ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಳೆ ಹನಿಗಳು

ವಿಶ್ವನಾಥ ಎನ್. ನೇರಳಕಟ್ಟೆ

Clear Glass With Water Droplets Close-up Photography

ಮಳೆಯಿರದ ಇರುಳಿನಲಿ
ಗಡಿಯಾರದ ಮುಳ್ಳಿಗೂ
ವಿರಹ ವೇದನೆ
*

ನನಗೆ ಗೊತ್ತಿದೆ
ಮಳೆ ಪ್ರಿಯತಮೆಯಿದ್ದಂತೆ
ಪ್ರೀತಿಸುವವರನ್ನು ಹೆಚ್ಚು ಆಟವಾಡಿಸುತ್ತದೆ
*

ಅಬ್ಬ! ಮಳೆ ಬಂತು
ಇನ್ನು ನನ್ನ ಕಣ್ಣೀರು
ಯಾರಿಗೂ ತಿಳಿಯುವುದಿಲ್ಲ
*

ದೇವರೂ ಅಳುತ್ತಾನೆ ನನ್ನಂತೆ
ಎಂದು ತಿಳಿದು ಸಮಾಧಾನವಾಯಿತು
ಮಳೆ ಬಂದಾಗ
*

ಮಳೆಯ ಜೊತೆಗೆ ಬಂದ
ಅವಳ ಕನವರಿಕೆ, ಕನಸುಗಳಿಗೆ
ತೆರಿಗೆ ಕಟ್ಟಬೇಕಾಗಿಲ್ಲ
*

ಮಳೆ ಬಂದಾಗ
ಕೊಡೆ ಮರೆತುಬಂದವನು
‘ನೆನೆದ’
*

ಕಲ್ಲಿನಂಥ ಕಲ್ಲೂ
ಕರಗಿತು
‘ನೆನೆದಾಗ’
*

ಪ್ರಕೃತಿ ಸುರಿಸಿತು ಕಣ್ಣೀರು
ಮನುಷ್ಯ
ತೊಯ್ದುಹೋಗಿದ್ದಾನೆ
*

ಸುರಿಯುತ್ತಿದ್ದ ಮಳೆ
ನಿಂತಾಗ
ಮನಸ್ಸೆಲ್ಲ ಖಾಲಿ ಖಾಲಿ
*******************************

About The Author

1 thought on “ಮಳೆ ಹನಿಗಳು”

  1. Mamathashankar

    ಸುಂದರ ಹನಿಗಳು ಚೆನ್ನಾಗಿ ಬರೆದಿದ್ದೀರಿ ಅಭಿನಂದನೆಗಳು…

Leave a Reply

You cannot copy content of this page

Scroll to Top