ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಏನೆಂದು ಬಣ್ಣಿಸಲಿ ನಿನ್ನ

ಅರುಣಾ ನರೇಂದ್ರ

środowiska lgbt, - paintings of love zdjęcia i obrazy z banku zdjęć

ತನುವ ಬಣ್ಣಿಸಲೆ
ಮನವ ಬಣ್ಣಿಸಲೆ
ತನುಮನದ ತುಂಬ
ತುಂಬಿಕೊಂಡಿರುವಿ
ಏನೆಂದು ಬಣ್ಣಿಸಲಿ ನಿನ್ನ

ನೀಲಿ ಆಗಸ
ನಿನ್ನ ಕಣ್ಣಲಿ
ಜಗವ ಮೋಹಿಸುವಿ
ನಗುವ ತುಟಿಗಳಲಿ
ಏನೆಂದು ಬಣ್ಣಿಸಲಿ ನಿನ್ನ

ತೋಳ ತೆಕ್ಕೆಯಲ್ಲಿ
ಲೋಕವನೆ ತಬ್ಬಿರುವ
ಬೆಚ್ಚನೆಯ ನೇಹ !
ಕಲ್ಪನೆಗೂ ಸಿಗದ
ಬಣ್ಣನೆಗೂ ನಿಲುಕದ
ಬೆರಗು ನೀನು
ಏನೆಂದು ಬಣ್ಣಿಸಲಿ ನಿನ್ನ

ಏಳುಕೋಟಿ ಮಹಾಮಂತ್ರ
ನಾದದಲಿ ತೇಲಿಸುವಿ
ಒಳಗಣ್ಣ ಬಿಡಿಸಿ
ಒಲವ ದೀಪ ಹಚ್ಚಿರುವಿ
ಏನೆಂದು ಬಣ್ಣಿಸಲಿ ನಿನ್ನ

**************************

About The Author

1 thought on “ಏನೆಂದು ಬಣ್ಣಿಸಲಿ ನಿನ್ನ”

Leave a Reply

You cannot copy content of this page

Scroll to Top