ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ನೆಲೆ ಕಾಣದ ಗುಬ್ಬಚ್ಚಿ

ರಾಘವೇಂದ್ರ ದೇಶಪಾಂಡೆ

Three Brown Birds on Snow Covered Ground

ಬೀಸುತ ಬಂತು ಚಂಡಮಾರುತ ಜೋರಾಗಿ
ಮುರಿದುಹೋಗಿದೆ ಗೂಡು ಪ್ರತಿಕೂಲತೆಯ ಹವಾಮಾನದಲಿ
ಬಿರುಕುಗೊಂಡಿವೆ ಮೊಟ್ಟೆಗಳು ಗಾಳಿ ಸ್ಫೋಟದಲಿ
ಯಾರೊಂದಿಗೆ ಹಂಚಿಕೊಳ್ಳಬಹುದು ಈ ವಿಷಾದವನು
ನೆಲೆ ಎಲ್ಲಿ ಕಾಣಬೇಕು ಈಗ ಗುಬ್ಬಚ್ಚಿ…!

ಮನೆಯೊಳಗೆ ತೆರೆದಿಟ್ಟಿದ್ದೇನೆ ಕಪಾಟನು
ಕೂಗಿ ಕರೆಯುತಿರುವೆ ಅಲೆಮಾರಿ ಗುಬ್ಬಚ್ಚಿಯನು
ಹುಡುಕುತಿದೆ ನೆಲೆಯನು ಚಿಂವ್ ಚಿಂವ್ ಎನ್ನುತಲಿ
ಕರುಳಬಳ್ಳಿಯ ಹುಡುಕತಲಿ ಮೈ ನಡುಕಿನ ಚಳಿಯಲಿ
ವಾಸಿಸಲೊಪ್ಪದು ಮನೆಯೊಳಗೆ ಗುಬ್ಬಚ್ಚಿ…!

ಹೇಗೆ ತರಲಿ ಮನೆಯೊಳಗೆ ಮರಗಳನು
ಸಾಧ್ಯವಾಗುತಿಲ್ಲ ನಿರ್ಮಿಸಲು ಗೂಡನ್ನು
ಹೇಗೆ ಸೇರಿಸುವುದು ಬಿರುಕುಗೊಂಡ ಮೊಟ್ಟೆಗಳನು
ಯಾರೊಂದಿಗೆ ಹಂಚಿಕೊಳ್ಳಲಿ ಸಂಕಟವನು
ವಾಸಿಸುವದೆಲ್ಲಿ ಗುಬ್ಬಚ್ಚಿ…! ನೆಲೆ ಕಾಣುವದೆಂತು?

******************************

About The Author

Leave a Reply

You cannot copy content of this page

Scroll to Top