ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ವಸುಂಧರಾ ಕದಲೂರು

ಎರಡು ಹೊಸ ಕವಿತೆಗಳು

Two white tulips

ಆ ಪ್ರೀತಿ…

Fantasy, Butterflies, Mushrooms, Forest

ಆ ಪ್ರೀತಿ ನಿರ್ಮಲವಾಗಿತ್ತು
ಸರಳ ಮಳೆಯಂತೆ, ಸಹಜ ಬೆಳಕಂತೆ

ಆ ಪ್ರೀತಿ ಮುಕ್ತವಾಗಿತ್ತು
ಸರಾಗ ನದಿಯಂತೆ, ವಿಸ್ತಾರ ಕಡಲಂತೆ

ಆ ಪ್ರೀತಿ ಕಾಡುತ್ತಿತ್ತು
ಮಣ್ಣ ಘಮಲಂತೆ, ಮಲ್ಲಿಗೆ ಅಮಲಂತೆ

ಆ ಪ್ರೀತಿ ಕೂಡುತ್ತಿತ್ತು
ಚುಕ್ಕಿತಾರೆ ಇರುಳಂತೆ, ಮುಗಿಲ್ದುಂಬಿದ ಬಾನಂತೆ

ಆ ಪ್ರೀತಿ ಚೇತನವಾಗಿತ್ತು
ಹಸುಕಂದನ ನಗೆಯಂತೆ, ಹಸಿರು ಚಿಮ್ಮಿ ಚಿಗಿವಂತೆ

ಆ ಪ್ರೀತಿ ಕಾಡುತ್ತಿತ್ತು
ಕಾಣ್ವ ಕಣ್ಣ ಬೆಳಕಂತೆ, ಕನಸೊಂದು ಅನವರತ ಬೀಳುವಂತೆ…


ಆ ಜಾಡು ಹಿಡಿದು…

Forest, Nature, Mud, Winter, Magic

ಆ ಜಾಡಿನಲಿ ಹಾರುತ್ತಾ
ಜೇನು ಹೀರುತ್ತಾ …
ಹೂಗಳ ಮುಟ್ಟಬೇಕಿತ್ತು

ಆ ಹಾದಿಯಲಿ ಸಾಗುತ್ತಾ
ಮಾಧುರ್ಯಕೆ ತಲೆದೂಗುತ್ತಾ…
ಆಲಾಪಗಳ ಕೇಳಬೇಕಿತ್ತು

ಆ ದಾರಿ ಸವೆಸುತ್ತಾ
ಮೋಹಕತೆಗೆ ಸೋಲುತ್ತಾ..
ಸೌಂದರ್ಯ ಕಾಣಬೇಕಿತ್ತು

ಆ ಮಳೆಯಲಿ ನೆನೆಯುತ್ತ
ಮೈಮರೆಯುತ್ತಾ ಹಸಿಯಾಗುತ್ತಾ..
ತೋಯಬೇಕಿತ್ತು

ಆ ಹಾದಿ ತೊರೆದ ಮೇಲೆ
ಹೀಗೆಲ್ಲಾ ಅನಿಸಿತು…

**********************

About The Author

10 thoughts on “ವಸುಂಧರಾ-ಎರಡು ಕವಿತೆಗಳು”

  1. Smitha Amrithraj.

    ಸಹಜ,ಸರಳ ಕವಿತೆಗಳು..ಒಂದೇ ಸಲಕ್ಕೆ ಆಪ್ತ ವೆನ್ನಿಸಿ ಬಿಡುವಷ್ಟು.ಒಳ್ಳೆಯ ಕವಿತೆ ಗಾಗಿ ಅಭಿನಂದನೆVasundhara

  2. ತುಂಬಾ ತುಂಬಾ ಚನ್ನಾಗಿವೆ ಎರಡೂ ಕವಿತೆಗಳು. ಪ್ರೀತಿಯ ಅನುಭವ, ಆಸ್ವಾಧನೆಯ ತುಡಿತ ಕವಿತೆಗಳಲ್ಲಿ ಸುಂದರವಾಗಿ ಮೂಡಿವೆ.

  3. Poornima suresh

    ಸರಳವಾಗಿ,ಆಪ್ತವಾಗಿ ಬಿಡುವ ಕವಿತೆಗಳು. ಸುಂದರ ಕವಿತೆಗಳಿಗೆ ಅಭಿನಂದನೆಗಳು

  4. Mamathashankar

    ಸುಂದರ ಸರಳವಾದುದು…. ಸಹಜವಾದುದು…. ಇಷ್ಟ ಆಯ್ತು ಮೇಡಂ

Leave a Reply

You cannot copy content of this page

Scroll to Top