ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಶುಭಲಕ್ಷ್ಮಿ ಆರ್ ನಾಯಕ

mallard duck on water

ಸಿಗದ ಒಲವನರಸಿ ದಣಿಯದಿರು ಗೆಳತಿ
ಹಗೆಯ ತೋರಿದ ಮನಕೆ ಮರುಗದಿರು ಗೆಳತಿ

ಬಾಳೊಂದು ಸುಂದರ ಪಯಣದ ಹಾದಿಯು
ವ್ಯರ್ಥ ಹುಡುಕಾಟದಲಿ ಬಾಳ ಕೆಡಿಸದಿರು ಗೆಳತಿ

ಗಂಧವಿರದ ಸುಮದಂತೆ ‌ಒಲವಿರದ ಬಾಳು
ಇಲ್ಲದ ಗಂಧವನು ಆಘ್ರಾಣಿಸದಿರು ಗೆಳತಿ

ಒಡೆದ ಗಾಜಂತೆ ಛಿದ್ರ ಮುರಿದ ಒಲವು
ಬರಿದೆ ಸೇರಿಸುತ್ತ ಸಮಯ ಕಳೆಯದಿರು ಗೆಳತಿ

ತುಂಬಿದೆ ಜಗದಲ್ಲಿ ಬಗೆಬಗೆಯ ಒಲವು
ದೊರೆಯದ ಒಲವಿಗಾಗಿ ಹಂಬಲಿಸದಿರು ಗೆಳತಿ

ನಿನ್ನ ವ್ಯರ್ಥ ಪ್ರಯತ್ನಕೆ ಮರುಗಿದೆ ಶುಭಳ ಮನ
ಪ್ರೀತಿಗಾಗಿ ಜೀವನ ಯಾನದಲಿ ಸೋಲದಿರು ಗೆಳತಿ

*********************************

About The Author

3 thoughts on “ಗಜಲ್”

  1. ಶುಭಲಕ್ಷ್ಮಿ ಆರ್ ನಾಯಕ

    ನನ್ನ ಬರಹಗಳನ್ನು ಪ್ರಕಟ ಮಾಡಿ ಪ್ರೋತ್ಸಾಹಿಸುತ್ತಿರುವ ಸಂಗಾತಿ ಪತ್ರಿಕೆಗೆ ಆಭಾರಿಯಾಗಿರುವೆ. ಶುಭವಾಗಲಿ.

  2. ಗಜಲ್ ಸೊಗಸಾಗಿದೆ, ಬದುಕಿನಲಿ ನಾವು ಬಯಸಿದ್ದು ಸಿಗುವುದಿಲ್ಲ,ಸಿಕ್ಕದರಲ್ಲಿಯೇ ತೃಪ್ತಿ ಯಿಂದ ಬಾಳಬೇಕು ,ಸಿಗದ ವಸ್ತು ವಿಗಾಗಿ ಹುಡುಕುವುದು ಬೇಡ ಎಂಬ ನೀತಿ ತುಂಬಿದ ಗಜಲ್ ಸೊಗಸಾಗಿದೆ

Leave a Reply

You cannot copy content of this page

Scroll to Top