ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಮಳೆ ಬರುವ ಹಾಗಿದೆ

ಶಾಂತಲಾ

lightning on forest during night time

ಕರಿ ಮೋಡಗಳು ಒಂದರ
ಹಿಂದೊಂದುತಿಕ್ಕಾಟ ನಡೆಸುತಿದೆ
ಗುಡುಗಿನಾಭ೯ಟವದ
ಚುಚ್ಚಿ ನಡುಗಿಸುತಲಿದೆ
ಮಳೆಬರುವ ಹಾಗಿದೆ

ವಾತ್ಸಲ್ಯದಾ ಮಾತು
ಒಡನಾಟ ಓಡಾಟ
ಮನವ ಸ್ಪರ್ಶಿಸಿ ಕಿವುಚಿ
ಆತಂಕ , ಅಗಲಿಕೆಯು
ಅಂಧತೆಯ ಕೊಡುತಿರಲು
ಹಿಂಡಿ ಮನಸಿನ ಗಾಯ
ಮಳೆ ಬರುವ ಹಾಗಿದೆ

ಬಾಳಿ ನೆರಳಾಗಿ. ಮರವಿಂದು
ಬಿದ್ದು ಬೆಂಕಿಯ ಜ್ವಾಲೆಯಲಿ
ಬೆಂದು ರಕ್ತ ಮಾಂಸಗಳು
ಭಗಭಗನೆ ಉರಿದಿರಲು
ಮಳೆ ಬರುವ ಹಾಗಿದೆ

ನೊಂದು ನೋವಿನ ಉರಿಯು
ಮುಗಿಲು ಮುಟ್ಟಲು ಇಂದು
ಮೈ ಮನವ ನಡುಗಿಸುತ
ಬರಿದಾಗಿಸಿ ಬರಸಿಡಿಯುತ
ಮಳೆ ಸುರಿದೆೇ ಬಿಟ್ಟಿದೆ

*******************

About The Author

Leave a Reply

You cannot copy content of this page

Scroll to Top