ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹಕ್ಕಿ ಹಾರುತಿದೆ

ಅಕ್ಷತಾ ರಾಜ್

Seagulls, Flight, Flock, Flying Birds

ಬಾನು ಬಯಲಿನಲಿ ಮುಗಿಲ ಮರೆಯಲಿ
ಹಕ್ಕಿ ಹಾರುತಿದೆ ನೋಡಿದಿರಾ !
ಬೆಳಕು ಗರಿಗಳ ಹೊತ್ತು ಕುಣಿಯುತಿದೆ
ಏನು ಈ ಪರಿ ಸೋಜಿಗ !

ಮೂಡಣದ ರಜತ ಬೆಟ್ಟದಲಿ
ಅಂಬೆಗಾಲನು ಹಾಕುತಿದೆ
ಪಡುವಣ ಕಡಲಿನ ಬಿಸಿ ಅಬ್ಬಿಯಲಿ
ಮೀಯಲೆಂದು ಸಾಗುತಿದೆ ||ಬಾನು||

ಮೇಘ ನೆಂಟರ ಜಂಟಿ ಕೂಟವು
ಜತನದಲಿ ಹೊತ್ತು ತಿರುಗುತಿದೆ
ಬಿದ್ದಾಗ ಅತ್ತು, ಎದ್ದಾಗ ನಕ್ಕು
ಪುಟಿದೆದ್ದು ಹಕ್ಕಿ ಹಾರುತಿದೆ ||ಬಾನು||

ಹಗಲು – ಇರುಳಿನ ಕಂದನೀತ
ಜಗವೇ ತೂಗುವ ತೊಟ್ಟಿಲು
ಬೆಳ್ಳಿ ಕಿರಣ ರೆಕ್ಕೆ ಬಡಿಯುತಾ
ಹಕ್ಕಿ ಹಾರುತಿದೆ ನೋಡಿದಿರಾ ||ಬಾನು||

*********

About The Author

Leave a Reply

You cannot copy content of this page

Scroll to Top