ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ದಿನಕ್ಕೊಂದು ಕವಿತೆ

ರೇಷ್ಮಾ ಕಂದಕೂರ

ಕವಿತೆ ಎಂದರೆ

Close-up of Eyeglasses on Book

ಕವಿತೆ ಬರಿ ಕವಿತೆಯಲ್ಲ
ಆಗು ಹೋಗುಗಳ ಭವಿತವ್ಯ
ಒಳ ಹೊರಾಂಗಣದ ಆಟದ ಚೌಕಟ್ಟು
ತಳಮಳ ಬೇಗುದಿಯ ವಿಸ್ತಾರ
ಹಿಂದಿನ ಮುಂದಿನ ಸ್ಥಿತಿ ಅವಲೋಕನ
ವಾಸ್ತವ ಅನುಭವದ ಅನನ್ಯ
ಭಾವನಾ ಲೋಕದ ವಿಹಾರಿಣಿ
ಸೋಲು ಹತಾಶೆಯ ಕೆದುವಿಕೆ
ಮರು ಪೂರಣಕೆ ಕರಂಡಿಕೆ
ಅಕ್ಷರ ರೂಪದ ಹೊದಿಕೆ
ಉಪಮೆ ಅಲಂಕಾರದ ಕುಶಲತೆ
ಒಲುಮೆಯ ಸಾಂಗತ್ಯ
ಬಯಲಲು ಚಿಗುರಿಗೆ ಸಾಧನ
ಕಟು ಸತ್ಯದ ಆಕಾರ
ತಿರುಳುಗಳಲಿ ಅಡಗಿದ ಸವಿ ರಸ
ತಾಳ ಮೇಳದಿ ಝೇಂಕಾರ
ಅಂತಃಕರಣ,ಆಕ್ರೋಶದ ಒಡನಾಟ
ಮನದ ತುಮುಲದ ಹೊಮ್ಮುವಿಕೆ
ಆನಂದ ಅಶೃತರ್ಪಣದ ಜೋಡಿ
ಕಾವ್ಯವೆಂಬ ಕುಸುರಿ
ಆತ್ಮಾನಂದದ ಸಾರಿಣಿ
ಸೂಕ್ಷ್ಮತೆಗಳ ವ್ಯಾಖ್ಯಾನ ರೂಪ
ತಮಂಧಕೆ ಬೆಳಕು ರೇಖೆ
ಅಸಹನೆಗಳ ತೋರ್ಪಡುವಿಕೆ
ತಿದ್ದಲು ಮರುಕುಟುಗ
ನಿಟ್ಟುಸಿರ ಧಾವಂತ
ಅಕ್ಷರ ರೂಪದ ಸಮುಚ್ಚಯ
ಅರಳಿದ ಮೊಗ್ಗು
ಸಮರೋಪಾದಿಯಲಿ ಹರಿದು
ವಿಕಸನದ ನೀತಿ ಪಾಠ
ಬಯಕೆಗಳ ಹಸೆಮಣೆ
ಕಾವ್ಯ ಮನೋಹರಿ.

**********************

About The Author

Leave a Reply

You cannot copy content of this page

Scroll to Top