೇರೆ ಊರಿಗೆ ವರ್ಗಾವಣೆ ಮನೆಯಲ್ಲಿ ಮಾವನ ಅನಾರೋಗ್ಯ ಚಿಕ್ಕ ಮಕ್ಕಳ ಶಾಲೆ ಪಾಠ ಪ್ರವಚನ ಪತಿಯ ದೂರದ ನೌಕರಿ ಎಲ್ಲವೂ ಸೇರಿ ಒಂಥರಾ ಮಾನಸಿಕ ಮತ್ತು ದೈಹಿಕ ಅನಾರೋಗ್ಯವನ್ನು ಉಂಟು ಮಾಡಿ ನಾನು ಹಾಸಿಗೆ ಹಿಡಿದು ಮಲಗಿ ಬಿಟ್ಟೆ ವಿಷಯ ತಿಳಿದ ನನ್ನ ತಂದೆ ಕಕ್ಕುಲತೆಯಿಂದ ಧಾವಿಸಿಬಂದರು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧೋಪಚಾರ ಮಾಡಿಸಿ ಕಾಲೇಜಿಗೆ ಒಂದು ತಿಂಗಳು ರಜೆ ಹಾಕಿಸಿ ಚಿಕ್ಕ ಮಗುವನ್ನು ನೋಡಿಕೊಳ್ಳುವ ಹಾಗೆ ಸತತ ಒಂದು ತಿಂಗಳು ಹಣ್ಣು ಹಾಲು ಔಷದೋಪಚಾರ ಸಮಯಕ್ಕೆ ಸರಿಯಾಗಿ ಊಟ ತಿಂಡಿ ವಿಶ್ರಾಂತಿ ಎಲ್ಲವನ್ನೂ ನನಗೆ ಕೊಟ್ಟು ಒಂದೇ ತಿಂಗಳಿನಲ್ಲಿ ನನ್ನ ಹಿಮೋಗ್ಲೋಬಿನ್ ಹೆಚ್ಚಾಗುವ ಹಾಗೆ ನನ್ನ ಆರೈಕೆ ಮಾಡಿ ಮತ್ತೆ ನನ್ನ ಮುಖದಲ್ಲಿ ನಗು ಅರಳಿಸಿದ್ದು ನನ್ನಪ್ಪ.ಆ ಕಾಳಜಿ ಪ್ರೀತಿ ಕಕ್ಕುಲತೆ ಅಂತಃಕರಣ ಈಗ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ತಂದೆಯ ಎಲ್ಲ ಗುಣಗಳನ್ನು ಎರಕಹೊಯ್ದು ಮೈಗೂಡಿಸಿಕೊಂಡು ಇಂದಿಗೂ ಬದುಕುತ್ತಿರುವಳು ನಾನುಮತ್ತು ನನ್ನ ತಮ್ಮಂದಿರು. 1993 ಮಾಂತೇಶ್ ಪುಟ್ಟಿ ಮೆಕ್ಯಾನಿಕಲ್ ಇಂಜಿನಿಯರ್ ಸಂಪಗಾವಿ ಇವರೊಂದಿಗೆ ನನ್ನ ಮದುವೆಯಾಗಿ ವರ್ಷ ಕಳೆದಿತ್ತು. ಚಿಕ್ಕ ಬಾಡಿಗೆ ಮನೆ ಪುಟ್ಟ ಸಂಬಳ ಆದರೆ ಯಾವುದಕ್ಕೂ ಕೊರತೆ ಇರಲಿಲ್ಲ. ಬಹಳಷ್ಟು ಪ್ರೀತಿ-ವಿಶ್ವಾಸ ನೆಮ್ಮದಿಯಿಂದ ಬದುಕಿದ್ದ ದಿನಗಳು. ಮೇಲಿಂದ ಮೇಲೆ ಅಪ್ಪ-ಅಮ್ಮ ನನ್ನೆಡೆಗೆ ಬಂದು ಹೋಗುತ್ತಿದ್ದರು. ನಾನು ಪಾರ್ಟ್ ಟೈಮ್ ಉಪನ್ಯಾಸಕಿಯಾಗಿ ಕೇವಲ ಎರಡು ನೂರು ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದೆ. ಆಗ ನಮ್ಮ ಹತ್ತಿರ ಟು ವೀಲರ್ ಕೂಡ ಇರಲಿಲ್ಲ. ಆದರೆವಿಚಿತ್ರವೆಂಬಂತೆ ಪದೇಪದೇ ನನಗೊಂದು ಕನಸುಬೀಳುತ್ತಿತ್ತು ಮತ್ತು ಕಾಡುತ್ತಿತ್ತು. ಅದನ್ನು ನನ್ನ ತಂದೆಯೊಂದಿಗೆ ಹಂಚಿಕೊಂಡೆ. ” ಡ್ಯಾಡಿ ಯಾಕೋ ಪದೇ ಪದೇ ಕನಸಿನಲ್ಲಿ ನಾನು ಕಾರ್ ಡ್ರೈವಿಂಗ್ ಮಾಡುತ್ತಿದ್ದೇನೆ ನಮ್ಮ ಹತ್ತಿರ ಕಾರು ಬಿಡಿ ಟು ವೀಲರ್ ಕೂಡ ಇಲ್ಲ ಅದೇಕೆ ಹೀಗಾಗುತ್ತದೆ ಗೊತ್ತಾಗುತ್ತಿಲ್ಲ ಅಂದೆ ” ಅದಕ್ಕೆ ಅವರು ನೀನು ಮುಂದೆ ಕಾರ್ ಡ್ರೈವಿಂಗ್ ಮಾಡುವವಳಿದ್ದಿ ಅದು ಒಂಥರಾ ಇಂಟ್ಯೂಷನ್…. ನಾಳೆ ನೇನೀನು ಡ್ರೈವಿಂಗ್ ಕ್ಲಾಸಿಗೆ ಹಚ್ಚು ಎಂದು ನಾಲ್ಕು ಸಾವಿರ ರೂಪಾಯಿಗಳನ್ನು ತೆಗೆದು ಕೈಗಿಟ್ಟರು. ನಾನು ಕೂಡ ತಡಮಾಡದೆ ಮರುದಿವಸವೇ ಡ್ರೈವಿಂಗ್ ಕ್ಲಾಸ್ ಹಚ್ಚಿದೆ.ಮುಂದೆ ನಡೆದದ್ದು ಮತ್ತೆ ಇತಿಹಾಸವೇ …ಈಗ ಮನೆಯಲ್ಲಿ ಮೂರುಕಾರುಗಳು. ಕಳೆದ 15 ವರ್ಷಗಳಿಂದ ಡ್ರೈವಿಂಗ್ ಮಾಡುತ್ತಿದ್ದೇನೆ.ಇದು ಕೂಡ ನನ್ನ ಅಪ್ಪನ ಕಾಣಿಕೆ.. ಹೇಗೆ ಮರೆಯಲಾದೀತು ಅದೆಲ್ಲವನ್ನು….? ನನ್ನ ಮಾವ ಶಿವಜ್ಞಾನಿ ಪುಟ್ಟಿ ಮತ್ತು ನನ್ನ ತಂದೆಇಬ್ಬರು ಬೀಗರಾದರೂ ಅವರಿಬ್ಬರಲ್ಲಿ ಒಂದು ಸಲಿಗೆ ಅನ್ಯೋನತೆ ಅವಶ್ಯಕತೆಗಿಂತ ತುಸು ಹೆಚ್ಚೇ ಇತ್ತು. ಮನೆಯಲ್ಲಿ ಅತ್ತೆ ಇಲ್ಲದ ಕಾರಣ ವಯಸ್ಸಾದ ಮಾವನ ಬಹಳಷ್ಟು ಕೆಲಸವನ್ನು ನಾನೇ ಮಾಡಬೇಕಾಗುತ್ತಿತ್ತು. ಎಷ್ಟು ಸಲ ಬೆಳಗಾವಿಗೆ ಬಂದಾಗ ನನ್ನ ತಂದೆಯವರು, “ಅಕ್ಕವ್ವ ನೀನು ಹೋಗಮ್ಮ ಕಾಲೇಜಿಗೆ, ನಾನು ನಿಮ್ಮ ಮಾವನವರಿಗೆ ಊಟ ಬಡಿಸುತ್ತೇನೆ ನಾನೇ ಚಹ ಮಾಡಿಕೊಡುತ್ತೇನೆ ನಾನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ” ಎಂದು ಮಗಳ ಕೆಲಸವನ್ನು ಕಡಿಮೆ ಮಾಡಿ ಕಂಫರ್ಟ್ ನೀಡಿದವರು ನನ್ನ ಡ್ಯಾಡಿ. ಪ್ರತಿಬಾರಿಯೂ ನಮ್ಮ ತಂದೆ ಬೆಳಗಾವಿಗೆ ಬರುವಾಗ 5000 10000 ನೋಟಿನ ಕಂತೆಯನ್ನು ಇಟ್ಟುಕೊಂಡೇ ಬರುತ್ತಿದ್ದರು. ಇಲ್ಲಿ ಬಂದಾಗ ಮಗಳಿಗೆ ಮೊಮ್ಮಕ್ಕಳಿಗೆ ಹೊಸಬಟ್ಟೆ ಕೊಡಿಸುವುದು ಹೋಟೆಲುಗಳಲ್ಲಿ ಉಣಿಸುವುದು ಸಿನಿಮಾ ತೋರಿಸುವುದು ಮಾಡುತ್ತಿದ್ದರು.ಒಂದು ಬಾರಿ ಒಂದು ಸ್ವಾರಸ್ಯಕರ ಘಟನೆ ನಡೆಯುತ್ತದೆ. ಊರಿನಿಂದ ಅವರು ಬಂದು ನಮ್ಮ ಮಾವನ(ವಯಸ್ಸಿನಲ್ಲಿ ತುಂಬಾ ಹಿರಿಯರಾದ ಅವರನ್ನು ಅಜ್ಜ ಎಂದು ಕರೆಯುತ್ತಿದ್ದೆ) ರೂಮಿನಲ್ಲಿ ಮಲಗುತ್ತಾರೆ. ಅದೇ ರೂಮಿನಲ್ಲಿದ್ದ ನಮ್ಮ ಮಾವನ ಅಲೆಮಾರಿನಲ್ಲಿ 10000 ರೂಪಾಯಿಗಳನ್ನು ಇಡುತ್ತಾರೆ. ಮುಂದೆ ಎರಡು ದಿನದಲ್ಲಿ ಆ ದುಡ್ಡು ಕಾಣೆಯಾಗುತ್ತದೆ. ಗಾಬರಿಗೊಂಡು ನನ್ನ ತಂದೆ ನನ್ನನ್ನು ಕರೆದು *ಅಲೆಮಾರಿನಲ್ಲಿ ಇಟ್ಟಿದ್ದ ರೂಪಾಯಿ ಕಾಣುತ್ತಿಲ್ಲ 10000 ರೂಪಾಯಿಗಳನ್ನು ನಿನ್ನ ಮಾವನವರೇ ತೆಗೆದುಕೊಂಡಿದ್ದಾರೆ” ಎಂದು ಆರೋಪಿಸ ತೊಡಗಿದರು, ಅದಕ್ಕೆ ಪ್ರತ್ಯುತ್ತರವಾಗಿ, ಡ್ಯಾಡಿ,”ಇಲ್ರಿ ನಮ್ಮ ಅಜ್ಜಾರು ಅಂಥವರಲ್ಲ ಅವರು ಬೇರೆಯವರ ದುಡ್ಡಿಗೆ ಆಸೆ ಮಾಡುವುದಿಲ್ಲ ನೀವು ಎಲ್ಲೋ ಇಟ್ಟು ಮರೆತಿರಿ ಗಾಬರಿಯಾಗಬೇಡಿ ನಿಧಾನವಾಗಿ ಹುಡುಕೋಣ” ಎಂದೆ. ನನ್ನ ಮಾತು ಕೇಳಿ ಅವರಿಗೆ ಸಿಟ್ಟು ಬಂತುಏನವ್ವ ನೀನು ನಿಮ್ಮ ಮಾವನ್ನ ಮ್ಯಾಲಗಟ್ಟತಿಅಲ್ಲ ,ಅಪ್ಪನಿಗಿಂತ ಅವರು ನಿನಗೆ ಹೆಚ್ಚೇನು? ಅಂದ್ರು, ನಾನು ಏನು ಮಾತನಾಡಲಿಲ್ಲ. ಮುಂದೆ ಮರುದಿವಸಅಕಸ್ಮಾತಾಗಿ ಅವರ ದೊಡ್ಡ ಏರ್ ಬ್ಯಾಗ್ ನಲ್ಲಿ ಇಟ್ಟಿದ್ದ ಡೈರಿಯಲ್ಲಿ 10000 ರೂಪಾಯಿಗಳ ಕಂತೆ ಅವರಿಗೆ ಸಿಕ್ಕಿತು. ತುಂಬಾ ಪಶ್ಚಾತ್ತಾಪ ಪಟ್ಟುಕೊಂಡು ನೀನು ಹೇಳಿದ್ಹೇ ಸರಿ ಮಗಳ, ನಾನೇ ನಿನ್ನ ಅಜ್ಜನನ್ನು ತಪ್ಪು ತಿಳಿದುಕೊಂಡಿದ್ದೆ, ಈಗಿನ ಕಾಲದಲ್ಲಿ ಅತ್ತೆ-ಮಾವ ಎಂದರೆ ಮೂಗು ಮುರಿಯುವವರೇ ಜಾಸ್ತಿ ಅಂತದ್ದರಲ್ಲಿ ನೀನು ತಂದೆಯನ್ನು ಲೆಕ್ಕಿಸದೆ ಮಾವನ ಸ್ವಭಾವವನ್ನು ಎತ್ತಿ ಹಿಡಿದೆ ನೀನು ನನ್ನ ಮಗಳು ಎಂಬ ಹೆಮ್ಮೆ ನನಗಿದೆ ಅಂದಿದ್ದರು ನಮ್ಮ ತಂದೆ, ಅದೆಲ್ಲವೂ ಈಗ ನೆನಪಾಗುತ್ತಿದೆ….. ನೌಕರಿಗೆ ಸಂಬಂಧಪಟ್ಟಂತ ಏನೇ ಸಮಸ್ಯೆಗಳು ಇರಲಿ ನನಗೆ ಬೆನ್ನೆಲುಬಾಗಿ ಸದಾ ಬೆಂಗಾವಲಾಗಿ ಇರುತ್ತಿದ್ದರು ನನ್ನತಂದೆ. ಎರಡನೆಯ ಪ್ರಮೋಷನ್ ಸಮಯ, ರೆಫ್ರೇಶರ್ ಕೋರ್ಸ ಮಾಡಿಕೊಳ್ಳಬೇಕಿತ್ತು ಹತ್ತಿರದ ಯಾವ ಯೂನಿವರ್ಸಿಟಿಯಲ್ಲಿ ಅವಕಾಶ ಸಿಗಲಿಲ್ಲ ಕೊನೆಗೆ ಪಾಂಡಿಚೇರಿ ಯೂನಿವರ್ಸಿಟಿ ಗೆ ಹೋಗುವುದು ಎಂದಾಯಿತು. ನಾನೊಬ್ಬಳೇ ಹೇಗೆ ಹೋಗಲಿ ಎಂದು ಚಿಂತೆ ಮಾಡುತ್ತ ಕುಳಿತಾಗ, ಮತ್ತೆ ಯಥಾಪ್ರಕಾರ ನನ್ನ ತಂದೆ ನಾನು ಬರುತ್ತೇನೆ ನಡೆಯಮ್ಮ(ಆಗ ತೀವ್ರವಾದ ಮಂಡಿ ನೋವಿನಿಂದ ಬಳಲುತ್ತಿದ್ದರು) ಎಂದು ಪಾಂಡಿಚೇರಿಯ ವರೆಗೆ ನನ್ನೊಂದಿಗೆ ದೀರ್ಘ ಪ್ರಯಾಣವನ್ನು ಮಾಡಿ ನನ್ನನ್ನು ಯುನಿವರ್ಸಿಟಿಯ ಹಾಸ್ಟೆಲ್ ವರೆಗೆ ಮುಟ್ಟಿಸಿ, ಮರುದಿವಸ ರೆಫ್ರೇಶರ್ ಕೋರ್ಸ ಮೊದಲ ತರಗತಿಯಲ್ಲಿ ಚಿಕ್ಕಮಕ್ಕಳಂತೆ ನನ್ನನ್ನು ಕುಳ್ಳರಿಸಿ ಆಲ್ ದ ಬೆಸ್ಟ್ ಹೇಳಿ ಊರಿಗೆ ಮರಳಿದ್ದರು.ಇವತ್ತು ನಾನು ಅಸೋಸಿಯೇಟ್ ಪ್ರೊಫೆಸರ್ ದೊಡ್ಡ ಸಂಬಳದ ಪ್ರಾಧ್ಯಾಪಕಿ ಕಾರಣ …..ಮತ್ತೆ ನನ್ನ ತಂದೆ. ಇಲ್ಲಿಯವರೆಗೆ ಸಾವಿರಾರು ಘಟನೆಗಳು ನಡೆದಿವೆ,ಲೆಕ್ಕಕ್ಕೆ ಸಿಗದ ಅವರ ಸಹಾಯ.ಒಂದೇ-ಎರಡೇ ಯಾವುದನ್ನು ನೆನಪಿಸಿಕೊಳ್ಳಲಿ ಯಾವುದನ್ನು ಉಲ್ಲೇಖಿಸಲಿ ತಿಳಿಯುತ್ತಿಲ್ಲ….. ಸಂಜೆಯಾದರೆ ಸಾಕು ದಿನಾಲು ಅಪ್ಪನಿಗೆಫೋನ್ ಹಚ್ಚುತ್ತಿದ್ದೆ ವಾಕಿಂಗ್ ನೆಪಮಾಡಿ ಹೊರಹೋಗಿ ಗಂಟೆಗಟ್ಟಲೆ ಮಾತನಾಡುತ್ತಿದ್ದೆ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದಎಲ್ಲಾ ಘಟನೆಗಳನ್ನು ಅವರೊಂದಿಗೆ
ಕಥನಕಾವ್ಯ ಆಮೆಯೂ ಮೊಲವೂ ಬೆಂಶ್ರೀ ರವೀಂದ್ರ ಭಾಗ ಒಂದು ಸ್ಪರ್ಧೆಗೆ ಆಮೆಯೂ ಮೊಲವುಟ್ರ್ಯಾಕಿನ ಗೆರೆಯಲಿ ನಿಂತಿಹವುಓಟದ ರೇಸಿಗೆ ಅಣಿಯಾಗಿಹವು ಇದೆಂತಹ ಆಟ ತಮಾಷೆ ಜೂಟಾಟಮಜವಿದೆ ನೋಟ ಆಮೆ ಮೊಲದೋಟಕಾಡಿನ ಪ್ರಾಣಿಗಳಿಗೆ ಮೋಜಿನ ಮಾಟ ಕಿವಿಯನು ನಿಗುರಿಸಿ ಕಣ್ಣನು ಪಿಳುಕಿಸಿಸಮ ಎನಗಾರೆಂದು ಬೀಗಿಹ ಭೂಪಬೆಳ್ಳನೆ ಬೆಳುಪಿನ ಮೊಲ ಮಹರಾಯ ಕಾಲನು ಜಾಡಿಸಿ ಕತ್ತನು ಆಡಿಸಿಸುತ್ತಲೂ ನೋಡಿ ದೇವಗೆ ಪ್ರಾರ್ಥಿಸಿಓಟಕೆ ಸಿದ್ದವಾದನು ಆಮೆರಾಯ ಕತ್ತನು ಕೊಂಕಿಸಿ ಕಾಲನು ಜಾಡಿಸಿಕಣ್ಣನು ಕೀಲಿಸಿ ಟ್ರ್ಯಾಕನು ವೀಕ್ಷಿಸಿಅಂಪೈರ್ ಸೀಟಿಯು ಜಿರಾಫೆರಾಯ ಮಿಂಚಿನ ವೇಗದಿ ಓಡಿತು ಮೊಲವುತೆವಳುತ ಸಾಗಿತು ಗುರಿಯೆಡೆ ಆಮೆಹೋ..ಎಂದಿತು ಪ್ರಾಣಿಯು ಗಿಡಮರ ಅರ್ಧದಾರಿ ಓಡಿದ ಮೋಲವುಕಂಡಿತು ತುಂಬಿದ ಹಸಿರು ಕಾವಲುಹಿಂತಿರುಗಿ ನೋಡಲು ಪೋಟಿದಾರ ಹಿಂದೆಲ್ಲೊ ಇಹನು ಈ ಆಮೆಭೂಪಬರುವ ತನಕ ಇಲ್ಲಿಗೆ ವಿಶ್ರಾಂತಿ ಪಡೆವೆಹುಲ್ಲೂ ನೀರು ಉಂಡು ಮಲಗಿದನು ಮೊಲಕೆ ಬಂದಿತು ಗಡದ್ದು ನಿದ್ದೆಕೇಳಿಸಿತೆಲ್ಲಡೆ ಗೊರಕೆಯ ಸದ್ದೆನಡೆಯಿತು ಆಮೆ ಗುರಿಯೆಡೆಗೆ ನಿದ್ದೆಲಿ ಮೊಲಕೆ ಗೆಲುವಿನ ಪದಕಖುಷಿಯಲಿ ಮಾಡಿ ಮತ್ತಷ್ಟು ನಿದ್ದೆಅಷ್ಟರಲಿ ಹೋ…ಎನ್ನುವ ಸದ್ದು “ಗುರಿ ಮುಟ್ಟುವ ತನಕ ನಿಲ್ಲದಿರಿ”ಮಾತನು ಮನಸಲಿ ಇಟ್ಟಿದ ಆಮೆಸದ್ದಿಲ್ಲದೆ ಗೆಲುವಿನ ಕಂಬವ ದಾಟಿತ್ತು ಕಾಡು ಪ್ರಾಣಿಗೀಣಿ ಹಕ್ಕಿಪಿಕ್ಕಿ ಕೂಡಿದವುಗೆಲುವಿನ ನಿಲುವಲಿ ಆಮೆಯ ನಿಲಿಸಿಕತ್ತಿಗೆ ಪದಕವ ತೊಡಿಸಿದವು ಸೋಮಾರಿಯಾಗದಿರಿ ಮಕ್ಕಳೆಗೆಲುವಿನ ಗುರಿಯು ಮನದೊಳಗಿರಲಿಶ್ರಮಕೆ ಫಲಸಿಗುವುದು ಶತಸಿದ್ದ. ಭಾಗ ಎರಡು ನೆನಪಿದೆಯೇ ಮಕ್ಕಳೆ ನಿಮಗೆಮೊಲದಾಮೆಯ ಓಟದ ಆಟಕಾಡಿನಲಂತೂ ನಡೆದಿದೆ ಈಗಅದೇ ಮಾತಿನ ಮೋಜಾಟ ಓಟದ ವೀರ ಸೋತಿದ್ದೆಂತುತೆವಳುವ ಆಮೆ ಗೆದ್ದಿದ್ದೆಂತುಬುಡಮೇಲಾಗಿ ಲೆಕ್ಕಾಚಾರಹೀಗೂ ಉಂಟೆ ಅಚ್ಚರಿ ಹೂಟ ಹುಲ್ಲಿನ ಬಣಿವೆಲಿ ಚಿಗುರನು ಕಚ್ಚುತಚಿಂತಿಸಿ ಮೊಲವು ಕಿವಿಯನು ನಿಗುರಿಸಿಅರಿಯಿತು ಸೋಲಿನ ಗುಟ್ಟನು ಬಿಡಿಸಿಹ್ಞಾ…ನಾ..ಸೋಮಾರಿ ದುರಹಂಕಾರಿ ವಿನಯದಿ ಆಮೆಯು ಗೆಲುವಿಗೆ ಬೀಗದೆಯೋಚಿಸಿತು, ಗುರಿಯೆಡೆ ಲಕ್ಷವನಿಡದೆಸೋತಿತು ಮೊಲವು ಓಟವನು, ಕಲಿತರೆಬುದ್ದಿಯ ಒಳಿತಾಗುವುದು ಎಲ್ಲರಿಗೆ ಸ್ನೇಹದಿ ಹೀಗಿರಲೊಮ್ಮೆ ಮೊಲವನುಆಮೆಯ ಕಾಡಿನ ರಾಜನು ಕರೆದಿಹನುಅವಸರದಿ ಹೋಗಿರಿ ಪಕ್ಕದ ಕಾಡಿಗೆರಾಯಭಾರಿಯಾಗಿ ತುರ್ತುಚರ್ಚೆಗೆ ತಲುಪಲೇ ಬೇಕು ನಾಳೆಯೆ ಅಲ್ಲಿಗೆಕಾಡುಮೇಡು ಕೊರಕಲು ಕೆರೆ ನದಿಯುಕಣಿವೆಯು ಎಂತು ದೂರದ ಹಾದಿಯುಚಿಂತಿಸಿ ಹುಡುಕಿದರೊಂದು ಉಪಾಯ ಬೆಳಗಿನ ಜಾವಕೆ ಮೊಲದ ಬೆನ್ನಲಿಆಮೆಯು ಕುಳಿತು ಸವೆಯಿತು ಹಾದಿಕಾಡು ಮೇಡಲಿ ಅಡ್ಡ ಬರಲು ನೀರುಮೊಲವೇರಿತು ಆಮೆಯ ಬೆನ್ನು ಇಂತು ಉಪಾಯವ ಮಾಡಿದವುಪಕ್ಕದ ಕಾಡಿಲಿ ಸವಿನುಡಿಯಾಡಿದವುಕೆಲಸವ ಸಾಧಿಸಿ ಸಮಯ ಮೀರದೆದೊರೆಗಿತ್ತವು ವರದಿಯ ಸಂಭ್ರಮದಿ ಮಕ್ಕಳೆ ತಿಳಿಯಿರಿ ನಮ್ಮಯ ಶಕ್ತಿಗೆಕೂಡಲು ಬೇಕು ಗೆಳೆಯರ ಬಲವುಒಗ್ಗಟ್ಟಲ್ಲುಂಟು ನಲಿವು ಗೆಲುವುಕೂಡಿ ಬಾಳಿದರೆ ಸ್ವರ್ಗ ಸುಖವು
ಬೈಸಾಕಿಯು ಬೇಸರಿಸಿ,
ಚಿಗಿ ಚೈತ್ರದ ಪಡಿಯರಸಿ
ಮಗುವಂತೆ ಮುನಿಸೊಡೆಸಿ,
ಮೋತ್ಕರಿಸಿದೆ ಮಿಗಿಮಿಗಿಸಿ…
ಹೃದಿಹೃದಯಲು ಒಲವುದಿಸಿ Read Post »
You cannot copy content of this page