ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜ಼ಲ್

ಎ . ಹೇಮಗಂಗಾ

Woman Wearing Red And Gold Dress Holding Up Hands

ಬಾಳರಥ ಪಥ ಬದಲಿಸಿ ಚಲಿಸುತಿದೆ ಹೇಗೆ ತೊರೆಯಲಿ ನಿಮ್ಮನು ?
ಅಗಲಿಕೆಯ ನೋವು ಹೃದಯ ಹಿಂಡುತಿದೆ ಹೇಗೆ ತೊರೆಯಲಿ ನಿಮ್ಮನು ?

ರೆಪ್ಪೆ ಕಂಗಳ ಕಾದಂತೆ ಕಾಪಿಟ್ಟ ಘಳಿಗೆಗಳು ಹಚ್ಚ ಹಸಿರು ಎಂದೂ
ಕಣ್ಣ ಕಡಲೀಗ ಉಕ್ಕುಕ್ಕಿ ಹರಿಯುತಿದೆ ಹೇಗೆ ತೊರೆಯಲಿ ನಿಮ್ಮನು ?

ಪ್ರೀತಿ ಕೌದಿಯ ಬಿಸುಪು ತುಸುವೂ ಆರಲಿಲ್ಲ ಕಾಲ ಮಾಸಿದರೂ
ನೆನಪುಗಳ ದಾಳಿಗೆ ಜೀವ ತತ್ತರಿಸುತಿದೆ ಹೇಗೆ ತೊರೆಯಲಿ ನಿಮ್ಮನು ?

ಹೊರಡಬೇಕೆಂದರೂ ಕಾಲ್ಗಳು ಅಡಿ ಇಡದೆ ನಿಂತಲ್ಲೇ ನಿಂತಿವೆ
ಸಪ್ತಪದಿಯ ಸಂಭ್ರಮ ಮುಗಿಯುತಿದೆ ಹೇಗೆ ತೊರೆಯಲಿ ನಿಮ್ಮನು ?

ತವರ ನಂಟು ಕಳಚುವ ಕ್ಷಣ ಕರುಳ ಬಳ್ಳಿ ಕಡಿದಂತೆ ಹೆಣ್ಣಿಗೆ
ತೆರಳುವ ಸಮಯ ಸಮೀಪಿಸುತಿದೆ ಹೇಗೆ ತೊರೆಯಲಿ ನಿಮ್ಮನು ?

************************************

About The Author

1 thought on “ಗಜ಼ಲ್”

Leave a Reply

You cannot copy content of this page

Scroll to Top