ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಪ್ರಕಾಶಸಿಂಗ್ ರಜಪೂತ

Creative Harmony Arts & Books - Home | Facebook

ನೋವುಗಳು ನಾ ಬೇಯಿಸಲು ಇಟ್ಟಿರುವೆ ಊಟಕ್ಕೆ ಬನ್ನಿ
ಸ್ವಲ್ಪ ಸ್ವಲ್ಪವೇ ಸರಿ ಹಂಚಿ ತಿನ್ನೋಣ ಊಟಕ್ಕೆ ಬನ್ನಿ

ರಾಗ ಲೋಭ ದ್ವೇಷಗಳು ಗತಕಾಲದ ಮರೆತು, ಮನ ಬಾಗಿಲು ತೆರೆದು
ಮೇಲು ಕೀಳು ಕಳಿಯೋಣ ಒಂದಾಗಿ ಬೆಳೆಯೋಣ ಊಟಕ್ಕೆ ಬನ್ನಿ

ಭವಿಷ್ಯ ದತ್ತ ನೋಟವಿಟ್ಟು ಇತಿಹಾಸದಿ ಮುಳುಗಿ ಸಾಧಿಸೋದು ಏನು
ನಮ್ಮದಾದ ಪರಿಚಯ ಹೊಸದಾಗಿ ಬರಿಯೋಣ ಊಟಕ್ಕೆ ಬನ್ನಿ

ಪ್ರೀತಿ ಪ್ರೇಮದ ಪಾಠ ಮರೆತೊಗಿದೆ ಎಲ್ಲೋ, ಬರಿ ವಾಸನೆ ಗೊಳ್ಳು
ಕೃಷ್ಣನಾಗುವಾ ಯತ್ನ ಮತ್ತೆ ಮತ್ತೆ ಮಾಡೋಣ ಊಟಕ್ಕೆ ಬನ್ನಿ

ದುರ್ವಾಸನ ಹಸಿವು ನಮಗೇಕೆ ಬೇಕು ಕೋಪಗಳ ಕೂಪ ನಮಗೇಕೆ ಬೇಕು
“ಪ್ರಕಾಶ”ವಾಗಿ ಎಲ್ಲರೂ ಜಗದಿ ಮುಂದೆ ಸಾಗೋಣ ಊಟಕ್ಕೆ ಬನ್ನಿ

*************

About The Author

2 thoughts on “ಗಜಲ್”

  1. ನನ್ನ ಕವನಕ್ಕೆ ತಮ್ಮ ಪತ್ರಿಕೆ ಯಲ್ಲಿ ಸ್ಥಾನ ನೀಡಿದಕ್ಕೆ ಧನ್ಯವಾದಗಳು

  2. ಪ್ರಕಾಶ ಸರ್ ಗಜಲ್ ಸೊಗಸಾಗಿದೆ, ನೋವುಗಳನ್ನು ಹಂಚಿಕೊಂಡು ಬೀಳುವುದು ಒಂದು ಬಗೆಯ ಸಹಕಾರ ಜೀವನ,

Leave a Reply

You cannot copy content of this page

Scroll to Top