ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನಿನ್ನೊಡನಾಟ

ರೇಷ್ಮಾ ಕಂದಕೂರ

macro photo of honey bee on pink and white flower

ಅದೇಕೋ ನಿನ್ನದೇ ಧ್ಯಾನ
ಹಗಲಿರುಳಿನ ಪರಿವೆಯಿಲ್ಲದೇ
ಹಪಹಪಿಸಿದೆ ನಿನ್ನೊಡನಾಟಕೆ
ಸಜ್ಜಾಗಿದೆ ಇಂದು ನಾಳೆಗಳ ಮೋಹಿಸಿ.

ಹಂಬಲಕೆ ಮೀರಿದ ಮೇರೆ
ಸಡಗರಕೆ ಕರಾವಳಿ
ಸರಿದ ಘಳಿಗೆ ಶೂನ್ಯತೆಯ ಬಡಿವಾರ
ತಳಮಳಕೆ ಆಕ್ರಂದನ ಭುಗಿಲೆದ್ದಿದೆ.

ನೆಪಥ್ಯಕೆ ಸರಿದರೆ
ಅಪಥ್ಯದ ಗಂಟು
ಸತ್ಯಾಸತ್ಯದ ಬ್ರಹ್ಮಗಂಟು
ಕಳವಳಕಾರಿ ಉಂಟು.

ಮುಗುಳು ನಗೆಯ ಚೆಲುವು
ವಿಸ್ಮಯ ಲೋಕದ ತಾಣ
ಭ್ರಮೆಗೂ ವಾಸಾತವಕೂ ತಾಕಲಾಟ
ಅವಿಸ್ಮರಣೀಯ ಒಡನಾಟದ ಹರವು.


About The Author

Leave a Reply

You cannot copy content of this page

Scroll to Top