ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜ಼ಲ್

ಗಜ಼ಲ್ ಎ . ಹೇಮಗಂಗಾ ಗುರಿಯತ್ತ ದಿಟ್ಟಿ ನೆಟ್ಟ ಕಂಗಳನು ಇಷ್ಟು ಬೇಗ ಮುಚ್ಚುವುದು ಬೇಕಿರಲಿಲ್ಲ‘ ಸರಿ ‘ ಎಂದು ಗಟ್ಟಿ ಮನದಲಿ ಇಷ್ಟು ಬೇಗ ಮರೆಯಾಗುವುದು ಬೇಕಿರಲಿಲ್ಲ ನೆತ್ತರೊಸರಿದ ಹಾದಿಯಲಿ ಸಾಗಬೇಕಿತ್ತು ಚುಚ್ಚಿದ ಮುಳ್ಳ ಕಿತ್ತೊಗೆಯುತಾಸಮಸ್ಯೆಗಳ ಬಲೆ ತುಂಡರಿಸದೇ ಇಷ್ಟು ಬೇಗ ಹೊರಡುವುದು ಬೇಕಿರಲಿಲ್ಲ ನಿನಗಿಂತ ಅದೃಷ್ಟಹೀನರ ದುಸ್ಥಿತಿ ಕೊಂಚವೂ ಕಾಣದಾಗಿ ಹೋಯಿತೇಕೆಸಾವೇ ಎಲ್ಲಕೂ ಪರಿಹಾರವೆಂದು ಇಷ್ಟು ಬೇಗ ದೂರಾಗುವುದು ಬೇಕಿರಲಿಲ್ಲ ಬಾಳ ನಾಟಕ ನಿಲ್ಲದೇ ನಡೆವುದು ವಿಧಿಯೆಂಬ ಸೂತ್ರಧಾರಿ ಆಡಿಸಿದಂತೆನ್ಯಾಯ ಸಲ್ಲಿಸದೇ ಪಾತ್ರಕೆ ಇಷ್ಟು ಬೇಗ ನಿರ್ಗಮಿಸುವುದು ಬೇಕಿರಲಿಲ್ಲ ಎದುರಾಗುವ ಪ್ರತೀ ಕಷ್ಟ ,ಸುಖವನು ಅನುಭವಿಸಲೇಬೇಕು ಹೇಮಮಸಣದ ಮನೆ ನೀನೇ ಬಯಸಿ ಇಷ್ಟು ಬೇಗ ಸೇರುವುದು ಬೇಕಿರಲಿಲ್ಲ ************************* ಮೊನ್ನೆ ಯುವ ಬರಹಗಾರ್ತಿಯೊಬ್ಬರ ಆತ್ಮಹತ್ಯೆ ನನ್ನ ಮನಸ್ಸಿಗೆ ಅಪಾರ ಆಘಾತವನ್ನು ನೀಡಿತು ಮಧುಸೂದನ್ ಅವರೇ……ಆ ನೋವಿನಲ್ಲಿ ಬರೆದ ಗಜಲ್ ಇದು

ಗಜ಼ಲ್ Read Post »

ಕಾವ್ಯಯಾನ

ಭರ್ತಿಯಾಗದೆ ‘ಗೈರು’ಗಳು.

ಕವಿತೆ –ಅಬ್ಳಿ,ಹೆಗಡೆಯವರ ಕವಿತೆ ಭರ್ತಿಯಾಗದೆ ‘ಗೈರು’ಗಳು. ಎಂದೋ,,ಎಲ್ಲೋ,,ಯಾರೋಕೊರೆಯುವ ಚಳಿಗೆಮೈ ಕಾಯಿಸಲು,ಹಚ್ಚಿದ ಸಣ್ಣ ಬೆಂಕಿ-ಇಂದು ಈ,,ರಣ-ಬೇಸಿಗೆಯಲ್ಲಿ,ಬಿಸಿಲ ಬೆಂಕಿ-ಯೊಡಗೂಡಿ ದುಪ್ಪಟ್ಟು.ಕಡಲತಡಿಯಿಂದಹಿಮದ ಮುಡಿಯವರೆಗೂ…ಬಿಡದ ಪಟ್ಟು.ಉರಿವಗ್ನಿಕುಂಡಕ್ಕೆತುಪ್ಪ ಸುರಿಯುವವರೆಎಲ್ಲೆಲ್ಲೂ………ದೇವರ ಹಾಜರಿ-ಪುಸ್ತಕದಲ್ಲಿಭರ್ತಿಯಾಗಲೇ-ಬೇಕಿರುವ ‘ಗೈರು’ಗಳು. *************************

ಭರ್ತಿಯಾಗದೆ ‘ಗೈರು’ಗಳು. Read Post »

ಕಥಾಗುಚ್ಛ

ರೊಟ್ಟಿ ತೊಳೆದ ನೀರು

ಕಥೆ ರೊಟ್ಟಿ ತೊಳೆದ ನೀರು ಶಾಂತಿವಾಸು ಮುಂಜಾವಿನ ಚುಮುಚುಮು ಚಳಿಯಲ್ಲಿ ಮಂಕಿ ಟೋಪಿ, ಸ್ವೆಟರ್ ಧರಿಸಿ ವಾಕಿಂಗ್ ಹೊರಟ ಅರವತ್ತೆಂಟರ ಪಾಂಡುರಂಗಯ್ಯ ಶೆಟ್ಟರು, ಇನ್ನೂ ಮಲಗಿಯೇ ಇದ್ದ ಹೆಂಡತಿ ಲಲಿತಮ್ಮಳೆಡೆ ನೋಡಿದರು. ಇಷ್ಟು ಹೊತ್ತಿಗಾಗಲೇ ಗೇಟಿನ ಹೊರಗೆ ಒಳಗೆಲ್ಲ ಗುಡಿಸಿ, ನೀರು ಹಾಕಿ ರಂಗೋಲಿ ಬಿಡಿಸಿ, ಡಿಕಾಕ್ಷನ್ ಹಾಕಿಟ್ಟು ತನ್ನೊಂದಿಗೆ ವಾಕಿಂಗ್ ಹೊರಡುವವಳು ಇನ್ನೂ ಏಕೆ ಎದ್ದಿಲ್ಲವೆಂಬ ಅನುಮಾನವಾಯಿತು. ಉಸಿರಾಡುತ್ತಿದ್ದಾಳೆಯೇ? ಎಂದು ತಿಳಿದುಕೊಳ್ಳುವ ಸಲುವಾಗಿ ತುಸು ಮಂಜಾದ ಕಣ್ಣಿನಿಂದ ಹತ್ತಿರ ಹೋಗಿ ಬಗ್ಗಿ ನೋಡಿದರು. ‘ಬದುಕಿದ್ದಾಳೆ’ ಎಂದು ಖಾತ್ರಿ ಮಾಡಿಕೊಂಡು ಬಾಗಿಲೆಳೆದುಕೊಂಡು ಹೊರಗೆ ನಡೆದರು. ರಸ್ತೆಯ ತಿರುವಿಗೆ ಬರುತ್ತಿದ್ದಂತೆ ಪ್ರತಿದಿನ ಅಡ್ಡ ಸಿಗುತ್ತಿದ್ದ ಚಂದ್ರಪ್ಪ ಕೂಡ ಇಂದು ಕಾಣಿಸಲಿಲ್ಲ.      ನಿಂತಲ್ಲಿಯೇ ನಿಂತು ಚಂದ್ರಪ್ಪನ ಮೊಬೈಲಿಗೆ ಫೋನ್ ಮಾಡಿದರು. ಚಂದ್ರಪ್ಪ ಫೋನ್ ತೆಗೆದದ್ದೇ ತಡ “ಎಲ್ಲಪ್ಪ? ಇವತ್ತು ಇನ್ನೂ ಬಂದೇ ಇಲ್ವಾ? ಬರ್ತಿಯೋ ಇಲ್ವೊ”? ಕೇಳಿದರು. ಆ ಕಡೆಯಿಂದ ಚಂದ್ರಪ್ಪ ಛೇಡಿಸುವ ದನಿಯಲ್ಲಿ “ಅಲ್ಲ ಶೆಟ್ರೇ, ಲೇಟಾಗಿ ಬಂದವರು ನೀವು. ನನ್ನನ್ನೇ ಬಂದಿಲ್ವಾ ಅಂತ ಕೇಳ್ತೀರಾ? ನಾನು ಆಗಲೇ ವಾಕಿಂಗ್ ಮುಗಿಸಿ, ಕಾಫಿ ಕುಡೀತಿದ್ದೀನಿ. ಬಿಸಿ ಬಿಸಿ ಇಡ್ಲಿ ಇಳಿಸ್ತಿದ್ದಾರೆ ಬನ್ನಿ. ತಿಂದು ಮನೆಗೆ ಹೋಗೋಣ” ಎನ್ನಲು, ಶೆಟ್ಟರು “ಇಲ್ಲ ನಾನು ಮನೆಗೆ ಹೋಗ್ತೀನಿ ಚಂದ್ರಪ್ಪ” ಎಂದು ಹೇಳಿ ಫೋನಿಟ್ಟ ಶೆಟ್ಟರಿಗೆ ವಾಕಿಂಗ್ ಹೋಗುವ ಮನಸ್ಸಿರಲಿಲ್ಲ. ಹೆಂಡತಿಯ ಕುರಿತು ಭಯವಾಗತೊಡಗಿತು. ಮೊಬೈಲಿನಲ್ಲಿ ಸಮಯ ಏಳೂವರೆ ತೋರಿಸುತ್ತಿತ್ತು. ವಾಪಸ್ ಮನೆಗೆ ಬಂದವರು ನೇರವಾಗಿ ರೂಮಿಗೆ ಹೋದರು.     ಅಪರೂಪಕ್ಕೆ ಇನ್ನೂ ಮಲಗಿದ್ದ ಲಲಿತಮ್ಮನನ್ನು ಎಬ್ಬಿಸಲು ಮನಸ್ಸು ಬರಲಿಲ್ಲ. ಆದರೆ ಏಕೆ ಎದ್ದಿಲ್ಲವೆಂದು ತಿಳಿಯುವ ತನಕ ನೆಮ್ಮದಿಯೂ ಇಲ್ಲ ಅವರಿಗೆ. ಮೆಲುವಾಗಿ “ಲಲಿತ ನಿದ್ದೆ ಮಾಡ್ತಿದ್ದೀಯಾ ಇನ್ನೂ”? ಎಂದರು. ಕಣ್ಣುಬಿಟ್ಟ ಲಲಿತಮ್ಮ “ಟೈಮೆಷ್ಟು? ಆಗ್ಲೇ ವಾಕಿಂಗ್ ಹೋಗಿ ಬಂದು ಬಿಟ್ರಾ”? ಕೇಳಿದರು. “ನಾನು ಎದ್ದಾಗ್ಲೇ ಏಳಾಗಿತ್ತು ಅನ್ನಿಸುತ್ತೆ. ಚಳಿ ನೋಡು. ಮಲಗಿಬಿಟ್ಟಿದ್ದೀನಿ. ನಾನು ವಾಕಿಂಗ್ ಹೋಗ್ಲೇ ಇಲ್ಲ. ಅಷ್ಟು ದೂರ ಹೋಗಿದ್ದವನು, ನೀನ್ಯಾಕೋ ಎದ್ದಿಲ್ವಲ್ಲ ಅಂತ ವಾಪಸ್ ಬಂದೆ. ಕಾಫಿ ಕೊಡು” ಎಂದರು. “ಕೊಡ್ತೀನಿ ಇರಿ” ಎನ್ನುತ್ತಾ ಎದ್ದು ಹೋದ ಲಲಿತಮ್ಮನ ಕುಗ್ಗಿದ ಬೆನ್ನನ್ನೇ ನೋಡುತ್ತಾ ಕುಳಿತ ಪಾಂಡುರಂಗಯ್ಯ ಶೆಟ್ಟರು, ‘ಇವಳಿಗೇನಾದರೂ ಆದರೆ, ನನ್ನ ಗತಿ ಏನಪ್ಪಾ ದೇವರೇ’? ಎಂದು ಎದೆಯ ಮೇಲೆ ಕೈ ಇಟ್ಟುಕೊಂಡರು. ಒಂದು ತಿಂಗಳಿನಿಂದಲೂ ಲಲಿತಮ್ಮನಲ್ಲಿ ಈ ತರಹದ ಒಂದೊಂದೇ ಬದಲಾವಣೆಯನ್ನು ಗಮನಿಸುತ್ತ ಬಂದಿದ್ದ ಶೆಟ್ಟರು ‘ಆದಷ್ಟು ಬೇಗ ಮನೆಯ ವಿಷಯ ಇತ್ಯರ್ಥ ಮಾಡಿಬಿಡಬೇಕು. ಎಲ್ಲವೂ ಹೋದರೂ ಪರವಾಗಿಲ್ಲ. ಕೊನೆಗೆ ಇವಳೊಬ್ಬಳನ್ನು ಮಾತ್ರ ಉಳಿಸಿಕೊಳ್ಳಬೇಕು’ ಎಂದು ತೀರ್ಮಾನಿಸಿದರು.      ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಆರು ಹಾಗೂ ಮೂರುವರೆ ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ, ಹೊಳೆನರಸೀಪುರದಲ್ಲಿದ್ದ ಜಮೀನು ಮಾರಿ ಹತ್ತು ಸಾವಿರ ರೂಪಾಯಿಗಳನ್ನು ಕೈಲಿ ಹಿಡಿದು ಬೆಂಗಳೂರಿಗೆ ಬಂದು ಸಂಸಾರ ಹೂಡಿದ್ದ ಪಾಂಡುರಂಗಯ್ಯ ಶೆಟ್ಟರು ಹಾಗೂ ಲಲಿತಮ್ಮ ಬಹಳ ಕಷ್ಟ ಜೀವಿಗಳು. ಎರಡು ಬಾಗಿಲುಗಳ ದಿನಸಿ ಅಂಗಡಿ ತೆರೆದು ಅದಕ್ಕಂಟಿದಂತಿದ್ದ ಮನೆಯನ್ನು ಬಾಡಿಗೆಗೆ ಪಡೆದು, ಗಂಡ ಹೆಂಡತಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದರು. ಅಪರಿಚಿತ ಊರಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿ ಸಂಸಾರವು ನೆಲೆ ಕಂಡುಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಒಂದೊಂದು ಪೈಸೆಗೂ ಲೆಕ್ಕ ಹಾಕಿ ಖರ್ಚು ಮಾಡುತ್ತಾ ಬೆಂಗಳೂರಿಗೆ ಬಂದು ಹದಿನೈದು ವರ್ಷಗಳ ನಂತರ ಬಾಡಿಗೆಗೆ ಪಡೆದಿದ್ದ ಕಟ್ಟಡವನ್ನೇ ಸ್ವಂತಕ್ಕೆ ಕೊಂಡುಕೊಂಡರು.     ನಂತರ ಹಳೆಯ ಕಟ್ಟಡವನ್ನು ಕೆಡವಿ ಕೆಳಗೆ ಬಾಡಿಗೆಗೆ ಒಂದು ಮನೆ, ತಮಗೆ ಎರಡು ಬಾಗಿಲಿನ ಅಂಗಡಿ, ಅದರ ಮೇಲೆ ತಮ್ಮ ವಾಸಕ್ಕೆ ಅನುಕೂಲವಾದ ಮೂರು ಬೆಡ್ ರೂಮಿನ ಮನೆ, ಮತ್ತೂ ಮೇಲೆ ಬಾಡಿಗೆಗೆ ಎರಡು ಮನೆ ಕಟ್ಟಿಕೊಂಡರು. ಜೀವನ ಮೊದಲಿನಷ್ಟು ತ್ರಾಸ ಇಲ್ಲದಿದ್ದರೂ ಸುಮ್ಮನಿದ್ದು ಅಭ್ಯಾಸವಿರದ ದಂಪತಿಗಳು, ಮಕ್ಕಳು ಮೊಮ್ಮಕ್ಕಳಿಗೆಂದು ದುಡಿಯುತ್ತಾ ಅಂಗಡಿಯ ವ್ಯಾಪಾರವನ್ನು ಮಾತ್ರ ನಿಲ್ಲಿಸಲಿಲ್ಲ.       ಹೆಚ್ಚು ಓದದೆ ತಂದೆಯೊಂದಿಗೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ದೊಡ್ಡಮಗ ಕೇಶವನಿಗೆ ಆರು ವರ್ಷದ ಕೆಳಗೆ ತಮ್ಮದೇ ಊರು ಹೊಳೆನರಸೀಪುರದ ರಥಬೀದಿಯ ರಾಮಪ್ಪ ಶೆಟ್ಟಿಯ ಮಗಳು ಕವಿತಾಳೊಂದಿಗೆ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದರು. ಅವರಿಗೆ ಒಬ್ಬ ಮಗ ವಿಶ್ವಾಸ್ ಐದು ವರ್ಷದವನು. ಎರಡನೆಯ ಮಗ ಕೃಷ್ಣ (ಕಿಟ್ಟಿ) ಬಿ.ಕಾಂ ಓದಿ ಲೆಕ್ಕಪರಿಶೋಧಕರ ಬಳಿ ಕೆಲಸಕ್ಕೆ ಸೇರಿದವನು ಕೊನೆಗೆ ಅದೇ ಕಂಪನಿಯಲ್ಲಿ ಮ್ಯಾನೇಜರಾಗಿ ಬಡ್ತಿ ಪಡೆದು ಮುಂಬೈ ಸೇರಿದ್ದ. ಈಗ ಎರಡು ವರ್ಷಗಳ ಹಿಂದೆ ಅವನಿಗೂ ಮೈಸೂರಿನ ಕೃಷ್ಣಯ್ಯ ಶೆಟ್ಟಿಯವರ ಮಗಳು ಪಂಕಜಳಿಗೂ ಮದುವೆ ಮಾಡಿಸಿ ನೆಮ್ಮದಿಯ ನಿಟ್ಟುಸಿರೆಳೆದಿದ್ದರು ಪಾಂಡುರಂಗಯ್ಯ ಹಾಗೂ ಲಲಿತಮ್ಮ ದಂಪತಿಗಳು.      ಇಷ್ಟೇ ಆಗಿದ್ದರೆ ಇವರ ಸಂಸಾರದ ಹಣೆಬರಹವನ್ನು ಮತ್ತೆ ಆಸಕ್ತಿವಹಿಸಿ ಓದಲಾಗುವುದಿಲ್ಲವೆಂದೇ ದೇವರು ಶೆಟ್ಟರಿಗೆ ಒಂದೊಂದೇ ಕಾಯಿಲೆಯನ್ನು ಸೇರಿಸುತ್ತಾ ಸಾಗಿದ್ದ. ಸಕ್ಕರೆ ಕಾಯಿಲೆಯೊಂದಿಗೆ ರಕ್ತದೊತ್ತಡ ಬೇರೆ ಸೇರಿಕೊಂಡು ಇಳಿವಯಸ್ಸಿನಲ್ಲಿ ನೆಮ್ಮದಿಯಾಗಿ ತಿನ್ನಬಹುದು ಎಂದು ಏನನ್ನೂ ತಿನ್ನದೆ ಬರೀ ನೋಡಿ ನೋಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಶೆಟ್ಟರ ನಾಲಿಗೆ ಚಪಲಕ್ಕೆ ಶಾಶ್ವತವಾಗಿ ಬೀಗ ಹಾಕಿತ್ತು. ಮದುವೆಗೆ ಮೊದಲು ರಜೆ ಸಿಕ್ಕಾಗೆಲ್ಲಾ ಮುಂಬೈನಿಂದ ಬರುತ್ತಿದ್ದ ಕಿಟ್ಟಿ ಮದುವೆಯಾದ ಮೊದಲ ವರ್ಷ ಒಂದೆರಡು ಸಲ ಬಂದಿದ್ದನಷ್ಟೇ, ನಂತರ ಬರುವುದು ಬೇಡ, ಕೊನೇ ಪಕ್ಷ ಫೋನ್ ಮಾಡುವುದನ್ನೂ ಬಿಟ್ಟುಬಿಟ್ಟಿದ್ದ. ಇವರಾಗೇ ಫೋನ್ ಮಾಡಿದರೂ ಒಂದೆರಡೇ ಮಾತಿನಲ್ಲಿ ಎಲ್ಲವನ್ನೂ ಕೇಳಿ ಮುಗಿಸುತ್ತಿದ್ದನಷ್ಟೇ ಹೊರತೂ ತಾನಾಗಿ ಏನನ್ನೂ ಹೇಳುತ್ತಿರಲಿಲ್ಲ.      ಬರಲಾರೆನೆಂದು ನೇರವಾಗಿ ಹೇಳದೆ, ಬಿಡುವಿಲ್ಲವೆಂದು ಮೊದಲೇ ಹೇಳಿಬಿಡುತ್ತಿದ್ದವನನ್ನು ಇವರುಗಳು ಕೂಡ “ಬಾ” ಎಂದು ಕರೆಯುವುದನ್ನು ಬಿಟ್ಟುಬಿಟ್ಟರು. ತಾವೇ ಹೋಗಿ ಮಗನ ಮನೆಯಲ್ಲಿದ್ದು ಬರಬಹುದೆಂಬ ಹೆಂಡತಿಯ ಸಲಹೆ ಶೆಟ್ಟರಿಗೆ ರುಚಿಸಲಿಲ್ಲ. “ಮನೆಬಿಟ್ಟು ನಾನೆಲ್ಲೂ ಬರುವುದಿಲ್ಲ. ಕೇಶವ ಒಬ್ಬ ಅಂಗಡೀನ ಹೇಗೆ ನೋಡಿಕೊಳ್ಳುತ್ತಾನೆ? ಅವನಿಗೆ ಕಷ್ಟವಾಗುತ್ತೆ. ನಾವು ರೈಲ್ವೇ ಸ್ಟೇಷನ್ನಿನಲ್ಲಿರೋ ವೈಟಿಂಗ್ ರೂಮ್ ತರ. ಈ ಜಾಗ ಬಿಟ್ಟು ಕದಲಲ್ಲ. ಇರೋ ಕಡೆನೇ ಪರ್ಮನೆಂಟು. ಅವರೆಲ್ಲ ರೈಲಿನ ಹಾಗೆ ಬರೋರು ಬರಲಿ ಹೋಗೋರು ಹೋಗಲಿ ನಾನು ಮಾತ್ರ ಎಲ್ಲೂ ಕದಲಲ್ಲ” ಎಂದು ನಗೆಚಟಾಕಿ ಜೊತೆಗೆ ಲಲಿತಮ್ಮನ ಬೇಡಿಕೆಯನ್ನು ಅಲ್ಲಿಯೇ ತುಂಡರಿಸುತ್ತಿದ್ದರು. ‘ಬೇಕಿದ್ದರೆ ನೀನು ಹೋಗಿ ಬಾ’ ಎಂದು ಬಾಯಿ ಮಾತಿಗೂ ಹೇಳುತ್ತಿರಲಿಲ್ಲ ಪುಣ್ಯಾತ್ಮ. ಖರ್ಚು ಎಂಬ ನೆಪ ಒಂದು ಕಡೆಯಾದರೆ, ಮನೆಯನ್ನು ಸೊಸೆಯ ಮೇಲೆ ಬಿಟ್ಟು ಹೋಗುವಷ್ಟು ನಂಬಿಕೆ  ಶೆಟ್ಟರಿಗೆ ಇರಲಿಲ್ಲ. ಇಷ್ಟಕ್ಕೂ ಇವರು ಯಾರನ್ನೂ ಮುಂಬೈಗೆ ಬಂದು ಒಂದೆರಡು ದಿನವಾದರೂ ಇರಿ ಎಂದು ಕಿಟ್ಟಿಯೋ ಅಥವಾ ಪಂಕಜಳೋ ಕರೆದೂ ಕೂಡ ಇರಲಿಲ್ಲ. ಅದನ್ನು ಗಮನಿಸುತ್ತಿದ್ದ ಹಿರಿಸೊಸೆ ಕವಿತಾ, ಇನ್ನು ಈ ವಯಸ್ಸಾದ ಎರಡೂ ಬಳ್ಳಿಗಳು ನಮ್ಮ ಕಾಲಿಗೆ ಸುತ್ತಿಕೊಂಡಿವೆ ಎನ್ನುವಂತೆ “ಇವರಿಬ್ಬರಿಂದ ನನಗೆ ಯಾವಾಗ ಮುಕ್ತಿಯೋ” ಎನ್ನುತ್ತಾ ಮೊದಲು ಗೊಣಗಲು ಆರಂಭಿಸಿ ನಂತರದ ದಿನಗಳಲ್ಲಿ ಅವರಿವರಿಗೆ ಫೋನಿನಲ್ಲೂ, ಮನೆಗೆ ಬಂದವರೊಡನೆಯೂ ಹೇಳಿಕೊಂಡು ಗೋಣಗುತ್ತಾ ಓಡಾಡುತ್ತಿದ್ದುದು ಆಗಾಗ ಕಿವಿಯ ಮೇಲೆ ಬೀಳುತ್ತಲೇ ಇತ್ತು. ಇವರಿಬ್ಬರೂ ಆಡುವ ಮಾತುಮಾತಿಗೂ ಕಿರಿಕಿರಿಯಾಗುತ್ತಿದ್ದವಳು, ಹಲವಕ್ಕೆ ಕಿವುಡಾಗಿದ್ದಳು. ಈ ನಡುವೆ ಆಗಾಗ ತಲೆತಿರುಗಿ ಬಿದ್ದು, ಸುಮ್ಮನೆ ಮಲಗಿ ಮೆಲ್ಲಮೆಲ್ಲನೆ ಹಾಸಿಗೆ ಹಿಡಿಯುವ ಹಂತದಲ್ಲಿದ್ದ ಲಲಿತಮ್ಮನ ಆರೋಗ್ಯದ ಏರುಪೇರಿನ ವಿಷಯದಲ್ಲಿ ಕುರುಡಿಯೂ ಸಹಾ ಆಗಿದ್ದಳು.  ಈ ಮಧ್ಯೆ ಕವಿತಾ ಮತ್ತೊಂದು ಮಗುವಿಗೆ ಬಸುರಾಗಿ ಮೂರು ತಿಂಗಳಿಗೆ ಗರ್ಭಪಾತವಾಗಿತ್ತು. ಅವಳು ತಾಯಿಗೆ ಫೋನಿನಲ್ಲಿ “ಇರೋ ಒಂದು ಮಗೂಗೇ ಸೆಕ್ಯೂರಿಟಿ ಇಲ್ಲ. ಈ ಅವತಾರದಲ್ಲಿ ಇನ್ನೂ ಒಂದು ಮಗು ಬೇರೆ ಯಾಕೆ ಬೇಕಿತ್ತು? ಅದು ಹೋಗಿದ್ದೇ ಒಳ್ಳೆದಾಯ್ತು. ಬಿಡಮ್ಮ” ಎನ್ನುವುದನ್ನು ಕೇಳಿಸಿಕೊಂಡ ಲಲಿತಮ್ಮನಿಗೆ ಮಗುವನ್ನು ತಾನೇ ತೆಗೆಸಿದ್ದಾಳೆ ಎಂಬ ಅನುಮಾನ ಬಲವಾಗತೊಡಗಿತು. ಗಂಡನಿಗೆ ಹೇಳಿದರೆ “ಮಗು ಹೊರೋದು, ಹೆರೋದು, ಸಾಕೋದು ಎಲ್ಲಾ ಅವಳೇ ಅಲ್ವಾ? ಇನ್ನೊಂದು ಮಗು ಬೇಕೋ ಬೇಡವೋ ಎಲ್ಲ ಅವಳೇ ತೀರ್ಮಾನ ಮಾಡಿರ್ತಾಳೆ ಬಿಡು” ಎಂದು ಉದಾಸೀನವಾಗಿ ಹೇಳಿಬಿಟ್ಟರು ಶೆಟ್ಟರು. ಆದರೆ ಲಲಿತಮ್ಮನಿಗೆ ಸಂಕಟವಾಗಿ “ಸೆಕ್ಯೂರಿಟಿ ಇಲ್ಲ ಅಂದ್ರೆ ಏನರ್ಥ”? ಎಂದು ಮತ್ತೆ ಗಂಡನನ್ನು ಕೇಳಿದಳು. “ಆ ಮಗು ಹುಟ್ಟಿ, ಬೆಳೆದು, ಓದಿ ಕೊನೆಗೆ ಫಾರಿನ್ನಿಗೆ ಹೋಗೋವರೆಗೂ ನಾವು ಸಂಪಾದಿಸಿದ ಹಣ ಅವಳಿಗೆ ಅವಳ ಮಕ್ಕಳಿಗೆ ಸೆಕ್ಯೂರಿಟಿಯಾಗಿ ಬೇಕು ಅಂತ ಅರ್ಥ” ಎಂದು ಆ ಮಾತಿಗೆ ಅಲ್ಲಿಯೇ ಪೂರ್ಣ ವಿರಾಮವನ್ನಿಟ್ಟಿದ್ದರು. ಆದರೆ ನಂತರದ ಸಮಸ್ಯೆಗಳು ಹಲವಾರು ಅಲ್ಪವಿರಾಮಗಳನ್ನು ದಾಟುತ್ತಿದ್ದವಾಗಲಿ, ತಾನು ಸೃಷ್ಟಿಸುತ್ತಿರುವ ಸಮಸ್ಯೆಗಳಿಗೆ ಹಿರಿಯರು ಪೂರ್ಣವಿರಾಮ ಹಾಕಲಿ ಎಂದು ಸೊಸೆ, ಶುರುಮಾಡಿದ ಸೊಸೆಯೇ ನಿಲ್ಲಿಸಲಿ ಎಂದು ಶೆಟ್ಟರು ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದರು. ಇವರಿಬ್ಬರು ಸೃಷ್ಟಿಸಿದ ಹಬೆಗೆ ಲಲಿತಮ್ಮನಿಗೆ ಪ್ರಾಣಸಂಕಟವಾಗುತ್ತಿತ್ತು. ಗಂಡಸರಿಲ್ಲದ ಸಮಯದಲ್ಲಿ ಸೊಸೆಯ ವರಸೆ ಬೇರೆಯೇ ಆಗಿರುತ್ತಿತ್ತು. ಸುಮ್ಮನೆ ಗಂಟೆಗಟ್ಟಲೆ ಟಿವಿ ನೋಡುತ್ತಾ ಕುಳಿತಿದ್ದು, ಇನ್ನೇನು ಊಟದ ಹೊತ್ತಾಯಿತು ಎನ್ನುವಾಗ ಎದ್ದು ಅವಸರದಲ್ಲಿ ಅಡುಗೆ ಮಾಡಲು ತೊಡಗಿ ಪಾತ್ರೆಗಳು ಉರುಳುರುಳಿ ಬಿದ್ದು, ಬೆಚ್ಚಿ ಬೀಳುವಂತಾಗುತ್ತಿತ್ತು. ಪಾತ್ರೆಗಳನ್ನು ಆಗಿಂದಾಗ್ಗೆ ತೊಳೆಯದೆ, ರಾಶಿ ಹಾಕಿ ಅದರತ್ತ ಗಮನಿಸದೆ ಓಡಾಡುತ್ತಾ ರಾತ್ರಿ ಮಲಗುವ ಸಮಯಕ್ಕೆ ತೊಳೆಯುವ ಅವಳ ಕ್ರಮ ಎಲ್ಲರ ಹುಬ್ಬನ್ನೂ ಗಂಟಾಗಿಸುತ್ತಿತ್ತು. ಜೊತೆಗೆ ತಾನು ಮಾಡುತ್ತಿದ್ದ ಕುಚೇಷ್ಟೆಗಳಿಗೆ ತಾನೇ ಸಿಡಿಮಿಡಿಯಾಗುತ್ತಿದ್ದಳು. ಮೊದಲೆಲ್ಲಾ ಹೀಗಿರದೆ, ಇತ್ತೀಚೆಗೆ ಬದಲಾದ ಅವಳ ನಡವಳಿಕೆಗೆ ಎಲ್ಲರೂ ಅವರವರಿಗೆ ತೋಚಿದ ಕಾರಣಗಳನ್ನು ಕಂಡುಕೊಳ್ಳುವಂತೆ ಮಾಡಿತ್ತಾಗಲೀ ಪರಿಹಾರ ಶೂನ್ಯವಾಗಿತ್ತು.      ಒಮ್ಮೆ ವಾಕಿಂಗ್ ಮುಗಿಸಿ ಬಂದು ಲಲಿತಮ್ಮ ನೀಡಿದ ಕಾಫಿ ಕುಡಿದು ಸ್ನಾನಕ್ಕೆ ಹೊರಡಲು ನಿಂತ ಶೆಟ್ಟರನ್ನು ಕವಿತಾ “ಮಾವ ಜಮೀನು ಮಾರಿ, ಹತ್ತು ಸಾವಿರ ಕೈಯಲ್ಲಿ ಹಿಡಿದು ಬಂದು ಬೆಂಗಳೂರಲ್ಲಿ ಬದುಕು ಶುರು ಮಾಡಿದೆವು ಅಂತ ಯಾವಾಗಲೂ ಹೇಳ್ತೀರಲ್ಲ? ನಿಮ್ಮ ತಂದೆ ಇದ್ದಾಗಲೇ ತಾನೇ ಜಮೀನು ಮಾರಿ ನೀವೆಲ್ಲಾ ಹಂಚಿಕೊಂಡಿದ್ದು” ಎಂದು ರಾಗವಾಗಿ ಕೇಳಲು, ಶೆಟ್ಟರು ಸಿಟ್ಟಿನಿಂದ “ನಾನು ಸ್ಕೂಲಿಗೆ ಹೋಗದೆ ಆರು ವರ್ಷದ ಮಗುವಾಗಿದ್ದಾಗಿಂದ ನಮ್ಮಪ್ಪ ಶುರುಮಾಡಿದ ಹೋಟೆಲಿನಲ್ಲಿ ಲೋಟ ತೊಳೆದಿದ್ದೀನಿ ಅದನ್ನು ನಿನಗೆ ಯಾರೂ ಹೇಳಲಿಲ್ಲವೇ?” ಎಂದು ಕೇಳುತ್ತಲೇ ಅಲ್ಲಿ ನಿಲ್ಲದೆ ಸ್ನಾನಕ್ಕೆ ಹೊರಟುಬಿಟ್ಟರು. ‘ಗಂಡ ಕೇಶವನ ತಲೆ ತಿಂದು ಏನೂ ಉಪಯೋಗವಾಗದೇ, ಕೊನೆಗೆ ನೇರವಾಗಿ ನನ್ನ ಬಳಿ ಆಸ್ತಿಯ ಬಗ್ಗೆ ಮಾತನಾಡುವ ಹಂತಕ್ಕೆ ಬಂದಿದ್ದಾಳೆ’ ಎಂದು ಅವರಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. “ಪಾಪ ನಮ್ಮ ಕೇಶವ ಹೆಂಡತಿಯ ಮಾತು ಕೇಳಲಾಗದೆ, ನಮ್ಮನ್ನೂ ಎದುರು ಹಾಕಿಕೊಳ್ಳಲಾಗಿದೆ, ಒಳಗೊಳಗೆ ಎಷ್ಟು ಹೆಣಗಾಡುತ್ತಿದ್ದಾನೋ” ಎಂದು ಹೆಂಡತಿಯ ಬಳಿ ಹೇಳಿಯೂ ಇದ್ದರು. ಆದರೆ ಏನನ್ನೂ ಮಾಡಲು ತೋಚದೆ ಅವಳು ಕೇಳಿದ ನೇರ ಪ್ರಶ್ನೆಗಳಿಗೆ ಚಾಟಿಯೇಟಿನ ಉತ್ತರ ನೀಡಿ, ನಂತರದ ಇರಿಸುಮುರಿಸನ್ನು ತಾವೇ ಅನುಭವಿಸುತ್ತಿದ್ದರು.       ಜೀವನ ತನ್ನ ಪಾಡಿಗೆ ತಾನು ನಡೆಯಲಿ ಎಂದು ಇದ್ದುಬಿಟ್ಟರೆ, ಅರ್ಧ ಸಮಸ್ಯೆ ಹುಟ್ಟುವುದೇ ಇಲ್ಲ ಅಲ್ಲವೇ? ಆದರೆ ಇರುವುದಕ್ಕಿಂತಲೂ ಬೇರೆಯದನ್ನು ಬಯಸಿ, ಹಲವರ ಮನಸ್ಸನ್ನು ನೋಯಿಸಿ ಪಡೆಯುವುದೇ ಸುಖವೆಂದು ತಿಳಿದು ಅದನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ  ಎಡವಟ್ಟನ್ನೇ ಮಾಡುತ್ತಿರುತ್ತಾರೆ. ಆ ಪೈಕಿಯವಳಾದ ಕವಿತಾ ಒಂದು ಮಧ್ಯಾಹ್ನ ಚೇರಿನ ಮೇಲೆ ಕುಳಿತು ಊಟ ಮಾಡುವ ಶೆಟ್ಟರ ಕಾಲಿನ ಬಳಿ ಬಂದು ಕುಳಿತು ಸೊಪ್ಪು ಬಿಡಿಸುತ್ತಾ ಟಿವಿ ನೋಡುತ್ತಿದ್ದಳು.

ರೊಟ್ಟಿ ತೊಳೆದ ನೀರು Read Post »

ಕಾವ್ಯಯಾನ

ಎತ್ತ ಈ ಪಯಣ…?

ಕವಿತೆ ಎತ್ತ ಈ ಪಯಣ…? ಕೆ.ಲಕ್ಷ್ಮೀ ಮಾನಸ ದಿಕ್ಕಿಗೊಂದು ಹಾದಿಯಿರಲು,ಎತ್ತಲೂ ಹಾಯದಾಗಿ,ಕಂಡದ್ದು ಕಾಣದಾಗಿ,ಅರಿತದ್ದು ಆರಿಯದಾಗಿ,ಗೊಂದಲದ ಗೂಡಾಗಿ,ದುಗುಡವು ಮಾಯದಾಗಿ,ಸಾಗುತಿದೆ ಪಯಣವೊಂದು,ತೋಚಿದ ಗತಿಯಲ್ಲಿ…… ಕತ್ತಲೆಯ ನರ್ತನದಲ್ಲಿ,ಭ್ರಮೆಗಳು ಮುಕ್ಕಿದರೂ,ಮನದ ದನಿಯೊಂದು,ಮಾಸಿದ ಹಾದಿಗೆ,ಕಿರುಬೆಳಕ ಸೂಸಿ,ಹಾಸಿದ ಹಾದಿಯಲ್ಲಿ,ಹಾಕುವ ಹೆಜ್ಜೆಗಳಿಗೆ,ನಿಶೆಯ ದರ್ಶನವೋ?ತಾರೆಗಳ ಭಾಗ್ಯವೋ…..? *************************

ಎತ್ತ ಈ ಪಯಣ…? Read Post »

You cannot copy content of this page

Scroll to Top