ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಕಾಯಕ ವೀರ ಕಾರ್ಮಿಕ

ಚೈತ್ರಾ ತಿಪ್ಪೇಸ್ವಾಮಿ

People who build our cities: The plight of construction workers in India |  Swaniti Initiative

ಕಾಯಕಯೋಗಿ ಕಾರ್ಮಿಕ ಶ್ರೇಷ್ಠ
ಕಾರ್ಖಾನೆಯೇ ಅವನ ಕರ್ಮಸ್ಥಾನ
ದುಡಿಮೆಯ ಧರ್ಮವೇ ಜೀವಾಳ

ಕಾರ್ಮಿಕ ಶ್ರಮದಿಂದ ದೇಶಕ್ಕೆ ಸರಕು
ಪಾಳಿಯ ಮೇಲೆ ಕೆಲಸವ ಮಾಡಿ
ಲಾಭದ ಪ್ರಗತಿಗೆ ಕಾರಣವಾದ

ಬೆವರು ಸುರಿಸಿ ದುಡಿವ ಶ್ರಮಿಕ
ಯಂತ್ರಗಳೊಂದಿಗೆ ಕಾರ್ಯನಿರತ
ಅರೆಕ್ಷಣ ತೊರೆಮನ ಕಾದಿದೆ ದುರಂತ

ಕಾಯ ಸೋತರು ದೇಹ ದಣಿದರೂ
ಕಾಯಕಕ್ಕೆ ಸಮಾನವಾದ ವೇತನ ಸಿಗುತ್ತಿಲ್ಲ
ಹಗಲಿರುಳು ದುಡಿದರೂ ಕೆಲಸಕ್ಕೆ ರಕ್ಷಣೆ ಇಲ್ಲ

ನೊಂದ ಮನಕೆ ಬೇಕಿದೆ ಸಾಂತ್ವನ
ಕಾಯಕಲ್ಪ ನೀಡಬೇಕಿದೆ ಸರ್ಕಾರ
ಕಾನೂನು ಕೊಡಬೇಕಿದೆ
ಸಬಲತೆಯ

ಮಾಲೀಕನ ಪ್ರೀತಿ ಕಾರ್ಮಿಕರಿಗೆ ಇರಲಿ
ಕಾರ್ಮಿಕರ ಜೀವಕ್ಕೆ ಭದ್ರತೆ ಇರಲಿ
ಕಾರ್ಮಿಕರ ಕಲ್ಯಾಣವೇ ದೇಶಕ್ಕೆ ಹಿತವಾಗಲಿ

********************

About The Author

Leave a Reply

You cannot copy content of this page

Scroll to Top