ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಶೋಭಾ ನಾಯ್ಕ ಹಿರೇಕೈ

gray rocks on sea shore during daytime

ಕತ್ತಲೋಡಿದೆ ಬೆಳಕು ಹರಿದಿದ್ದೆ ನಿನ್ನಿಂದ
ಹೂವು ಅರಳಿತು ಗಿಡವು ಚಿಗುರಿದ್ದೆ ನಿನ್ನಿಂದ

ಬಯಲ ಗಾಳಿಯು ತಂದ ರಾಗ ಆಲಿಸಿ ಕೇಳು
ಹಕ್ಕಿ ಕೊರಳಲಿ ಒಲವು ಜಿನುಗಿದ್ದೇ ನಿನ್ನಿಂದ

ಕಲ್ಲು ಹಾಸಿನ ಮೇಲೂ ಚಲನೆ ಸಾಗಿದೆ ನೋಡು
ನದಿಯ ನಡಿಗೆಗೆ ದಿಕ್ಕು ಸಿಕ್ಕಿದ್ದೇ ನಿನ್ನಿಂದ

ಕಡಲ ಹನಿ ಹನಿಯೆಲ್ಲ ಮುಗಿಲ ಸೇರಿತು ಹೇಗೆ?
ಗರ್ಭ ಕಟ್ಟಿದ ಮೋಡ ಹೆತ್ತಿದ್ದೇ ನಿನ್ನಿಂದ

ಸೃಷ್ಟಿ ಬೆರಗನು ಕುರುಡಿ ಕಂಡಿದ್ದೇ ನಿನ್ನಿಂದ
“ಶೋಭೆ” ಯೊಳಗಿನ ಕವಿತೆ ಬದುಕಿದ್ದೇ ನಿನ್ನಿಂದ
********************

About The Author

6 thoughts on “ಗಜಲ್”

  1. Nagaraj Harapanhalli

    ನದಿಯ ನಡಿಗೆಗೆ ದಿಕ್ಕು ಸಿಕ್ಕಿದ್ದೇ ನಿನ್ನಿಂದ
    ಸೃಷ್ಟಿ ಬೆರಗನು ಕರುಡಿ ಕಂಡದ್ದೇ ನಿನ್ನಿಂದ

    …….ಅದ್ಭುತ ಸಾಲುಗಳು. ‌ಶೋಭಾ ಪ್ರತಿಭಾನ್ವಿತೆ ಕವಯಿತ್ರಿ ‌ . ಕವಿತೆ ಮಾತ್ರವಲ್ಲ, ಕತೆ, ಪ್ರಬಂಧ, ಲಹರಿ ಬರೆಯ ಬಲ್ಲರು. ಬರೆದಿದ್ದಾರೆ. ವಿಮರ್ಶೆಯನ್ನು ಸಹ. ಈಗ ಗಜಲ್….
    ಈ ಬಹುಮುಖ ಪ್ರತಿಭೆ ಬೆಳೆಯಲಿ…..

  2. ಸಂಗೀತ ರವಿರಾಜ್

    ಚೆನ್ನಾಗಿದೆ. ಶೋಭೆ ಪದ ಸಮಂಜಸವಾಗಿ ಗಝಲ್ ಗೆ ಒಪ್ಪಿ ಬಂದಿದೆ.

  3. ಸುಂದರ, ಸೊಗಸಾದ ಗಜಲ್. ತುಂಬಾ ದಿನಗಳ ನಂತರ ಉಣಿಸಿದ ಗಜಲ್ ಕವನ.

Leave a Reply

You cannot copy content of this page

Scroll to Top