ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ

ಅಲ್ಲಾಗಿರಿರಾಜ್ ಕನಕಗಿರಿ ಇವರ ಪುಸ್ತಕಕ್ಕೆ

ರಾಜ್ಯ ಮಟ್ಟದ ಕಾವ್ಯ ಪುರಸ್ಕಾರ

ಗದಗ :2020 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿಗೆ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ‘ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಕವನ ಸಂಕಲನ ಆಯ್ಕೆಯಾಗಿದೆ.

ಕಳೆದ ತಿಂಗಳು ಸದರಿ ಪ್ರಶಸ್ತಿಗೆ ಪುಸ್ತಕ ಆಹ್ವಾನ ನೀಡಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಶಸ್ತಿಗಾಗಿ ಒಟ್ಟು 92 ಕವನ ಸಂಕಲನಗಳು ಬಂದಿದ್ದವು. ತೀರ್ಪುಗಾರರು ಅಂತಿಮವಾಗಿ ‘ಅಲ್ಲಾಗಿರಿರಾಜ ಕನಕಗಿರಿ’ಯವರ ಸಂಕಲನ ಆಯ್ಕೆ ಮಾಡಿದ್ದಾರೆ.
ಪ್ರಶಸ್ತಿ 10 ಸಾವಿರ ರೂ. ನಗದು, ಫಲಕ ಹಾಗೂ ಸನ್ಮಾನವನ್ನು ಒಳಗೊಂಡಿದ್ದು, ಮೇ 10 ರಂದು ಗದಗನಲ್ಲಿ ಜರುಗುವ ಮೋಹನ ಕುರುಡಗಿ ಸ್ಮರಣಾರ್ಥದ ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿಯನ್ನು ಅಲ್ಲಾಗಿರಿರಾಜ್ ಕನಕಗಿರಿ ಇವರಿಗೆ ವಿತರಿಸಲಾಗುವುದು ಎಂದು ಜೀವಕಾರುಣ್ಯ ಸಂಸ್ಥೆಯ ಅಧ್ಯಕ್ಷರಾದ ಗಣೇಶ ಪಿ. ನಾಡೋರ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

***************************************

About The Author

Leave a Reply

You cannot copy content of this page

Scroll to Top