ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಶಾಲಿನಿ ರುದ್ರಮುನಿ

ಬೇಕು ಬೇಡಗಳಾಸೆಗಳ ತೊರೆದು ಹಿಡಿದಿರುವೆ ನೀಲಿ ಕೊಡೆ
ಬಿಸಿಲ ಮಳೆಯ ಸೋಜಿಗವ ನೆನೆದು ಹಿಡಿದಿರುವೆ
ನೀಲಿ ಕೊಡೆ,

ಬಂದಾರು ಬರುವರು ನಿಂದಾರು ಅರೆಗಳಿಗೆ ಬಾಳ
ಬಯಲಲಿ
ಬೇಕಾದವರಿಗಾಗಿ ಬೇಕೆಂದು ಹಿಡಿದು ಕಾದಿರುವೆ
ನೀಲಿ ಕೊಡೆ

ಮೌನ ಬಂಡಿಯ ತುಂಬಾ ಪ್ರೀತಿ ಬತ್ತಳಿಕೆಯ ಲಹರಿಯಲಿ
ಸಹನೆಯ ಬಯಕೆ ಬಸಿರ ಚಿಗಿದು ಅರಳಿಸಿರುವೆ
ನೀಲಿ ಕೊಡೆ

ಕದಿಯದ ಒಲವ ನಕ್ಷತ್ರ ಬಾಳ ಬಾಂದಳದ
ಹೊಳೆಯಲಿ
ಮಧುರದಾಲಾಪನೆಗೆ ಮಿಡಿದು ಚಿಮ್ಮಿಸಿರುವೆ
ನೀಲಿ ಕೊಡೆ,

ಭಗ್ನವಾಗದ ಹಗಲಿರುಳ ಮಾತು ಮೌನದೊಲವ
ಪೂಜೆಯಲಿ
ಶಾರು ಒಲವ ದನಿಪದಕೆ ಮಣಿದು ಬಿಚ್ಚಿರುವೆ
ನೀಲಿ ಕೊಡೆ…

**************************

About The Author

1 thought on “ಗಜಲ್”

  1. ಶಾಲಿನಿ

    ನೀಲಿಕೊಡೆ ಗಜಲ್ ಪ್ರಕಟಸಿದ ಗೌರವಾನ್ವಿತ ಸಂಗಾತಿ ಪತ್ರಿಕ ಬಳಗದ ಸಂಪಾದಕೀಯರಿಗೆ ಹೃತ್ಪೂರ್ವಕವಾದ ಧನ್ಯವಾದಗಳು…

Leave a Reply

You cannot copy content of this page

Scroll to Top