ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರತ್ನರಾಯಮಲ್ಲ

ratnarayanmalla

sc st atrocities act: Latest News, Videos and sc st atrocities act Photos |  Times of India

ಹೆಂಗಸರು ಗಂಡಿಗೆ ಜನುಮ ನೀಡಿದರು ಗಂಡಸರು ಬಜಾರಿನಲ್ಲಿಟ್ಟರು ಅವಳನ್ನು
ಮನ ಬಂದಾಗ ಅಪ್ಪಿ ಮುದ್ದಿಸಿದರು ಸಾಕೆನಿಸಿದಾಗ ತಿರಸ್ಕರಿಸಿದರು ಅವಳನ್ನು

ಎಲ್ಲಿಯೋ ಖರಿದಿಸಿ ಇನ್ನೆಲ್ಲಿಯೋ ಮಾರುವರು ಮೂಕ ಹಸುವಿನಂತೆ ಅವಳನ್ನು
ಭೋಗದ ಬಿಸಿ ಅಂಗಳದಲ್ಲಿ ಇಂಚಿಂಚು ಬೆತ್ತಲಾಗಿಸಿ ಕುಣಿಸುವರು ಅವಳನ್ನು

ಇಜ್ಜತ್ ಬೇಯಿಜ್ಜತ್ ಮನಸುಗಳಲ್ಲಿ ತಬ್ಬಲಿಯಾಗಿ ನರಳುತಿದೆ ಹಗಲಿರುಳು
ಪುರುಷ ಸಿಂಹಗಳು ಅನುದಿನವೂ ದಬ್ಬಾಳಿಕೆಯಲ್ಲಿ ಅಳುಸುವರು ಅವಳನ್ನು

ಪುರುಷರಿಗೆ ಎಲ್ಲದರಲೂ ಹಕ್ಕಿದೆ ಮಹಿಳೆಯರಿಗೆ ಬಾಳುವುದೂ ಶಿಕ್ಷೆಯಾಗಿದೆ
ಹಾಲು ಕುಡಿದ ಎದೆಗಳನು ಮರೆತು ರಕುತದಲ್ಲಿ ಮುಳುಗಿಸುವರು ಅವಳನ್ನು

ನಮ್ಮ ದೇಹವ ರೂಪಿಸಿದ ಗರ್ಭಗಳನು ವ್ಯಾಪಾರ ಮಾಡುತಿರುವರು ‘ಮಲ್ಲಿ’
ಹಸಿ ಮಾಂಸದ ರುಚಿಗಾಗಿ ಪಾಪದ ಕೂಪದಲ್ಲಿ ನೂಕುತಿರುವರು ಅವಳನ್ನು

*********************

About The Author

2 thoughts on “ಗಜಲ್”

    1. ಡಾ. ಮಲ್ಲಿನಾಥ ಎಸ್. ತಳವಾರ

      ತುಂಬು ಹೃದಯದ ಧನ್ಯವಾದಗಳು ಸರ್ ಜೀ

Leave a Reply

You cannot copy content of this page

Scroll to Top