ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನನ್ನಜ್ಜ…..

ಕವಿತೆ ನನ್ನಜ್ಜ….. ಕೋಟಿಗಾನಹಳ್ಳಿ ರಾಮಯ್ಯ ಇರಬೇಕು ಇದ್ದಿರಲೇಬೇಕುಅಜ್ಜನೊಬ್ಬ ನನಗೆನಿತ್ಯ ಮುದ್ದೆ ಗೊಜ್ಜಿಗೆನೋಡಿದವನಲ್ಲ , ಆಡಿದವನಲ್ಲ , ಕಾಡಿದವನಲ್ಲರೂಪ-ಘನರಹಿತ ಮಳೆ ಕಾಡಿನ ಶಬ್ದ ಮಾತ್ರಮಳೆ ಮಾತ್ರ ,ಜಡಿಮಳೆ ಮಾತ್ರಸುರಿಮಳೆ ಮಾತ್ರಸುರಿತುತ್ತಲೇ ಇದೆ ಸಥದಕ್ಕದಲ್ಲ ದಣಿದು ದಾವಾರಿದಕಿರು ನಾಲಗೆಗೆ ಕಿರು ತುಂತುರ ಹನಿನಡೆದೇ ಇದೆ ಥಕ ಥೈಯ್ಯಿ ದೇವಿ ಭಾಗವತಕೇಳಿಯೂ ಕೇಳದಂತೆನೋಡಿಯೂ ನೋಡದಂತೆಹಗಲೆನ್ನದೆ ಇರುಳೆನ್ನದೆ ನಡದೇ ಇದೆ ಚಂಡಮದ್ದಳೆನಡೆದಿದ್ದಾನೆ ನನ್ನಜ್ಜ ನನ್ನ ಕುರುಹ ಕಂಡವನಂತೆ ಗತಅರಬ್ಬಿನ ಮರಳುಗಾಡಲಿಒಂಟೆ ಕೊರಳ ಗಂಟೆ ಕಿಂಕಿಣಿಯಲಿಗೊತ್ತಿದ್ದೂ ನಾನು ಇಲ್ಲಿರುವೆ ಎಂದುಕೈಗೆ ಸಿಗದಂತೆ ಹೊನ್ನೇರಿನಲಿಬಂದಿದೆ ಬಿತ್ತನೆ ಹತ್ತಿರನೊಗ ಹೇರಿಸಿಲ್ಲ ಇನ್ನೂ ಹೆಗಲಿಗೆಉತ್ತು ಬಿತ್ತುವ ಮಾತು ಅತ್ತಗೆದತ್ತೂರಿ , ಗರಿಕೆ , ತುಂಗೆ ಒತ್ತಗೆ ಒತ್ತೊತ್ತಗೆತುಂಬಿ ಹೋಗಿದೆ ನೆತ್ತಿ ನೊಣ ಸೊಕ್ಕಿಗೆಡ್ಡೆ ರಸ ಬೊಡ್ಡೆಅರಸೊತ್ತಿಗೆಯ ಉನ್ಮತ್ತ ಹಕ್ಕಿನಲಿಪಾದುಕಾ ಪಟ್ಟಾಭಿಷೇಕದ ಅಣಕು ಪ್ರಹಸನದಲಿಅಜ್ಜ ಬಂದಾಗ ಬೀಜ ಬಿತ್ತುವ ಹೊತ್ತುಹದಗೊಂಡಿಬೇಡವೇನು ನೆಲ ಉತ್ತುನನ್ನಜ್ಜ ನೇಗಿಲಯೋಗಿಕಣ್ಣೂರ ಕಪ್ಪು ಕುಂಕುಮ ಭೂಮಿಯಲಿಶಬ್ದ , ಅಕ್ಷರ , ಧ್ವನಿ ರೂಪಬಿತ್ತುವ ಕೂರಿಗೆಯ ರಾಗ ಪರಾಗಬಿತ್ತಲೇ ಬೇಕಲ್ಲ ಅಜ್ಜ ಬಂದಾಗಹಿಡಿದ ಕೈಕೂರಿಗೆಗೆ ಒಂದೆರೆಡಾದರೂ ಘಟ್ಟಿ ಕಾಳುಅರಳಿ ಹೂವ್ವಾಗುವಂತೆ ಹುಚ್ಚೆಳ್ಳ ಹೂ ಬಾಳುನನ್ನಜ್ಜ ಹೂಗಾರಮಕರಂದ ಮಮಕಾರರಸಸಿದ್ದ ಮಾಯಕಾರಗಂಧ ಹೂವ್ವಿನದಿರಲಿನರನರವ ಕುಸುಮದ ಒಡಲೇ ಇರಲಿತೀಡಿ ತಂಗಾಳಿ , ನಾದು ಬಿರುಗಾಳಿಪಕಳೆ ಹೂ ಕಾಡ್ಗಿಚ್ಚನಬ್ಬಿಸಿ ಉರುಳಿಸಿ ಹೊರಳಿಸಿಘಮಲು ಘಮಲಿನ ಹೂ ದವನ ಬೆಳೆವ ಮಾಲಿಕನಸಿನ್ಹೂದೋಟಗಳ ಕೂಲಿಆದಿಯಿಂದಲೇ ಹೊತ್ತಿದ್ದಾನೆ ಚಟ್ಟಪಟ್ಟಆಳರಸರ ಪಲ್ಲಕಿ ಮೇನೆ , ಸತ್ತ ನಾಯಿ , ಸಗಣಿ,ಬಂಗಾರದ ಗಣಿನನ್ನಜ್ಜ ಮಾಲಿಗೂ ಮೊದಲು ಝಾಡಮಾಲಿಗುಡಿಸಿ ಕಲ್ಯಾಣದ ಓಣಿಗಳನುಆವಂತಿ , ಅಮರಾವತಿ , ಹಸ್ತಿನಾವತಿ , ರಾಜಬೀದಿಗಳನು….ಮುಗಿದ ದಾಸೋಹದ ಎಂಜಲೆಲೆ ರಾಶಿಅಗಳು , ತೇಗು , ಹೂಸು ಉಚ್ಚೆ ಬಚ್ಚಲ ಬಾಚಿಸತ್ತೆಮ್ಮೆ ಕರ ಹೊತ್ತು ನಡೆದವನು….ಕೂದು ಗುಡ್ಡೆ ಬಾಡು ಪಾಲ್ಹಾಕಿ ಈಚಲ ಹೆಂಡಕೆ ಸುಟ್ಟು ಕೊರಬಾಡಾಗಿ ನೆಂಜಿಕೊಂಡವನು.ನನ್ನಜ್ಜ ಕಟುಕ.ಕಡಿಯುತ್ತಾನೆ , ಕತ್ತರಿಸುತ್ತಾನೆ , ನರ ಹರಿಯುತ್ತಾನೆಹಿಡಿದ ಕಟುಗತ್ತಿ ಗುಲಾಬಿ ಗುತ್ತಿಕುಸುಮ ಕೋಮಲ ಖಡ್ಗದಲಗುನನ್ನಜ್ಜ ಕಡಿಯುತ್ತಾನಾದ್ದರಿಂದ ಕಟುಕ.ನನ್ನಜ್ಜ ಮೂಳೆ , ಮಾಂಸದ ತಜ್ಞ….ಗೋವಿನದೂ ಸೇರಿದಂತೆಕೋಣನದಂತೂ ಹೆಂಡ ಕುಡಿದಷ್ಟೇ ಸಲೀಸು .ಅಜ್ಜ ಕಂಡಿಲ್ಲ ಇನ್ನೂ…ನಡೆದ ಹೆಜ್ಜೆ ಗುರುತುಹಚ್ಚೆಯಾಗಿದೆ ಹೆಗ್ಗಲ್ಲ ಬೆನ್ನಮೂಳೆಯಲಿ…ನೀಲ ನಕ್ಷೆಯಾಗಿದೆ ಆಕಾಶ – ಬ್ರಹ್ಮಾಂಡ ಲೀಲೆಯಲಿನನ್ನಜ್ಜಬುದ್ದ , ಮಹಮದಸಿದ್ದ ರಸಸಿದ್ದಏಸುವಿನ ಮೊಳೆ ಗುರುತುಇನ್ನೂ ಅಂಗೈಯಲ್ಲಿ ಮಾಯದೆ ಹಸಿ ಹಸಿಇರಾಕಿನ ಮರಳ ಹಾದಿಗಳು ಹಾಸಿವೆಅವನ ಪಾದಗಳಡಿಗೋ ಪಾದವಾದರೂ ಅಷ್ಟೇ ಹುಲಿ ಪಾದವಾದರೂ ಅಷ್ಟೇಪ್ರೇಮದ ಸಿರಿಪಾದ ಎದೆ ಹಾಲು ಸುರಿಸುವಾಗಖರ್ಜೂರ , ಕಾಫಿ , ಹೂಬಳ್ಳಿ ಜವೆಗೋದಿಜೊತೆಗೂಡಿ ಹಿಂಬಾಲಿಸಿ ಬರುವಾಗನನ್ನಜ್ಜನ ಹೆಚ್ಚೆಯಡಿಯಲ್ಲಿ ನಾದ ನದಿಜೀವವೃಕ್ಷದ ಚಿಗುರುನನ್ನಜ್ಜನ ನಡೆಮೃದು ಮಧುರಪ್ರೇಮ ಕಾವ್ಯದ ಗುಲಾಬಿ ಅತ್ತರಿನ ಘಮಲುಬುಲ್ ಬುಲ್ ಸಿತಾರ ಝರಿ ಜುಳು ಜುಳು ಗುನುಗು… *****************************************************

ನನ್ನಜ್ಜ….. Read Post »

ನಿಮ್ಮೊಂದಿಗೆ

ಆ ಪ್ರೀತಿಯನ್ನು

ಕವಿತೆ ಆ ಪ್ರೀತಿಯನ್ನು ಮೀನಾಕ್ಷಿ ಹರೀಶ್ ಅವ್ಯಕ್ತ ವಾದ ಇಚ್ಛೆ ಇದ್ದರೂವ್ಯಕ್ತ ಮಾಡದೆ, ಕ್ಷಣ ಕ್ಷಣಕ್ಕೂ ಮುಗುಳು ನಗುತ್ತಲೇದಿನಗಳು ಸವೆದವು ನಿರ್ಲಿಪ್ತತೆ ಯಿಂದ ಹಗಲಲ್ಲಿ ಮುಗುಳು ನಗುಇರುಳಲ್ಲಿ ಮೌನದ ನಗುಪ್ರೀತಿಗಾಗಿ ಹುಡುಕಿದವು ಕಣ್ಣುಗಳುನಿಂತಲ್ಲೇ ಕಡಲನಿರೀಕ್ಷೆಯೊಳು ಕಾಯುತ್ತಸರಿದು ಹೋದವು ಹಲವಾರು ವಸಂತಗಳು ಕಂಗಳು ತುಂಬಿದವು ಸೋಲಿನ ಹನಿಯಿಂದಮತ್ತೆ ಮತ್ತೆ ಸೋಲುತ್ತ ನಿರಾಸೆಯಲಿಹೃದಯದೆಲ್ಲಇಷ್ಟಗಳು ಕಷ್ಟಗಳಾದವುಕಾಮನೆಗಳು ವೈರಾಗ್ಯಕ್ಕೆ ವಾಲಿದವು ಅಂಗಳದಲ್ಲಿ ನೂರಾರು ದೀಪಗಳು ಒಮ್ಮೆಲೆ ಬೆಳಗಿದವುತಾಳದಾಯಿತು ಆ ವೈರಾಗ್ಯಕ್ಕೆ ಆ ಬೆಳಕು,ಹೋಗಿಬಿದಲೇ ಆ ಒಲವಿನತ್ತಬಿಗುಮಾನ ಬಿಟ್ಟುನಿಂತುಬಿಡಲೇ ಎನಿಸಿತು ಆ ಪ್ರೀತಿಯ ಉಸಿರಿನತ್ತಬಿಡಲೋಲ್ಲದು ನಾ ಕಟ್ಟಿದ ವೈರಾಗ್ಯವು ಆ ಉಸಿರಿನತ್ತ ಬೇಕೆನಿಸಿತು ಮನಕೆ ನಿರ್ಮಲವಾದ ಪ್ರೀತಿಯ ಆಸರೆಯೊಂದಸಿಗುವುದೇ ಆ ನಿರ್ಮಲ ಪ್ರೀತಿಯು ಆ ಕಡಲಿಂದನಿಂತಲ್ಲೇ ಕುಳಿತೆನು ವೈರಾಗ್ಯದನಿಟ್ಟುಸಿರಿನಿಂದಕಳೆದುಕೊಳ್ಳಲಾರೆನು ಆ ಪ್ರೀತಿಯನ್ನು ***********************************************

ಆ ಪ್ರೀತಿಯನ್ನು Read Post »

ಕಾವ್ಯಯಾನ

ತಿಮಿರ

ಕವಿತೆ ತಿಮಿರ ಡಾ. ಅಜಿತ್ ಹರೀಶಿ ಸೂಡಿ ಹಿಡಿದು ಓಡಾಡುವ ಕಾಲದಲ್ಲಿಕೊಳ್ಳಿ ದೆವ್ವಗಳು ಕಾಲಿಗೊಂದು ತಲೆಗೊಂದುಹರದಾರಿ ನಡೆದು ಸಾಗುವ ದಿನಗಳಲ್ಲಿಅವುಗಳ ಜಾತ್ರೆ ರಸ್ತೆ ಪಕ್ಕದಲ್ಲಿ ಕಳೆದ ಬಾಯಿ ಮುಚ್ಚದಂತೆ ಲಾಟೀನು-ಬೆಳಕಿನಲ್ಲಿ ಕೇಳಿ ಸುದ್ದಿ ಹೆದರಿಕೆ ಬೇಜಾನುತಿರುಚಿದ ಪಾದ ಗುರುತರವಾದ ಗುರುತುದೆವ್ವ ಕಂಡವನಿಂದ ಇತರರಿಗೆ ತರಬೇತು! ಕತ್ತಲಿನಲ್ಲಿ ಇಣುಕುವ ಬೆಳಕು, ಬರುವ ಶಬ್ದಎಂತಹವರನ್ನೂ ಮಾಡುವುದು ಸ್ತಬ್ಧಎಲ್ಲರೊಳಗೊಬ್ಬ ಕವಿ, ಆಗ ರವಿಯಿಲ್ಲಕಲ್ಪನೆಗೆ ಕಾಲು ಬಾಲ ಗಲ್ ಗಲ್, ಸರ ಪರಚಿತ್ತದಲ್ಲಿ ಮೂಡುವ ಚಿತ್ರಗುಂಡಿಗೆಯಲ್ಲಿ ನಡುಕಆಕ್ರಮಿಸುವ ಆತಂಕ ಅಕ್ರಮಕ್ಕೆ ಸೂಕ್ತ ಅಮಾವಾಸ್ಯೆವಿದ್ಯುತ್ ಕಡಿತಗೊಳಿಸಿಯೂಹುಟ್ಟಿಸುವರು ಅಮಾಸೆಯ ಸಮಸ್ಯೆಚುನಾವಣೆಯ ಹಿಂದಿನ ದಿನಗಂಧದ ಮರ ನಾಪತ್ತೆಯಾದ ಕ್ಷಣ ಕತ್ತಲು ಬಗ್ಗೆ ಅಜ್ಜಿ ಹೆದರಿಸಿದ್ದುಹುಳ ಹುಪ್ಪಟೆ ತುಳಿಯದಿರಲೆಂದುಕೂರುತ್ತದೆ ಮಗುವಿನ ಮಿದುಳೆಂಬಹಸಿ ಗೋಡೆಯಲ್ಲಿ ಮಣ್ಣಾಗಿಕತ್ತಲು ಭಯಾನಕ ಕಪ್ಪಾದಾಗ ನೆರಳು ಮಂದಬೆಳಕಿನಾಟಆಕೃತಿಗಳಿಗೆ ಜೀವ, ಪಿಶಾಚಿ ಕಾಟಆತ್ಮಸ್ಥೈರ್ಯದ ಅಗ್ನಿಪರೀಕ್ಷೆಪಾಪ ಪ್ರಜ್ಞೆ ಭೂತವಾಗಿ ಶಿಕ್ಷೆ ರಕ್ತ ಕಾರಿ, ಬೆನ್ನಮೇಲೆ ಮೂಡಿ ಬೆರಳುಮುರಿದು ಗೋಣು, ಧ್ವನಿಯಡಗಿಸತ್ತವರ ಕತೆಯೆಲ್ಲ ಎದ್ದು ಬಂದುಅಂತರ್ಪಿಶಾಚಿಯಾಗಿ ಅಲೆದಾಡಿ ಮುಗಿಯದ ಕತೆ; ಹೆದರಿಮೂತ್ರ ವಿಸರ್ಜನೆ ಮಾಡಿದವರದುಅದನ್ನೇ ದಿಗ್ಬಂಧನದ ವೃತ್ತವಾಗಿಸಿದವರದು ಕತ್ತಲು ಮಾತ್ರ ದಿಗಿಲು ಸೃಷ್ಟಿಸುವುದಾದರೆಕುರುಡನ ಜೀವನ ಹೇಗೆ? ಬೆಳಕ ಕಂಡವಗೆ ಕತ್ತಲ ಭಯಬಾಳ ಅನುಭವಿಸಿದವಗೆ ಸಾವ ಭಯಹಗ್ಗ ಹಾವಾಗಿ ಹತನಾಗುವ ಉಪಮೆಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ.**************************************************************

ತಿಮಿರ Read Post »

ಇತರೆ

ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ

ನೆನಪು ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ ಡಾ. ಅರಕಲಗೂಡು ನೀಲಕಂಠ ಮೂರ್ತಿ ಸರಿಸುಮಾರು ಐದು ದಶಕಗಳ ಹಿಂದಿನ ಸಮಾಚಾರ. ಸಾವಿರದ ಎಪ್ಪತ್ತು ಎಪ್ಪತ್ತೊಂದರ ಸಮಯ. ನನಗೆ ಕರಾರುವಾಕ್ಕಾಗಿ ದಿನಾಂಕ ಮತ್ತು ಮಾಹೆ ಸದ್ಯ ಜ್ಞಾಪಕ ಇಲ್ಲ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ನಾನು ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಾಗ. ಆ ಕಾಲಕ್ಕೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ, ಅದರಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳು ಉತ್ತುಂಗಕ್ಕೆ ಏರಿದ್ದ ಕಾಲ. ಈಗ ಹೇಗೋ ನಾ ಕಾಣೆ. ವಾಸ್ತವವಾಗಿ ವಾರ್ಷಿಕೋತ್ಸವದಲ್ಲಿ ನಾಟಕ ನಿರ್ದೇಶನಕ್ಕೆ ಸಿನಿಮಾ ಹಿರಿಯ ನಟರಾಗಿದ್ದ ಸಂಪತ್ ಅವರೇ ಸ್ವತಃ ಬರುತ್ತಿದ್ದುದು ವಿಶೇಷ; ನಾವು ದಿನಾಂಕ ಮಾತ್ರ ಮುಂಚಿತ ತಿಳಿಸಬೇಕಿತ್ತು. ಅವರ ಮನೆ ಮತ್ತು ಪ್ರಿಂಟಿಂಗ್ ಪ್ರೆಸ್ ನಮ್ಮ ಕಾಲೇಜಿಗೆ ಸನಿಹವೇ ಇವೆ. ಅದೇನೋ ಕಾಣೆ ಸಂಪತ್ ಅವರಿಗೆ ನಮ್ಮ ಕಾಲೇಜಿನ ಬಗ್ಗೆ ಬಹಳ ಅಭಿಮಾನ ಇತ್ತು. ಆ ಸಮಯದಲ್ಲಿ ನಾನು ಲಿಟರರಿ ಕಾರ್ಯದರ್ಶಿಯಾಗಿದ್ದೆ. ಎಲ್ಲ ಥರದ ಸಾಂಸ್ಕೃತಿಕ ಚಟುವಟಿಕೆಗಳೂ ಲಿಟರರಿ ಕಾರ್ಯದರ್ಶಿಯ ಜವಾಬ್ದಾರಿಯಾಗಿತ್ತು. ಜನರಲ್ ಸೆಕ್ರೆಟರಿಯಾಗಿ, ಅತ್ಯಂತ ಕ್ರಿಯಾಶೀಲರಾಗಿದ್ದ ಡಾ. ಉಮೇಶ್ ಕಾಮತ್ (ಸದ್ಯ ಅವರು ಮೈಸೂರಿನ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಯ ಮೇಲ್ವಿಚಾರಕರಾಗಿ ಸೇವೆಯಲ್ಲಿದ್ದಾರೆ) ಆವರು ಚುನಾಯಿತರಾಗಿದ್ದರು. ಶಹೀದ್ ಭಗತ್ ಸಿಂಗ್ ಅವರ ಮಾತೆ, ವಿದ್ಯಾವತಿ ಅವರು, ಮೈಸೂರಿಗೆ ಬರುವ ವಿಷಯ ನಮಗೆ ತಿಳಿಯಿತು. ಪತ್ರಿಕೆಗಳಲ್ಲಿ ಸಹ ಅದರ ಸುದ್ದಿ ಪ್ರಾಮುಖ್ಯ ಪಡೆದಿತ್ತು. ಹಾಗಾಗಿ ಅವರಿಗಾಗಿ ನಮ್ಮ ಕಾಲೇಜಿನಲ್ಲೂ ಕಾರ್ಯಕ್ರಮ ಒಂದನ್ನು ಏರ್ಪಾಡು ಮಾಡಲು ತೀರ್ಮಾನಿಸಿ, ಡಾ.ಕಾಮತ್ ಮತ್ತು ನಾನು ಒಪ್ಪಿಗೆಗಾಗಿ ನಮ್ಮ ಡೀನ್ ಅವರ ಕಛೇರಿಗೆ ಹೋಗಿದ್ದಾಗ, “ರಾಜಕೀಯದವರನ್ನೆಲ್ಲ ಕಾಲೇಜಿಗೆ ಕರೆಯುವುದು ಬೇಡ” ಅಂದು ಆರಂಭಕ್ಕೇ ತಣ್ಣೀರು ಎರಚಿದ್ದರು. ಅವರಿಗೆ ಭಗತ್ ಸಿಂಗ್ ಅವರ ವಿವರ ಇತ್ತ ಮೇಲೆ, “ಇಂತಹ ಕಾರ್ಯಕ್ರಮಕ್ಕೆ ಯಾರು ಬರ್ತಾರೋ ನಾ ಕಾಣೆ” ಅಂತಲೇ ಮನಸ್ಸಿಲ್ಲದೆ ಒಪ್ಪಿದ್ದರು. ನಮಗಷ್ಟೇ ಸಾಕಾಗಿತ್ತು. ಆಹ್ವಾನ ಒಂದನ್ನು ತಯಾರಿಸಿ, ಡೀನ್ ರವರ ಸಹಿ ಪಡೆದು ನಾನು ಮತ್ತು ಕಾಮತ್ ನೇರ ಭಗತ್ ಸಿಂಗ್ ಅವರ ತಾಯಿ ವಾಸ್ತವ್ಯದಲ್ಲಿದ್ದ ಮೈಸೂರಿನ ಸರಕಾರದ ಅಥಿತಿಗೃಹಕ್ಕೆ ಹೋಗಿದ್ದೆವು. ಎಂಭತ್ತು ವರ್ಷ ವಯಸ್ಸು ಮೀರಿದ ಆ ಮಾತೆ ತಮ್ಮ ಕೊಠಡಿಯಿಂದ ಹೊರಬಂದಾಗ ನಮಗೆ ರೋಮಾಂಚನ. ದೇವತೆಯೊಬ್ಬರ ದರ್ಶನ ಆದಂತಹ ಖುಷಿಯಲ್ಲಿ, ನಾನು ಕಾಮತ್ ಇಬ್ಬರೂ ಸಾಷ್ಟಾಂಗಪ್ರಣಾಮ ಮಾಡಿದ್ದೆವು. ಆ ವಿದ್ಯುತ್ ಕ್ಷಣ ನಮ್ಮ ಬದುಕಿನ ಅಮೋಘ ಘಳಿಗೆ! ಇಂದಿಗೂ ಅದನ್ನು ನೆನೆದಾಗ ಮೈನವಿರೇಳುವುದರ ಜೊತೆಗೆ ಕಣ್ಣುಗಳೂ ತೇವವಾಗುತ್ತವೆ! ಮಾತೆ ವಿದ್ಯಾವತಿಯವರ ಸಂಗಡ ಅವರ ಪುತ್ರ ಕುಲ್ಬೀರ್ ಸಿಂಗ್ ಹಾಗೂ ಅವರ ಪತ್ನಿ ಬಂದಿದ್ದರು. ನಮ್ಮ ಆಹ್ವಾನವನ್ನು, ಅವರಿಗೆ ಇನ್ನೂ ಅನೇಕ ಕಾರ್ಯಕ್ರಮಗಳು ಇದ್ದರೂ, ಕಿಂಚಿತ್ತೂ ತಕರಾರಿಲ್ಲದೆ ಒಪ್ಪಿದ್ದರು. ಮಾರನೇ ದಿನವೇ ಅವರು ಬರುವವರಿದ್ದರು. ಹಾಗಾಗಿ ನಮಗೆ ತರಾತುರಿ. ಭಗತ್ ಸಿಂಗ್ ಅವರ ಬಗ್ಗೆ ತಿಳಿಯದೆ ಇರುವವರು ವಿರಳ ಅನಿಸುತ್ತೆ. ಆದರೂ ಆ ವಿರಳರಿಗಾಗಿ ಸಂಕ್ಷಿಪ್ತ: ಭಗತ್ ಸಿಂಗ್ ಜನನ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ,   ಫೈಸಲಾಬಾದ್ ಜಿಲ್ಲೆಯ, ಬಂಗ (Banga) ಠಾಣೆಯ, ಐತಿಹಾಸಿಕ ಗ್ರಾಮ, ಖಾಟ್ಕರ್ ಕಲನ್ (Khatkar Kalan) ಎಂಬ ಗ್ರಾಮದಲ್ಲಿ, 1907ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ. ತಾಯಿ ವಿದ್ಯಾವತಿ, ತಂದೆ ಕಿಷನ್ ಸಿಂಗ್. ಒಡಹುಟ್ಟಿದವರು ಐವರು ಸಹೋದರರು ಮತ್ತು ಮೂವರು ಸಹೋದರಿಯರು. ತಮ್ಮ ಹದಿಮೂರನೇ ವಯಸ್ಸಿಗೇ ಓದಿಗೆ ತಿಲಾಂಜಲಿ ಹೇಳಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾರೆ. ಬಹಳ ಚಿಕ್ಕ ವಯಸ್ಸಿನಲ್ಲೇ, ಇನ್ನೂ ಯೌವನದ ಇಪ್ಪತ್ತಮೂರರ ವಯಸ್ಸಿಗೇ,  ಮಾರ್ಚ್ 23, 1931ರಂದು, ತಮ್ಮ ಸಹ ಹೋರಾಟಗಾರರಾಗಿದ್ದ ರಾಜಗುರು ಹಾಗೂ ಸುಖದೇವ್ ಅವರೊಡನೆ ಬ್ರಿಟಿಷರಿಂದ ನೇಣುಗಂಬಕ್ಕೆ ಶರಣಾಗುತ್ತಾರೆ, ಈಗಿನ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ. (ಲಾಲ ಲಜಪತ್ ರಾಯ್ ಅವರ ಸಾವಿಗೆ ಕಾರಣನಾಗಿದ್ದ ಪೋಲೀಸ್ ಮುಖ್ಯಸ್ಥನನ್ನು ಕೊಲ್ಲಲು ಹೋಗಿ, ಬದಲಿಗೆ ಜೆ. ಪಿ. ಸಾಂಡರ್ಸ್ ಅವರ ಕೊಲೆಗೆ ಕಾರಣವಾಗಿದ್ದುದಕ್ಕಾಗಿ). ಹುಟ್ಟಿನಿಂದ ಸಿಖ್ ಧರ್ಮೀಯರೇ ಆಗಿಯೂ ಸಹ, ಭಗತ್ ಅವರು ತಲೆ ಕೂದಲ ಕ್ಷೌರವೇ ಅಲ್ಲದೆ, ಮುಖದ ಶೇವ್ ಸಹ ಮಾಡಿಸಿಕೊಳ್ಳುತ್ತಿದ್ದರು;    ತಮ್ಮ ಗುರುತು ಸಿಗಬಾರದೆಂದು. “ಇಂಕಿಲಾಬ್ ಜಿಂದಿಬಾದ್” ಎಂಬ ವೀರಘೋಷಣೆಯನ್ನು ಪ್ರಖ್ಯಾತ ಗೊಳಿಸಿದ್ದು ಅವರು. ಅವರು ಶಹೀದ್ ಭಗತ್ ಸಿಂಗ್ ಎಂದೇ ಪ್ರಸಿದ್ಧರಾದರು – ಇಂದಿಗೂ ಸಹ. ಅಂತಹ ಧೀರ ಪುತ್ರನನ್ನು ದೇಶಕ್ಕೆ ಕೊಡುಗೆ ಕೊಟ್ಟ ಮಹಾತಾಯಿಯ ದರ್ಶನ ಭಾಗ್ಯ ನಮ್ಮ ಹೆಮ್ಮಯಾಗಿತ್ತು. ಮತ್ತು ಅಂತಹ ತಾಯಿಯ ದರ್ಶನ ಭಾಗ್ಯ ನಮ್ಮ ಕಾಲೇಜಿನ ಎಲ್ಲರಿಗೂ ಅಂದು ದೊರಕುವಂತೆಯೂ ಆಗಿತ್ತು! ನಾಳೆಯೇ ಕಾರ್ಯಕ್ರಮ. ನಮ್ಮ ಡೀನ್ ಬೇರೆ ಕಷ್ಟದಿಂದ ಒಪ್ಪಿದ್ದರು. ಅಂದಮೇಲೆ ಜಯಭೇರಿಯ ಜವಾಬ್ದಾರಿ ನಮ್ಮ ಹೆಗಲ ಮೇಲೆ. ನಮ್ಮ ಕಾಲೇಜಿನವನೇ ಆದ, ನನಗೆ ಪರಿಚಯವಿದ್ದ, ಬ್ರಿಜ್ ಮೋಹನ್ ಕುಮಾರ್ ಎಂಬ ವಿದ್ಯಾರ್ಥಿಯೊಬ್ಬ, ಮೆಡಿಕಲ್ ಎಕ್ಸಿಬಿಷನ್ ನಡೆದಿದ್ದ ಸಮಯದಲ್ಲಿ ದೊಡ್ಡ ಕಟೌಟ್ ಮಾಡಿದ್ದು ನೋಡಿದ್ದೆ. ಆತನಿಗೇ ಮನವಿ ಮಾಡಿಕೊಂಡು ಒಪ್ಪಿಸಿ, ಅರ್ಧರಾತ್ರಿಯವರೆಗೂ ಎಚ್ಚರ ಆಗಿದ್ದು, ಕಲರ್ ಕಾಗದದಲ್ಲಿ ಇಡೀ ಗೋಡೆಯಷ್ಟು ಎತ್ತರವಿದ್ದ  ಭಗತ್ ಸಿಂಗ್ ಮುಖದ ಚಿತ್ರ ಮಾಡಿಸಿದ್ದೆ. ಅರ್ಧಂಬರ್ಧ ನಿದ್ದೆ ಆದರೂ ಆ ಹುಮ್ಮಸ್ಸು ಮತ್ತು ಮಾರನೆ ದಿನದ ಸಂಭ್ರಮ ಎಲ್ಲವನ್ನೂ ಮರೆಸಿತ್ತು. ಮತ್ತು ಆ ಮಾರನೆಯ ದಿನ ದಿಢೀರ್ ಬಂದೇಬಿಟ್ಟಿತ್ತು… ಮಾತೆ ವಿದ್ಯಾವತಿಯವರ ಆಗಮನ ಇನ್ನೂ ಆಗಿರಲಿಲ್ಲ. ಆಗಲೇ ಜನಜಂಗುಳಿ! ಬರೀ ವಿದ್ಯಾರ್ಥಿಗಳೇ ಅಲ್ಲ; ಹೊರಗಿನವರೂ ಬರತೊಡಗಿದ್ದಾಗ ಹೊರಗೆ ಸ್ಪೀಕರ್ ಗಳನ್ನು ಅಳವಡಿಸಬೇಕಾಗಿತ್ತು. ನಮ್ಮ ಡೀನ್ ಅವರಿಗೆ ಜಾತ್ರೆ ಆಗಿದ್ದ ಪ್ರೇಕ್ಷಕರನ್ನು ಕಂಡು ಅಚ್ಚರಿ! ಅಂತೂ ವಯೋವೃದ್ಧ ಮಾತೆ, ಜೊತೆಯಲ್ಲಿ ಭಗತ್ ರವರ ಸಹೋದರ ಕುಲ್ಬೀರ್ ಸಿಂಗ್ ಮತ್ತವರ ಪತ್ನಿ ಬಂದಿಳಿದಾಗ,  ಸಮಗ್ರ ವಾತಾವರಣದಲ್ಲಿ ಹಾಗೂ ಬೀಸುವ ಗಾಳಿಯಲ್ಲಿಯೂ ಸಹ ಹಿಂದೆ ಎಂದೂ ಕಂಡರಿಯದಂಥ ಪುಳಕ! ಇಡೀ ಸಮೂಹದಲ್ಲಿ ಸಾಕ್ಷಾತ್ ಭಗತ್ ಸಿಂಗ್ ಅವರ ದರ್ಶನ ಆದಷ್ಟೇ ಆನಂದ ಮತ್ತು  ಅಂಥ ಪುಣ್ಯ ದೊರಕಿದ್ದಷ್ಟು ಅನಂತ ಸಂತುಷ್ಟತೆ!                 ನಮ್ಮ ಕಾಲೇಜಿನಲ್ಲಿ ಸಾಮಾನ್ಯವಾಗಿ ವಾರ್ಷಿಕೋತ್ಸವ ಬಿಟ್ಟು, ಎಲ್ಲ ಸಮಾರಂಭಗಳು ಜರುಗುತ್ತಿದ್ದುದು ವಿಶಾಲವಾಗಿದ್ದ ಪೆಥಾಲಜಿ ಹಾಲ್ ನಲ್ಲಿ. ಅಂದು ಒಳಹೊರಗಲ್ಲ ಜನರೋ ಜನ! ನನಗಂತೂ ಅಂದು ಅತ್ಯಂತ ಆನಂದ ಕೊಟ್ಟ ಕ್ಷಣವೆಂದರೆ, ಆ ಮಹಾತಾಯಿಯ ಕೊರಳಿಗೆ ಹಾರ ಹಾಕುವ ಕಾಯಕ ನನ್ನದಾಗಿ ಒದಗಿ ಬಂದದ್ದು. (ಆ ಫೋಟೋ ಅಂದಿನ ಪತ್ರಿಕೆಗಳಲ್ಲೂ ಅಚ್ಚಾಗಿದ್ದು, ನನ್ನ ಪತ್ನಿ, ಕಮಲ, ಅದರ ಪ್ರತಿ ಒಂದನ್ನು ಬಹಳ ಜತನದಿಂದ ಇಟ್ಟಿದ್ದರು. ಅದೀಗ ಕಾಣದಾಗಿರುವುದು ವಿಶಾದ). ಎಂಭತ್ತು ಮೀರಿದ ಮಾತೆ ಕೂತಲ್ಲೇ ತುಂಬುಸಭೆಯನ್ನು ಉದ್ದೇಶಿಸಿ, ತಮ್ಮ ಪುತ್ರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದನ್ನು  ನೆನೆದಿದ್ದರು. ಅವರ ಇಡೀ ವಂಶವೇ ದೇಶಕ್ಕಾಗಿ ಹೋರಾಡಿದ್ದುದನ್ನು ಸಹ ಜ್ಞಾಪಕ ಮಾಡಿಕೊಂಡಿದ್ದರು. ಕುಲಬೀರ್ ಸಿಂಗ್ ಕೂಡ ಕೆಲ ಕ್ಷಣಗಳು ಮಾತನಾಡಿದ್ದರು. ಅಧ್ಯಕ್ಷ ಭಾಷಣವನ್ನೂ ನಮ್ಮ ಡೀನ್ ಸಾಹೇಬರು ಸಂಕ್ಷಿಪ್ತ ಮಾಡಿದ್ದರು. ಅಂದು ಮಾತಿಗಿಂತ  ಆ ಅಥಿತಿಗಳ ನೋಡಿ ಕಣ್ಣು ತುಂಬಿಸಿಕೊಳ್ಳುವುದೇ ಎಲ್ಲರ ಉದ್ದೇಶ ಆಗಿದ್ದ ಹಾಗೆ! ಒಟ್ಟಿನಲ್ಲಿ ಕಾಲೇಜಿನ ಸುತ್ತಮುತ್ತ ಆ ದಿನ ನೂತನ ಹಬ್ಬವೊಂದರ ವಾತಾವರಣ ಸೃಷ್ಟಿಯಾಗಿದ್ದುದು ಅತಿಶಯೋಕ್ತಿ ಅಲ್ಲ… ಮಾರನೇ ದಿನ ನಮ್ಮ ಡೀನ್ ನಮ್ಮಕಾರ್ಯಕ್ರಮದ ಆಯೋಜನೆ ಬಗ್ಗೆ ಅತ್ಯಂತ ಖುಷಿಯಿಂದ ಮಾತನಾಡಿದ್ದಾಗ ನಮಗೆ ಸಾರ್ಥಕ ಎನಿಸಿತ್ತು! ಇಂದಿಗೂ, ಈ ಕ್ಷಣಕ್ಕೂ ನನ್ನ ಬದುಕಿನ ಒಂದು ಶ್ರೇಷ್ಠ ದಿನ…ಆ ದಿನ…! ಮತ್ತು ಆ ಮಹಾತಾಯಿಯ ಕಾಲಿಗೆ ದೀರ್ಘದಂಡ ನಮಸ್ಕಾರ ಮಾಡಿದ್ದ …ಆ ಘಳಿಗೆ…! ***************************************** .

ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ Read Post »

You cannot copy content of this page

Scroll to Top