ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮತ್ತೆ ಹುಟ್ಟಿ ಬಾ ಬುದ್ದ

ಕವಿತೆ ಮತ್ತೆ ಹುಟ್ಟಿ ಬಾ ಬುದ್ದ ಅಭಿಜ್ಞಾ ಪಿ ಎಮ್ ಗೌಡ ಅಜ್ಞಾನವೆಂಬ ಕಗ್ಗತ್ತಲ ನಾಡಲಿಬರೀ ಬೆತ್ತಲೆಯಬೇತಾಳಗಳದ್ದೆ ಸದ್ದುಗದ್ದಲ….ಸ್ವಾರ್ಥವೆಂಬ ಪೈಶಾಚಿಕ ಜಗದೊಳಗೆಭ್ರಷ್ಟತೆಯ ತಿಮಿಂಗಲಗಳೆಒದ್ದಾಡುತಿವೆ ಆಸೆಯೆಂಬಐಭೊಗದ ಲಾಲಸೆಯೊಂದಿಗೆಝಣಝಣ ಕಾಂಚಾಣದವೇಷತೊಟ್ಟು.!ನಿನ್ನಾದರ್ಶಕೆವಿರುದ್ಧ ಪಣತೊಟ್ಟು ನಿಂತಿಹ ನಾಡಿಗೆಮತ್ತೆ ಹುಟ್ಟಿ ಬರುವೆಯಾ ಬುದ್ಧ.?….. ನೀ ಹೇಳಿದೆ ಬುದ್ಧ ಗುರುವೆಂದರೆಬರಿ ವ್ಯಕ್ತಿಯಲ್ಲ ಶಕ್ತಿಯೆಂದು.!ಇಂದು ಆ ವ್ಯಕ್ತಿಗೆಬೆಲೆಯು ಇಲ್ಲ ನೆಲೆಯು ಇಲ್ಲ.!ಮುಂದೆ ಗುರಿಯೂ ಇಲ್ಲಗುರುವಿನಾಶೀರ್ವಾದವೂ ಇಲ್ಲದೆಸಾಗುತಿಹ ಹಿಂಡು ಅಹಂನಮದವೇರಿದ ಸಲಗಗಳಂತಾಗಿದೆ.!ಅತಿಯಾಸೆಯ ಫಲಶೃತಿಧರಣಿಯೊಡಲ ಗರ್ಭಸೀಳಿಅಜ್ಞಾನದ ಅಮಲಲಿಸದಾ ತೂಕಡಿಸುತಿಹ ನಾಡಿಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.!… ನಿನ್ನೆಯ ಆದರ್ಶಗಳು ಸಂದೇಶಗಳುಭಾಷಣಕಾರನ ಭಾಷಣದಸ್ವಾರಸ್ಯಕತೆಗಷ್ಟೆ ಬುದ್ಧ.!ಜನರ ಮನಸೆಳೆವ ತಂತ್ರಗಾರಿಕೆಯಸೂತ್ರದಾರನ ಮಂತ್ರವಿದು ಗೊತ್ತ.!ಧೂಳಿಪಟ ಮಾಡುತಿಹನುಪ್ರಕೃತಿಯೊಡಲ ಸಂಪತ್ತಾ….ಇದ ನೋಡಲು ಬರುವೆಯಾ ಬುದ್ಧ..ಬುದ್ಧಿಯಿದ್ದು ಅವಿವೇಕಿಯಂತೆವರ್ತಿಸೊ ಜಗದೊಳಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.?… ಸತ್ಯ ಅಹಿಂಸೆಗಳನ್ನೆ ಕಾಲ್ಕಸ ಮಾಡಿಸುಳ್ಳಿನ ಸುಪ್ಪತ್ತಿಗೆಯಲಿರಾಜರೋಷವಾಗಿ ಮೆರೆಯುತಿಹನು…ಸದ್ಗುಣ ಸನ್ಮಾರ್ಗ ಸನ್ನಡತೆಗಳಪಥವ ಬದಲಿಸಿ ಗುರುವಿಗೆ ತಿರುಮಂತ್ರಹಾಕಿ ಬೀಗುತಿಹ ಮನುಜ.!ಏಷ್ಯಾದ ಬೆಳಕಾಗಿದ್ದ ನೀನು ,ಬುದ್ಧಅಗೋ.! ನೋಡುಈ ಕಗ್ಗತ್ತಲ ಕೋಟೆಯೆಂಬ ಜಗದೊಳಗೆಉಸಿರುಗಟ್ಟಿಸೊ ವಾತಾವರಣದಲಿಭ್ರಷ್ಟತೆಯ ಮಹಲುಗಳದ್ದೆ ಕಾರುಬಾರುತುಂಬಿಕೊಂಡಿರುವ ನಾಡಿಗೆನೀ ಮತ್ತೆ ಹುಟ್ಟಿ ಬರುವೆಯಾ ಬುದ್ಧ.?… ಅಜ್ಞಾನ ಅನೀತಿಗಳ ಆಗರದಲಿಧರೆಯೊಡಲು ಧಗಧಗಿಸಿ ಉರಿದುವಹ್ನಿ ಜ್ವಾಲೆಯ ಕೆನ್ನಾಲಿಗೆಗೆಬಲಿಯಾಗುತಿಹ ನಾಡಿಗೆಮತ್ತೆ ಬರುವೆಯಾ.? ಬುದ್ಧ.!ಇಗೋ ನೋಡು.! ಮಾನವೀಯತೆಯದುಂದುಭಿಯ ಸದ್ದಡಗಿಸಿಕ್ರೌರ್ಯತೆ ಪರ್ವ ವಿಜೃಂಭಿಸಿವೆ.!ನಿನ್ನಾದರ್ಶಗಳನ್ನೆ ಮರೆತುತನಗರಿವಿದ್ದು ಅವನಿ ಅಳಿವಿನಂಚಿನಲಿಅವನೇ ಅಂತ್ಯವಾಗುತಿಹ ಜಗಕೆಮತ್ತೆ ಹುಟ್ಟಿ ಬರುವೆಯಾ.? ಬುದ್ಧ… ****************

ಮತ್ತೆ ಹುಟ್ಟಿ ಬಾ ಬುದ್ದ Read Post »

ಇತರೆ

ಶಾಹು ಮಹಾರಾಜ್ ಎಂಬ ಜೀವಪರ ರಾಜ

ಲೇಖನ ಶಾಹು ಮಹಾರಾಜ್ ಎಂಬ ಜೀವಪರ ರಾಜ ಆಶಾ. ಎಸ್ ಶಾಹು ಮಹಾರಾಜರು ಹುಟ್ಟಿದ್ದು 1874 ಜುಲೈ 26ರಂದು. ತಂದೆ ಜಯಸಿಂಗರಾವ್ ಅಪ್ಪಾಸಾಹೇಬ್ ಘಾಟ್ಗೆ, ತಾಯಿ ರಾಧಾಬಾಯಿ. ಹಾಗೆ ಶಾಹು ಮಹಾರಾಜರ ಮೂಲ ಹೆಸರು ಯಶವಂತ್‌ರಾವ್ ಘಾಟ್ಗೆ. ಮಹಾರಾಜ ಶಾಹುರವರ ಪೂರ್ವಿಕರು ಮೂಲತಃ ಛತ್ರಪತಿ ಶಿವಾಜಿಯ ವಂಶಸ್ಥರು. ಆ ಕಾರಣಕ್ಕಾಗಿ ಶಿವಾಜಿಯವರ ಗೌರವ ಪದವಿಯಾದ ‘ಛತ್ರಪತಿ’ ಬಿರುದು ಮಹಾರಾಜ ಶಾಹುರವರಿಗೆ ಸ್ವಾಭಾವಿಕವಾಗಿ ಸಂದಿತು. ಛತ್ರಪತಿ ಶಾಹು ಮಹಾರಾಜ್ ಹುಟ್ಟಿದ ಊರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್‍. ಸಾಕುತಾಯಿ ಆನಂದಿಬಾಯಿ. ತಾತ ಕಾಗಲ್ ಗ್ರಾಮದ ಪ್ರಸಿದ್ದ ವ್ಯಕ್ತಿ ಯಶವಂತರಾವ್ ಘಾಟ್ಗೆ. ಪತ್ನಿ ಲಕ್ಷೀಬಾಯಿ. ಮಕ್ಕಳು ರಾಧಾಬಾಯಿ, ೩ನೇ ರಾಜಾರಾಮ್, ಶ್ರೀಮಾನ್ ಮಹಾರಾಜಕುಮಾರ್ ಶಿವಾಜಿ ಮತ್ತು ರಾಜಕುಮಾರಿ ಅವುಬಾಯಿ. ಇವರು ವಿದ್ಯಾಭ್ಯಾಸವನ್ನು ರಾಜಕೋಟೆಯ ರಾಜಕುಮಾರ್ ಕಾಲೇಜಿನಲ್ಲಿ ಮಾಡಿದರು. ಇವರು ಮೂಲತಃ ಕುಣುಬಿ(ಕುರುಬ) ಸಮುಧಾಯಕ್ಕೆ ಸೇರಿದವರಾಗಿರುತ್ತಾರೆ. ಕೊಲ್ಲಪುರದ ಮಹಾರಾಣಿ ಆನಂಧಿಬಾಯಿರವರು ಮಾರ್ಚ್ 11, 1884ರಂದು ಶಾಹುರವರನ್ನು ದತ್ತು ಸ್ವೀಕಾರ ಮಾಡಿಕೊಳ್ಳುತ್ತಾರೆ. ಮಹಾರಾಜರ ಮೀಸಲಾತಿಯ ವಿಚಾರವನ್ನು ಬಹುತೇಕ ಬ್ರಾಹ್ಮಣರು ವಿರೋಧ ಮಾಡುತ್ತಿರುತ್ತಾರೆ, ಬೇಸೆತ್ತ ಕೆಲವು ಗೂಂಡಗಳಿಂದ ಮಹಾರಾಜರನ್ನು ಕೊಲೆ ಮಾಡುವ ಪ್ರಯತ್ನವು ನಡೆಯುತ್ತದೆ. ಶಾಹುರವರಿದ್ದ ರೈಲಿಗೆ ಬಾಂಬನ್ನು ಸಹ ಇಡಲಾಗುತ್ತದೆ ಆದರೆ ಆ ಕೊಲೆಯ ಪ್ರಯತ್ನವು ವಿಫಲವಾಗಿಬಿಡುತ್ತದೆ.  ಒಮ್ಮೆ ಮಹಾರಾಜರು ಅರಮನೆಯ ಆವರಣದಲ್ಲಿ ಗಾಳಿ ಸಂಚಾರ (walking) ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಗಣಪತಿರಾವ್ ಎಂಬ ಬ್ರಾಹ್ಮಣ ವಕೀಲ ಶಾಹುರವರನ್ನು ಕಾಣಲು ಬರುತ್ತಾರೆ ಮೀಸಲಾತಿಯ ಬಗ್ಗೆ ಚರ್ಚೆ ಮಾಡುತ್ತಾ ಅರ್ಹತೆಯಿಲ್ಲದವರಿಗೆಲ್ಲಾ ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಹಾಗೂ ಎಲ್ಲಾ ರಂಗಗಳಲ್ಲೂ ನೀವು ಮೀಸಲಾತಿ ಕೊಟ್ಟರೆ ಪ್ರತಿಭೆಗೆ ದಕ್ಕೆಯುಂಟಾಗುವುದಿಲ್ಲವೇ? ಎಂದು ಮಹಾರಾಜರನ್ನು ಪ್ರಶ್ನಿಸುತ್ತಾನೆ. ಆಗ ಶಾಹು ಮಹಾರಾಜರು ಓ ನಿಮಗೆ ಆ ರೀತಿ ಅರ್ಥವಾಗಿದೆಯೇ ಬನ್ನಿ ನನ್ನ ಜೊತೆ ಎಂದು ಆ ವಕೀಲನನ್ನು ಕರೆದುಕೊಂಡು ಸಂಚಾರ ಮಾಡುತ್ತಾ ಮಾಡುತ್ತಾ ಅರಮನೆಯ ಆವರಣದಲ್ಲಿ ಕುದುರೆಗಳನ್ನು ಕಟ್ಟಿರುವ ಜಾಗಕ್ಕೆ ತಲುಪುತ್ತಾರೆ ಅಲ್ಲಿ ಕುದುರೆಗಳನ್ನು ಗುಂಪು ಗುಂಪುಗಳಾಗಿ ಮಾಡಿ ಮೇವನ್ನು ಹಾಕಲಾಗಿರುತ್ತದೆ. ಇದನ್ನು ಗಮನಿಸಿದ ಮಹಾರಾಜರು ಯಾರಲ್ಲಿ ಈ ಕುದುರೆಗಳನ್ನು ಕಟ್ಟಿದವರು ಎಂದಾಗ ಸ್ಥಳದಲ್ಲೇ ಇದ್ದ ಕುದುರೆಗಳನ್ನು ನೋಡಿಕೊಳ್ಳುವವನು ನಾನೇ ಪ್ರಭು ಎನ್ನುತ್ತಾನೆ. ಆಗ ಮಹಾರಾಜರು ಅವನನ್ನು “ಏನಯ್ಯ ನಿನಗೆ ಬುದ್ಧಿ ಇದೆಯಾ? ಕುದುರೆಗಳನ್ನು ಏಕೆ ಈ ರೀತಿ ಗುಂಪುಗುಂಪುಗಳನ್ನಾಗಿ ವಿಂಗಡನೆ ಮಾಡಿ ಬೇರೆ ಬೇರೆ ಕಡೆ ಮೇವನ್ನಕಿದ್ದೀಯಾ? ಎಲ್ಲಾ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬಹುದಾ ಗಿತ್ತಲ್ಲವೇ? ಎಂದು ಪ್ರಶ್ನಿಸಿ ಜೊತೆಯಲ್ಲಿದ್ದ ವಕೀಲನನ್ನು ಕೇಳುತ್ತಾರೆ ಗಣಪತಿರಾವ್ ರವರೇ ನಾನು ಕೇಳಿದ್ದು ಸರಿ ತಾನೆ? ಎಂದಾಗ ಆ ವಕೀಲ ಹೌದು ಮಹಾರಾಜರೇ ನೀವು ಕೇಳಿದ್ದು ಸರಿಯಾಗಿದೆ. ಅವನು ಆ ಕುದುರೆಗಳನ್ನು ಒಂದೇ ಕಡೆ ಬಿಟ್ಟು ಮೇವನ್ನಾಕಬೇಕಿತ್ತು ಎನ್ನುತ್ತಾನೆ. ಆಗ ಸೇವಕನು ಮಹಾರಾಜರ ಪ್ರಶ್ನೆಗಳನ್ನು ಉದ್ದೇಶಿಸಿ “ಮಹಾರಾಜರೇ ಈ ಕುದುರೆಗಳಲ್ಲಿ ಕೆಲವು ವಯಸ್ಸಾಗಿರುವ ಕುದುರೆಗಳಿವೆ, ಗಾಯಗಳಾಗಿ ಪೆಟ್ಟು ಮಾಡಿ ಕೊಂಡಿರುವ ಕುದುರೆಗಳಿವೆ, ಸಣ್ಣ ಪ್ರಾಯದ ಕುದುರೆಗಳಿವೆ ಹಾಗೂ ದಷ್ಟಪುಷ್ಟವಾದ ಬಲಿಷ್ಟವಾಗಿರುವ ಕುದುರೆಗಳಿವೆ ಈ ಎಲ್ಲಾ ಕುದುರೆಗಳನ್ನು ಒಂದೇ ಕಡೆ ಸೇರಿಸಿ ಮೇವನ್ನಾಕಿದರೆ ಯಾವ ಕುದುರೆಗಳಿಗೆ ಹೆಚ್ಚು ಶಕ್ತಿ ಇದೆಯೋ ಅಂದರೆ ದಷ್ಟಪುಷ್ಟವಾದ ಕುದುರೆಗಳು ಮೇವೆಲ್ಲಾ ತಿಂದು ಬಿಡುತ್ತವೆ. ಆಗ ವಯಸ್ಸಾದ ಕುದುರೆಗಳಿಗೆ, ಗಾಯಗಳಾಗಿರುವ ಕುದುರೆಗಳಿಗೆ, ಸಣ್ಣ ಪ್ರಾಯದ ಕುದುರೆಗಳಿಗೆ ಮೇವು ಸಿಗದೇ ದುರ್ಬಲವಾಗಿ ಹಸಿವಿನಿಂದಲೇ ಸತ್ತು ಹೋಗುತ್ತವೆ. ಆದ್ದರಿಂದ ವಯಸ್ಸಾದ ಕುದುರೆಗಳಿಗೆ ಒಂದು ಕಡೆ, ಸಣ್ಣ ಪ್ರಾಯದ ಕುದುರೆಗಳಿಗೆ ಒಂದು ಕಡೆ, ಗಾಯಗೊಂಡಿರುವ ಕುದುರೆಗಳಿಗೆ ಒಂದು ಕಡೆ, ಬಲಿಷ್ಟ ಕುದುರೆಗಳಿಗೊಂದು ಕಡೆ ಮೇವನ್ನಾಕಿದ್ದೇನೆ ಆಗ ಎಲ್ಲಾ ಕುದುರೆಗಳಿಗೂ ಮೇವು ಸಿಗುತ್ತದೆ” ಎಂದು ಉತ್ತರಿಸುತ್ತಾನೆ. ಆಗ ಆ ಬ್ರಾಹ್ಮಣ ವಕೀಲನಿಗೆ ಮೀಸಲಾತಿಯ ಬಗ್ಗೆ ಅರ್ಥವಾಗಿ “ಮಹಾರಾಜರೇ ದಯವಿಟ್ಟು ಕ್ಷಮಿಸಿ ಈಗ ನಿಮ್ಮ ಮೀಸಲಾತಿಯ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಯಿತೆಂದು” ಅಲ್ಲಿಂದ ಹೊರಟುಹೋಗುತ್ತಾನೆ. ********************

ಶಾಹು ಮಹಾರಾಜ್ ಎಂಬ ಜೀವಪರ ರಾಜ Read Post »

ಕಾವ್ಯಯಾನ

ಮಹಾಪಯಣಿಗ

ಕವಿತೆ ಮಹಾಪಯಣಿಗ ಡಾ. ಗುರುಸಿದ್ಧಯ್ಯಾ ಸ್ವಾಮಿ ಚೀನಾದ ಮೆನ್-ಪಾಪ್-ಕು ಹಳ್ಳಿಯ ಕುವರಯುವನಾಗೆ ಬೌದ್ಧನಾದ ಯುವಾನ್ ಚಾಂಗ್ಭಾರತದ ಬುದ್ಧ ನಿಧಿ ಕೈ ಮಾಡಿ ಕರೆಯಲುಬುದ್ಧ ನಾಡಿನತ್ತ ಅಡಿ ಇಟ್ಟ ಮಹಾಪಯಣಿಗ ಊಹಿಸಲಾಗಿದ ಕಷ್ಟಗಳ ಬೆನ್ನೇರಿ ಹೊರಟಕುದುರೆ ಒಂಟೆ ಹೇಸರಗತ್ತೆಗಳನೇರಿ ನಡೆದಕಾಲ್ನಡಿಗೆಯಲ್ಲೂ ದಾಟಿ ಮುನ್ನಡೆದ ಧೀರ ಮರುಭೂಮಿ ಹಿಮ ಪರ್ವತ ಗಿರಿಕಂದರಗಳ ಹರ್ಷ ತುಂಬಿತವನಿಗೆ ಹರ್ಷವರ್ಧನನ ಭೆಟ್ಟಿಸಂದರ್ಶಿಸಿದ ಹತ್ತು ಹಲವು ಬೌದ್ಧ ಪೀಠಗಳಓದಲು ಕಲಿತ ಸಂಸ್ಕೃತ ಪಾಲಿ ಭಾಷೆಗಳಸಂಗ್ರಹಿಸಿದ ಅನುವಾದಿಸಿದ ಹಸ್ತಪ್ರತಿಗಳ ಕಪಿಲವಸ್ತು ಪಾಟಲಿಪುತ್ರ ನಾಲಂದಾಗಳಿಗೆಭೆಟ್ಟಿ ಇತ್ತ ನಾಗಾರ್ಜುನ ಕೊಂಡಾದಿಗಳಿಗೆಕಾಂಚಿ ಪುನ್ನಾಟ ಬನವಾಸಿ ನಾಸಿಕಗಳ ಸುತ್ತಿದಮಹಾಬೌದ್ಧ ಸಮ್ಮೇಳನದಿ ಮನ್ನಣೆ ಪಡೆದ ತೆಂಕಣ ಪಡುವಣ ಭರತ ಭೂಮಿಯ ಸುತ್ತಿಕನ್ನಡಿ ಹಿಡಿದ ಕನ್ನಡಿಗರ ಸತ್ಯಸಂಧ ಸನ್ನಡೆತೆಗೆಗೌರವಿಸಿದರು ಅಸ್ಸಾಂ ಕಾಶ್ಮೀರಾದಿ ಅರಸರುತುಂಬ ಕ್ಲೇಶದಿಂದ ಬೀಳ್ಕೊಟ್ಟ ಹರ್ಷವರ್ಧನ ಮರಳಿದ ಬುದ್ಧನಾಡ ಮಹಾಪಯಣಿಗನಿಗೆಅದ್ದೂರಿ ಸ್ವಾಗತ ದೊರಕಿತು ಚಕ್ರವರ್ತಿಯಿಂದಅನುವಾದ ಮುಂದುವರಿಸಿದ ಚೈತ್ಯ ಕಟ್ಟಿಸಿದರಾಜಕುವರ ಮಂತ್ರಿಗಳೂ ಆತುರ ಪ್ರವಚನಕೆ ಅರಮನೆ ದೊರೆಯಿತು ಪ್ರವಾಸ ಕಥೆ ಅರಳಿತುಎಪ್ಪತ್ತೈದನೆಯ ಹೊತ್ತಿಗೆ ಹೊಸ್ತಿಲೊಳಗಿತ್ತುಹಲವು ಕಗ್ಗಂಟುಗಳನು ನಿಘಂಟು ಬಿಡಿಸಿತ್ತುದಣಿದ ದೇಹ ಮಹಾಪರಿನಿರ್ವಾಣ ಬೇಡಿತ್ತು ಬೌದ್ಧ ಭಿಕ್ಕುಗಳಿಗೆ ಬುದ್ಧನಾಡ ಸುತ್ತಿ ಎಂದಹೊಸ ಬೌದ್ಧ ತತ್ವ ಶಾಸ್ತ್ರ ಹೊಸೆದು ನಿಂದನಿರ್ವಾಣಗೈದ ಚೀನಾದ ನವ ಗೋಪುರವಾದಬುದ್ಧನಾಡು ತಾಯ್ನಾಡಿಗೆ ರಸಸೇತುವೆಯಾದ ************

ಮಹಾಪಯಣಿಗ Read Post »

ಅಂಕಣ ಸಂಗಾತಿ, ದೀಪದ ನುಡಿ

ಮೌಲ್ಯಗಳ ಕಡೆಗಾಣಿಸುವ ಮನಸಿಗೆ ಸರಿ- ತಪ್ಪುಗಳ ವಿವೇಚನೆ ಇರುವುದಿಲ್ಲ.ಸರಿ — ತಪ್ಪುಗಳ ವಿವೇಚನೆಯಿಲ್ಲದ ಬದುಕು ತಾನೂ ಬೆಳಗದು ಇತರರ ಬದುಕನ್ನೂ ಬೆಳಗಿಸದು.

Read Post »

You cannot copy content of this page

Scroll to Top