ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಪ್ರಭಾವತಿ ಎಸ್ ದೇಸಾಯಿ

Orange Mason Jar in Body of Water

ಅವನ ಕಣ್ಣಲಿ ಕನಸು ಹುಡುಕಿದ್ದು ನನ್ನದೇ ತಪ್ಪು
ಸುಣ್ಣವನು ಬೆಣ್ಣೆ ಎಂದು ತಿಳಿದಿದ್ದು ನನ್ನದೇ ತಪ್ಪು

ಚಂದಿರನ ತಂಬೆಳಕೆಂದು ಅವನ ಅಪ್ಪಿ ಮುದ್ದಾಡಿದೆ
ಬೆಂಕಿಯ ಸಂಗಡ ಸರಸವಾಡಿದ್ದು ನನ್ನದೇ ತಪ್ಪು

ಮಾತಿಗೆ ಮರುಳಾಗಿ ಪಾದಕ್ಕೆ ಅರಳಿದ ಹೂ ಅಪಿ೯ಸಿದೆ
ಗೋಮುಖ ವ್ಯಾಘ್ರವನು ನಂಬಿದ್ದು ನನ್ನದೇ ತಪ್ಪು

ಒಯ್ಯಾರದಲಿ ದಾವಣಿಯನು ಬಾನಲಿ ತೇಲಾಡಿಸಿದೆ
ಸೆರಗು ಮುಳ್ಳುಕಂಟಿ ಮೇಲೆ ಹಾಕಿದ್ದು ನನ್ನದೇ ತಪ್ಪು

ಮರವ ತಬ್ಬಿ ಹುಲುಸಾಗಿ ಬೆಳೆದು ಬಳುಕಾಡ ಬಯಸಿದೆ
ಗೆದ್ದಲು ಹಿಡಿದ ವೃಕ್ಷಕ್ಕೆ ಅಂಟಿದ್ದು ನನ್ನದೇ ತಪ್ರು

ಶಾಂತವಾಗಿ ಹರಿವ ಸಾಗರಕೆ ಇಳಿದು ಸಂತಸಪಟ್ಟೆ
ವಾರಿಧಿ ಒಳಗಿನ ಸುಳಿಗೆ ಸಿಲುಕಿದ್ದು ನನ್ನದೇ ತಪ್ಪು

ಹೃದಯ ‌ಗೂಡಲಿ ಒಲವ ಹಣತೆ ಹಚ್ಚ ಬೇಕಿತ್ತು”ಪ್ರಭೆ”
ಬಯಲಲಿ ಗಾಳಿಗೆ ದೀಪ ಇಟ್ಟಿದ್ದು ನನ್ನದೇ ತಪ್ಪು

*******************************************

About The Author

1 thought on “ಗಜಲ್”

  1. ಮನಕ್ಕೆ ಆಪ್ತವಾಗುವ ಕವಿತೆ ಎಂದು ನನಗನಸಿದ್ದು ಹೇಳಿದರೆ ನನ್ನ ತಪ್ಪಂತೂ ಅಲ್ಲವೇ ಅಲ್ಲ

Leave a Reply

You cannot copy content of this page

Scroll to Top