ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರತ್ನರಾಯಮಲ್ಲ

Romancing the glass bangles

ಭಾರವಾದ ಬಳೆಗಳನ್ನು ತೊಡಿಸದಿರಿ ನನ್ನವಳ ಸುಕೋಮಲ ಕೈಗಳಿಗೆ
ಕಲಬೆರಕೆಯ ಲೇಪನ ಬಳಿಯದಿರಿ ನನ್ನವಳ ನಾಜೂಕಿನ ಅಧರಗಳಿಗೆ

ಹೇಮಾಭರಣಗಳ ಹೊಳಪಿಗಾಗಿ ಕುಲುಮೆಯಲ್ಲಿ ಮುಳುಗಿದೆ ಜಗತ್ತು
ಬಣ್ಣ-ಬಣ್ಣದ ಲೋಹಗಳಿಂದ ಬಂಧಿಸದಿರಿ ನನ್ನವಳ ಮೆದು ಅಂಗಗಳಿಗೆ

ಗೋಸುಂಬೆಯೂ ಒದ್ದಾಡುತಿದೆ ತನ್ನ ಇರುವಿಕೆಗಾಗಿ ಈ ದುನಿಯಾದಲ್ಲಿ
ಯಾವ ಯಾವದೊ ರಂಗನ್ನು ಹಚ್ಚದಿರಿ ನನ್ನವಳ ತುಂಬಿದ ಕೆನ್ನೆಗಳಿಗೆ

ಕಂಗಳಲಿ ಕಂಗಳಿಟ್ಟು ನರಮನುಷ್ಯರ ಜಮಾನವನ್ನು ಮರೆಯಬೇಕಿದೆ
ಸುರಮಾ ಬಳಸಿ ಅಣೆಕಟ್ಟನ್ನು ಕಟ್ಟದಿರಿ ನನ್ನವಳ ಜಿಂಕೆ ನಯನಗಳಿಗೆ

“ಮಲ್ಲಿ”ಯ ಮನವ ಗೆದ್ದಿರುವವಳು ನನ್ನುಸಿರು ನಿರಾಭರಣ ನೀರೆ ಸಾಕಿ
ಕಾವಲಾಗಿ ಮುಳ್ಳಿನ ಬೇಲಿ ಹಾಕದಿರಿ ನನ್ನವಳ ಪುಟ್ಟ ಪುಟ್ಟ ಹೆಜ್ಜೆಗಳಿಗೆ

***

About The Author

2 thoughts on “ಗಜಲ್”

  1. ಡಾ.ಮಲ್ಲಿನಾಥ ತಳವಾರ ಸರ್ ಗಜಲ್ ತುಂಬಾ ಸೊಗಸಾಗಿದೆ

    1. ಡಾ. ಮಲ್ಲಿನಾಥ ಎಸ್. ತಳವಾರ

      ತುಂಬು ಹೃದಯದ ಧನ್ಯವಾದಗಳು ಸರ್ ಜೀ

Leave a Reply

You cannot copy content of this page

Scroll to Top