ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ
ನೀ ಹೋದ ಮರುದಿನ ಮತ್ತ ನಂ ಬದುಕು ಮದಲಿನಂಗ ಆಗ್ಯಾದೋ ಬಾಬಾಸಾಹೇಬ!
ನಿನ್ನಂಗ ನುಡಿವಾಂವಾ,ಕಳ ಕಳಿಯ
ಪಡುವಂವ ಬರಲಿಲ್ಲೋ ಒಬ್ಬ!!
ಚನ್ನಣ್ಣ ವಾಲೀಕಾರ
ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ Read Post »
ನೀ ಹೋದ ಮರುದಿನ ಮತ್ತ ನಂ ಬದುಕು ಮದಲಿನಂಗ ಆಗ್ಯಾದೋ ಬಾಬಾಸಾಹೇಬ!
ನಿನ್ನಂಗ ನುಡಿವಾಂವಾ,ಕಳ ಕಳಿಯ
ಪಡುವಂವ ಬರಲಿಲ್ಲೋ ಒಬ್ಬ!!
ಚನ್ನಣ್ಣ ವಾಲೀಕಾರ
ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ Read Post »
ಕವಿತೆ ಈಗ ಆನಂದ ಆರ್.ಗೌಡ ತಾಳೇಬೈಲ್ ರವಿವಾರದ ಸಂಜೆಅಮಲು ಚೆಲ್ಲಿದ ಎಂಥೆಂಥಾದೋಕಸ ಪೌರ ಸೇವಕರ ಪೊರಕೆಶುಚಿಗೊಳಿಸುತ್ತಿತ್ತು ರಸ್ತೆಯ ಇಕ್ಕೆಲಗಳಲ್ಲಿಆಗ ತಾನೇ ಪ್ರಸವವಾದಹೊಂಗಿರಣ ಅವರ ವದನಕ್ಕೆಮುತ್ತನೀಯುತ್ತಿತ್ತು ಅಲ್ಲಿಯೇ ಸೃಷ್ಟಿಸಿದ ನೇರಳೆಲೆಗಳನೆರಳು ಬೆಳಕಿನಾಟ ಕಲೆಗಾರನಕುಂಚದ ಕಲೆಯ ನಾಚಿಸಿದೆ ಕಾರ್ಪೋರೇಟ್ ರಸ್ತೆ ನಡುವೆನೆಟ್ಟ ಪುಟ್ಟ ಗಿಡಗಳುಆರೈಕೆ ಮಾಡಲು ತೂಗು ಹಾಕಿದದೊಡ್ಡ ದೊಡ್ಡ ವ್ಯಕ್ತಿಗಳ ನಾಮಫಲಕರಾರಾಜಿಸುತ್ತಿದೆಚುನಾವಣೆ ಮುಗಿದರೂ ಅದರಂಚಿನಲಿ ಹಾಯ್ದುಹೋಗುವ ಚಿರಯೌವನೆಅಂಗೈ ಸೋಕಿದರೆ ಹಾಲುತೊಟ್ಟಿಕ್ಕುವ ಸೊಬಗುಇನ್ನೂ ಹೊಟ್ಟೆಕಿಚ್ಚು ತರಿಸುವತೊಟ್ಟುಡುಗೆಯ ಸಿರಿವಂತಿಕೆಮುಚ್ಚಿದೆದೆಯೊಡ್ನಿಅರಿವಿಲ್ಲದೇ ಇಳಿದುಚಿಗುರಿದೆಲೆಗಳ ಸವರಿಅಮಲೇರಿಸುವ ಆ ನೋಟಮನಸ ಕೊಲ್ಲುವ ಸಂಚಲತೆಪಡ್ಡೆ ಹೈಕಳ ಹೃದಯ ಬಡಿತಇಮ್ಮಡಿಸಿದೆ ಆ ರಸ್ತೆಕತ್ತಲೆಯಲಿ ಆಗಾಗ ಶವವಾಗಿಮಲಗಿದರೆಒಮ್ಮೊಮ್ಮೆ ಚಂದಮಾಮ ಇಣುಕಿಆಟವಾಡುತ್ತಾನೆ ರಸ್ತೆಯ ಹೃದಯ ಅಗೆದು ಬಗೆದುಈಗ ಅಲ್ಲಲ್ಲಿ ಟಾಕೀ ಕಟ್ಟುತ್ತಿದ್ದಾರೆಒಳಗೊಳಗೇ ಪೈಪ್ ಲೈನ್ಕಕ್ಕಸು ಕೊಳಚೆ ಹೊರಹಾಕಲು ಜನ ಹೈರಾಣಾಗಿದ್ದಾರೆಗಾಡಿಗಳು ನೀರಿನಲೆಗಳಮೇಲೆ ಸಾಗಿ ದಡ ಮುಟ್ಟುತ್ತಿವೆಧೂಳನ್ನು ನುಂಗಿ ಬದುಕುವಮಕ್ಕಳು ಮುದುಕರು ಮೂಕರಾಗಿಕೆಮ್ಮು ಸುಂಬಳ ಇಳಿಸುತ್ತಿದ್ದಾರೆಮನೆ ಒರೆಸುವ ಮನೆಯೊಡತಿಯಮೌನದ ಕಟ್ಟೆ ಒಡೆದಿದೆ ಆದರೂ ಕೋಟಿ ಕೋಟಿಗಳ ಟೆಂಡರ್ಪಡೆದ ಲೀಡರ್ ನೋಡುತ್ತಲೇ ಇದ್ದಾನೆಅಂಬುಲೆನ್ಸ್ ನ ತಿರುಗಾಟವನ್ನುಮಂದಿ ಮೂಗು ಮುರಿದು ಅವನ ಪ್ರತಿಕ್ರಿಯೆಗೆಕಾಯುತ್ತಿದ್ದಾರೆ ! **********************************************
ಕವಿತೆ ಇನ್ನೂ ಎಷ್ಟು ದೂರ? ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಕ್ಷತ್ರ ಕದಿಯಲುಹೊರಟಿರುವೆಮೈ ತುಂಬ ನಕ್ಷತ್ರ ಹೊಂದಿರುವಆಕಾಶದಿಂದಎರಡೇ ಎರಡು ನಾನು ಕದ್ದರೆಯಾರ ಅಪ್ಪನ ಮನೆ ಗಂಟುಹೋದೀತು ಹೇಳು?ಹೊರಟಿದ್ದೇನೆಕನ್ನ ಕೊರೆಯಲುಯಾರಿಗೆ ಗೊತ್ತು?ನಕ್ಷತ್ರಗಳು ಎನ್ನುವುದುನೀಲಿ ಗೋಡೆಯ ಅಚಿನಿಂದಇನ್ನಾರೋ ಕನ್ನ ಕೊರೆದುಇಣುಕಿದ ತೂತಿರಬಹುದುಆಚೆ ಮೂಡಿರಬಹುದುಈಚೆ ಮುಳುಗಿದ ಸೂಯ೯ತನ್ನ ಕಿರಣಗಳ ಕನ್ನದ ತೂತುಗಳಿಂದಈಚಿನ ಕತ್ತಲಿಗೆ ತೂರಿರಬಹುದುಅಬ್ಬಾ! ಅಗಣಿತ ನಕ್ಷತ್ರಗಳು!ಬಹುಶಃ ಅದು ಕಳ್ಳರದ್ದೇ ಲೋಕವಿರಬಹುದುನನ್ನಂತೆ ಎರಡೇ ಎರಡುನಕ್ಷತ್ರ ಕದಿಯಲು ಹೊರಟವರು ನಡೆಯುತ್ತಲೇ ಇದ್ದೇನೆಇನ್ನೂ ಎಷ್ಟು ದೂರ? *************************
ಗಝಲ್ ಗಝಲ್ ಕೆ.ಸುನಂದಾ. ಸುಂದರ ವದನಕೆ ಕುಂದಾಗುವ ಬಣ್ಣ ಬಳಿಯಬೇಡ ಗೆಳೆಯಅದೆಷ್ಟೋ ಅಂದದ ಕನಸುಗಳಿಗೆ ಕಲ್ಲು ಹೊಡೆಯಬೇಡ ಗೆಳೆಯ ಸಾಧಿಸಬೇಕೆಂಬ ಹಂಬಲದಿ ಆಸರೆಯ ಎಳೆ ಹಿಡಿದಿರುವೆನುಕಷ್ಟಗಳಮೆಟ್ಟಿ ಕಟ್ಟಿರುವ ಭಾವಗಳ ಭವನಕೆ ಕಿಚ್ಚಾಗಬೇಡ ಗೆಳೆಯ ಹೆಣ್ಮನ ಮೃದುವೆಂದು ಮಧುರವಾಗಿ ನುಡಿದುಮೋಸ ಮಾಡಿದಿರು ಹೃದಯ ಗೆದ್ದೆನೆಂಬ ಹಮ್ಮಿಂದ ಹದವಾದಮೇಲೆ ಒದೆಯಬೇಡ ಗೆಳೆಯ ಮುನಿಯುವ ಮೊದಲು ಒಲಿದು ಬರುವಳು ಹೆಣ್ಣು ಘಾಸಿಗೊಳಿಸದಿರುಕೂಸಿನಂತಾಕೆ ಪೊರೆದಿಹಳು ನಿನ್ನಾಸೆಗಳನು ಮನ ನೋಯಿಸಬೇಡ ಗೆಳೆಯ ತುಸು ಕಣ್ಣಲ್ಲಿ ಕಣ್ಣಾಗಿ ನೋಡು ಮಮತೆ ಹರಿದೀತು ನಿನ್ನೊಡಲೊಳುನಂದೆಯ ಆನಂದಕೆ ಮಂದಸ್ಮಿತ ಸಾಕು ನಕ್ಕು ಹಂಗಿಸಬೇಡ ಗೆಳೆಯ *********************************** ಕೆ.ಸುನಂದಾ
ವಿಶೇಷ ಲೇಖನ ಪಂಪನ ಕುರಿತಾದ ವಿಶೇಷ ಲೇಖನ ಆರ್.ದಿಲೀಪ್ ಕುಮಾರ್ ನೆನೆವುದೆನ್ನ ಮನಂ : ಕೆಲವು ಮಾತುಗಳು ವಿಕ್ರಮಾರ್ಜುನ ವಿಜಯ (ಪಂಪಭಾರತ) ಕೃತಿಯ ನಾಲ್ಕನೇ ಆಶ್ವಾಸದ ಮೂವತ್ತನೇ ಪ್ರಖ್ಯಾತ ಪದ್ಯವು ಇದಾಗಿದೆ. ಈ ಪದ್ಯದ ಬಗೆಗೆ ಬೆಳ್ಳಾವೆ ವೆಂಕಟನಾರಾಯಣಪ್ಪನವರಿಂದ ಇತ್ತೀಚಿನವರವರೆಗೂ ಮಾಡಿರುವ ವಿಮರ್ಶೆ ಮತ್ತು ವ್ಯಾಖ್ಯಾನಗಳ ಅಧ್ಯಯನವೇ ಬಹಳ ವಿಸ್ತಾರವಾದದ್ದಾಗಿದೆ. ಕನ್ನಡನಾಡಿನ ಬನವಾಸಿಯ ನೆಲವು ಆಂಧ್ರನಾಡಿನಲ್ಲಿ ಕುಳಿತಿರುವ ಕವಿಯ ನೆನಪಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿರುವ ಕಾರಣದಿಂದ ಅವನ ಮೇಲೆ ಬೀರಿರುವ ಪರಿಣಾಮದ ಪ್ರತಿಫಲವೇ ಈ ಪದ್ಯದ ಆವಿರ್ಭಾವಕ್ಕೆ ಕಾರಣವಾಗಿದೆ. ನೆನಪು ಮತ್ತು ನೆನಪಿನ ಕಾರಣ ಸಂಬಂಧ ಈ ಪದ್ಯದ ಭಾವಕೇಂದ್ರವಾಗಿದೆ. ಈ ಪದ್ಯವನ್ನು ಬಿಡಿಸಿ ಮರುವಿನ್ಯಾಸಗೊಳಿಸಿ, ಹೊಸ ಕ್ರಮದಲ್ಲಿ ಓದಿಕೊಳ್ಳುವುದರಿಂದ ಕವಿಯ ಮೇಲೆ ಆ ಪರಿಸರ ಬೀರಿರಬಹುದಾದ ದಟ್ಟವಾದ ಪರಿಣಾಮಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು ನನಗೆ ಅನಿಸಿದೆ. ಪಠ್ಯದ ಮೂಲ ಉದ್ದೇಶಕ್ಕೇನೂ ಬಿಡಿಸುವ ಮತ್ತು ಮರುವಿನ್ಯಾಸಗೊಳಿಸುವ ಕ್ರಮಗಳು ಧಕ್ಕೆತರುವುದಿಲ್ಲ. ಆ ಕವಿಯ ಉದ್ದೇಶವನ್ನೇ ಇನ್ನೂ ಪರಿಣಾಮಕಾರಿಗೊಳಿಸುವ ಓದಿನ ಕ್ರಮವಿದು ಎಂದು ಭಾವಿಸಿದ್ದೇನೆ. ಹೀಗೆ ಬಿಡಿಸಿ ಓದುವುದರಿಂದ ಹೊಸ ಅರ್ಥವನ್ನೂ ಈ ಪದ್ಯ ನನ್ನೊಳಗೆ ಉಂಟುಮಾಡಿದೆ. ಮೂಲ ಪಠ್ಯ ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ l ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ l ಕೆಂದಲಂ ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನೆಂಬೆ ನಾ l ರಂಕುಸಮಿಟ್ಟೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ ll ಈ ಪದ್ಯಕ್ಕೆ ಆಚಾರ್ಯ ಡಿ. ಎಲ್. ನರಸಿಂಹಾಚಾರ್ಯರು ತಮ್ಮ “ಪಂಪಭಾರತ ದೀಪಿಕೆ”ಯಲ್ಲಿ ಮಾಡಿರುವ ಅರ್ಥವನ್ನೊಮ್ಮೆ ಗಮನಿಸಿ ತೆಂಕಣ ಗಾಳಿ ಸೋಂಕಿದೊಡಂ – ದಕ್ಷಿದ ಗಾಳಿ ಮೈ ಮುಟ್ಟಿದರೂ ಒಳ್ನುಡಿಗೇಳ್ದೊಡಂ – ಒಳ್ಳೆಯ ಮಾತನ್ನು ಕೇಳಿದರೂ ಇಂಪನಾಳ್ದಗೇಯಂ – ಇಂಪಿನಿಂದ ಕೂಡಿದ ಗೀತವು ಕವಿವೊಕ್ಕೊಡಂ – ಕಿವಿಗೆ ಕೇಳಿಸಿದರೂ ಬಿರಿದ ಮಲ್ಲಿಗೆಗಂಡೊಡಂ – ಅರಳಿದ ಮಲ್ಲಿಗೆಯನ್ನು ನೋಡಿದರೂ ಆದ ಕೆಂದು – ಉಂಟಾದ ನಿದ್ದೆ ಅಲಂಪಂ – ಸುಖವನ್ನು ಗೆಡೆಗೊಂಡೊಡಂ – ಜೊತೆಗೂಡಿದರೂ ಮಧುಮಹೋತ್ವಮಾದೊಡಂ – ವಸಂತಕಾಲದ ಮಹೋತ್ಸವ ನಡೆದರೂ ಏನನೆಂಬೆಂ – ಏನೆಂದು ಹೇಳಬಲ್ಲೆ ಎನ್ನ ಮನಂ – ನನ್ನ ಮನವು ವನವಾಸಿ ದೇಶಮಂ – ಬನವಾಸಿಯ ಪ್ರಾಂತ್ಯವನ್ನು ಅರಂಕುಸಮಿಟ್ಟೊಡಂ – ಯಾರು ಅಂಕುಶ ಹಾಕಿದರೂ, ಎಂದರೆ ತಡೆದರೂ ನೆನೆವುದು – ನೆನೆದುಕೊಳ್ಳುತ್ತದೆ. ಡಾ. ಎಲ್. ಬಸವರಾಜು ಅವರು “ಸರಳ ಪಂಪಭಾರತ”ದಲ್ಲಿ ಈ ಪದ್ಯವನ್ನು ಬಿಡಿಸಿರುವ ಕ್ರಮವನ್ನೊಮ್ಮೆ ಗಮನಿಸಿ ನೋಡಿ ತೆಂಕಣ ಗಾಳಿ ಸೋಂಕಿದೊಡಮ್ ಒಳ್ನುಡಿಗೇಳ್ದೊಡಮ್ ಇಂಪನಾಳ್ದ ಗೇಯಂ ಕವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮ್ ಆದಲಂಪು ಅಲಂಪಂ ಗೆಡೆಗೊಂಡೊಡಂ ಮಧುಮಹೋತ್ವಮಾದೊಡಮ್ – ಏನನೆಂಬೆನ್ ಆರ್ ಅಂಕುಸಮಿಟ್ಟೊಡಂ ನೆನೆವುದೆನ್ನ ಮನಂ ಬನವಾಸೀ ದೇಶಮಂ ! ( ಈ ಪದ್ಯವನ್ನು ಅರ್ಥಪ್ರಾಧಾನ್ಯದಲ್ಲಿ ಬಿಡಿಸುವಾಗ ಛಂದೋನಿಯಮ ಯತಿಯ ಪಾಲನೆಗಾಗಿ ಅಕ್ಷರದ ಮೇಲೆ ಡಾ. ಎಲ್. ಬಿ ಅವರು ಕೊಟ್ಟಿರುವ ಚಿಹ್ನೆಗಳನ್ನು ಕೈ ಬಿಟ್ಟಿದ್ದೇನೆ. ಉಳಿದಂತೆ ಪದ್ಯವು ಯಥಾವತ್ತು ನೀಡಿದ್ದೇನೆ. ) ಕಾವ್ಯ ರಚನೆ ಹೇಗೆ ಮನುಜಕುಲದ ನಿರಂತರ ಕ್ರಿಯೆಯೋ, ಹಾಗೇ ಕಾವ್ಯದ ಓದು ಮನುಜಕುಲದ ನಿರಂತರವಾದ ಪ್ರಕ್ರಿಯೆ. ಕವಿಯೊಬ್ಬ ತಾನು ಕಂಡ ಬದುಕಿನ ವ್ಯಷ್ಟಿ ಅನುಭವಗಳನ್ನು, ಸಮಷ್ಟಿ ಮಾನವಕುಲದ ಒಳಿತಿಗಾಗಿ ತತ್ವೀಕರಿಸಿ ರೂಪಕಾತ್ಮಕಗೊಳಿಸಿ ತನ್ನದೇ ಭಾಷೆಯಲ್ಲಿ ಹಸ್ತಾಂತರಕ್ಕೆ ನಿಲ್ಲುವನು. ಅಂತಹ ಕವಿಗೆ ಎಂದೂ ಸಾಹಿತ್ಯ ಚರಿತ್ರೆಯಲ್ಲಿ, ಜನಮಾನಸದಲ್ಲಿ ಸ್ಥಾನವಿದ್ದೇ ಇದೆ. ತನ್ನ ಸಮಕಾಲೀನರೂ ಅಷ್ಟೇ ಸಶಕ್ತರಾಗಿದ್ದಾಗ ಆ ತಾತ್ವಿಕತೆಯ ತುದಿಮೊದಲುಗಳನ್ನು ಬಲ್ಲವರಾದರೆ ಕಟ್ಟಿದ ಕವಿಗೆ ಎಲ್ಲಿಲ್ಲದ ಮನ್ನಣೆ ದೊರೆತುಬಿಡುತ್ತದೆ. ಕೃತಿಯಲ್ಲಿನ ತಾತ್ವಿಕತೆ ಎನ್ನುವುದೇ ವಿಶಿಷ್ಟವಾದ ಅವಲೋಕನನದ ಕ್ರಮ. ಅದು ಕೃತಿಯ ಮೂಲಕವೇ ಓದುಗನಿಗೆ ಅನುಭವಕ್ಕೆ ಬರುವುದೇ ಹೊರತು ಕೃತಿಯ ಸುತ್ತ ಕಟ್ಟುವ ಕಥೆಗಳಿಂದ ಅಲ್ಲ. ಕೃತಿಯಲ್ಲಿನ ಜಾತಿ, ಧರ್ಮ, ವರ್ಗ, ವರ್ಣ, ಪ್ರಕೃತಿ, ಕಾಲ, ಮನುಷ್ಯನ ಸ್ಥಿತಿ, ಭಾವನೆಗಳು, ಮನುಷ್ಯನ ಸ್ಥಿತಿಸ್ಥಾಪಕತ್ವಗಳನ್ನು ವಸ್ತು, ಪಾತ್ರಗಳ ಮೂಲಕ ಅಭಿವ್ಯಕ್ತಿಗೊಂಡಿರುತ್ತದೆ. ಈ ಸೂಕ್ಷ್ಮ ಗ್ರಹಿಕೆಯಿಂದ ಕಟ್ಟಿಕೊಂಡ ತಾತ್ವಿಕತೆಯ ಮೂಲಕ ಅತ್ಯುನ್ನತ ಮನ್ನಣೆಗೆ ಪಾತ್ರರಾದ ಕೆಲವೇ ಕೆಲವು ಕನ್ನಡ ಕವಿಗಳ ಪಟ್ಟಿಯಲ್ಲಿ ಮೊದಲಿಗ ಆದಿಕವಿ ಪಂಪ. ಎಷ್ಟೋ ಶತಮಾನಗಳ ಹಿಂದಿನ ಕಾವ್ಯಗಳನ್ನು ಇಂದು ಓದುವುದಕ್ಕೆ ಓದುಗನಿಗೆ ತನ್ನದೇ ಆದ ಕಾರಣಗಳು ಇರುತ್ತವೆ. ಕಾಲ ಬದಲಾಗಿದೆಯೇ ಹೊರತು ಮನುಕುಲದಲ್ಲಿನ ಮೂಲಭಾವಗಳಾದ ಕಾಮ, ಕ್ರೌರ್ಯ, ಮಾತ್ಸರ್ಯ, ಅಪನಂಬಿಕೆ, ನಂಬಿಕೆ, ಪ್ರೀತಿ, ಸ್ನೇಹ, ಔದಾರ್ಯಗಳಂತಹಾ ಗುಣಗಳು ನಿರಂತರವಾಗಿ ಹರಿಯುತ್ತಲೇ ಇದೆ. ಕೆಲವೊಮ್ಮೆ ಆ ಹರಿಯುವಿಕೆಯ ಯಾವುದೋ ಒಂದು ಅಲೆ ಓದುಗನಿಗೆ ಕಾವ್ಯದಲ್ಲಿರುವುದು ತನ್ನ ಬದುಕಿನ ಭಾವದೊಂದಿಗೆ ಘರ್ಷಿಸಿದೊಡನೆ, ತಾಕಿದೊಡನೆ ದೊಡ್ಡ ಸಾಯುಜ್ಯ ಸಂಬಂಧವನ್ನು ಸ್ಥಾಪಿಸಿಕೊಂಡು ಆ ಭಾವಗಳು ಹರಿಯಲು ಆರಂಭ ಮಾಡಿಬಿಡುತ್ತವೆ. ಈ ಸಂಬಂಧ ಸ್ಥಾಪಿಸಿಕೊಳ್ಳುವುದೇ ಕವಿಯೊಬ್ಬ ಸಮಕಾಲೀನಗೊಳ್ಳುವ ಸ್ಥಿತಿ. ಕೆಲವು ಸದ್ಯದ ಕವಿಗಳ ಕಾವ್ಯಗಳೂ ಸದ್ಯದ ಓದುಗರಿಂದ ದೂರವಾಗಲು ಈ ಹರಿವ ಬದುಕ ನದಿಯೊಡನೆ ಸಂಬಂಧ ಸಾಧಿಸಲು ಭಾಷೆಯ ಮೂಲಕ ಸಾಧ್ಯವಾಗದಿರುವುದೇ ಕಾರಣ. ಕೆಲವೊಮ್ಮೆ ಸದ್ಯದ ಓದುಗರೊಳಗಿನ ವ್ಯಕ್ತಿನಿಷ್ಟ ಪೂರ್ವಗ್ರಹಿಕೆಗಳು ಕಲಾಕೃತಿಯೊಂದನ್ನು ಇತ್ಯಾತ್ಮಕ ಅಥವಾ ನೇತ್ಯಾತ್ಮಕ ದುಡುಕಿ ನಿರ್ಧಾರ ಕೊಡುವಂತೆ ಮಾಡಿಬಿಡುತ್ತವೆ. ಈ ದುಡುಕಿನಿಂದ ಬಿಡುಗಡೆಗೆ ಬಹುದೊಡ್ಡ ಮೌನದ ಅಗತ್ಯವಂತೂ ಓದುಗನಿಗೆ ಇದ್ದೇ ಇದೆ. ಕಾವ್ಯಕೃತಿಯೊಂದನ್ನು ಬಿಡಿಸಿ – ಕೂಡಿಸಿ ಓದುವ ಕ್ರಮಗಳನ್ನು ಕವಿಯೇ ಕೆಲವೊಮ್ಮೆ ಸ್ಪಷ್ಟಪಡಿಸಿಕೊಂಡು ಛಂದಸ್ಸಿನ ಮೂಲಕ ತಂದಿದ್ದರೂ ಅದನ್ನು ಮೀರುವ ತುರ್ತು ಕಾಲಾನಂತರದ ಓದುಗರಿಗೆ ಮತ್ತು ಕವಿಯ ಕಾಲದೊಳಗಿನ ಓದುಗರಿಗೂ ಇರುತ್ತವೆ. ಆ ಓದುಗನ ಓದಿನ ಕ್ರಮದೊಳಗೆ ಮೂಗು ತೂರಿಸುವ ಹಕ್ಕು ಕವಿಗೂ ಇಲ್ಲ. ವಸ್ತುವೊಂದನ್ನು ಕೆಲವು ತನ್ನದೇ ಪರಿಕರಗಳ ಮೂಲಕ ಕಲಾಕೃತಿಯಾಗಿ ಮಾರ್ಪಡಿಸಿದ ಅನಂತರ ಆ ಪರಿಕರಗಳ ಉಪೋತ್ಪನ್ನವಾದ ಕಾವ್ಯಕ್ಕೂ ತನಗೂ ಸಂಬಂಧವಿಲ್ಲ, ತನ್ನದಲ್ಲವೇ ಅಲ್ಲ ಎಂದು ನಿಂತಿರುವುದಕ್ಕೆ ಸಾಕ್ಷಿಗಳು ಹಿಂದಿನ ಕವಿಗಳಿಂದ ದೊರೆಯುತ್ತವೆ. ನುರಿತ ಓದುಗನೊಬ್ಬ ಕೃತಿಯನ್ನು, ಕೃತಿ ಕಟ್ಟಿಕೊಟ್ಟಿರುವ ತಾತ್ವಿಕತೆಯನ್ನು, ಭಾಷೆಯ ಮೂಲಕ ಹೊರಹೊಮ್ಮಿಸಿರಬಹುದಾದ ಧ್ವನಿತರಂಗಗಳನ್ನು ಕೃತಿಯ ಸೂಕ್ಷ್ಮಸ್ತರಗಳನ್ನು ಮುಟ್ಟಿ ಶೋಧಿಸುವ ನಿಕಟ ಓದಿನ ಮೂಲಕ ಕೃತಿಯನ್ನು ತನ್ನ ಕಾಲ ಮತ್ತು ಸ್ಥಳದಲ್ಲಿ ಪುನರ್ನಿರ್ಮಾಣ ಮಾಡಿಕೊಳ್ಳುತ್ತಾನೆ. ಹೀಗೆ ಮಾಡಲು ಕಾವ್ಯವೇ ಕೇಂದ್ರವಾಗಿರುತ್ತದೆಯೇ ಹೊರತು ಅದರ ಸುತ್ತ ಹೆಣೆಯುವ ಕಥೆಯಲ್ಲ. ಕಲಾಕೃತಿಯೊಂದನ್ನು ಸದ್ಯದ ಸಾಂಸ್ಕೃತಿಕ ಸಂದರ್ಭದ ಕೇಂದ್ರದಲ್ಲಿ ನಿಲ್ಲಿಸುವ ಮತ್ತು ಅಪವ್ಯಾಖ್ಯಾನಗೊಳಿಸಿ ಸದ್ಯದ ಸಂದರ್ಭದಲ್ಲಿ ಅಮುಖ್ಯಗೊಳಿಸಿ ಅಂಚಿಗೆ ಸರಿಸಿಬಿಡುವ ಅಪಾಯಗಳು ಎಲ್ಲ ಕಾಲದಲ್ಲಿಯೂ ಇದ್ದೇ ಇರುತ್ತವೆ. ಈ ಸಮಸ್ಯೆಯಿಂದ ಯಾವ ಕವಿಯೂ ತಪ್ಪಿಸಿಕೊಂಡು ಓಡಲಾರ. “ಆನಂದ”ಕ್ಕಾಗಿ ಓದುವುದು ಸಹಾ ಮುಖ್ಯ ಕಾರಣಗಳಲ್ಲಿ ಒಂದು. ಮೀಮಾಂಸಕರು ಪ್ರತಿಪಾದಿಸಿರುವ ತತ್ವಗಳ ಅಡಿಯಲ್ಲಿ ಕಾವ್ಯದ ಓದು ಏನನ್ನು ಕೊಡುತ್ತದೆ ಎನ್ನುವುದನ್ನು ಹೇಳಿದ್ದಾರೆ. ಆಧುನಿಕ ವಿಮರ್ಶಕರೂ ತಮ್ಮದೇ ಆದ ತತ್ವ, ಸಿತಗಳ ಅಡಿಯಲ್ಲಿ ಕಾವ್ಯ ಮತ್ತದರ ರಚನೆಯ ಕಾರಣ ಮತ್ತು ಪರಿಣಾಮಗಳನ್ನು ಅರಿಯುವುದನ್ನು ತೋರಿಸಿಕೊಟ್ಟಿದ್ದಾರೆ. ಓದುಗನೊಬ್ಬ ಮಾಡಬೇಕಾದ ಪ್ರಮುಖ ಕೆಲಸವೆಂದರೆ ಪೂರ್ವನಿಯೋಜಿತ ಕಲ್ಪನೆಗಳಿಂದ ಹೊರಬರುವುದು. ಈ ಅಪಾಯಗಳು ಸಾಕಷ್ಟುಬಾರಿ ಕಾವ್ಯ, ಕಾಲ ಮತ್ತು ದೇಶದ ಆಕಾರಕ್ಕೆ, ಲೋಕಾಕಾರ ಕಥನ ಕ್ರಮವನ್ನು ಅರ್ಥೈಸಿಕೊಳ್ಳುವ ಪ್ರಜ್ಞೆಗೆ ಅಪಾಯವನ್ನು ತಂದುಬಿಡತ್ತವೆ. ಈ ಪೂರ್ವನಿಯೋಜಿನ ಅಂಶಗಳನ್ನು ಮೀರಿಕೊಳ್ಳುವುದು ಇಂದಿಗಂತೂ ಅಗತ್ಯವಿದೆ. ಓದು ಎನ್ನುವ ಪ್ರಕ್ರಿಯೆ ಐದು ಅಂಶಗಳನ್ನು ಹೊಂದಿವೆ. ಈ ಪ್ರಕ್ರಿಯೆ ಒಂದರಿಂದ ಮತ್ತೊಂದಕ್ಕೆ ಬೆಳವಣಿಗೆಯ ಹಂತದಲ್ಲಿದೆ. ಕಾವ್ಯದಿಂದ, ಅದು ಹೊರಸೂಸುವ ಅರ್ಥದಿಂದ, ಏನೋ ಬದಲಾಗುತ್ತದೆ ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದನ್ನು ಬಿಡುವುದು. ಕಾವ್ಯದ ಹೊಸ ಓದಿಗೆ ಹಾದಿ ಮಾಡುವುದು ಎನ್ನುವುದನ್ನು ಕಲಿಯುವುದು. ಕಾವ್ಯವೇ ತನ್ನ ಪರಿಣಾಮದಲ್ಲಿ ಒಗ್ಗೂಡಿಸಿ ಕಟ್ಟಿಕೊಡುವ ಓದುಗನ ಬದುಕಿನಲ್ಲಿ ಘಟಿಸಿದ ನೆನಪುಗಳ ಸುರುಳಿಗೆ ತಾಕಿ ಅವುಗಳನ್ನು ಮೇಲಕ್ಕೆ ತಂದು ಭೂತ ವರ್ತಮಾನಗಳಿಗೆ ಮುಖಾಮುಖಿಯಾಗಿಸುವುದು ಮತ್ತು ಆ ನೆನಪುಗಳನ್ನು ಮರುರಚನೆ, ಮರುವಿನ್ಯಾಸ ಮಾಡಿಕೊಳ್ಳುವುದು. ಕೊನೆಯದಾಗಿ ಕಾವ್ಯದ ಓದಿನಿಂದ ದೊರೆವ ತೃಪ್ತಿ. ಈ ಕ್ರಿಯೆಗಳು ನಿರಂತರವಾಗಿ ನಡೆಯುತ್ತ ಹೋದರೆ ಕಾವ್ಯದ ಓದು ಆನಂದಕ್ಕಾಗಿ ಆಗುತ್ತದೆ. ಪೂರ್ವನಿಯೋಜಿತ ಕಲ್ಪನೆಗಳ ಆಚೆಗೆ ಕವಿಯನ್ನು ಕಾಣುವುದು, ಕಾವ್ಯದ ಮೂಲಕ ಕಂಡರಿಸುವುದು ಬಹುಮುಖ್ಯವಾದ ಇಂದಿನ ತುರ್ತಾಗಿದೆ. ಕವಿಗೆ ಕಟ್ಟಿದ ಹಣೆಪಟ್ಟಿಯನ್ನು ಕಳಚುವುದರ ಜೊತೆಗೆ ನಮಗೇ ನಾವು ಕಟ್ಟಿಕೊಂಡ ಪಟ್ಟಿಯನ್ನು ಕಳಚಬೇಕಾದ ತುರ್ತು ಇಂದಿಗಿದೆ. ಈ ಅನುಭವಗಳ ಸುರಳಿ ಬಿಚ್ಚಲು ಭಾಷೆಯೆನ್ನುವುದು ಬಹುದೊಡ್ಡ ಮಾಧ್ಯಮ. ಜನಸಾಮಾನ್ಯರ ಭಾಷೆ ಮತ್ತು ಕಾವ್ಯಭಾಷೆ ಎನ್ನುವುದರ ಅಂತರ ಇಂದಿಗಿಲ್ಲ. ಕವಿಯೊಬ್ಬನ ಕಾವ್ಯಭಾಷೆ ಹೇಗೆ ಸಾಮಾನ್ಯ ಭಾಷೆಗೆ ಹತ್ತಿರ ಬಂದು ಅಪೇಕ್ಷಿತ ಪರಿಣಾಮವನ್ನು ಉಂಟುಮಾಡಿ ಹೇಗೆ ಯಶಸ್ವಿಯಾಗಬಹುದು ಎನ್ನುವುದನ್ನು ಒಂದು ಉದಾಹರಣೆಯ ಮೂಲಕ ನೋಡಬಹುದು. ಛಂದೋನಿಯಮಗಳಿಗೆ ಒಳಪಟ್ಟು ರಚನೆಯಾದ ಕಾವ್ಯಗಳ ರಚನೆಯನ್ನು ಬಿಡಿಸುವ ಕ್ರಮ ಹೊಸದೇನಲ್ಲ. ಕೆಲವೊಮ್ಮೆ ಬಿಡಿಸುವ ಕ್ರಮಗಳು ಬಹುದೊಡ್ಡ ಅಪಾಯಗಳನ್ನು ಹಾಗು ಅದರೊಂದಿಗೇ ಅಪಾರವಾದ ಅರ್ಥ ಸಾಧ್ಯತೆಗಳನ್ನೂ ತೋರಿಸಿಬಿಡುತ್ತದೆ. ಪಠ್ಯವೊಂದ ಓದು ಎನ್ನುವುದೇ ಭಾಷೆಯೊಂದಿಗಿನ ಒಂದು ಲೀಲೆ. ಪ್ರತಿಯೊಂದು ಬಾರಿಯ ಕಾವ್ಯದೊಂದಿಗಿನ ಮುಖಾಮುಖಿಯ ಓದೂ ಒಂದು ಲೀಲೆಯೇ ಅಗಿರುತ್ತದೆ. ಅದು ನಿರಂತರವಾದದ್ದು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವಂತಹದ್ದು. ಈ ಬದಲಾಗುವಿಕೆ ಮತ್ತು ವ್ಯತ್ಯಸ್ಥಿತವಾಗುವಿಕೆಯ ಗುರುತಿಸುವಿಯೇ ಕವಿ, ಕಾವ್ಯ ಮತ್ತು ಓದುಗನ ಜೀವಂತಿಕೆಗೆ ಸಾಕ್ಷಿಯಾಗುತ್ತದೆ. ಆ ಹಂತದ ಓದಿನ ಒಂದು ಕ್ರಮವನ್ನು ಮತ್ತು ಬಹುಮುಖ ಓದಿನ ಸಾಧ್ಯತೆಯನ್ನು ಒಂದು ವೃತ್ತದ ಮೂಲಕ ಉದಾಹರಣೆಯಾಗಿ ಕೊಡುತ್ತೇನೆ. ವೃತ್ತದ ಕೊನೆಯ ನಾಲಕ್ಕು ಪದಗಳನ್ನು ಸ್ಥಾನಪಲ್ಲಟ ಮಾಡುವುದರಿಂದ ಕಾವ್ಯವು ಕಟ್ಟಿಕೊಡುತ್ತಿರುವ ಭಾವ, ಅದು ಕವಿಯ ಮೇಲೆ ಬೀರಿರುವ ಪರಿಣಾಮ ಮತ್ತು ಬಿಡದ ಹಾಗೆ ಆ ನೆಲ ಅವನ ಮೇಲೆ ಬಂಧ ಬೆಸೆದಿರುವುದನ್ನು ತಿಳಿಯಲು ಸಹಕಾರಿಯಾಗುತ್ತದೆ. ಭಾಷೆಯೆನ್ನುವುದನ್ನು ಪ್ರತಿಭಾಶಾಲಿಯಾದ ಕವಿಯೊಬ್ಬ ಬಳಸಿರುವ ಕ್ರಮವು ತಿಳಿಯುತ್ತದೆ. ಕಾವ್ಯದಿಂದ ಆಗುವ ಎರಡು ಕಾರ್ಯಗಳು ನನಗೆ ಬಹಳ ಮುಖ್ಯವಾದವು. ಪ್ರತಿಯೊಬ್ಬ ಓದುಗನಿಗೂ ತನ್ನದೇ ಅನುಭವ ಪ್ರಪಂಚವಿರುತ್ತದೆ. ಹುಟ್ಟಿದಾಗಿನಿಂದ ಒಳ ಹೊರ ಬದಲಾವಣೆಗಳನ್ನು ಗುರುತಿಸಿ ಅರ್ಥೈಸಿಕೊಳ್ಳಲು ಕಲಿಯುವುದರಿಂದ ಈ ಪ್ರಪಂಚ ನಿರ್ಮಾಣವಾಗುತ್ತದೆ. ಕೆಲವೊಮ್ಮೆ ಆ ಅನುಭವ ಪ್ರಪಂಚವು ಚದುರಿರುತ್ತವೆ. ಕಾವ್ಯದ ಓದು ಆ ಚದುರಿರುವ ಅನುಭವಗಳನ್ನು ಒಂದುಗೂಡಿಸಿ ಕಲಾಕೃತಿಯನ್ನು ಉಪಾದಿ ಮಾಡಿಕೊಂಡು ಅನುಭವಗಳನ್ನು ಜೋಡಿಸುತ್ತದೆ ಮತ್ತು ಅನುಭವಗಳನ್ನು ವ್ಯವಸ್ಥಿತಗೊಳಿಸುತ್ತದೆ. ಮತ್ತೊಂದು ಅನುಭವಗಳು ಒಂದುಗೂಡಿರುತ್ತವೆ, ವ್ಯವಸ್ಥಿತವಾಗಿರುತ್ತವೆ. ತಕ್ಷಣದ ಬದುಕಿಗೆ ಬೇಕಾದ ಭಾವ, ಅನುಭವಗಳನ್ನು ಕಾವ್ಯದ ಓದು ಮುನ್ನೆಲೆಗೆ ತಂದು ನಿಲ್ಲಿಸಿ, ಆಯಾ ಸಮಾಜ ಒಪ್ಪಿತ, ಅಪೇಕ್ಷಿತ, ತುರ್ತಿಗೆ ಭಾವದ ಉತ್ಪಾದನೆ ಮಾಡಿ ಓದುಗ ತನ್ನ ಬದುಕಿನ ಬಗೆಗೆ, ತನ್ನ ಲೋಕಾಕಾರ ಕಥನದ ಬಗೆಗೆ ಮಾತನಾಡಿಸಿಕೊಳ್ಳುವ ಹಾಗೆ ತನ್ನ ಕಾಲದ್ದಲ್ಲದ ಕಾವ್ಯವೊಂದು ಹಾದಿಮಾಡಿಕೊಡುತ್ತದೆ. ಒಂದೊಳ್ಳೆಯ ಕಲಾಕೃತಿ ಓದಿಗನೊಳಗೆ ಈ ಎರಡು ಕಾರ್ಯಗಳನ್ನೂ ಏಕಕಾಲದಲ್ಲಿ ಸಾಧ್ಯವಾಗಿಸಿದರೆ ಸಾರ್ಥಕ್ಯ ಪಡೆದಂತೆ. ಕಾವ್ಯವೊಂದು ಓದುಗನ ಮೇಲೆ ಬೀರುವ ಪರಿಣಾಮವನ್ನು ಗಮನಿಸುವುದು-ಗುರುತಿಸುವುದು, ಕಾವ್ಯವನ್ನು ಕೂಡಿಸಿ ಓದಿದಷ್ಟೇ ಬಿಡಿಸಿ ಓದಿಕೊಳ್ಳುವುದರಿಂದ ಮೇಲಿನ ಕಾರ್ಯಗಳು ಸಾಧ್ಯವಾಗುತ್ತದೆ. ಇವಷ್ಟೇ ಅಲ್ಲದೆ ಕಾವ್ಯವೇ ತನ್ನೊಡಲಿನಲ್ಲಿ ಅಗಣಿತವಾದ ಸಾಧ್ಯತೆಗಳ ಕೀಲಿಕೈಗಳನ್ನು ಅಡಗಿಸಿ ಇಟ್ಟುಕೊಂಡಿರುತ್ತದೆ. ಒಮ್ಮೆ ಓದಿದ ಅನಂತರವೂ ಮತ್ತೊಮ್ಮೆ ಹೊಸ ಪಠ್ಯವಾಗಿ ಮುಖಾಮುಖಿಯಾದರೆ ಕಾವ್ಯದ ಒಳಹೋಗುವ ಮತ್ತೊಂದು ಬಾಗಿಲ ಕೀಲಿ ಕೈ ಕಾವ್ಯವೇ ಕೊಡುತ್ತದೆ. ಈ ಅಗಣಿತ ಸಾಧ್ಯತೆಗಳ ಕಡೆಗೆ ಮುಖಾಮುಖಿಯಾಗುವಾಗಲೂ ಕಾಲ, ದೇಶ ಮತ್ತು ಓದುಗನ ಮನಸ್ಥಿತಿ ಬಹಳ ಮುಖ್ಯವಾದದ್ದು. ಒಂದೊಂದೂ ಕಾವ್ಯದ ಮೂಲಕ ಬೀರುವ ಪರಿಣಾಮ ಮತ್ತು ತನ್ನೊಳಗೆ ಮಾಡಿದ ಬದಲಾವಣೆಯನ್ನು ಗಮನಿಸುವುದು ಓದುಗನ ಪ್ರಮುಖವಾದ ಕೆಲಸ. ಈ ಕೆಲಸದ
ನೆನೆವುದೆನ್ನ ಮನಂ : ಕೆಲವು ಮಾತುಗಳು Read Post »
ದಾರಾವಾಹಿ ಅದ್ಯಾಯ-10 ಸಂತಾನಪ್ಪನ ಶ್ರೀಮಂತಿಕೆಯನ್ನು ಕಂಡು ಶಂಕರ ಬೆಕ್ಕಸ ಬೆರಗಾಗಿದ್ದ! ಹಿಂದೊಮ್ಮೆ ತನ್ನೊಂದಿಗೆ ಮೂರುಕಾಸಿಗೆ ದುಡಿಯುತ್ತಿದ್ದಂಥ ಆ ಗಂಡ, ಹೆಂಡತಿ ಒಮ್ಮೆ ಹೇಳದೆ ಕೇಳದೆ ಓಡಿ ಹೋಗಿದ್ದು ಮಾತ್ರವಲ್ಲದೇ ತನ್ನ ಬದ್ಧ ವೈರಿ ರಘುಪತಿಯೊಂದಿಗೆ ಸೇರಿಕೊಂಡಿದ್ದನ್ನು ತಿಳಿದು ಅವರ ಮೇಲೆ ವಿಪರೀತ ಕುಪಿತನಾಗಿದ್ದ. ಆದರೆ ರಘುಪತಿಯೊಂದಿಗೆ ಮರಳಿ ಜಗಳವಾಡಲು ಅವನಿಗೆ ಧೈರ್ಯವಿರಲಿಲ್ಲ. ಆದ್ದರಿಂದ ತಾನು ಮನಸ್ಸು ಮಾಡಿದರೆ ಸಂತಾನಪ್ಪನಂಥ ಸಾವಿರ ಕೂಲಿಯಾಳುಗಳನ್ನು ಉತ್ತರ ಕರ್ನಾಟಕದಿಂದಲ್ಲದೇ ಉತ್ತರ ಭಾರತದಿಂದಲೂ ತರಿಸಿಕೊಳ್ಳಬಲ್ಲೆ! ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡವನು ತನ್ನನ್ನು ತೊರೆದು ಹೋಗುತ್ತಿದ್ದ ಇತರ ಕೂಲಿಯಾಳುಗಳಂತೆಯೇ ಸಂತಾನಪ್ಪ ದಂಪತಿಯನ್ನೂ ಕಡೆಗಣಿಸಿದ್ದ. ಆದರೆ ಅದೇ ಸಂತಾನಪ್ಪ, ಡೇಸಾರ ಮನೆ ಸೇರಿಕೊಂಡಿದ್ದನ್ನೂ ಅವರ ಐಶ್ವರ್ಯವೆಲ್ಲ ಅವನ ಪಾಲಾದುದನ್ನೂ ಮತ್ತು ಆನಂತರ ಅವನು ತನ್ನೆದುರಿಗೇ ಆಗರ್ಭ ಶ್ರೀಮಂತನಂತೆ ಮೆರೆಯತೊಡಗಿದ್ದನ್ನೂ ಕಾಣುತ್ತ ಬಂದ ಶಂಕರ ಯದ್ವಾತದ್ವ ಹೊಟ್ಟೆ ಉರಿಸಿಕೊಂಡ. ಅಷ್ಟಲ್ಲದೇ ಅವನೂ ತನ್ನಂತೆ ಮನೆ, ಕಟ್ಟಡ ಕಾಮಗಾರಿಯ ಗುತ್ತಿಗೆ ವಹಿಸಿಕೊಳ್ಳಲಾರಂಭಿಸಿದ್ದಂತೂ ಶಂಕರನನ್ನು ರೊಚ್ಚಿಗೆಬ್ಬಿಸಿಬಿಟ್ಟಿತು. ಆದ್ದರಿಂದ, ಒಂದೆರಡು ವರ್ಷಗಳ ಹಿಂದಷ್ಟೇ ಯಾವನೋ ಭಿಕಾರಿಯೊಬ್ಬ ತನ್ನಲ್ಲಿಗೆ ಕೂಲಿನಾಲಿಗೆ ಬಂದು, ತನಗೆ ಸಲಾಂ ಹೊಡೆಯುತ್ತಿದ್ದಂಥವನು ಇವತ್ತು ತನಗೇ ಪ್ರತಿಸ್ಪರ್ಧಿಯಾಗಿ ನಿಂತಿದ್ದಾನೆ ಮಾತ್ರವಲ್ಲದೇ ನಮ್ಮೂರಿವರ ಆಸ್ತಿಪಾಸ್ತಿಯನ್ನೇ ಲಪಟಾಯಿಸಿ ತನ್ನ ಕಣ್ಣಮುಂದೆಯೇ ಮೆರೆದಾಡುತ್ತಿದ್ದಾನೆಂದರೆ ಅವನಿಗೆಷ್ಟು ಅಹಂಕಾರವಿರಬೇಕು! ಅಂಥವನನ್ನು ಸುಮ್ಮನೆ ಬಿಡಲಿಕ್ಕುಂಟಾ? ಈಶ್ವರಪುರದ ಜನರು ನಾವೆಲ್ಲ ಅಷ್ಟೊಂದು ಮೂರ್ಖರೆಂದು ಭಾವಿಸಿದನೇ ಆ ಬೋಳಿಮಗ! ಈ ಊರಲ್ಲೇ ಹುಟ್ಟಿ ಬೆಳೆದವನು ನಾನು. ನನ್ನ ಈಗಿನ ಹಂತಕ್ಕೆ ತಲುಪಬೇಕಾದರೆ ಅದೆಷ್ಟು ಕಷ್ಟಪಟ್ಟಿದ್ದೇನೆ! ಆದರೂ ಒಂದೊಳ್ಳೆಯ ತೃಪ್ತಿಯ ಮಟ್ಟಕ್ಕಿನ್ನೂ ಬೆಳೆಯಲಾಗಲಿಲ್ಲ. ಅಂಥದ್ದರಲ್ಲಿ ಯಾವನೋ ಒಬ್ಬ ಲಾಟರಿ ಹೊಡೆದಂತೆ ತನ್ನ ಕಣ್ಣೆದುರೇ ಇನ್ನೊಬ್ಬರ ಸಂಪತ್ತನ್ನು ಅನುಭವಿಸಲು ಬಿಟ್ಟೇನೇ…? ಅದೂ ತನ್ನ ಶತ್ರುವಿನ ಸಂಗ ಮಾಡಿದಂಥವನಿಗೆ! ಖಂಡಿತಾ ಇಲ್ಲ. ಹೇಗಾದರೂ ಮಾಡಿ ಅವನಿಂದ ಡೇಸಾರ ಆಸ್ತಿಯ ಸಣ್ಣ ಕವಡೆಯನ್ನೂ ಬಿಡದೆ ಕಿತ್ತುಕೊಳ್ಳಬೇಕು! ಎಂದು ಶಂಕರ ಒಮ್ಮೆ ಉದ್ರಿಕ್ತನಾಗಿ ಯೋಚಿಸಿದವನು ಸಂತಾನಪ್ಪನನ್ನು ಹೊಸಕಿ ಹಾಕಲು ವ್ಯವಸ್ಥಿತ ಸಂಚೊಂದನ್ನು ರೂಪಿಸಿದ. ಸಂತಾನಪ್ಪನಂತೆಯೇ ತನ್ನ ಕೈಕೆಳಗೆ ನೂರಾ ಒಂದನೆಯ ಆಳಾಗಿ ದುಡಿಯುತ್ತ ಕಾರಣವಿಲ್ಲದೆ ತನ್ನಿಂದ ಒದೆಸಿಕೊಳ್ಳುತ್ತ ಕೊನೆಗೊಮ್ಮೆ ರೋಸಿ ಓಡಿ ಹೋಗಿದ್ದಂಥ ಹನುಮಪ್ಪ ಎಂಬವನಿಂದ ತನ್ನ ಕಾರ್ಯ ಸಾಧಿಸಿಕೊಳ್ಳಲು ಮುಂದಾದ. ಆದ್ದರಿಂದ ಒಬ್ಬ ಕೂಲಿಯಾಳಿನೊಂದಿಗೆ, ಹನುಮಪ್ಪ ಕೂಡಲೇ ತನ್ನನ್ನು ಕಾಣಲು ಬರುವಂತೆ ಹೇಳಿ ಕಳುಹಿಸಿದ. ಆದರೆ ಶಂಕರನ ಕಿಡಿಗೇಡಿತನದ ಅರಿವಿದ್ದ ಹನುಮಪ್ಪನಿಗೆ ಅವನ ಹೆಸರೆತ್ತುತ್ತಲೇ ಚೇಳು ಕುಟುಕಿದಂತಾಯಿತು. ಅವನು ಹೇಳಿಕೆ ತಂದವನನ್ನು ಕೋಪದಿಂದ ಧುರುಗುಟ್ಟುತ್ತ, ‘ಹೇ, ಹೋಗಲೇ ಅವನೌವ್ವನಾ! ಸತ್ತರೂ ಇನ್ನೊಂದ್ ದಪಾ ಆ ಹಡೀ ಸೂಳೀಮಗನ ಮಖಾ ನೋಡಕ್ಕಿಲ್ಲಂತ ಓಗೇಳು ಅವ್ನುಗೇ…!’ ಎಂದು ಗದರಿಸಿಬಿಟ್ಟ. ಕೆಲಸದಾಳು ಹಾಗೆಯೇ ಹಿಂದಿರುಗಿದ. ಆದರೆ ಹನುಮಪ್ಪ ಬೈದುದನ್ನು ಶಂಕರನಿಗೆ ಹೇಳಲಿಲ್ಲ. ಬದಲಿಗೆ, ‘ಅವ್ನು ಬರಾಕಿಲ್ಲಾಂದ ಧಣೇರಾ…!’ ಎಂದಷ್ಟೆ ಹೇಳಿದ. ತನ್ನ ಆದೇಶವನ್ನು ತಿರಸ್ಕರಿಸಿದ ಹನುಮಪ್ಪನ ಕೊಬ್ಬನ್ನು ನೆನೆದ ಶಂಕರನಿಗೆ, ಈ ಕ್ಷಣವೇ ಹೋಗಿ ಆ ಬೇವರ್ಸಿಯನ್ನು ಹೊತ್ತು ತಂದು ತುಳಿದು ಹಾಕಲಾ…? ಎಂದೆನ್ನಿಸಿತು. ಆದರೂ ‘ಕಾರ್ಯವಾಸಿ ಕತ್ತೆ ಕಾಲು!’ ಎಂದುಕೊಂಡು ಅವುಡುಗಚ್ಚಿದ. ಆವತ್ತೊಂದು ಭಾನುವಾರ ಸಂಜೆ ತಾನೇ ಖುದ್ದಾಗಿ ಮಸಣದಗುಡ್ಡೆಯ ಹನುಮಪ್ಪನ ಗುಡಿಸಲಿನತ್ತ ಹೊರಟ. ಹನುಮಪ್ಪ ಆಹೊತ್ತು ಕುಡಿದು ಮತ್ತನಾಗಿ ತನ್ನ ಕಾಲೋನಿಯ ಅಶ್ವತ್ಥಮರದ ಕಟ್ಟೆಯಲ್ಲಿ ಕುಳಿತುಕೊಂಡು ನೆರೆಕರೆಯವರೊಡನೆ ಪಟ್ಟಾಂಗ ಹೊಡೆಯುತ್ತಿದ್ದ. ಶಂಕರನ ಕಾರು ಬಂದು ಮರದ ಹತ್ತಿರ ನಿಲ್ಲುತ್ತಲೇ ಬೆಚ್ಚಿಬಿದ್ದು ಎದ್ದು ನಿಂತ. ‘ಮೊನ್ನೆ ತಾನು ಸಿಟ್ಟಿನ್ ಬರದಾಗ ಈ ದುಷ್ಟನಿಗೆ ಬೈದಿದ್ದನ್ನು ಇವನ ಎಂಚಿಲು ನೆಕ್ಕುವ ಆ ನಾಯಿ ಹಾಗೆಯೇ ಒದರಿಬಿಟ್ನೇನೋ! ಇವ ಮೊದಲೇ ತಲೆಕೆಟ್ಟ ಮುಳ್ಳುಹಂದಿ. ಈಗ ನೆರೆಕರೆಯವರ ಮುಂದೆ ಅದೇನ್ ಮಾಡ್ತಾನೋ…?’ ಎಂದು ಯೋಚಿಸಿ ತಣ್ಣಗೆ ಬೆವರಿದ. ಶಂಕರ ಗಂಭೀರವಾಗಿ ಕಾರಿನಿಂದಿಳಿದವನು ಹನುಮಪ್ಪನನ್ನೊಮ್ಮೆ ದುರುಗುಟ್ಟಿ ನೋಡಿದ. ಆಗ ಇನ್ನಷ್ಟು ಕುಗ್ಗಿದ ಅವನ ದೃಷ್ಟಿಯು ತಟ್ಟನೆ ನೆಲಕಚ್ಚಿತು. ‘ಲೇ, ಮಗನಾ ಲಘೂನ ಓಡಿ ಹೋಗಲೇ ಇಲ್ಲಿಂದ…!’ ಎಂದು ಅವನೊಳಗೆ ಯಾರೋ ಕೂಗಿ ಹೇಳಿದಂತಾಯಿತು. ಪಟ್ಟನೇ ತಲೆ ಎತ್ತಿ ಶಂಕರನತ್ತ ನೋಡಿದ. ಆದರೆ ಅವನಾಗಲೇ ಇವನೆದುರು ಬಂದು ನಿಂತಿದ್ದ. ಹನುಮಪ್ಪ ದೆವ್ವ ದರ್ಶನವಾದಂತೆ ಬೆದರಿ ಕುಸಿದು ಬೀಳುವುದೊಂದೇ ಬಾಕಿಯಿತ್ತು! ಅದೇ ಹೊತ್ತಿಗೆ ಅವನೊಂದಿಗೆ ಕುಳಿತಿದ್ದ ನೆರೆಕರೆಯವರು, ‘ಈಗೇನೋ ಗಮ್ಮತ್ತು ನಡೆಯಕೈತಿ!’ ಎಂದು ಕುತೂಹಲ, ಭಯದಿಂದ ರಪ್ಪನೆದ್ದವರು ಶಂಕರನತ್ತ ಹಲ್ಲು ಗಿಂಜುತ್ತ ಹಿಂದೆ ಸರಿದು ನಿಂತು ಅವನಾಟಕ್ಕೆ ಅನುವು ಮಾಡಿಕೊಟ್ಟರು. ‘ಯಾಕಾ ಹನುಮಪ್ಪಾ ಆವತ್ತು ಹೇಳದೆ ಕೇಳದೆ ಕೆಲಸ ಬಿಟ್ಟು ಹೋದವನದ್ದು ಆಮೇಲೆ ಪತ್ತೇನೇ ಇಲ್ಲವಲ್ಲಾ ಮಾರಾಯಾ?’ ಎಂದು ಶಂಕರ ಮುಗುಳ್ನಗುತ್ತ ಪ್ರಶ್ನಿಸಿದ. ಆಗ ಹನುಮಪ್ಪನಿಗೆ ಜೀವ ಬಂದಂತಾಯಿತು. ಆದರೂ ವಿಪರೀತ ಭಯಪಟ್ಟಿದ್ದರಿಂದಲೋ ಏನೋ ಅವನ ಯೋಚನೆಯೇ ನಿಂತುಹೋಗಿತ್ತು. ಶಂಕರನ ಮಾತಿಗೆ ಪಕ್ಕನೇ ಏನುತ್ತರಿಸಬೇಕೆಂದು ತಿಳಿಯದೆ, ‘ಹ್ಞಾಂ… ಅದೂ, ಹಾಗೇನಿಲ್ರೀ ಧಣೇರಾ…!’ ಎಂದು ಹಲ್ಲು ಗಿಂಜಿದ. ‘ಎಂಥದು ಹಾಗೇನಿಲ್ಲ? ನನ್ನೊಂದಿಗೆ ನೀನು ಎಷ್ಟು ವರ್ಷಗಳಿಂದ ದುಡಿಯುತ್ತಿದ್ದಿ ಮಾರಾಯಾ? ಆದರೂ ನನ್ನ ಸ್ವಭಾವ ಎಂಥದ್ದು ಅಂತ ಅರ್ಥವಾಗಲಿಲ್ಲವಲ್ಲಾ ನಿಂಗೆ…? ಆವತ್ತೇನೋ ಕೋಪದ ಭರದಲ್ಲಿ ಎರಡೇಟು ಹೊಡೆದುಬಿಟ್ಟೆ. ಅಷ್ಟಕ್ಕೇ ಎದ್ದು ಹೋಗಿಬಿಡುವುದಾ! ಆನಂತರ ನಾನೆಷ್ಟು ಸಂಕಟಪಟ್ಟೆ ಅಂತ ನಿನಗೇನಾದರೂ ಗೊತ್ತುಂಟಾ?’ ಎಂದು ವಿಷಾದ ವ್ಯಕ್ತಪಡಿಸಿದ. ಶಂಕರನ ಕುತಂತ್ರ ಅರಿಯದ ಅಮಾಯಕ ಹನುಮಪ್ಪ ಅವನ ಶರಣಾಗತಿಯನ್ನು ಕಂಡು ವಿಸ್ಮಯಗೊಂಡ. ಬಳಿಕ, ‘ಎಷ್ಟಾದರೂ ಕಷ್ಟಕಾಲದಲ್ಲಿ ಕೆಲ್ಸ ಕೊಟ್ಟು ಕಾಪಾಡ್ದ ಧಣಿ ಇವ್ರು. ಅಷ್ಟಲ್ಲದೇ ಸ್ವತಃ ತಾವೇ ಹುಡುಕೊಂಬಂದು ತಪ್ಪೊಪ್ಕೊಂಡಿದ್ದಾರೆ. ಇಂಥವರನ್ನು ಬೈದ್ ಬಿಟ್ನಲ್ಲ!’ ಎಂದು ಕೊರಗಿ, ಸಂಕೋಚದಿಂದ ಹಿಡಿಯಾಗಿ ಏನೋ ಹೇಳಲು ಬಾಯಿ ತೆರೆದ. ಅಷ್ಟರಲ್ಲಿ, ‘ನೋಡು ಹನುಮಪ್ಪ, ಇನ್ನೇನೂ ಮಾತಾಡಬೇಡ. ನನಗೆ ನಿನ್ನ ಅವಶ್ಯಕತೆ ತುಂಬಾ ಇದೆ. ನಾಳೆಯಿಂದ ಮರುಮಾತಾಡದೆ ಕೆಲಸಕ್ಕೆ ಬಂದುಬಿಡು. ಹ್ಞಾಂ, ಇನ್ನೊಂದು ಮಾತು. ಇಷ್ಟು ವರ್ಷ ನನ್ನೊಂದಿಗೆ ಕೂಲಿಯವನಾಗಿ ದುಡಿದೆ. ಆದರೆ ನಾಳೆಯಿಂದ ಮೇಸ್ತ್ರಿಯಾಗಿ ದುಡಿಯಬೇಕು. ಅದು ನಿನ್ನಿಂದ ಸಾಧ್ಯವಾ?’ ಎಂದು ಹಸಿದ ನಾಯಿಯ ಮುಂದೆ ಮಾಂಸದ ಚೂರನ್ನೆಸೆದಂತೆ ಆಸೆ ತೋರಿಸಿದ. ಮೇಸ್ತ್ರಿ ಎಂದ ಕೂಡಲೇ ಹನುಮಪ್ಪ ಖುಷಿಯಿಂದ ಆಕಾಶಕ್ಕೆ ನೆಗೆದುಬಿಟ್ಟ. ಏಕೆಂದರೆ ಅವನು ಈಶ್ವರಪುರಕ್ಕೆ ಕಾರ್ಮಿಕನಾಗಿ ಬಂದು ದುಡಿಯಲಾಂಭಿಸಿ ಹದಿನೈದು ವರ್ಷಗಳು ಕಳೆದಿದ್ದವು. ಮನೆ, ಕಟ್ಟಡ ಕಟ್ಟುವ ಕೆಲಸವೆಲ್ಲವನ್ನೂ ಕಲಿತಿದ್ದ. ಇಂದಲ್ಲ ನಾಳೆ ದೊಡ್ಡ ಮೇಸ್ತ್ರಿಯಾಗಬೇಕು ಎಂಬ ಕನಸನ್ನೂ ಕಾಣುತ್ತಿದ್ದ. ಅದಕ್ಕಾಗಿ ಹಲವು ಗುತ್ತಿಗೆದಾರರೊಡನೆ ಆಗಾಗ ಅಂಗಲಾಚುತ್ತಲೂ ಇದ್ದ. ಆದರೆ ಅವರು ಯಾರೂ ಇವನ ಕೆಲಸದ ಮೇಲೆ ವಿಶ್ವಾಸಬಾರದೆ ನಿರಾಕರಿಸುತ್ತಿದ್ದರು. ಹಾಗಾಗಿ ಹೊಟ್ಟೆಪಾಡಿಗೆ ಮಾತ್ರವೇ ಎಂಬಂತೆ ದುಡಿಯಲು ಹೋಗುತ್ತಿದ್ದ. ಇಂದು ಶಂಕರನಂಥ ದೊಡ್ಡ ಗುತ್ತಿಗೆದಾರನೊಬ್ಬ, ‘ನನ್ನ ಮೇಸ್ತ್ರಿಯಾಗುತ್ತೀಯಾ?’ ಎನ್ನುತ್ತಿದ್ದಾನೆ! ಎಂದು ಯೋಚಿಸಿದವನು ಆನಂದದಿಂದ ಉಬ್ಬಿ ಹೋದ. ನಿಜ ಹೇಳಬೇಕೆಂದರೆ ಆಗ ಶಂಕರನಿಗೂ ಮೇಸ್ತ್ರೀಗಳ ಜರೂರತ್ತಿತ್ತು. ಆದ್ದರಿಂದಲೇ ಅವನು ಒಂದೇ ಹೊಡೆತಕ್ಕೆ ಎರಡು ಮಿಕಗಳನ್ನು ಹೊಡೆಯುವ ಹುನ್ನಾರದಿಂದ ಬಂದಿದ್ದ. ಆದರೆ ಕುಕ್ಕುಟಗಳಂತೆ ತಂತಮ್ಮ ಕಾಲ ಬುಡಕ್ಕೇ ಕೆದಕಿಕೊಳ್ಳುವಂಥ ಬಂಡವಾಳಶಾಹಿಗಳ ಸ್ವಾರ್ಥ, ಕುತ್ಸಿತ ಬುದ್ಧಿಯನ್ನು ಒಂದಷ್ಟು ಬಡವರ್ಗವು ಎಂದೂ ತಿಳಿಯುವ ಗೋಜಿಗೆ ಹೋಗುವುದಿಲ್ಲ ಅಥವಾ ತಿಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬಂತೆ ಹನುಮಪ್ಪನೂ ಹಿಂದುಮುಂದು ಯೋಚಿಸದೆ, ‘ಇಲ್ಲ ಧಣೇರಾ, ಆವತ್ತು ನೀವೊಂದೇಟು ಬಡ್ದದ್ದು ನನ್ನ ಒಳ್ಳೆಯದಕ್ಕಾತು ಅಂತ ತಿಳಕೊಂಡಿನ್ರೀ. ಆತ್ರಿಯಪ್ಪಾ, ನಾಳಿಂದ ನಾ ಮೇಸ್ತ್ರೀಯಾಗೇ ನಿಮ್ಮ ಕೂಡೆ ಕೆಲಸಕ್ಕ ಬರ್ತೀನ್ರೀ. ನೀವೀಗ ಲಘೂನ ಮನಿ ಕಡೀ ಹೊಂಡ್ರೀ ಧಣೇರಾ…!’ ಎಂದು ಸೌಜನ್ಯದಿಂದ ಕೈಮುಗಿಯುತ್ತ ಅಂದ. ‘ಹಾಗೆ ಹೇಳು ಮತ್ತೆ…! ಸರಿ ಹಾಗಾದರೆ, ನಾಳೆ ಬೆಳಿಗ್ಗೆ ಮನೆಯ ಕಡೆ ಬಂದುಬಿಡು. ಕೆಲಸ ಎಲ್ಲೀಂತ ಹೇಳುತ್ತೇನೆ’ ಎಂದ ಶಂಕರ ನೂರರ ನೋಟೊಂದನ್ನು ತೆಗೆದು ಅವನ ಕೈಗೆ ತುರುಕಿಸಿ ನಗುತ್ತ ಹಿಂದಿರುಗಿದ. ತಾನು ಅಂದಂತೆಯೇ ಮರುದಿನ ಅವನಿಗೆ ಮೇಸ್ತ್ರಿ ಕೆಲಸವನ್ನು ಕೊಟ್ಟವನು, ಕೆಲವೇ ದಿನದೊಳಗೆ ಅವನ ಆಪ್ತತೆಯನ್ನೂ ಗಳಿಸಿಕೊಂಡ. ಕಾರಣ ಹನುಮಪ್ಪ, ಸಂತಾನಪ್ಪನ ಸಮೀಪದ ಬಂಧುವೂ ಮೇಲಾಗಿ ಆತ್ಮೀಯ ಮಿತ್ರನೂ ಆಗಿದ್ದ. ಆದ್ದರಿಂದ ಶಂಕರ ಹನುಮಪ್ಪನ ಸಹಾಯದಿಂದಲೇ ಸಂತಾನಪ್ಪನ ವಿಶ್ವಾಸವನ್ನು ಮರಳಿ ಗಳಿಸಿ, ತನ್ನ ಕಾರ್ಯ ಸಾಧಿಸಿಕೊಳ್ಳಲು ನಿರ್ಧರಿಸಿದ. ಹಾಗಾಗಿ ಸಂತಾನಪ್ಪನ ವೃತ್ತಿನಿಷ್ಠೆಯನ್ನೂ ಪ್ರಾಮಾಣಿಕತೆಯನ್ನೂ ಹನುಮಪ್ಪನೊಡನೆ ಮಿತಿಮೀರಿ ಹೊಗಳುತ್ತ ತನ್ನ ಸಾರಾಯಿ ಪಾರ್ಟಿಗಳಿಗೆ ಅವನನ್ನು ಉಪಾಯವಾಗಿ ಆಹ್ವಾನಿಸತೊಡಗಿದ. ಆದರೆ ಶಂಕರ ಹೇಗೆ ಹೇಗೆ ಪ್ರಯತ್ನಿಸಿದರೂ ಸಂತಾನಪ್ಪ ಅವನನ್ನು ನಂಬಲು ತಯಾರಿರಲಿಲ್ಲ. ಕಾರಣ ಶಂಕರ ಮಹಾದುಷ್ಟನೆಂಬ ಭಯವೊಂದು ಕಡೆಯಾದರೆ ಹಿಂದೆ ಒಂದಷ್ಟು ಕಾಲವಾದರೂ ತನಗೂ, ತನ್ನ ಸಂಸಾರಕ್ಕೂ ಅನ್ನ ನೀಡಿದ ಧಣಿಯೆಂಬ ಗೌರವಕ್ಕೋ ಏನೋ ಅವನು ಶಂಕರನ ಸ್ನೇಹದ ಹಸ್ತವನ್ನು ಪುರಸ್ಕರಿಸಲು ಇಷ್ಟಪಡಲಿಲ್ಲ. ಆದರೂ ಹನುಮಪ್ಪನ ಮೂಲಕ ಶಂಕರನ ನಿರಂತರ ಪ್ರಯತ್ನವು ಕೊನೆಗೂ ಒಮ್ಮೆ ಸಂತಾನಪ್ಪನ ಬುದ್ಧಿಯನ್ನು ಮಂಕು ಬಡಿಸಿಬಿಟ್ಟಿತು. ಅದೇ ಸಮಯಕ್ಕೆ ಸರಿಯಾಗಿ ಶಂಕರನೂ ಕೊನೆಯ ಪ್ರಯತ್ನವೆಂಬಂತೆ ಆವತ್ತು ಕಡೆಪಾಡಿಬೆಟ್ಟಿನ ತನ್ನ ಹೊಸ ಫ್ಲ್ಯಾಟ್‍ನಲ್ಲಿ ಸಂತಾನಪ್ಪನಿಗಾಗಿಯೇ ಸಣ್ಣದೊಂದು ಔತಣ ಕೂಟವನ್ನು ಆಯೋಜಿಸಿ ಅವನನ್ನು ವಿಶೇಷ ಆದರದಿಂದ ಆಹ್ವಾನಿಸಿದ. ಸಂತಾನಪ್ಪ ಒಲ್ಲದ ಮನಸ್ಸಿನಿಂದ ಹನುಮಪ್ಪನೊಂದಿಗೆ ಶಂಕರನ ಫ್ಲ್ಯಾಟ್‍ಗೆ ಆಗಮಿಸಿದ. ಶಂಕರನ ಊರ ಐವರು ಆಪ್ತ ಸ್ನೇಹಿತರೊಂದಿಗೆ ಬರೇ ಎಂಟು ಜನರಿಂದ ಕೂಡಿದ ಸಣ್ಣ ಔತಣಕೂಟ ಅದಾಗಿದ್ದರಿಂದ ಸಂತಾನಪ್ಪನೂ ಮುಜುಗರ ಬಿಟ್ಟು ಅವರೊಂದಿಗೆ ಬೆರೆತ. ವಿದೇಶಿ ಮದ್ಯದ ಬಾಟಲಿಗಳು ಮತ್ತು ಆಡು, ಕೋಳಿಯ ಹುರಿದ ಮಾಂಸದ ಖಾದ್ಯಗಳು ಕೋಣೆಯೊಳಗೆಲ್ಲ ಘಮಘಮಿಸುತ್ತ ಹಭೆಯಾಡುತ್ತಿದ್ದವು. ಶಂಕರ ಎಲ್ಲರೊಂದಿಗೆ ಸಂತಾನಪ್ಪನಿಗೂ ಸಾರಾಯಿ ಕೊಟ್ಟ. ಸಂತಾನಪ್ಪ ಸಂಕೋಚದಿಂದ ಒಂದು ಪೆಗ್ಗು ಹೊಟ್ಟೆಗಿಳಿಸಿದ. ತುಸು ಮತ್ತೇರುತ್ತಲೇ ನಿರ್ಭಿಡೆಯಿಂದ ಕೈಕಾಲು ಚಾಚಿ ಕುಳಿತು ಶಂಕರ ಬಗ್ಗಿಬಗ್ಗಿಸಿ ಕೊಡುತ್ತಿದ್ದ ಪೆಗ್ಗನ್ನು ಅಡಿಗಡಿಗೆ ಹೀರುತ್ತ ಗತ್ತಿನಿಂದ ಎಲ್ಲರೊಂದಿಗೆ ಹರಟತೊಡಗಿದ. ಶಂಕರ, ಸಂತಾನಪ್ಪನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಕಾದ ಕಬ್ಬಿಣ ಬಡಿಯಲು ಇದೇ ಸರಿಯಾದ ಸಮಯ ಎಂದು ಖಚಿತವಾಗುತ್ತಲೇ, ‘ಏನೋ ಸಂತಾನಪ್ಪಾ ನನ್ನ ಮೇಲೆ ನಿನಗಿನ್ನೂ ಹಿಂದಿನ ಬೇಸರ ಹೋಗಲಿಲ್ಲವಾ ಮಾರಾಯ? ನನ್ನ ಸ್ನೇಹ ಮಾಡಲೇ ಹೆದರುವಂಥ ದ್ರೋಹವನ್ನು ನಿನಗೆ ನಾನು ಮಾಡಿದ್ದಾದರೂ ಏನು ಹೇಳು…?’ಎಂದು ಬೇಸರದ ಧ್ವನಿಯಿಂದ ಕೇಳಿದ. ಶಂಕರನ ಆ ಬಗೆಯ ಆತ್ಮೀಯತೆಯ ಮಾತನ್ನು ಕೇಳಿದ ಸಂತಾನಪ್ಪನಿಗೆ ರಪ್ಪನೆ ಉತ್ತರಿಸಲು ತುಸು ಸಂಕೋಚವಾಯಿತು. ಆದರೆ ಈಗ ತಾನೂ ಶಂಕರನಷ್ಟೇ ಶ್ರೀಮಂತನಲ್ಲವೇ! ಎಂದುಕೊಂಡವನು ಅದೇ ವರ್ಚಸ್ಸಿನಿಂದ, ‘ಹೇ, ಹಾಗೇನಿಲ್ರೀ ಶಂಕ್ರಣ್ಣಾ, ನಿಮ್ಮ್ ಮ್ಯಾಲೆ ಈವಾಗ ನಂಗೇನೂ ಬ್ಯಾಸರ ಇಲ್ಲ ಬಿಡ್ರೀ…!’ ಎಂದ ನಗುತ್ತ. ‘ಹಾಗಾದರೆ ಮತ್ಯಾಕೆ ಆವತ್ತು ಹನುಮಪ್ಪನೊಡನೆ ನಾನು ಎಷ್ಟೊಂದು ಬಾರಿ ಹೇಳಿ ಕಳುಹಿಸಿದರೂ ನೀನು ಬರಲಿಲ್ಲ ಯಾಕೆ ಮಾರಾಯಾ? ಅದರರ್ಥ ನನ್ನ ಮೇಲೆ ನಿನಗಿನ್ನೂ ವಿಶ್ವಾಸ ಬಂದಿಲ್ಲ ಎಂದೇ ಅಲ್ಲವಾ?’ ‘ಯಪ್ಪಾ ವಿಶ್ವಾಸ ಅದೇರೀ… ಆದ್ರಾ ಒಂದ್ಕಾಲದಾಗ ನೀವ್ ನಮ್ ಧಣಿಯಾಗಿದ್ರಲ್ರೀ, ಅದಕ್ಕಾ ಸ್ವಲ್ಪ ಮುಜುಗರ ಆಗ್ತಿತ್ತ್ ಅಷ್ಟೇರೀ!’ ‘ಓಹೋ ಅಷ್ಟೇನಾ ವಿಷ್ಯಾ. ನೋಡು ಸಂತಾನಪ್ಪ ಈ ಹಿಂದೆ ನೀನು ನನ್ನೊಂದಿಗೆ ಕೂಲಿಯವನಾಗಿ ದುಡಿದಿದ್ದಿ ಅಂತ ನಿನ್ನ ಮನಸ್ಸಿನಲ್ಲಿದ್ದರೆ ಅದನ್ನೀಗಲೇ ತೆಗೆದು ಹಾಕು ಮಾರಾಯಾ. ಯಾಕೆಂದರೆ ನೀನೂ ನನ್ನ ಮಟ್ಟಕ್ಕೆ ಬೆಳೆಯಲು ಕಷ್ಟಪಟ್ಟಿದ್ದಿಯೋ ಇಲ್ಲವೋ ಗೊತ್ತಿಲ್ಲ. ಆದರೂ ಬೆಳೆದುಬಿಟ್ಟಿದ್ದಿ ನೋಡು. ಹೀಗಿರುವಾಗ ಆವತ್ತಿನ ಭೇದಭಾವವನ್ನು ಇನ್ನೂ ಇಟ್ಟುಕೊಳ್ಳುವುದರಲ್ಲಿ ಅರ್ಥ ಉಂಟಾ ಹೇಳು?
You cannot copy content of this page