ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮಾಯೆ

ಡಾ.ಸುರೇಖಾ ರಾಠೋಡ್

Spinning Dreidel

ನನ್ನೊಳಗೆ ನೀನು
ಮಾಯೆಯೋ….
ನಿನ್ನೋಳಗೆ
ನಾನು
ಮಾಯೆಯೋ…

ಯಾರೊಳಗೆ
ಯಾರು
ಮಾಯೆ
ನಾನರಿಯೆ….

ಆದರೆ..
ಈ ಮಾಯಾ
ಜಾಲ
ಬಲು ಮೋಹಕ…

ಮೊಹದ
ಮಾದಕ ನೋಟದ
ಮಾಯೆಯಲ್ಲಿ
ಸಿಲುಕಿರುವೆ….

ನಿನ್ನ ಮಾಯೆಯ
ಮತ್ತಿನ
ಮಾತಿನಲಿ
ಬುಗರೆ ತಿರುಗುವ
ಹಾಗೆ
ನಿನ್ನ
ಸುತ್ತುತ್ತಿರುವೆ…
**************************************

About The Author

Leave a Reply

You cannot copy content of this page

Scroll to Top