ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಯಾಕೊಳ್ಳಿ.ಯ.ಮಾ

Transparent vase with green pigment fluids with spots in pure water on white background

ನನ್ನೊಳಗಿನ ‌ನಿನ್ನನ್ನು ನಾನು ಹುಡುಕುತ್ತಿದ್ದೇನೆ‌ ಗೆಳತಿ
ನಿನ್ನ ಅಖಂಡ ಪ್ರೀತಿಗೆ ಶರಣಾದವನು‌ ನಾನು ಗೆಳತಿ

ಇದು ಪ್ರಾಮಾಣಿಕರಿಗೆ ಬೆಲೆ ಕೊಡುವ ಲೋಕವಲ್ಲ ಗೆಳತಿ
ಇಲ್ಲಿ ಗಿಲೀಟು ನಾಣ್ಯಗಳೇ ಬಹಳ ಹೊಳೆಯುತ್ತವೆ ಗೆಳತಿ

ಬೆಳಕು ನೀಡುವ ಸೂರ್ಯ ಚಂದ್ರರನ್ನೆ ಸಂಶಯಿ ಸುವಾಗ
ಜೀವನಾಡಿಯಾದ ಹರಿವ ನೀರನ್ನೇ ರಾಡಿಗೊಳಿಸಿದಾಗ ನಾವೆಷ್ಟರವರು ಗೆಳತಿ

ಸಂಶಯದ ಬೇಲಿಯ‌ ಮೇಲೆಯೆ ನಮ್ಮ‌ಪ್ರೇಮದ ಬಳ್ಳಿ ಹೂ ಬಿಡಬೇಕು
ಅರಳಿ ಘಮ‌ಪಸರಿಸುವ ಪಕಳೆಗಳ ಅವರು ಮೂಸಲಿ ಗೆಳತಿ

ಎನಿತೊ ದಿನಗಳಿಂದ ನಡೆದು ಬಂದ ಇತಿಹಾಸವೇ ಹೀಗೆ ಗೆಳತಿ
ನಿಜ ಪ್ರೇಮವೆಂಬುದು ಬೆಂಕಿಯಲ್ಲಿ ಅರಳಿದ ಹೂವಲ್ಲವೇ ಗೆಳತಿ!

ಜಗದ ಕಷ್ಟಗಳನೆತ್ತಿ ನಾವು‌ ಕೊರಗುವದು ಬೇಡ,ಕಷ್ಟ ಗಳಿಲ್ಲದೆ ಬದುಕೆಲ್ಲಿ?
ಸಂಕಟ ಮೋವುಗಳ ಹಣ್ಣ ಮೇಲಿನ ಪಕಳೆ,ಪ್ರೀತಿ ಒಳಗಿನ ಅಮೃತ ಗೆಳತಿ

ನನ್ನ ನಂಬಿಕೆಗೆ ಇಂಬು ಕೊಟ್ಟೇ ಜೊತೆಯಾದವಳು ನೀನು
“ಯಮಾ” ನಿನ್ನ ನವಿರು ಹಾಲಿನಂತಹ ಪ್ರೀತಿಗೆ ಒಲಿದ ವನು ಗೆಳತಿ

***********

About The Author

1 thought on “ಗಜಲ್”

Leave a Reply

You cannot copy content of this page

Scroll to Top