ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕತೆಯೊಂದ ಹೇಳಮ್ಮ…

ಡಾ.ಗೀತಾ ಪಾಟೀಲ

person holding green fruit during daytime

ಕತೆಯೊಂದ ಹೇಳಮ್ಮ ನಿನ್ನೊಡಲ ಈ ಕುಡಿಗೆ
ಕತೆಯೊಂದ ಹೇಳಮ್ಮ ನಿನ್ನೊಡಲ ಈ ಕುಡಿಗೆ
ಉಣಿಸುತ್ತ ನಿನ್ನ ಬಾಳ ಅನುಭಾವದಡುಗೆ
ಕತೆಯೊಂದ ಹೇಳಮ್ಮ ನಿನ್ನೊಡಲ ಈ ಕುಡಿಗೆ

ಆ ರಾಜನರಮನೆಯ ವೈಭವದ ವರ್ಣನೆಯು
ಬೇಡೆನಗೆ ಹೂವಂತೆ ಬೆಳೆದವಳ ಕತೆಯು
ನಮ್ಮಂಥ ಸಾಮಾನ್ಯರ ಕತೆ ಹೇಳು ನನಗೆ
ಅದ ಕೇಳಿ ಅರಳುವೆ ನಾ ಮುಳ್ಳುಗಳ ನಡುವೆ II೧II
ನನ್ನ ಬಾಳ ದಾರಿಯಿದು ಹೂಗಳ ಹಾಸಿಗೆಯಲ್ಲ
ಕಲ್ಲೆಷ್ಟೋ ಮುಳ್ಳೆಷ್ಟೋ ನಾ ಸವೆಸಬೇಕಲ್ಲ
ನಿನ್ನನುಭಾವದ ಕತೆಗಳು ಕೈಹಿಡಿದು ನಡೆಸಲು
ಆ ಬೆಳಕ ಪಥದಲ್ಲಿ ಮುನ್ನಡೆವೆ ನಾನು….. II೨II
ಕತೆಯೊಂದ ಹೇಳಮ್ಮ ನಿನ್ನೊಡಲ ಕುಡಿಗೆ
ಉಣಿಸುತ್ತ ನಿನ್ನ ಬಾಳ ಅನುಭಾವದಡುಗೆ
ಕತೆಯೊಂದ ಹೇಳಮ್ಮ ನಿನ್ನೊಡಲ ಈ ಕುಡಿಗೆ….


About The Author

3 thoughts on “ಕತೆಯೊಂದ ಹೇಳಮ್ಮ…”

  1. ಗೀತಕ್ಕ, ನಿಮ್ಮ ಬರವಣಿಗೆ ಯಾವಾಗಲು ಅತ್ಯುತ್ತಮವಾಗಿರುತ್ತೆ

  2. ಪ್ರಸಾದ

    ಸುಂದರ! ಉಣಿಸುತ್ತ ನಿನ್ನ ಬಾಳ ಅನುಭಾವದಡುಗೆ

Leave a Reply

You cannot copy content of this page

Scroll to Top