ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾವಗೀತೆ

ದೀಪಿಕಾ ಚಾಟೆ

green plant in tilt shift lens

ಕಣ್ಣಂಚಲಿ ನಿನ್ನದೇ ಪ್ರತಿಬಿಂಬ
ಕಾಡುತಿರಲು ವಿರಹದೀ ಬಿಂಬ
ಬಳಿಬಾರದೇ ನಾ ಕಾಯುತಿರುವೆ
ಎಲ್ಲಿಹೇ ಕಾಣದೇ ನಾ ಅಲಿಯುತಿರುವೆ

ಹೂವ ಮೇಲಿನ ಮುತ್ತಂಥ ಇಬ್ಬನಿ
ಅಲುಗಾಡದೇ ಏನೋ ಮುಚ್ಚಿಡುವಂತಿದೆ
ಮೇಘವೊಂದು ಆಕಾಶದಿ ತೇಲುತ
ಸುದ್ದಿಯೊಂದು ನನಗಾಗಿ ತರುವಂತಿದೆ

ಮೇಘಗಳ ಅಂಚಲಿ ತುಂತುರು ಹನಿಯು
ಮಣ್ಣಿನ ಘಮ್ಮನೆ ವಾಸನೆಯು ತರುತಿದೆ
ನಿನ್ನದೇ ನೆನಪಿನ ದೋಣಿಯೊಂದು
ಆಡುತ ಬಿಟ್ಟಿದ್ದು ಅಂಗಳದಿ ನೆನಪಿದೆಯೇ

ಕಾಗದದ ದೋಣಿಯದು ಪಯಣದಿ ಜೊತೆಯಾಗಿ
ಹರುಷದ ಹೊನಲಿನ ಸುರಿಗೆ ನಾ ತೇಲಿಹೋದೆ
ನಿನ್ನ ನೆನಪಿನಂಗಳಕೆ ಮತ್ತೆ ಬಂದು ನಿಂತೆ
ನನ್ನ ನಾನೇ ಮರೆತು ಹೋದೆ ಮರೆತು ಹೋದೆ

******************

About The Author

1 thought on “ಭಾವಗೀತೆ”

Leave a Reply

You cannot copy content of this page

Scroll to Top