ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

  ಸುಜಾತಾ ರವೀಶ್

ಯಮುನೆಯ ತೀರಕ್ಕೆ ರಾಧೆಯು ಕರೆದಳು ಮಾಧವನ ಕವಿತೆ ಬರೆಯಲು ಸಖಿ 
ತುಮುಲವ ದೂರಕ್ಕೆ ತಳ್ಳುತ ದುಗುಡದ ಬೇಸರ  ದುಃಖವ ಮರೆಯಲು ಸಖಿ 

ಹೃದಯದ ನೋವಿನ ಚಿತ್ರಣ ಕೇಶವನ ಅರಿವಿಗೆ 
ಬಾರದೆ ಇರದೀತೇನು  ಪ್ರಣಯದ ಲೇಪವ ಹಚ್ಚುತ ನೋವನು ಶಮಿಸಿದ ವ್ಯಾಕುಲ ಸರಿಸಲು ಸಖಿ 

ಬಣ್ಣನೆಗೆ ಬಾರದ ಮಳೆಯ ಬಿಲ್ಲಿನ ರಂಗಿನಲಿ 
ಮನಸು  ಮಿಂದಂತಿದೆಯೀಗ ಹುಣ್ಣಿಮೆ ಚಂದ್ರನು ಬಾನಿನಲ್ಲಿ ಬೆಳಗುತ ನಗುತಿಹ ಸರಸವ ಸವಿಯಲು ಸಖಿ 

ಅನುರಾಗದಿ ಕೊಳಲು ನುಡಿದಿರೆ ಮನವದು ಪರವಶ ನಯನಗಳಾಗಿವೆ ಅರೆನಿಮೀಲಿತ 
ಅನುಭಾವದ ಸೊಗದಲಿ ಮೇರೆಯಿರದ ಪರಿಭಾವ ವೇಣುವು ಉಲಿಯಲು ಸಖಿ 

ಜಾಜಿಯ ಕಂಪದು ಬಿರಿಯುತ ಸೃಜಿಸಿದೆ ಸುಗಂಧದ ಸುಂದರ ಅದ್ಭುತ ಲೋಕ 
ಸುಜಿಯ ಮನವಿದು ಸ್ವಪ್ನಲೋಕದೆ ತಲ್ಲೀನ ಇಹದ ಅರಿವು ತೊರೆಯಲು ಸಖಿ 

**********************

About The Author

2 thoughts on “ಗಜಲ್”

  1. ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಅನಂತ ಧನ್ಯವಾದಗಳು

Leave a Reply

You cannot copy content of this page

Scroll to Top