ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಸಿದ್ಧರಾಮ ಹೊನ್ಕಲ್

ನನಗೀಗ ಕನಸುಗಳು ಸಾಕು ಅವೆಲ್ಲ ಮಧುರ ನನಸಾಗಬೇಕೀಗ
ನನಗೀಗ ಮಾತು ಸಾಕು ನೀನೆಂದರೆ ನೀನೇ ಜೊತೆಬೇಕೀಗ

ಎಷ್ಟು ದಿನಾಂತ ಬರೀ ನೆನಪಲಿರಬೇಕು ಬಳಲಿವೆ ಎರಡೂ ಜೀವ
ಕೊಂದಾರೆ ಕೊಂದುಬಿಡು ಇಲ್ಲ ಬದುಕಿಸಿಕೋ ನಿನ್ನ ಸಖನಿಗೀಗ

ನಿನ್ನ ಕಣ್ಣಿಗೆ ಹುಚ್ಚನಂತೆ ಕಂಡಿರಬಹುದು ನಾ ನಿನ್ನಾಸೆಗಳ ಬಲ್ಲವನು
ಪ್ರೇಮಿಗಳೆಲ್ಲ ಹುಚ್ಚರಾದರೇ ನಾನಿನ್ನ ಬಹುದೊಡ್ಡ ಹುಚ್ಚನೀಗ

ದೇವದಾಸನಾಗಿಸಬೇಡ ಮಧುಶಾಲೆಗೆ ನನ್ನ ಅಟ್ಟಬೇಡ
ನಿನ್ನ ಮುತ್ತಿನ ಮತ್ತಲಿ ಈ ಜಗವನೇ ಅನುಕ್ಷಣ ಮರೆಯಬೇಕೀಗ

ನಗುವ ನಾಟಕದಲಿ ಮನದ ಆಸೆಗಳನು ನೀ ಹತ್ತಿಕ್ಕಿಸಬೇಡ
ಬಿಕ್ಕುತ್ತಿರುವ ನಿನ್ನದೆಯ ಬಯಕೆಗಳ ಮನಸಾರೆ ತಣಿಸಿಕೋಬೇಕೀಗ

ಮರಳಿಬಾರದು ಈ ಜನ್ಮ ಇರುವಾಗಲೇ ಎಲ್ಲ ತೀರಿಸಬೇಕೀಗ
ಆ ಕಣ್ಣ ಕಾಂತಿಯಲಿ ನಿನ್ನೆದೆಯ ಕೊಳದಲಿ ನಾ ಈಜಬೇಕೀಗ

ಕಾಡಬೇಡ ಕಾಯಿಸಬೇಡ ನಿನ್ನ ಹಂಬಲದಿ ಬೆಂದಿರುವನು ಹೊನ್ನಸಿರಿ
ಹೇಳಲಾರ ಹೇಳದಿರಲಾರ ನಿನ್ನ ಹೊಕ್ಕುಳಲಿ ಹೂ ಅರಳಿಸಬೇಕೀಗ

**********************

About The Author

Leave a Reply

You cannot copy content of this page

Scroll to Top