ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರತ್ನರಾಯಮಲ್ಲ

Love Art Pictures | Download Free Images on Unsplash

ಕತ್ತಲೆಯಲ್ಲಿ ಬೆಳಕನ್ನು ಹುಡುಕುವಂತೆ ನಿನ್ನನು ಹುಡುಕುತಿರುವೆ
ಮಗು ತಾಯಿಗಾಗಿ ಹಂಬಲಿಸುವಂತೆ ನಿನಗಾಗಿ ಹಂಬಲಿಸುತಿರುವೆ

ಮಾತುಗಳು ನಾಲಿಗೆಯ ತುದಿಯಲ್ಲಿ ಹೆಪ್ಪುಗಟ್ಟಿವೆ ನೀನು ಇಲ್ಲದೆ
ಶಬ್ಧ ಅರ್ಥವನ್ನು ಹಿಂಬಾಲಿಸುವಂತೆ ನಿನ್ನನು ಹಿಂಬಾಲಿಸುತಿರುವೆ

ನನ್ನ ದಿನಚರಿಗೆ ತುಕ್ಕು ಹಿಡಿದಿದೆ ನಿನ್ನ ಸಾಂಗತ್ಯವಿಲ್ಲದೆ ಸುಕುಮಾರಿ
ನೇಸರನು ಶಶಿಗಾಗಿ ಕನವರಿಸಿದಂತೆ ನಿನಗಾಗಿ ಕನವರಿಸುತಿರುವೆ

ಹೃದಯ ಬಡಿತ ಜಡವಾಗಿದೆ ನಿನ್ನಯ ಆಲಿಂಗನವಿಲ್ಲದೆ ಚಕೋರಿ
ರೋಗಿ ವೈದ್ಯನಿಗಾಗಿ ಪರಿತಪಿಸುವಂತೆ ನಿನಗಾಗಿ ಪರಿತಪಿಸುತಿರುವೆ

‘ಮಲ್ಲಿ’ಯ ಮಲ್ಲಿಗೆಯಂಥ ಮನಸನು ನಿನಗೆ ಪರಿಚಯಿಸಬೇಕೆನು..
ಮೀನು ನೀರಿಗಾಗಿ ಚಡಪಡಿಸುವಂತೆ ನಿನಗಾಗಿ ಚಡಪಡಿಸುತಿರುವೆ

*****************

About The Author

1 thought on “ಗಜಲ್”

Leave a Reply

You cannot copy content of this page

Scroll to Top