ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರತ್ನರಾಯಮಲ್ಲ

Virus, Microscope, Infection, Illness

ಕಾಳಸಂತೆಯಲಿ ಹಾಸಿಗೆಗಳು ಕೊಳೆಯುತ್ತಿವೆ
ಜೀವದ ಬಡತಿಗಾಗಿ ಆಸ್ಪತ್ರೆಗಳು ಹವಣಿಸುತ್ತಿವೆ

ಜನನದಲ್ಲಿ ಮರಣವೂ ಇದೆ ಅಂಜುವವರಾರು
ಸಾವಿನಲ್ಲೂ ರಾಜಕೀಯ ಪಕ್ಷಗಳು ಚಿಗುರುತ್ತಿವೆ

ಪಾಪ-ಪುಣ್ಯ ಬಾಲ್ಯದಿಂದಲೂ ಅನುರಣಿಸುತಿದೆ
ಮಸಣಗಳೂ ಇಂದು ಧನವನ್ನು ಬೆಳೆಯುತ್ತಿವೆ

ಆತ್ಮವಿಶ್ವಾಸದ ಫಸಲಿಗೆ ಪರಂಪರೆಯೇ ಇದೆ ಇಲ್ಲಿ
ಮಾಧ್ಯಮಗಳೇ ಭಯ ಬಿತ್ತಿ ದುಡ್ಡು ದೋಚುತ್ತಿವೆ

ಮರಣಕ್ಕೆ ಚುಂಬಿಸಲು ಭಯ ಪಡದಿರು ‘ಮಲ್ಲಿ’
ಹಣದ ಹಾದರವು ಹೆಣಗಳನ್ನು ಉರುಳಿಸುತ್ತಿವೆ

****************

About The Author

Leave a Reply

You cannot copy content of this page

Scroll to Top