ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಗೆಳತಿ

ಪ್ರೊ.ರಾಜನಂದಾ ಘಾರ್ಗಿ

man holding surf board while standing on shore at daytime

ಹಾಗೇ ಒಬ್ಬಳು ಸುಮ್ಮನೇ
ಚಿಕ್ಕ ಪುಟ್ಟ ಗೆಳತಿ
ದಾರಿಯಲಿ ಸಿಕ್ಕವಳು
ನಾಲ್ಕು ಹೆಜ್ಜೆ ನಡೆದವಳು
ಸುಮ್ಮನೇ ಮಾತಿಗೆ ಎಳೆದು
ಮನ ಸೆಳೆದವಳು
ಮಾತಿಗೆ ವೀಷಯವೇನಿಲ್ಲ
ಸಮಯದ ಪರಿವೆಯಿಲ್ಲ
ದಾರಿ ಸರಿದು ಹೋಗಿ
ಕವಲುಗಳೊಡೆದಾಗ
ಕಣ್ಮರೆಯಾದವಳು
ಮನದ ಮೂಲೆಯಲ್ಲಿ
ಮನೆಮಾಡಿದ ಚದುರೆ
ಇರುವಿಕೆಗೆ ಗುರುತಿಲ್ಲ
ಭೇಟಿಯಾಗುವ ಬಯಕೆಯಿಲ್ಲ
ಆದರೂ ಮರಿಚಿಕೆಯಂತೆ
ಕನಸಲಿ ಕಾಡುವಳು
ಕಣ್ಣಿನ ನೀರಾಗುವಳು

***********************

About The Author

1 thought on “ಗೆಳತಿ”

Leave a Reply

You cannot copy content of this page

Scroll to Top