ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಅಶ್ಫಾಕ್ ಪೀರಜಾದೆ

Love is Blind Paintings by OLUMIDE EGUNLAE - Artist.com

ನಿನ್ನ ಮೊಗವು ತೋರದೆ ಕವಿತೆ ಹೇಗೆ ಬರೆಯಲಿ
ನಿನ್ನ ನಗುವು ಮೂಡದೆ ಕವಿತೆ ಹೇಗೆ ಬರೆಯಲಿ

ನಿನ್ನ ಕಂಗಳಲಿ ಸಾವಿರಾರು ತಾರೆಗಳ ಹೊಳಪು
ನಿನ್ನ ಚೆಲುವು ಕಾಡದೆ ಕವಿತೆ ಹೇಗೆ ಬರೆಯಲಿ

ಇಲ್ಲಿ ಸುತ್ತೆಲ್ಲ ಕತ್ತಿ ಮಸೆಯುವ ದುಶ್ಮನರೇ ಹೆಚ್ಚು
ನಿನ್ನ ಮೌನವು ಮಾತಾಗದೆ ಕವಿತೆ ಹೇಗೆ ಬರೆಯಲಿ

ಕಾಲಗರ್ಭದಲಿ ಕಳೆದು ಹೋಗಿದೆ ಕಹಾನಿ ಒಂದು
ನಿನ್ನ ವಿಷಾದವು ತಾಗದೆ ಕವಿತೆ ಹೇಗೆ ಬರೆಯಲಿ

ಸುಂದರ ಸಂಜೆ ಮುಂಜಾವಿಗೂ ಕರೋನಾ ಕಾಟ
ಗಾಳಿ ನಿನ್ನ ಸುಳಿವು ತಾರದೆ ಕವಿತೆ ಹೇಗೆ ಬರೆಯಲಿ

ದ್ವೇಷ ತುಂಬಿದ ಜಗದಲಿ ಬದುಕಲೇಬೇಕು ಪೀರ್
ನಿನ್ನ ಒಲುಮೆ ಕಾಣದೆ ಕವಿತೆ ಹೇಗೆ ಬರೆಯಲಿ

**********************************

About The Author

3 thoughts on “ಗಜಲ್”

Leave a Reply

You cannot copy content of this page

Scroll to Top