ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಸುಜಾತಾರವೀಶ

Lilacs, Bouquet, Vase, Flowers

ಇರುಳ ಕನಸಿಗೆ ಹಗಲು ಒಲವ ಕವಿತೆಯ  ಬರೆದೆಯಾ ನೀನು 
ಮರುಳ ಮನಸಿಗೆ ಛಲದ ಗೆಲುವ ಚರಿತೆಯ ಮೆರೆದೆಯಾ ನೀನು 

ಸವಿಯ ನಿದಿರೆಗೆ ಮಂಪರಿನ ಜೊಂಪಲಿ ಮತ್ತನು ತುಂಬಿದವರು ಯಾರು 
ಕವಿಯ ಕಲ್ಪನೆಯ ಕುಸುಮಮಾಲೆಯ ದಿಂಡನು ಹೆಣೆದೆಯಾ ನೀನು 

ನೆನಪ ಬುತ್ತಿಯಲಿ ಬಯಸಿದ ಪ್ರೀತಿಯ ಸವಿಯ ತಿನಿಸುಗಳ ಔತಣ 
ಒನಪು ವಯ್ಯಾರಕೆ ಮನದ ಬಾಗಿಲ ಕದವ ತೆರೆದೆಯಾ ನೀನು

ಮಳಲ ರಾಶಿಯ ತೀರದ ಉದ್ದಕ್ಕೂ ಕಾಲನ ಹೆಜ್ಜೆಗಳ ಗುರುತು 
ಅಳಲ ಮರೆಸಿ ಬಾಳಿನ ಬಟ್ಟಲಿಗೆ ಹರುಷ ಸುರಿದೆಯಾ ನೀನು 

ಸುಜಿಯ ಮನವೀಗ ಕಾಡುವ ಭಾವನೆಗಳ ರಂಗಶಾಲೆ ಆಗಿಹೋಗಿದೆ 
ರಾಜಿಯ ಮಾತನಾಡಿ ಸುಡುವ ಮನಕೆ ತಂಪನು  ಎರೆದೆಯಾ ನೀನು 

***********

About The Author

3 thoughts on “ಗಜಲ್”

  1. ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಅನಂತ ಧನ್ಯವಾದಗಳು
    ಸುಜಾತ ರವೀಶ್

  2. R.ಸಾವಿತ್ರಿ ಕೋಲಾರ

    ಸುಂದರ ಪದಗಳ ಪ್ರೀತಿಯ ಕವನ ❤❤❤

  3. ಕವಯತ್ರಿ ಸುಜಾತ ತಮ್ಮ ಗಜಲ್ ಚನ್ನಾಗಿದೆ… ಆತ್ಮಪೂರ್ವಕ ಅಭಿನಂದನೆಗಳು ತಮಗೆ..!
    ಸವಿಸ್ವಪ್ನಗಳ ಶುಭರಾತ್ರಿ…

Leave a Reply

You cannot copy content of this page

Scroll to Top