ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರಾಹುಲ ಮರಳಿ

Female hands holding red polygonal heart shape

ಲೇಖನಿ ಹಿಡಿದು ಕುಳಿತರೂ ಒಂದಕ್ಷರ ಬರೆಯಲಾಗುತ್ತಿಲ್ಲ ಜಾನು
ಶಾಯಿಯಿದ್ದರೂ ದಿಗ್ಭ್ರಾಂತನಾಗಿ ಕಾವ್ಯ ರಚಿಸಲಾಗುತ್ತಿಲ್ಲ ಜಾನು

ಕಣ್ಣ ತುಂಬಾ ನಿನ್ನದೇ ಮೈಮಾಟದ ಸುಂದರ ಬಿಂಬ ಆವರಿಸಿಬಿಟ್ಟಿದೆ
ತುಂಟ ನೆನಪುಗಳ ಸುಮಧುರ ಕ್ಷಣಗಳನು ಮರೆಯಲಾಗುತ್ತಿಲ್ಲ ಜಾನು

ನೀಚ ಪಾಪಿಗಳು ಕೊಂದರಲ್ಲ ನಿನ್ನನು ತಮ್ಮ ಕಾಮದ ಹಸಿವಿಗಾಗಿ
ನಿನ್ನ ಪ್ರಿಯತಮನಿಗೆ ಅಸಹಾಯಕತೆಯನು ಸಹಿಸಲಾಗುತ್ತಿಲ್ಲ ಜಾನು

ಪ್ರೇಯಸಿಯ ಪ್ರಾಣ ಹೋದಮೇಲೆ ಏತಕ್ಕಾಗಿ ಬದುಕಲಿ ನಾನಿಲ್ಲಿ
ನನ್ನದೆ ಮೇಲಿರುವವಳನು ಗೋಡೆ ಮೇಲೆ ನೋಡಲಾಗುತ್ತಿಲ್ಲ ಜಾನು

ನೀನಿಲ್ಲದೇ ಪ್ರೇಮಲೋಕದಿ ಜೀವಕವಿ ಜೀವಂತ ಶವವಾದಂತಾಗಿದೆ
ಶತ್ರುಗಳ ಕೊಂದು ಸೇರುವೆ ಧರೆಯೊಡಲ ಬೇಗ ಬಿಟ್ಟಿರಲಾಗುತ್ತಿಲ್ಲ ಜಾನು

******************************

About The Author

Leave a Reply

You cannot copy content of this page

Scroll to Top