ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹಾಡು ಹುಟ್ಟುವ ಜಾಡು

ಡಾ.ಯಾಕೊಳ್ಳಿ .ಯ.ಮಾ

green tree on green grass field during daytime

ಹಿಮಾಲಯದೊಳಗೂ‌
ಮಾತಿದ್ದವು
ಮಾತನಾಡಲು ಹಿಲೆರಿಯೋ
ತೇನಸಿಂಗನೋ‌ ಬರಬೇಕಿತ್ತು

ಸಮುದ್ರದ ದಂಡೆಯುದ್ದಕ್ಕೂ‌
ಮಾತಿದ್ದವು
ಮಾತನಾಡಲು‌ ಕಾರಂತರೋ
ಕಾಯ್ಕಿಣಿಯೋ
ನಾಗವೇಣಿಯವರೋ
ಬರಬೇಕಿತ್ತು

ಈ ಧಾರವಾಡದ ಮೌನ
ಶ್ಯಾಲ್ಮಲೆಗೂ‌ ಮಾತಿದ್ದವು
ಮಾತನಾಡಲೋ ಬೇಂದ್ರೆಯೋ
ಚಂಪಾನೋ ಬರಬೇಕಿತ್ತು

ಆ ಸಹ್ಯಾದ್ರಿಗೂ ಮಾತಿದ್ದವು
ನುಡಿಸಲು‌ ಕುವೆಂಪುವೇ
ಜನಿಸಬೇಕಿತ್ತು

ಈ ಬರಗಾಲದ ಬರಗೇಡಿ
ನಾಡಿಗೂ ಮಾತಿದ್ದವು
ಮಧುರಚನ್ನರೋ
ಸಿಂಪಿಯೋ
ಮುತ್ತಾಗಬೇಕಿತ್ತು

ಇರುತ್ತವೆ ಮಾತು ಕಲ್ಲೊಳಗೆ ,
ನೀರೊಳಗೆ.ಮಣ್ಣೊಳಗೆ,
ಹೂ ಕಾಯಿ ಬೇರೊಳಗೆ,
ಒಲಿದು ಮಾತನಾಡುವ ಎದೆಗಳಿದ್ದರೆ
ನುಡಿಯುತ್ತವೆ
ಒಡಲ ಹಾಡು
ಹಾಡುತ್ತವೆ

***********************************************

About The Author

Leave a Reply

You cannot copy content of this page

Scroll to Top