ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರತ್ನರಾಯಮಲ್ಲ

From above side view of crop anonymous female touching transparent glass window with dense structure and shiny surface representing abstract images in sunlight

ಅದೆಷ್ಟು ಚಪಲ ಹೆಣ್ಣಿನ ಬಗ್ಗೆ ಮಾತಾಡಲು
ಅದೆಷ್ಟು ಹಂಬಲ ಹೆಣ್ಣಿನ ಬಗ್ಗೆ ಮಾತಾಡಲು

ಹೆಣ್ಣಿನ ಮನಸನ್ನು ಅರಿಯಲು ಸಮಯವಿಲ್ಲ
ಅದೆಷ್ಟು ಕುತೂಹಲ ಹೆಣ್ಣಿನ ಬಗ್ಗೆ ಮಾತಾಡಲು

ಕಪಟತನ ಕಾವಲಿಗಿದೆ ನಮ್ಮ ಹೃದಯಗಳಿಗೆ
ಅದೆಷ್ಟು ಕಿಲಕಿಲ ಹೆಣ್ಣಿನ ಬಗ್ಗೆ ಮಾತಾಡಲು

ಶಾಂತಿಯ ಮಂತ್ರವು ಕಳೆದ್ಹೋಗಿದೆ ಸಂತೆಯಲ್ಲಿ
ಅದೆಷ್ಟು ತುಮುಲ ಹೆಣ್ಣಿನ ಬಗ್ಗೆ ಮಾತಾಡಲು

ಕಾಪಾಡುವ ಕೈಗಳೇ ಕತ್ತು ಹಿಚುಕುತಿವೆ ‘ಮಲ್ಲಿ’
ಅದೆಷ್ಟು ಗದ್ದಲ ಹೆಣ್ಣಿನ ಬಗ್ಗೆ ಮಾತಾಡಲು

**********************

About The Author

Leave a Reply

You cannot copy content of this page

Scroll to Top