ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಾಯ್ಕುಗಳು

ಎ. ಹೇಮಗಂಗಾ

waterdrop wallpaper

  1. ಕರಗುವೆನು
    ಹಿಮಬಿಂದುವಿನಂತೆ
    ನಿನ್ನ ಪ್ರೀತಿಗೆ
  2. ತೂತು ಬಿದ್ದಿದೆ
    ದಾಂಪತ್ಯವೆಂಬ ದೋಣಿ
    ಮುಚ್ಚಲಾಗದು
  3. ಉದ್ಧರಿಸಿದ
    ಜಗವ ಹೆಂಡತಿಗೆ
    ಬದ್ಧನಾಗದೇ
  4. ಮೂಡಿದ ರವಿ
    ಕತ್ತಲ ಪರದೆಯ
    ಸೀಳಿ ಬಂದಂತೆ
  5. ಹೂಳಬೇಕಿದೆ
    ಗೋರಿಯಲ್ಲಿ ಭೂತದ
    ನೆನಪುಗಳ
  6. ಕೊರಳ ತುಂಬಾ
    ಮುತ್ತಿನ ಮಾಲೆ ನಲ್ಲ
    ತುಟಿಯೊತ್ತಿದ್ದು
  7. ಕವಲುದಾರಿ
    ಪಯಣಕೆ ಕಾಣದು
    ಕೊನೆ ಎಂದಿಗೂ
  8. ಬೆಂಕಿಯ ಸುತ್ತ
    ಸುತ್ತುವ ಪತಂಗಕ್ಕೆ
    ಮತಿಭ್ರಮಣೆ
  9. ಅಂತರಾಳದ
    ಮೌನದಲ್ಲೂ ಮಾತಿದೆ
    ಅರಿಯಬೇಕು
  10. ನಿತ್ಯ ಕಾಡುವ
    ಕವಿತೆಯಾದೆ ಸ್ಮೃತಿ
    ಪಟಲದಲ್ಲಿ

*************************

About The Author

1 thought on “ಹಾಯ್ಕುಗಳು”

Leave a Reply

You cannot copy content of this page

Scroll to Top