ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಮ್ಮನಿಗೊಂದು ಗಜಲ್

ಸುಜಾತಾ ರವೀಶ್

ಅಣುರೂಪದಲಿಂದ ಅಸುವ ತುಂಬಿ ಪೊರೆದ ಚೈತನ್ಯಧಾಯಿ ಅಮ್ಮ 
ಭ್ರೂಣವಾದಾಗಿನಿಂದ ಕಸುವ ನೀಡಿ ಸಾಕಿದ ಜೀವನಧಾಯಿ ಅಮ್ಮ

ನವಮಾಸಗಳು ಒಡಲಲ್ಲಿ ಕಂದನ ಭಾರ ಹೊತ್ತು ಸಲಹಿದೆಯಲ್ಲಮ್ಮ 
ತನ್ನ ಜೀವವನೆ ಒತ್ತೆಯಿಟ್ಟು ಭುವಿಗೆ ತಂದ ಮಮತಾಮಯಿ ಅಮ್ಮ

ಅಮೃತಸದೃಶ ಎದೆ ಹಾಲೂಡಿಸಿ ಶಕ್ತಿ ತುಂಬಿಸಿದೆಯಲ್ಲಮ್ಮ 
ಅನೃತವಾಡದೆ ಬದುಕು ನಡೆಸ ಕಲಿಸಿದ ವಾತ್ಸಲ್ಯಮಯಿ ಅಮ್ಮ 

ಕೆಟ್ಟ ಮಕ್ಕಳಿರಬಹುದು ಎಂದೂ  ಕುಮಾತೆಯರು ಲೋಕದಲ್ಲುಂಟೇನಮ್ಮ? 
ಸಿಟ್ಟು ಮಾಡಿಕೊಳ್ಳದೇ ಯಶಸ್ಸಿನ ದಾರಿ ತೋರಿದ ಸಹನಾಮಯಿ ಅಮ್ಮ  

ವಿಜಯ ಪಥದಿ ಸಾಧನೆಯ ಕಾಣಲು ದಾರಿದೀಪ ನೀನೇನಮ್ಮ 
ಸುಜಿಯ ರಥದ ಸಾರಥಿಯಾಗಿ ಸದಾ ಮುಂದಿರುವ ಆದರ್ಶಮಯಿ ಅಮ್ಮ 

*********************************

About The Author

2 thoughts on “ಅಮ್ಮನಿಗೊಂದು ಗಜಲ್”

  1. ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಅನಂತ ಧನ್ಯವಾದಗಳು

    ಸುಜಾತಾ ರವೀಶ್

  2. R..ಸಾವಿತ್ರಿ

    ಸೂಪರ್ ಅರ್ಥಪೂರ್ಣ ಅಮ್ಮನ ಸಾರ್ಥಕತೆ ಸಾರುವ ಘಜಲ್ ತುಂಬಾ ಚೆನ್ನಾಗಿದೆ ಮಾಮ್❤ತಾಯಿ ತಾಯಂದಿರದಿನದ ಶುಭಾಶಯಗಳು ❤

    @R.ಸಾವಿತ್ರಿ ಕೋಲಾರ ✍️

Leave a Reply

You cannot copy content of this page

Scroll to Top