ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಸ್ಥಾನ ಪಲ್ಲಟ

ಡಾ. ನಿರ್ಮಲಾ ಬಟ್ಟಲ

468 Sculpture Sad Girl Photos - Free & Royalty-Free Stock Photos from  Dreamstime

ದಶಕಗಳೆ ಕಳೆದುಹೋದವು
ಒಲೆ ಊದುವುದು ನಿಂತು
ಹೋಗೆ ಹಿಡಿಯುವುದು ನಿಂತು
ಸುಡುವುದು ನಿಂತಿಲ್ಲ…‌!

ಇಗೋ….
ಎಸರಿಡುವುದೆ
ಮರೆತುಹೋಗಿದೆ
ಪ್ರೆಶರ್ ಕುಕ್ಕರಿನಲ್ಲಿ ಹಾಕಿ
ಕೂಗು ಹೋಡೆಸುವುದಷ್ಟೆ
ಒತ್ತಡದಲಿ ಬೇಯುವುದು ನಿಂತಿಲ್ಲ…!

ರೊಟ್ಟಿ ಬೇಯಿಸುವಾಗ
ಮುಂಗೈಗೆ ಬೀಳುವ
ಹೆಂಚಿನ ಬರೆಗಳಿಗ ಕಂಡಿಲ್ಲಾ…
ಕಾಣದ ಬರೆಗಳು ಮನಸ ತುಂಬಾ
ಬಿಳುವುದು ನಿಂತಿಲ್ಲ….!

ಮನೆಯೊಡತಿ ಎಂದು
ಹೊರಗೆ ಬಿಗೀದರು
ಒಳ ಒಳಗೆ ದಾಸ್ಯ ಒಪ್ಪಿ ಕೊಳ್ಳುವುದು ನಿಂತಿಲ್ಲಾ…!

ಏನೆಲ್ಲಾ ಬದಲಾಗಿ
ಏನೆನೋ ಹೊಸದಾಗಿ
ಬಂದು ಹಳೆಯದೆಲ್ಲ ಬದಲಾದರೂ
ಬಸಿರುಹೊರುವುದು ನಿಂತಿಲ್ಲ….!!

ಆಕಾಶಕ್ಕೆ ಹಾರಿದರೂ
ಪಾತಾಳಕ್ಕೆ ಇಳಿದರೂ
ಕುಕ್ಕುವ ಮುಕ್ಕುವ
ದಾಳಿಗಳಿನ್ನು ನಿಂತಿಲ್ಲ….!

ಹೆಣ್ಣೆಂದು ಪ್ರತಿ ಘಳಿಗೆ
ಹಣ್ಣು ಮಾಡುವ,
ಎತ್ತರಿಸಿದ ಧ್ವನಿ ಕತ್ತರಿಸಿ
ಭ್ರೂಣಗಳ ಹೂಳುವುದುನ್ನು
ನಿಂತಿಲ್ಲ….!

*******************************

About The Author

9 thoughts on “ಸ್ಥಾನ ಪಲ್ಲಟ”

  1. Mamathashankar

    ಏನೆಲ್ಲಾ ಬದಲಾದರೂ ಹೆಣ್ಣಿನ ಬದುಕು ಬದಲಾಗಲೇ ಇಲ್ಲ…..ಕಾಣುವುದೂ ತಪ್ಪಲಿಲ್ಲ….. ಚೆನ್ನಾಗಿದೆ ಕವಿತೆ ನಿರ್ಮಲಾ ಮೇಡಂ….

    1. Ramakrishna Gundi

      ಹೆಣ್ಣಿಗೆ ಈ ಅರಿವು ಬಂದಿದೆಯಲ್ಲ ಇದು ಮು0ದಿನ ದಾರಿಯ ಅನ್ವೇಷಣೆಗೆ ಖಂಡಿತ ಪ್ರೇರಣೆಯಾಗಲಿದೆ….ಧನ್ಯವಾದಗಳು

  2. Prof.M. P. Neelakanthmath.

    ಕವನ ವಾಸ್ತವವನ್ನು ಬಿಂಬಿಸಿದೆ. ಆಧುನಿಕ ಜೀವನ ಶೈಲಿ ಬದಲಾಗಿ ˌ ಪರ್ಯಾಯ ಕ್ರಿಯೆಗಳ ಜವಾಬ್ದಾರಿ ಪಲ್ಲಟವಾದರೂ ˌ ಸಾಮಾಜಿಕವಾಗಿ ಸ್ತ್ರೀಯೆಂಬ ಅಸಹನತೆ ಇನ್ನೂ ನಿಂತಿಲ್ಲವಲ್ಲ ಎಂಬ ಖೇದವಿದೆ.

  3. ಪದ್ಯ ಸೂಪರ ಇದೆ ಮೇಡಮ
    ಮೊದಲು ಆ ತರದಂತಾ ಕಾಲವಿತ್ತು ಆದರೆ ಈಗಿನ ವಾಸ್ತವ ಏನೆಂದರೆ ಈಗಿನ ಹೆಣ್ಣು ಗಂಡ ದೂರದಶ೯ನವಾದರೆ ಹೆಂಡ್ತಿ ರೀಮೋಟ ಆಗಿದಾರೆ

  4. ಶಿಕ್ಷಣದ ಬೇರು ಸಿಹಿಯಾದರೂ ಮನಸೊಳಗಿನ ಹುಳಿ ಕಡಿಮೆಯಾಗುತ್ತಿಲ್ಲ…. ಭಾವ ಬದಲಾದರೆ ಬದುಕು ಬದಲಾದೀತು. ರೆಕ್ಕೆ ಇದೆ ಎಂದ ಮಾತ್ರಕ್ಕೆ ಹಕ್ಕಿ ಆಕಾಶದೆತ್ತರಕ್ಕೆ ಹಾರುವುದಿಲ್ಲ; ಇಚ್ಛಾಶಕ್ತಿಯೂ ಬೇಕು. ಏನೇ ಆದರೂ ಹೆಣ್ಣು ಆಧುನಿಕತೆಯ ಕೆಸರಿನಲ್ಲಿ ಅರಳುತ್ತಿರುವ ಕಮಲ ಅಲ್ಲವೇ….!!?
    ಕವಿತೆ ತುಂಬಾ ಸುಂದರವಾಗಿದೆ ಮೇಡಂ

  5. ‌ಬದುಕಿನ ವಾಸ್ತವ್ಯ ತೆಯನು ತಿಳಿಸಿ ಮುಂದಿನ ಜೀವನದ ಬಗ್ಗೆ ಹೊಸ ಚಿಂತನೆ ಪ್ರೇರಣೆಸುವ ಚಿಂತಕ

  6. ನಮಸ್ತೆ ಮೇಡಂ,
    ಕವಿತೆ ವಾಸ್ತವವಾದ ಜೊತೆ ಋಣಾತ್ಮಕತೆ ಹೆಚ್ಚಾಗಿದೆ,
    ಬರಹ ಶೈಲಿಯ ತುಂಬಾಚೆನ್ನಾಗಿದೆ.
    ಸಾಲುಗಳು ಒಂದೆಡೆ ನಾಲ್ಕು ಒಂದೆಡೆ ಮೂರು ಇವೆ
    ಸಮ ಇಲ್ಲವೆ ಬೆಸಸಂಖ್ಯೆ ಒಂದನ್ನು ಪದ್ಯದ ಪೂರ ಉಳಿಸಿಕೊಳ್ಳುವುದು ಕವಿತೆಯ ಪ್ರಾಸದ ಜೊತೆಗೆ ಗಾಂಭೀರ್ಯದ ಜೊತೆಗೆ ಅಚ್ಚುಕಟ್ಟಟಾಗಿರುತ್ತದೆಂದು ನನ್ನ ಭಾವನೆ.

    ಧನ್ಯವಾದಗಳು.
    ಆನಂದ.ಹೆಬ್ಬಾಳು
    (ಜಾನಕಿತನಯಾನಂದ).

Leave a Reply

You cannot copy content of this page

Scroll to Top