ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ದಾನ

ಪ್ರೊ.ರಾಜನಂದಾ ಘಾರ್ಗಿ

Atabz Party Prank MAN Bhoot Devil HUMAN facemask Party Mask Price in India  - Buy Atabz Party Prank MAN Bhoot Devil HUMAN facemask Party Mask online at  Flipkart.com

[21:47, 25/06/2021] GAARGI: ದಾನ ಶೂರನಾಗಿ
ಅಂಗವ ಹರಿದು ನೀಡಿದ
ಕುಂಡಲಗಳ ಕಿತ್ತು ಕೊಟ್ಟ
ಸಾವಿನ ಭಯವಿಲ್ಲದ ಕರ್ಣ

ದಾನ ವೀರನಾಗಿ
ಮೂರನೇಯ ಹೆಜ್ಜೆಗೆ
ತಲೆ ಯ ನೀಡಿದ ಬಲೀಂದ್ರ
ಹೂತು ಹೊದ ಭೂಗರ್ಭದಿ

ದಾನಿಗಳು ಮೆರೆಯುತ್ತಿಹರು
ಟ್ವಿಟ್ಟರ್ ಫೆಸಬುಕ್ ಗಳಲ್ಲಿ
ತಾವು ನೀಡಿದ ಬ್ರೆಡ್ ಬಿಸ್ಕಿಟ್
ನೀರಿನ ಬಾಟಲಿಗಳೊಂದಿಗೆ

ಹೊಟ್ಟೆ ಬಿರಿಯುವಂತೆ
ತಿಂದುಂಡು ಉಳಿದದ್ದನ್ನು
ಹಸಿದವರಿಗೆ ನೀಡುವರು
ಸೆಲ್ಫಿ ಪೋಸ್ ನೊಂದಿಗೆ

ಮಹಾದಾನಿ ಹಣೆ ಪಟ್ಟಿ ಕಟ್ಟಿ
ಪ್ರಶಸ್ತಿಗಳ ಮಾಲೆ ಧರಿಸುವ
ದಾನದ ಅರ್ಥವನರಿಯದ
ಗಾವಿಲ ಗೊಸುಂಬೆಗಳು


About The Author

7 thoughts on “ದಾನ”

  1. ಹರಿತವಾದ ವ್ಯಂಗ್ಯದ ಸಾಲುಗಳು ಪರಿಣಾಮಕಾರಿಯಾಗಿವೆ

  2. ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ
    ಏಡಿಸಿ ಕಾಡಿತ್ತು ಶಿವನ ಡಂಗುರ

  3. ನಂದಾ ನಿಮ್ಮ ಕವಿತೆ ಇಂದಿನ ದಾನಿಗಳು ಓದುವಂತಾಗಲಿ

Leave a Reply

You cannot copy content of this page

Scroll to Top