ನೆತ್ತರ ಚಿತ್ತಾರ
ಆಸೆಗಳನ್ನು ಕೊಂದು
ಎಲ್ಲೆಲ್ಲೂ ನೆತ್ತರಿನ ಚಿತ್ತಾರ ಚಿಲುಮಿಸಿ
ಅರೆಸುಟ್ಟ ಅನಾಥ ಶವಗಳಂತೆ ಭಾವನೆಗಳು
ಕನಸಿನಲ್ಲಿನ ಕನವರಿಕೆಗಳು
ಆಸೆಗಳನ್ನು ಕೊಂದು
ಎಲ್ಲೆಲ್ಲೂ ನೆತ್ತರಿನ ಚಿತ್ತಾರ ಚಿಲುಮಿಸಿ
ಅರೆಸುಟ್ಟ ಅನಾಥ ಶವಗಳಂತೆ ಭಾವನೆಗಳು
ಕನಸಿನಲ್ಲಿನ ಕನವರಿಕೆಗಳು
ಪ್ರಭುವಿಗೆ ಸಿಟ್ಟು ಬಂತು
ದೊರೆ ಬಂದರೂ ದೂರ ಹೋಗವು
ತೊಳೆದರೂ ತೊರೆಯವು ವಾಸನೆ
ಶತಮಾನಗಳ ಕಮಟು ; ಸಾಯಿಸಿಬಿಡಿ
ಪುಸ್ತಕ ಸಂಗಾತಿ ಸಮಯಾಂತರ ಕನಸುಗಾರರು ಬರಲಿ ನಾವೂ ಸೋತ ಆಟವನ್ನು ಗೆದ್ದು ತರಲಿ ಅವರು- ಸಮಯಾಂತರ ಕಟ್ಟುವ ಕವಿ, ಕನ್ನಡದ ಕಾವ್ಯದೆಗಳನ್ನು ಮುಟ್ಟಿದ,ನಮ್ಮ ಅಂತರಾಳವನ್ನು ತಟ್ಟುವ,ಕವಿ ಸತೀಶ ಕುಲಕರ್ಣಿ ಅವರ ಆಯ್ದ ಕವಿತೆಗಳ ಸಂಕಲನ ‘ಸಮಯಾಂತರ’ ಮೊಗಸಾಲೆ ಪ್ರಕಾಶನದಲ್ಲಿ ಪ್ರಕಟವಾದ -೨೦೧೩ ಕೃತಿ ಹಲವೂ ಗಟ್ಟಿ ಕವಿತೆಗಳ ಗುಚ್ಛ “ರಕ್ತಗಾಲಿನ ನಮ್ಮಪಾಲಿನ/ ಹಾಡ ಬರೆಯತೇವ /ನೆಲಕ ಹಾಡ ಬರೆಯತೇವ ಎನ್ನುತ್ತಲೆ ಸತೀಶರು ನೆಲದ ಜನರ ನಾಡಿ ಮಿಡಿತದಿಂದ ರೂಪುಗೊಂಡು ಕಾವ್ಯ ನೆಲಕೆ ಸಂಕಟವೊದಗಿದಾಗ ಸತೀಶರ ಕಾವ್ಯ ಹೋರಾಟದ ನಾಲಗೆಯ ಮೇಲೆ ಕೆಂಪಾಗಿ ಹೋಗುತ್ತದೆ. ಎದೆ ಗಟ್ಟಿಸಿ ತುಳಿತಕ್ಕೊಳಗಾದವರ ಒಮ್ಮೆಲೆ ಧ್ವನಿಯಾಗಿ ಬಿಡುತ್ತದೆ. ಕಾವ್ಯ ನೆಲದ ಬೇರುಗಳನ್ನು ಹುರಿಯಾಗಿಸಿ ಗಾಂಧಿಯನ್ನೇ ಪ್ರಶ್ನೆ ಮಾಡುತ್ತದೆ ‘ಬೇರು ಸತ್ತಿಲ್ಲ ಮತ್ತೊಮ್ಮೆ ಈ ನೆಲದ ಮಾತಾಗಬಹುದೇ ಹೇಳು ಗಾಂಧಿ ಗಿಡ…? ನೆಲದ ಮಾತಾಗಬಹುದೇ ಹೇಳು ಗಾಂಧಿ ಎನ್ನುವ ಕವಿ ಅಸಹಾಯಕತೆಯಲ್ಲಿ ಗಾಂಧಿ ಗಿಡ ಪ್ರಶ್ನಿಸುವುದು ಪ್ರಸ್ತುತ ವ್ಯವಸ್ಥೆಯ ವ್ಯಂಗವಾಗಿ ಮತ್ತೆ ಭೂತಕಾಲದ ಆದರ್ಶ ಗಳು ಈ ಸಂಕಟದ ಕಾಲದಲ್ಲೂ ಗಾಂಧಿ ಬೇಕಾಗಿತ್ತು ಎನ್ನುವ ಕವಿಯ ತಹತಹಿಕೆ ಓದುಗನ ಹಳಹಳಿಕೆಯಾಗಿ ಬಿಡುತ್ತದೆ ಮೌನ ಚಿಗಿಯುವುದು ಅಷ್ಟೇ ಸುಲಭವಲ್ಲ ಅದು ಅಪಾರ ಮಾತುಗಳನ್ನು ಹುದುಗಿಸಿಕೊಂಡು ಅನಂತ ಕಾಲ ಸಮಾದಿ ಸ್ಥಿತಿಯಲ್ಲಿದ್ದಾಗ ಮೌನ ಹುಟ್ಟಬಲ್ಲದು ಆ ಮೌನ ಕಾವ್ಯವಾಗಬಲ್ಲದು ಅಡಿಗರ ಕವಿತೆಯಂತೆ ‘ ಹುತ್ತಗಟ್ಟದ ಚಿತ್ತ ಮತ್ತೆ ಕೆತ್ತಿತೇನೊ ಅಂತ ಆ ಪುರುಷೋತ್ತಮನ’ ಸಾಲುಗಳೆರಡರ ನಡುವೆ ಮೌನ ಚಿಗಿತರೆ ಸಾಕು ಅದು ನನ್ನ ಕವಿತೆ ಮೌನಕ್ಕಿರುವ ಅನಂತ ಅರ್ಥ ,ಅಪರಿಮಿತ ಸಾಧ್ಯತೆಗಳನ್ನು ಕಾವ್ಯದ ಜೊತೆ ಮಿಳಿತಗೊಳಿಸಿದ್ದಾರೆ ಸ್ಪರ್ಶ ಬೇಕೆನಗೆ/ ಉಚ್ಛ ಅಸ್ಪೃಶ್ಯನಾಗುವುದು ಬೇಡ/ ಹಾರುವ ನಾನಲ್ಲ /ನೆಲದ ಮೇಲೆ ನಡೆಯುವವ ಪ್ರತಿಯೊಬ್ಬ ವ್ಯಕ್ತಿಯು ಅನುಭವಿಸುವ ವೇದನೆಯ ತುಮುಲುಗಳ ತಾಕಲಾಟಗಳನ್ನು ಕಾವ್ಯ ಸಮರ್ಥ ವಾಗಿ ಹಿಡಿದು ತನ್ನ ನಿಲುವನ್ನು ನೆಲದ ಜೊತೆ ಕವಿ ಸಮ್ಮೀಳಿಸುತ್ತಾರೆ. ಕಾಲದ ಕಟ್ಟಳೆಯಲಿ ಎಲ್ಲರೂ ಸಿಕ್ಕಿಕೊಂಡವರೆ ಶಂಕಿತರಂತೆ ಅನುಮಾನಿಸುವ ಗುಮಾನಿ ಎಲ್ಲ ಕಾಲವನ್ನು ಬಿಟ್ಟಿಲ್ಲ ,ಕಾವ್ಯಧಾರೆಯ ಎಲ್ಲರನ್ನೂ ಸಮುದಾಯದ ಚೌಕಟ್ಟಿನಲ್ಲಿ ಬಂಧಿಸಲೂ ನೋಡಿದರು ಆ ಕಾಲಕ್ಕೆ ತಕ್ಕಂತೆ ಎಲ್ಲರೂ ಪ್ರತ್ಯುತ್ತರ ಕೊಡುತ್ತಲೆ ಮುಖಾಮುಖಿ ಯಾಗಿದ್ದಾರೆ ಹಾಗೆಯೆ ಕವಿ ಸತೀಶರನ್ನು ಈ ಸೋಂಕು ಬಿಟ್ಟಿಲ್ಲ ಕಾವ್ಯ ಕೊಡುವ ಉತ್ತರ ಅದ್ಭುತ ‘ ‘ ಹಾರುವ ನಾನಲ್ಲ ನೆಲದ ಮೇಲೆ ನಡೆಯುವವ’ ಎನ್ನುವ ಕವಿ ನೆಲದ ಜೊತೆ ತನ್ನತನವನ್ನು ತನ್ನ ಮೂಲವನ್ನು ಗುರುತಿಸಿಕೊಳ್ಳುತ್ತಾರೆ ಈ ಪರಿಯ ಕಾವ್ಯ ಕನ್ನಡ ಸಾಂಸ್ಕೃತಿಕ ಲೋಕ ಅನುಭವಿಸುತ್ತಲೆ ಬಂದಿದೆ ಎನ್ಕೆ ಹನಮಂತಯ್ಯ ಅವರ ‘ನಾನು ಗೋವು ತಿಂದು ಗೋವಿನಂತಾದೆ’ ಬಿ ಫೀರಬಾಷಾ ಅವರ ‘ ಅಕ್ಕಾ ಸೀತಾ ನಿನ್ನಂತೆ ನಾನೂ ಶಂಕಿತ’ ಎನ್ನುವಲ್ಲಿ ಹೆಬಸೂರ ರಂಜಾನ್ ಅವರ ‘ ಅಮ್ಮಾ/ನಿನ್ನ ಎದೆಯಾಳದಲಿ/ನಾನೊಂದು ಗನ್ನು ಬಾಂಬು ಎನ್ನುವ ಸಾಲುಗಳು ಎಲ್ಲ ಸಮುದಾಯಗಳ ಅಸ್ಮಿತೆಯನ್ನು ಪರೀಕ್ಷಿಸುತ್ತವೆ ಕವಿ ಸತೀಶರ ಕಾವ್ಯ ಮಂಜುಗಡ್ಡೆಯು ತನ್ನನ್ನು ಕಳೆದುಕೊಳ್ಳುತ್ತಾ ತನ್ನ ಹೊರಮೈ ನ್ನು ತೊಳೆದುಕೊಳ್ಳುತ್ತಾ ಕರಗುವುದಲ್ಲಾ ಆ ರೀತಿ ತನ್ನ ಶಂಕೆಯನ್ನು ನೆಲದ ಜೊತೆ ತಾದಾತ್ಮ್ಯ ಗೊಳಿಸಿ ಅನುಸಂಧಾನಿಸುವ ಪರಿ ಅನನ್ಯ ಹಾದಿ ಹೆಣವಾದ/ ಬೀದಿ ದೀಪಗಳ ದೊರೆಯೇ….. ಕಂಬ ನೆಟ್ಟವನು ನೀನು/ ಸಾವು ತಂತಿಯ ಬಿಗಿದು /ನಿತ್ಯ ನಾಗರ ಹಾವಿನೊಡನಾಡಿದವ ಲೈನ್ ಮನ್ ಮಡಿವಾಳ ಭೀಮಪ್ಪನಿಗೆ ಎನ್ನುವ ಕವಿತೆಯಲ್ಲಿ ತನ್ನ ಕಾಯಕದ ಜೊತೆಗಾರನ ಸಾವಿನ ದುರಂತ, ಜೀವ ಕಾರುಣ್ಯದ ಪ್ರೀತಿ ದುಗುಡ ಕಾವ್ಯದುದ್ದಕ್ಕು ಕರುಳು ಮಿಡಿಯುವ ವಿದ್ರಾವಕ ನೀನು ಬೆಳಕು ಕೊಟ್ಟು ಕತ್ತಲೆಯನ್ನು ನೀ ಸೇರಿದೆ ಎನ್ನುವ ಸಾಲುಗಳು ಓದುಗನನ್ನು ಮಿಡಿಯುತ್ತವೆ ಕಾವ್ಯ ಅದು ಪ್ರಭುತ್ವದ ಕೈಗೊಂಬೆಯಾಗದೆ ಉಳ್ಳವರ ಅಡಿಯಾಳಾಗದೆ ಒಬ್ಬ ಸಾಮಾನ್ಯನ , ದುಡಿಯುವ ಕಾರ್ಮಿಕನಸಾವು ಹೇಗೆ ಕಾವ್ಯದ ವಸ್ತುವನ್ನು ತಮ್ಮ ಬಂಡಾಯದ ಸಿದ್ಧಾಂತವನ್ನು ಕಾವ್ಯದ ಪಾತಳಿಯಲ್ಲಿ ನೆಲಸಮಗೊಳಿಸಿದ್ದಾರೆ. ನಗರ ಏಳುತ್ತದೆ,ಬಾಲ ಬಿಚ್ಚುತ್ತದೆ ,ಆಕಳಿಸುತ್ತದೆ,ಮಿರಗುತ್ತದೆ, ಕರಗುತ್ತದೆ ಎನ್ನುವ ಸಾಲುಗಳು ನಾಗರಿಕ ಜಗತ್ತಿನ ಕಿರೀಟವಾಗಿರುವ ನಗರಗಳ ವಾಸ್ತವ ಬದುಕನ್ನು ಅದರ ಭ್ರಮಾತ್ಮಕ ಕಲ್ಪನೆಗಳನ್ನು ಕವಿತೆ ಹುಸಿಗೊಳಿಸುತ್ತದೆ ‘ ನಗರ ಗಾಢ ಗೊರಕೆ ನಿದ್ರೆಯಲ್ಲಿದೆ’ ಎನ್ನುವ ಧ್ವನಿಪೂರ್ಣ ಸಾಲುಗಳು ಅಮಾನವೀಯತೆಯ ಸಾಕ್ಷಿಯ ಪ್ರತೀಕದಂತಿರುವ ನಗರಗಳ ಕರ್ಮಕಾಂಡ ವನ್ನು ಅನಾವರಣಗೊಳಿಸುತ್ತಲೆ ಮಾನವತೆಯ ವಿರೋಧಿ ಪ್ರಜ್ಞೆಯನ್ನು ನಗರ ಒಳಗೊಂಡಿವೆ ” ಮರಣ ಮಹಾಯಾಗದ/ ಮುನ್ನುಡಿಗೆ / ಹುರಿಗೊಂಡ ಒಂದೆ ಒಂದು ಬಾಣ ಎನ್ನುವ ಕವಿತೆಯ ಸಾಲುಗಳು ಯುದ್ಧ ವಿರೋದಿ ನೆಲೆಯನ್ನು ಕಾವ್ಯ ಸಾದರ ಪಡಿಸುತ್ತದೆ. ಸತೀಶರ ಕಾವ್ಯದ ವಸ್ತುಗಳು ದೇವಲೋಕದ ವಸ್ತುಗಳಾಗದೆ ಸದ್ಯದ ನಿತ್ಯ ದುಡಿಯುವ ಜನರ ಜೊತೆಯಾದ ವಸ್ತುಗಳೆ ಕಾವ್ಯದ ನಿಲುವಾಗಿದೆ.ಅಲ್ಲಿ ಮಡಿವಾಳ ಭೀಮಪ್ಪ, ಅವರ ಗುರುಗಳು, ಚಪ್ಪಲಿಗಳು,ನಂಬದ ದೇವರುಗಳು, ಜನಪರ ಕಾವ್ಯದ ಬಗ್ಗೆ, ನಗರಗಳ ಬಗ್ಗೆ, ಬದುಕಿನ ಭವಣೆಗಳ ಬಗ್ಗೆ, ಮನಸುಗಳನು ಕಟ್ಟುವ, ಭಯೋತ್ಪಾದನೆಯಿಂದ ನಲುಗಿ ನೆಲೆ ಕಳೆದುಕೊಂಡ ಮುಗ್ದ ಕಂದಮ್ಮಗಳ ನೋವು, ಯುದ್ಧ, ಶಾಂತಿ ಎಲ್ಲವೂ ವಸ್ತುಗಳಾಗಿ ನೆಲೆಗೊಂಡಿವೆ, ಕವಿತೆಯಲ್ಲವೂ ಒತ್ತರಿಸಿಕೊಂಡು ಬಂದ ಕವಿತೆಗಳಾಗಿರದೆ ಅವೆಲ್ಲವೂ ಸಹಜತೆಯಿಂದ ಹೋರಾಟದ ಹಾದಿಯಲ್ಲಿ ಪಡಿಮೂಡಿದ್ದು. ಸತೀಶರ ಕಾವ್ಯ ನಾಲ್ಕು ಗೋಡೆಯ ಮಧ್ಯ ಹುಟ್ಟಿದ ಚಮತ್ಕಾರಿ ಶಬ್ದಗಳಲ್ಲ ಅವು ಕರುಳಿನಿಂದ ಹಾದಿ ಬೀದಿಗಳಲ್ಲಿ ಕಾವ್ಯ ತನ್ನ ಅಂತರಂಗ ತಾವಾಗಲೆ ತೆರೆದುಕೊಂಡು ಹಾಡಾಗಿದ್ದು, ಅವು ಅತ್ತವರ ಕರುಳಿನ ಭಾಷೆ ಕಾವ್ಯದಲ್ಲಿ ಹೃದ್ಯಗೊಂಡಿದೆ ಇಷ್ಟು ಬಾರ ಹೊತ್ತು/ ಇಷ್ಟು ದೂರ ತಂದ / ಈ ಚಪ್ಪಲಿಗಳಿಗೆ ನನ್ನ ವಂದನೆಗಳು ಅನನ್ಯ ವಸ್ತು ಒಳಗೊಂಡ ಕಾವ್ಯ ‘ ಚಪ್ಪಲಿಗಳು ಪರಾಣ ಕಾಲದಿಂದ ಅಧುನಿಕ ಕಾಲದವರೆಗೂ ಚರ್ಚಿತವಾದ ವಸ್ತು ಅದು ಭರತ, ಬಸವಣ್ಣನಿಂದಿಡಿದು ತೀರಾ ಇತ್ತೀಚಿನ ತನಕವು ಸುದ್ದಿಯಲ್ಲಿದೆ ಚಪ್ಪಲಿಯು ನಿಷ್ಕಾಮ ಸೇವೆಯನ್ನು ಹೇಳುತ್ತಲೆ ದೈವತ್ವದ ಸ್ಥಾನದ ಎತ್ತರಕೆ ಹೋಗುತ್ತವೆ, ಬಸವಣ್ಣ ಚನ್ನನ ಚಪ್ಪಲಿಯನ್ನು ತಲೆಯ ಮೇಲೆ ಹೊತ್ತಂತೆ ಸತೀಶರು ಕಾವ್ಯದಲ್ಲಿ ಚಪ್ಪಲಿಗಳು ಎದೆಯ ಮೇಲೆರಿದೆ ಕಾವ್ಯದಲ್ಲಿ ಬರುವ ಸಾಲುಗಳು ಮೌನದ ಸಂಗಾತಿಗಳೆ, ನನ್ನ ಕಾಲು ಮರಿಗಳೆ, ಬಡಮೋಚಿಯ ಜೋಡಿ ಮಕ್ಕಳೆ, ಅರಿವಿನಾ ದೇವರುಗಳೆ, ಮರಿ ಪಾರಿವಾಳಗಳೆ, ಓ ಮೌನ ತಪಸ್ವಿಗಳೆ,ಎಂದು ಚಪ್ಪಲಿಗಳನ್ನು ಸಂಬೋದಿಸುವ ರೀತಿ ಪರಿ ಅನನ್ಯ ಕವಿ ಸತೀಶರು ಬದುಕಿನ ಅರ್ಧ ಭಾಗವನ್ನು ಬೀದಿಯ ಬಯಲಲ್ಲೆ ಕಳೆದವರು ಬಂಡಾಯವನ್ನು ಉಸಿರಾಗಿಸಿಕೊಂಡು ಮನುಷ್ಯ ಪರ ನಿಲುವನ್ನಿಟ್ಟುಕೊಂಡವರು ಸಿದ್ದಲಿಂಗಯ್ಯನವರ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರನಂತೆ, ಚಂಪಾ ಅವರ ಪ್ರೀತಿಯಿಲ್ಲದೆ ನಾನು ದ್ವೇಷವನ್ನು ಕೂಡಾ ಮಾಡಲಾರೆ ಎನ್ನುವಂತೆ ತಣ್ಣನೆಯ ಕಾವನ್ನು ಕಾವ್ಯಕ್ಕೆ ಸ್ಪರ್ಶಿಸಿದವರು ತನ್ನದೆ ತನ್ನದೆ ಪರಂಪರಾಗತ ಸಮೂಹವನ್ನು ಎದುರಿಸಿಕೊಂಡು ಬಸವಣ್ಣ ಹೇಳಿದಂತೆ ” ಆನು ಹಾರುವನೆಂದರೆ ಕೂಡಲ ಸಂಗಯ್ಯ ನಗುವನಯ್ಯ” ಎನ್ನುವ ನಿಲುವನ್ನೆ ಕವಿ ‘ ಹಾರುವವ ನಾನಲ್ಲ ನೆಲದ ಮೇಲೆ ನಡೆಯುವವ ‘ ಎನ್ನುವ ನಿಲುವು ‘ ಗೋವಿಂದ ಭಟ್ಟರು ಶರೀಫನಿಗೆ ತೊಡಿಸಿದ ಜನಿವಾರವನ್ನು ಸಾರ್ವತ್ರಿಕಗೊಳಿಸುವುದು ಸತೀಶರು ‘ ಹೆಗಲೇರಿ ಬೆನ್ನಿಳಿದು ಸೊಂಟ/ ಸುತ್ತಿದ ಜನಿವಾರ ನನಗೆ/ಸಾವು/ ಹೆಡಮುರಗಿಯ ಹಾವು ಎಂದು ನಿರಾಕರಿಸುವುದು , ಬಸವಣ್ಣ ‘ ಅಕ್ಕನಿಗಿಲ್ಲದ ಜನಿವಾರ ನನಗೇಕೆ’ ಎಂದು ಪ್ರಶ್ನಿಸುವುದು ಎಲ್ಲವೂ ಸಾರ್ವತ್ರಿಕ ಗೊಳಿಸುವುದು, ನಿರಾಕರಿಸುವುದು, ಪ್ರಶ್ನಿಸುವುದು ಒಳಗೊಂಡು ಮಂತ್ರಕ್ಕಿಂತಲೂ ಸ್ಪರ್ಶಶಕ್ತಿಯ ಮಹತಿಯನ್ನು ಕಾವ್ಯದಲ್ಲಿ ದಾಖಲಿಸುತ್ತಾರೆ ಸಂಶಯದ ಮಂಡಲದಲ್ಲಿ, ಸುಳಿಗಳಲಿ ನಾನು ಹರಿವ ಹೊಳೆ ಎನ್ನುವುದು ಕೆಂಡ ಕುಂಡಗಳ ಸಂಗ ದ ಆತಂಕದ ಗಡಿಗಳನು ನೀವೇದಿಸುತ್ತಾರೆ ತಮ್ಮ ಕಾವ್ಯದ ನಿಲುವನ್ನು ದಾಖಲಿಸುತ್ತಾ ತಮ್ಮ ಬಂಡಾಯ ಕವಿತೆಯಲ್ಲಿ ” ದಮನಕ್ಕೆ ಉತ್ತರ ದಿಕ್ಕಾರ/ಬಂಡಾಯ ದಬ್ಬಾಳಿಕೆಗೆ ಉತ್ತರ ಎನ್ನುತ್ತಾರೆ ಸಾದತ್ ಹಸನ್ ಮಾಂಟೋ ಕವಿತೆಯಲ್ಲಿ ಹೋರಾಟದ ಹುಕಿಗೆ ಸಂಗಾತಿಯಾಗಿ ಕಾಲ ಕಾಲಕ್ಕೆ ಗೋಳಗೊಮ್ಮಟದ ನಿಲ್ಲದ ಮಾರ್ದನಿ ಮಂಟೋ ನಿತ್ಯ ಕೈದಿ,ಕಾಲಾತೀತ ಬಂದಿ / ನಮ್ಮಾತ್ಮಗಳ ಬೆಂಕಿಯಾಗಿದ್ದಾನೆ ಮಂಟೊ ಹೋರಾಟದ ಕಾವಿಗೆ ಕಿಡಿಯಾದ ಮಂಟೋನನ್ನು ತಮ್ಮ ಕಾವ್ಯದಲ್ಲಿ ಪ್ರತಿಫಲನಗೊಳ್ಳುತ್ತಾನೆ ಈ ಬೀದಿಯವರು ಕವಿತೆಯಲ್ಲಿ ಬೀದಿಯವರ ಪರ ನಿಲುವು ,ಒಡಲಾಳ ಕಿಚ್ಚಿನ ಕವಿತೆ ೧೯೮೦ ರ ದಶಕದಲ್ಲಿ ಬಂದ ಸಂಕಲನ ಕವಿತೆಯಲ್ಲಿ ಬೆವರು ಸುರಿಯುವವರ ಸಂಗಡ/ ಬದುಕು ಸುಲಿಯುವವರು ಇದ್ದಾರೆ ಎನ್ನುವಲ್ಲಿ ಕವಿ ಬೆವರಿಗೆ ಪ್ರತಿಯಾಗಿ ರಕ್ತ ಬೇಡುವವರು ,ಕಿತ್ತು ತಿನ್ನುವವರ ನಡುವೆ ಕೂತು ತಿನ್ನುವವರು, ಉರಿ ಹಚ್ಚಿ ಸುಟ್ಟು ಹಾಕುವವರ ಮಧ್ಯ ಹೊಸ ಚಿಗುರುವ ದನಿ ಎತ್ತುವವರು ಇದ್ದಾರೆ ಒಡಲಾಳ ಕಿಚ್ಚಿನ ಸಂಕಟ, ತಳಮಳ ತುಮುಲದ ಒಳಬೇಗುದಿಯನ್ನು ದೇವನೂರು ಮಹಾದೇವ ‘ಅವರ ಒಡಲಾಳ’ ಕತೆ ಆ ಕಿಚ್ಚಿನಲ್ಲಿ ಕುಸುಮ ಬಾಲೆ ಇಣುಕಿದಂತೆ ಹಾದು ಹೋಯಿತು ಪ್ರಸ್ತುತ ಪ್ರಭುತ್ವ ಪ್ರೇರಿತ ದಮನದಲ್ಲಿ ಅಂದು ಬರೆದ ಕವಿತೆಯು’ ವರ್ತಮಾನದ ಒತ್ತಡದಲ್ಲಿ ‘ ಕವಿತೆ ಮುಖಾ ಮುಖಿ ಯಾಗಿ ನಿಲ್ಲುತ್ತದೆ. “ವರ್ತಮಾನದ ಒತ್ತಡದಲ್ಲಿ ಚಹರೆಗಳು/ಭೂತವನ್ನು ತಿನ್ನುತ್ತವೆ , ಭವಿಷ್ಯವನ್ನು ಕೊಲ್ಲುತ್ತವೆ ಪ್ರಸ್ತುತ ವರ್ತಮಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಂದು ಹತ್ಯಾಚಾರದ ಹಂತಗಳು ಕವಿತೆಯಲ್ಲಿ ವಾಸ್ತವ ಭಾರತದ ನ್ಯಾಯ ಪದ್ದತಿಯ ಒಳನೋಟವನ್ನು ಸೂಕ್ಷ್ಮ ವಾಗಿ ಅನಾವರಣಗೊಳಿಸುತ್ತದೆ, ” ಅತ್ಯಾಚಾರವಾಗಿಲ್ಲ/ ತೀರ್ಪು ಬಂದಿತ್ತು ಒಂದು ದಿನ/ ಅವಳು ಹೆರಿಗೆ ನೋವಿಗೆ ನರಳುತಿದ್ದಳು ಎನ್ನುವ ಕೊನೆಯ ಸಾಲು ಮನಕಲಕುತ್ತದೆ. ಸತೀಶರ ಕವಿತೆ ಕಾಲುದಾರಿ ಬದಿಯ ಬೇಲಿ ಮೇಲಿನ ಹೂವಂತೆ , ನಾಳೆ ಈ ನೆಲದಲ್ಲಿ ಅರಳುವ ಸಾಲು ಸಾಲು ಗುಲಾಬಿ, ಸುಟ್ಟ ಮನಸ್ಸಿನ ಕ್ರಾಂತಿ ಪತ್ರ, ಪುಟ್ಟ ಮಗನ ಹರಿದ ಹವಾಯಿ ಚಪ್ಪಲಿ ಅವರ ಕಾವ್ಯವನ್ನು ಅವರೆ ಹೇಳುವಂತೆ ಪಿಂಡ ಪುರಾಣದಲ್ಲಿ,ಕಾಗೆ ಸಾಲುಗಳಲ್ಲಿ, ಜನಿವಾರದ ಬಂಧದಲ್ಲಿ, ಶ್ರಾದ್ಧ ಕರ್ಮದ ಕಾಂಡಗಳಲ್ಲಿ ನನ್ನ ಹುಡಕಬೇಡಿ ಎನ್ನುತ್ತಾರೆ ಕಾವ್ಯದ ಅಂತಿಮ ಉತ್ತರ ” ನಾನು ಬೂದಿಯಾಗಿರುವೆ/ ಈ ನೆಲದ ಮಣ್ಣಾಗಿರುವೆ ಎನ್ನುವ ಉತ್ತರ ತಾರ್ಕಿಕತೆಗೆ ತಂದು ನಿಲ್ಲಿಸುತ್ತದೆ. ಅದು ಪುಟ್ಟ ಬೀಜದ ಹೊಟ್ಟೆಯಿಂದ ಹುಟ್ಟುವ ಹೆಮ್ಮರ,ನನ್ನಂತೆ ನಾನಾಗಿ ಬದುಕಬಲ್ಲ ಸ್ವಾಭಿಮಾನ ದ ಹಾಡಾಗಿದೆ. ಅವರು ಬದುಕು,ಕಾವ್ಯವನ್ನಷ್ಟೇ ತಮ್ಮ ವೃತ್ತಿಯನ್ನು ಪ್ರೀತಿಸಿದವರು ಕಾವ್ಯದ ಬೆಳಕಿನ ಜೊತೆಗೆ ತಮ್ಮ ವೃತ್ತಿ ಯ ದೀಪದ ಕಂಬವನ್ನು ಹೊತ್ತವರು ಹೀಗಾಗಿಯೆ ಲೈನ್ಮನ್ ಮಡಿವಾಳಪ್ಪ ನೆನಪಿನ ಪರದೆಯಲಿ ಸರಿದು ಹೋಗುತ್ತಾನೆ,ಆ ನನ್ನ ಕೆ.ಇ.ಬಿ ಕವಿತೆ ವಿದ್ಯುತ್ ಇಲಾಖೆಯ ಚೆಂಬಳಕಿನ ನೆರಳು ಬೆಳಕು ಕತ್ತಲಿನಾಟವನ್ನು ತೆರದಿಡುತ್ತದೆ ಅಷ್ಟೇ ನೆನಹುನಿಂದ ” ಅನ್ನ ಕೊಟ್ಟ/ ಅರಿವೆ ಕೊಟ್ಟ/ ಮನೆ ಕೊಟ್ಟ ಮೂಕ ತಂದೆ ನನ್ನ ಕೆ.ಇ.ಬಿ ಎನ್ನುವಲ್ಲಿ ಆ ಬದುಕು ಕೊಟ್ಟ ಇಲಾಖೆಯ ಪ್ರೀತಿ ಅಷ್ಟೆ ಅಕ್ರೋಶವಾಗಿ ” ಊರೂರು ಚೌಕದಲಿ / ಹತ್ತೂರ ಒಡೆಯರ ನಡುವೆ/ ಹರಾಜಿಗೆ ನಿಂತ ಮುದಿ ಗುಲಾಮ ನನ್ನ ಕೆ.ಇ.ಬಿ ಹೀಗೆ ಜಗಭಗ ಸುಟ್ಟು ಬೂದಿ ಮಾಡಿ ಬಿಡು ಎಂದು ಒಳಗಿಚ್ಚನ್ನು ತೂರಿಬಿಡುತ್ತಾರೆ ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು ಎನ್ನುವ ಸತ್ತ ಗುರುಗಳನ್ನು ಸ್ಮರಿಸಿದ ಕವಿತೆಯ ಸರಳೀಕರಣ ಆಪ್ತತೆಯ ತೆಕ್ಕೆಯಲ್ಲಿ ತಂದು ಕಣ್ಣೇರಾಗಿಸುತ್ತದೆ. ಮಹಾಭಾರತದ ಆ ಹಕ್ಕಿ ಅವರ ಚರ್ಚಿತ ಕವಿತೆ “ಯಾವುದು ಗೆಲ್ಲಬೇಕು/ ಯಾವುದು ಸೋಲಬೇಕು/ ಇದು ಕವಿ ಹೃದಯದ ಕದರು ಕವಿಯಾಗಿ ನಾನೇಕೆ ಪ್ರಶ್ನೆ ಕೇಳಬಾರದು, ಹಕ್ಕಿ ಯಾಕೆ ಹಾರಿ ಹೋಗಬಾರದು ಯಾಕೆ ಬಾಣದ ಗುರಿ ತಪ್ಪಬಾರದು ಹೇಳಿ ನೀವೆ ಹೇಳಿ ಎಂದು
ಕವಿತೆ ಹೇಳು ಸಿವನೆ ಸುವಿಧಾ ಹಡಿನಬಾಳ ೧ ಜಗವ ಕಾಯುವಜಗದೊಡೆಯನಿಗೆರಕ್ತದಾಹವೆಂಬ ಭ್ರಮೆಯನಂಬಬೇಕೆ ಸಿವನೆ? ೨ ಹೆತ್ತ ತಾಯಿಮುದ್ದು ಮಡದಿಮಮತೆಯ ಕೂಸುಹೆಣ್ಣೇ ಆದರೂ ಅನ್ಯರಮೇಲೆ ಅತ್ಯಾಚಾರ ಗೈವಗಂಡು ಕಾಮಿಯ ಎದೆಯಲ್ಲಿಕರುಣವಿಲ್ಲವೆ ಸಿವನೆ? ೩ ತುತ್ತಿನ ಚೀಲ ತುಂಬಲುಗೇಣುದ್ದ ದೇಹವ ಮುಚ್ಚಲುಬೆಚ್ಚನೆಯ ಸೂರು ಹೊಂದಲುನೆಮ್ಮದಿಯ ಬದುಕ ಬಾಳಲುಕೋಟಿ ಕೋಟಿ ದುಡ್ಡುಆಸ್ತಿ ಬೇಕೆ ಸಿವನೆ? ೪ ಮೈಯ ರಕ್ತ ಒಂದೇಕುಡಿವ ಜಲವು ಒಂದೇತಿನ್ನುವ ಅನ್ನವೊಂದೇಪೊರೆವ ಧರಣಿಯೊಂದೇಮತ್ತೆ ನಾನು ನೀನುಅವನು ಅವಳುಮೇಲು ಕೀಳುಹೇಗೆ ಸಿವನೆ? ೫ ಹುಟ್ಟಿ ಬಂದಾಗಿದೆಚೆಂದ ಬಾಳು ಮುಂದಿದೆಹಮ್ಮು ಬಿಮ್ಮು ಎಲ್ಲಾನಾನು ನನ್ನದೇ ಎಲ್ಲಾಎಂದು ಬೀಗಲು ದೇಹವೇನುಶಾಶ್ವತವೆ ಸಿವನೆ? ೬ ದೇವಸ್ಥಾನ ಮಠಮಂದಿರ ಮಸೀದಿಗಗಳಲಿನೀನಿರುವೆಯೆಂದು ತಿಳಿದುಧಾಂಗುಡಿಯಿಡುವರಲ್ಲ!ನೀನು ನನ್ನಲ್ಲಿ ನಿನ್ನಲ್ಲಿಎಲ್ಲೆಲ್ಲೂ ಇರುವೆಯಲ್ಲನಿಜವೆ ಸಿವನೆ? ***********************************
ಹಳೆಯ ಧೂಳು ಹಿಡಿದ ಅಥವಾ ತುಕ್ಕು ಹಿಡಿದ ರೇಜರ್ ಬ್ಲೇಡಿನಿಂದ ಹೆಣ್ಣಿನ ಗುಪ್ತಾಂಗದ ಕ್ಲಿಟೋರಸ್ ಎಂಬ ಬಹುಮುಖ್ಯವಾದ ಭಾಗವನ್ನು ಅನಸ್ತೇಸಿಯಾಗಳ ಸಹಾಯವಿಲ್ಲದೆಯೇ ತೆಗೆದು ಕತ್ತರಿಸಿ ಹಾಕಿ ಪೊದೆಗಳಿಂದ ತೆಗೆದ ಮುಳ್ಳುಗಳಿಂದ ಹಸಿಯಾದ ಗಾಯವನ್ನು ಮುಚ್ಚಿ ಹೊಲಿಯುವ ಬರ್ಬರ ಸಂಪ್ರದಾಯ.
ಮರಾಠಿಯ ಖ್ಯಾತ ಕವಿ ನಾಮದೇವಕೋಳಿ ಅವರ ಕವಿತೆಯೊಂದನ್ನು ಕನ್ನಡದ ಕವಿ ಕಮಲಾಕರ ಕಡವೆಯವರು ಸಂಗಾತಿಯ ಓದುಗರಿಗಾಗಿ ಕನ್ನಡಕ್ಕೆ ತಂದಿದ್ದದಾರೆ
ಗಜಲ್ ರತ್ನರಾಯಮಲ್ಲ ನಿನ್ನಯ ಬಾಹುಗಳಲ್ಲಿ ಇರುಳನ್ನು ಕಳೆಯುತಿರುವೆ ಹಗಲು ಕಾವಲಿಗಿದೆಮಧುಬನದ ರಸಮಂಚವನು ಜೋಡಿಸುತಿರುವೆ ಹಗಲು ಕಾವಲಿಗಿದೆ ಸಂಪ್ರದಾಯದ ಜೋಳಿಗೆಯಲ್ಲಿ ಪ್ರೇಮವನ್ನು ಬಂಧಿಸಿಡಬೇಡ ಚೆಲುವೆನಿನ್ನ ಮಡಿಲಲಿ ಚಂದದ ಚುಕ್ಕಿಗಳನು ಎಣಿಸುತಿರುವೆ ಹಗಲು ಕಾವಲಿಗಿದೆ ಪ್ರೀತಿಯ ರಸಸ್ವಾದ ಮುಗಿಯದ ಪಾಕ ಮಧುಶಾಲೆ ಅಡಗಿದೆ ನಿನ್ನೊಳಗೆನಿನ್ನಯ ಒಲವಿನ ಕೊಳದಲಿ ಈಜು ಕಲಿಯುತಿರುವೆ ಹಗಲು ಕಾವಲಿಗಿದೆ ನಿನ್ನ ಕೈ ಬಳೆಯ ಝೇಂಕಾರಕೆ ಮನದ ಕತ್ತಲ ಕೋಣೆಯು ಹೊಳೆಯುತಿದೆನಿನ್ನಯ ಸಾಂಗತ್ಯದಲಿ ರಸಸವಿ ಅನುಭವಿಸುತಿರುವೆ ಹಗಲು ಕಾವಲಿಗಿದೆ ಅನುರಾಗದ ಕಡಲಲಿ ಮುತ್ತುಗಳನ್ನು ಅರಸುತಿರುವನು ‘ಮಲ್ಲಿ’ ಹುಚ್ಚನಂತೆಮಿದುವಾದ ಶುಚಿ ಗರ್ಭಗುಡಿಯನು ಪ್ರವೇಶಿಸುತಿರುವೆ ಹಗಲು ಕಾವಲಿಗಿದೆ **************************************
ಪುಸ್ತಕ ಸಂಗಾತಿ ದುಗುಡದ ಕೆಂಡ – ಕೈಲಿ ಹಿಡಿದು ರಾಯಬಾಗದ ಯುವ ಕವಿ ಮಿತ್ರ ರಾಜು ಸನದಿಯವರ ಕವನಸಂಕಲನ “ದುಗುಡದ ಕುಂಡ ಕೈಲಿ ಹಿಡಿದು ಕಾವ್ಯ ಪ್ರೀತಿಯ ಸಂಭ್ರಮ ಸಂತೋಷ ಅನುಭವಿಸುತ್ತ ಈ ಕೆಲವು ಮಾತುಗಳನ್ನು ಬರೆಯುತ್ತಿದ್ದೇನೆ. ( ಸನದಿ ಪ್ರಕಾಶನ ರಾಯಬಾಗ -೨೦೧೯) ಈ ಸಂಕಲನ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕಪ್ರಾಧಿಕಾರದ ಧನ ಸಹಾಯ ಪಡೆದು ಮುದ್ರಣವಾಗಿರುವದೂ ವಿಶೇಷವೇ.ಹೊಸ ಕಾಲದ ಕವಿಗಳ ಕವಿತೆಗಳನ್ನು ಓದುವದೇ ಒಂದು ಸೊಗಸು. ಬರುತ್ತಿರುವ ಕವನ ಸಂಕಲನಗಳಿಗೇನೂ ಬರವಿಲ್ಲ. ಆದರೆ ಎದೆಯ ಕಾವು ತಣಿಸುವ ಕವಿತೆಯನ್ನು, ಓದುವದೇ ಒಂದು ಸೊಗಸು. ಹೊಸ ಹೊಸ ವಿನ್ಯಾಸದಲ್ಲಿ ಮುರಿದು ಕಟ್ಟುವ ಕವಿತೆಗಳನ್ನು ಅವು ಬಂದಾಗ ಆಗುವ ಎದುರುಗೊಳ್ಳುವ ಸಂತೋಷ ,ಭವಿಷ್ಯದ ಕಾವ್ಯ ದ ಬಗ್ಗೆ ಇರಿಸಿಕೊಳ್ಳಬಹುದಾದ ಭರವಸೆ ಇವು ಸಂತೋಷಗೊಳಿಸುತ್ತವೆ. ಅದೇ ಅದೇ ಚರ್ವಿತ ಚರ್ವಣ ರೂಪಕಗಳ ನಡುವೆ ಕಾವ್ಯ ಮುಳುಗಿ ಹೋಗಿದ್ದಾಗ ರಾಜು ಅವರ ಸಂಕಲನ ತನ್ನ ಹೊಸ ಇಡಿಯಮ್ಮುಗಳಿಂದಾಗಿ ತುಂಬ ಖುಷಿ ಕೊಟ್ಟದ್ದನ್ನು ಮೊದಲೇ ಹೇಳಿ ಮುಂದೆ ಹೋಗುತ್ತೇನೆ. ರಾಜು ಅವರ ಈ ಸಂಕಲನದ ಬಹುಮುಖ್ಯ ಕವಿತೆ “ಅಕ್ಕ ಕಾಣೆಯಾಗಿದ್ದಾಳೆ “ಎನ್ನುವ ಹೆಸರಿನ ಎರಡು ಕವಿತೆಗಳು.ಮಹಿಳಾಸ್ವಾತಂತ್ರ್ಯದ ಬಗೆಗೆ ಬರೆದ ಕವಿತೆಗಳು ಇವು. ಹನ್ನೆರಡನೆಯ ಶತಮಾನದ ಅಕ್ಕನಿಗಾದರೋ ಎಲ್ಲವನ್ನು ದಿಕ್ಕರಿಸಿ ಹೊರಬರುವ ಸ್ವಾತಂತ್ರ್ಯವಿದ್ದಿತು. ಈ ಕಾಲದ ತನ್ನ ಅಕ್ಕ ಈ ಬಗೆಯ ಸ್ವಾತಂತ್ರ್ಯ ಅನುಭವಿಸುವದು ಯಾವಾಗ? ಎಂದು ಪ್ರಶ್ನಿಸುವ ಕವಿ ಅಕ್ಕ ಜಡ ಸಂಪ್ರದಾಯಗಳ ವಿರುದ್ಧ ಬಂಡೆದ್ದು ದಿಗಂಬರೆಯಾಗಿ ಹೊರಬಂದಳು.ಆದರೆ ತನ್ನ ಅಕ್ಕ ಅಪ್ಪ ಅವ್ವನ ಬಂಗಾರ ಸರಪಳಿಯ ಸಂಪ್ರದಾಯದ ಮಾತು ಬಾಜುಮನೆಯ ಗಂಡಸರ ಆಚಾರದ ಗಡಸು ದ್ವನಿಗಳ ಗಸ್ತು! ಇವುಗಳಿಗೆ ಹೆದರಿ ಅಕ್ಕ ಮನೆಯೊಳಗಡೆಯೆ ಅಡಗಿ ಕುಳಿತು ಕವಿಯ ಬಾಜುವೆ ಇದ್ದರೂ ” ಮೋಡದ ಮರೆಯ ಚಂದಿರನಂತೆ” ಮುಸುಕಿನಲ್ಲಿ ಮರೆಯಾಗಿದ್ದಾಳೆ. ಮುಚ್ಚಿಹೋಗಿದ್ದಾಳೆ. ಕಾಳು ಹಾಕಲು ಹೊರಗೆ ಅವಳು ಬರುವಳೆಂದು ಕಾದ ಪಾರಿವಾಳಗಳು ಮೋಸ ಹೋಗಿವೆ.ಕವಿ ಅದಕ್ಕೇ ಕೇಳುತ್ತಾನೆ , ಮತ್ತೆಂದು ಹುಟ್ಟುತ್ತಾರೆ ಅಲ್ಲಾಹುವಿನ ಕರುಣೆಯಿಂದ ಬಸವ ಅಲ್ಲಮ ಪೈಗಂಬರರು ನಮ್ಮಕ್ಜನ ಎದೆಯೊಳಗಿದ್ದ ದುಗುಡದ ಕುಂಡವನ್ನು ಹೊರಗಿಳಿಸಲು? ಹೀಗೆ ಪ್ರಶ್ನಿಸುವ ಕವಿ ಸಮಸ್ತ ಮನುಕುಲಕ್ಕೆ ಪ್ರಶ್ನೆ ಎಸೆಯುತ್ತಾರೆ .ಇದೇ ಹೆಸರಿನ ಇನ್ನೊಂದು ಕವಿತೆ ಇದರದೆ ಮುಂದುವರಿದ ಭಾಗವಾಗಿದೆ.ಅಕ್ಕನ ಸೌಂದರ್ಯ ಯಾವ ದೇವಲೋಕದ ಸುಂದರಿಗೂ ಕಡಮೆಯಲ್ಲದ್ದು. ಅಕ್ಕ ಸುಂದರ ಚಂದ್ರಬಿಂಬದಂತೆ ಬಿನ್ನಾಣವಿಲ್ಲದ ಖೂಬಸೂರತ್ ಚೆಲುವೆ ಆಕೆಗೂ ತನ್ನ ಚಲುವಿನೊಂದಿಗೆ ಹೊರಬರುವ ಆಸೆ.ತನ್ನ ಸೌಂದರ್ಯದೊಡನೆ ಆದರೆ ಸುತ್ತಲಿನ ಕಣ್ಣುಗಳೇ ಕುರುಡು. ಅದನ್ನೆ ಕವಿತೆ ಕಪ್ಪು ಬಟ್ಟೆಯೊಂದಿಗೆ ಧಪನ್ ಆಗಿದೆ ಅಕ್ಕನ ಚಲುವು ಎಂದು ವಿಷಾದಿಸುತ್ತದೆ. ಆಕೆಗೂ ಆಸೆಯಿದೆ. ತಮ್ಮನಿಗೆ ಆಕೆ ಹೇಳಿದ್ದೂ ಇದೆ”.ನಾನು ನಿನ್ನಂತೆ ಬಣ್ಣ ಉಡಬೇಕು ,ಜಿಂದಗಿ ಬಾಳಬೇಕು”, ಎಲ್ಲ ಬಣ್ಣ ಉಟ್ಟರೂ ಹೊರಗೆ ಬರುವಾಗ ಮಾತ್ರ ಕಪ್ಪು ಕಪ್ಪಾಗಿ ಬಿಡುತ್ತಾಳೆ. ಆ ಕಪ್ಪು ಬಟ್ಟೆ ಅವಳ ನಗು,ನೋಟ, ನಡೆ,ನಲಿವನ್ನೆಲ್ಲಾ ನುಂಗಿ ಹಾಕಿರುವದರ ವಿರುದ್ದ ತಣ್ಣನೆಯ ಆಕ್ರೋಶವಿದೆ.ಕವಿತೆ ಸ್ವಲ್ಪ ವಿವರಣಾ ತ್ಮಕವಾಗಿದೆ ಎನಿಸಿದರೂ ಅದು ಕವಿತೆಯ ಸಂವಿಧಾನ ಕ್ಕೆ ಏನೂ ಅಂತಹ ಬಂಗ ತಂದಿಲ್ಲ. ಇಡೀ ಮಹಿಳಾ ಕುಲದ ಎದೆಯೊಳಗಿರುವ ದುಗುಡದ ಕುಂಡವ ಆರಿಸುವ ಆಸೆ ಕವಿಗೆ ಇರುವದು ಸ್ಪಷ್ಟವಾಗಿ ವ್ಯಕ್ತವಾಗಿದೆ. “ಬೆಳಕು “ನಂತಹ ಕವಿತೆಗಳು ಅವರ ಸಮಾಜಮುಖಿ ಚಿಂತನೆಯಿಂದ ಗಮನ ಸೆಳೆದಿವೆ. ಈ ಸಾಲುಗಳು ನೋಡಿ. ರೈತ ನೀರುಣಿಸುವಾಗ ಲಾಂದ್ರವಾಗುವ ಆಸೆ ಯೋಧ ಹೋರಾಡುವಾಗ ದೀವಟಿಗೆಯಾಗುವ ಆಸೆ ಈ ಸಾಲುಗಳುಕವಿಯ ಕವಿತಾ ಶಕ್ತಿಗೆ ನಿದರ್ಶನವಾಗಿವೆ.ಪ್ರೇಮ ಬಾವದ ಕವಿತೆಗಳಲ್ಲೂ ಕವಿ ಶಕ್ತಿವತ್ತಾಗಿ ಭಾವ ಸೂಸುವ ಸಾಲು ಬರೆದಿದ್ದಾರೆ ಎದೆಯ ಬ್ಯಾನಿಗೆ ನಿನ್ನ ಸ್ವಾತಿ ಮಳೆಯ ತಂಪಿನ ಜರೂರತ್ತಿನಲ್ಲಿದ್ದೇನೆ.. ಸಾದ್ಯವಿದ್ದರೆ ಸವುಡು ಮಾಡಿ ಚಂದಿರನ ನಗುವ ತೆಗೆದುಜೊಂಡು ಇತ್ತ ಬಾ ಎನ್ನು ಅಹವಾಲು ವ್ಯಕ್ತಮಾಡುತ್ತಾರೆ” ಕಣ್ಣೀರ ರಕ್ತ” ಎನ್ನುವ ಕವಿತೆಯ ಪ್ರೀತಿಯನ್ನು ನಾ ದೈವವೆಂದು ನಂಬಿದ್ದೆ ದೈವದ ಎದುರು ವಾದಿಸಲಿಕ್ಕಾಗದು ಕೈಯೊಡ್ಡಿ ಕಣ್ಣೀರ ಸುರಿಸಿ ಪ್ರಾರ್ಥಿಸಬಹುದಷ್ಟೇ.. ಇಂತಹ ಸಾಲುಗಳ ಅಭಿವ್ಯಕ್ತಿ ಸಂತಸ ಉಕ್ಕಿಸುತ್ತದೆ.” “ಪ್ರಳಯವಾಗಬೇಕಿದೆ” ,”ನಮ್ಮ ನಿಮ್ಮ ನಡುವೆ” “ಬದಲಾಗಲಿ” ಇತ್ಯಾದಿ ಕವಿತೆಗಳ ಸಾಲುಗಳ ಪ್ರಾಮಾಣಿಕತೆ ಮೆಚ್ಚುವಂತಿದೆ. ಬುದ್ದ, ಬಸವ,ಅಂಬೇಡ್ಕರ್ ಹಿಲಾಲುಗಳನ್ನು ಹಚ್ಚಿಕೊಂಡು ಸಾವಿರಾತು ಹೆಜ್ಜೆ ಮುಂದೆ ಸಾಗುತ್ತೇವೆ.ಧರ್ಮದ ಹೆಸರಿನ ಮೋಸಗಳ ಹುಗಿದು ಎನ್ನುವ ಸಾಲುಗಳ ಸಂಖ್ಯೆ ಹೆಚ್ಚಬೇಕಿರುವದು ಇಂದಿನ ಅಗತ್ಯವಾಗಿದೆ. ಕವಿಯ ಹಕ್ಕಿಯ ಹಾಡಿಗೆ ನಗುವ ಮಗುವಿಗೆ ಯಾವ ಧರ್ಮದ ಮುದ್ರೆಯಿದೆ ದಯೆಯಿಲ್ಲದ ಧರ್ಮಕ್ಕೆ ಯಾವ ಎದೆ ಅರಳುತ್ತದೆ ನೂರಾರು ನದಿಗಳ ದಾರಿ ಸಾಗಿಸಿದ ಸಂವಿಧಾನ ರಥದ ಕೀಲುಗಳ ಸಡಿಲಿಸುವ ನಂಜಿನ ನಾಗರಗಳ ನಾಲಿಗೆಗಳು ಬದಲಾಗಬೇಕಿದೆ ಇಂತಹ ಸಾಲುಗಳನ್ನು ಓದಿದಾಗ ಹಿಂಬದಿಯ ಪುಟಗಳಲ್ಲಿ ಆಶಾ ಜಗದೀಶ್ ರವರು ಬರೆದಿರುವ ಮಚ್ಚಿಕೆಯ ಸಾಲುಗಳು ನಿಜಕ್ಕೂ ಸಾರ್ಥಕ ವಾಗುತ್ತವೆ. ರಾಜು ಅವರ ಕೆಲವು ಕವಿತೆಗಳು ವಿವರಣಾತ್ಮಕ ವಾಗಿವೆ .ಅಲ್ಲಿ ಒಂದಿಷ್ಟು ಸಂಯಮ ಬೇಕಿತ್ತು. ಸಂಕ್ಷಿಪ್ತತೆ ಕಾವ್ಯದ ಶ್ರೇಷ್ಠ ಗುಣ ಎನ್ನುವದನ್ನು ಈ ಯುವ ಕವಿಗಳು ರೂಢಿಸಿಕೊಂಡರೆ ಅವರ ಕಾವ್ಯಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತದೆ. ಇದು ಅವರಿಂದ ಸಾಧ್ಯವಿದೆ ಎಂಬ ನಂಬಿಕೆ ನನಗಿದೆ. ಕಾವ್ಯ ಬೋದನಾತ್ಮಕವಾದಾಗ ಮನುಷ್ಯ ದಂತಹ ಕವಿತೆ ಬಂದಿವೆ. “ಮನುಷ್ಯ” ಕವಿತೆ ಓದಿದಾಗ ಇದು ವ್ಯಕ್ತವಾಗುತ್ತದೆ. ನೀ ಹೀಗೇಕಾದೆ? ಪ್ರೀತಿ ,ಕರುಣೆ ದಯೆ,ಎಲ್ಲ ಮರೆತು ಎಲ್ಲವನ್ನು ಹಣದಿಂದ ಅಳೆಯುವ ಬುದ್ದಿಯನ್ನು ಕಲಿತು ಬುದ್ದುವಾದೆ! ನೀ ಮತ್ತೊಮ್ಮೆ “ಮನುಷ್ಯ “ಎಂದಾಗುವೆ? ಇಂತಹ ಕವಿತೆಗಳು ಇನ್ನು ಹೆಚ್ಚು ಸಾವಯವ ಗೊಳ್ಳಬೇಕು. “ಪ್ರಜಾಪ್ರಭುತ್ವ” ದಂತಹ ಕವಿತೆಗಳಿಗೂ ಇದೆ ಮಾತು ಅನ್ವಯವಾಗುತ್ತದೆ.. ರಾಜು ಅವರ ಹಿಂದೆ ಇರುವ ಶ್ರಮ ಸಂಸ್ಕೃತಿ , ಮೂಲ ಸೆಲೆಯಾಗಿರುವ ಹಳ್ಳಿ ಬದುಕು ಅವರನ್ನು ಗಟ್ಟಿ ಗೊಳಿಸಿವೆ.ಮುನ್ನುಡಿ ಬರೆದ ಹಿರಿಯ ಕವಿ ಸತೀಶ ಕುಲಕರ್ಣಿಯವರು ಹೇಳಿರುವ ” ಕವಿ ರಾಜು ಎಸ್ ಸನದಿ ಕಾವ್ಯ ಲೋಕದಲ್ಲಿ ಬಹಳ ದೂರ ಸಾಗಬೇಕಿದೆ.ಸವಾಲುಗಳ ನಡುವೆ ಉತ್ತರಗಳನ್ನು ಹುಡುಕುವ ದಾರಿ ಕಾಣಬೇಕಾಗಿದೆ” ಎನ್ನುವ ಸಾಲುಗಳು ಇಂದಿನ ಎಲ್ಲ ಕವಿಗಳಿಗೂ ಎಚ್ಚರಿಕೆಯಾಗಿದೆ. ಮೊದಲ ಸಂಕಲನದಲ್ಲಿ ತೋರಿರುವ ಉತ್ಸಾಹವನ್ನುಮುಂದಿನ ಸಂಕಲನಗಳಲ್ಕಿಯೂ ನಿರೀಕ್ಷಿಸುತ್ತ ಅವರಿಗೆ ಶುಭ ಹಾರೈಸುತ್ತೇನೆ. ********************************* ಯ.ಮಾ ಯಾಕೊಳ್ಳಿ
ದುಗುಡದ ಕೆಂಡ – ಕೈಲಿ ಹಿಡಿದು Read Post »
ಕವಿತೆ ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!? ಶೀಲಾ ಸುರೇಶ್ ಕೊರಳುಬ್ಬಿಸಿ ಬಿಕ್ಕುತ್ತಲೇಕಾಯಬೇಕು ಸೆರಗೆಳೆವಸಖನಿಗಾಗಿ…ಬಂದವನೆದುರು ನಾಚಿಕೆಯಸೋಗಾಕಿಬಿನ್ನಾಣದ ನಡೆಹೊತ್ತುಬೆನ್ನಾಕಿ ನಿಂತಿದ್ದುಜಿನುಗಿದ ಹನಿ ಕಾಣದಿರಲೆಂದು ತಡಮಾಡಲೇ ಇಲ್ಲಮುಖತಿರುಗಿಸಿತಡಕಾಡಿದ್ದು ದೀಪವಾರಿಸಲೆಂದುಹುಚ್ಚಾಟಗಳ ಸಹಿಸಿಯೂಕಾದಿದ್ದು ಪೂರೈಸಿದಬಯಕೆ ತಂದ ಹಣವೆಷ್ಟೆಂದು ಬೆತ್ತಲಾದ ದೇಹಕ್ಕೆಮುಚ್ಚಲಾರದ ನೋಟುಗಳುಗಹಗಹಿಸಿ ನಕ್ಕಗಂತೂಮಡುಗಟ್ಟಿದ ಮೌನಕದತೆರೆದು ಬೀದಿಬದಿಯ ಕೊನೆಯಲ್ಲಿಮತ್ತೆ ಬೆಂಕಿಯಾಗಿತ್ತು ಸುಕ್ಕುಗಟ್ಟಿದ ನೆರಿಗೆಹಾಸಿಗೆ ಹೊದಿಕೆಸರಿಪಡಿಸಿನಡುಗುವ ಮೈಯನ್ನೊಮ್ಮೆಕೊಡವಿ ಬಿಗಿಯಾಗಿಸಿನಗೆಯಾದಳು ಸೆರಗಚಾಚಿ…. ಹೋಗಿಬರುವ ನಾಲ್ಕುಗಾಲಿಗಳು ಬೆಳಕನಾರಿಸಲೆ ಇಲ್ಲ..ತೂರಾಡುತ್ತಲೇ ಬಂದುಗಪ್ಪೆಂದು ಬಡಿದ ವಾಸನೆಎಸೆದ ಕಾಸು ಮಡಿಲುತುಂಬಲಿಲ್ಲಹಸಿವನೀಗಿಸಲೂ ಇಲ್ಲಸೋತ ದೇಹ ಕುಸಿದುಕಣ್ಣೀರಾದದ್ದು ಕಂದನಕನಸಿಗೆ ನೀರಾಕುವುದೇಗೆಂದು ತಿಳಿಯದೆ. ಕೆಂಪು ಹೂವಿಗೆ ಸೋತುಹರಿಸಿದ್ದು ಕೆಂಪು ಓಕುಳಿಒಂದೊಂದೆ ದಳ ಉದುರಿಮುಡಿಯೇರುವ ಮುನ್ನವೇಮಣ್ಣಾಗಿದ್ದು ಹೂವಿಗೂತಿಳಿಯಲಿಲ್ಲ… ***************************************************
ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!? Read Post »
ಪುಸ್ತಕ ಸಂಗಾತಿ ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ ಜ.೩೧ ಶಿಗ್ಗಾವಿಯಲ್ಲಿದ್ದೆ. ಕನಕ ಶರೀಫ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹೀಗೆ ಮೂರು ಆಯಾಮಗಳ ಸಮಾರಂಭವನ್ನು ಉತ್ತರ ಸಾಹಿತ್ಯ ವೇದಿಕೆ ಹಾಗೂ ನೇತಾಜಿ ಪ್ರಕಾಶನದವರು, ಗೆಳೆಯ ರಂಜಾನ್ ಕಿಲ್ಲೆದಾರ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕವನ ವಾಚನದ ನೆಪದಲ್ಲಿ ಶಿಗ್ಗಾಂವ್ ತಲುಪಿದ್ದೆ. ಅಲ್ಲಿದ್ದ ಗೆಳೆಯ ಅಲ್ಲಾಗಿರಿರಾಜ್ ಕನಕಗಿರಿ” ಸರ್ಕಾರ ರೊಕ್ಕ ಮುದ್ರಿಸಬಹುದು,ತುಂಡು ರೊಟ್ಟಿಯನ್ನಲ್ಲ .. ” ಎಂಬ ಅವರ ಕವನ ಸಂಕಲನವನ್ನು ನನ್ನ ಕೈಗಿಟ್ಟರು . ಆ ಸಂಕಲನದ ರಕ್ಷಾ ಪುಟದ ಕೊನೆಗೆ ‘ ನೀವು ಎದೆಗೆ ಗುಂಡು ಹೊಡೆದರೆ’ ಎಂಬ ಕವಿತೆ ಮೊದಲ ಓದಿಗೆ ಥಟ್ಟನೆ ನನ್ನ ಗಮನ ಸೆಳೆಯಿತು. ಕ್ರಾಂತಿಯ ಕಿಡಿಯಂತೆ ಇದ್ದ ಆ ಕವಿತೆಯನ್ನು ಓದಿದ ತಕ್ಷಣ, ನನ್ನ ವ್ಯಾಟ್ಸಪ್ ಸ್ಟೇಟಸ್ ನಲ್ಲಿ ಹಂಚಿಕೊಂಡೆ. ೨೦೨೦ರಲ್ಲೇ ಎರಡು ಮುದ್ರಣ ಕಂಡ ಕವಿತಾ ಸಂಕಲನ ಇದಾಗಿತ್ತು. ಮೋಹನ್ ಕುರುಡಗಿ ಕಾವ್ಯ ಪ್ರಶಸ್ತಿ ಪಡೆದುಕೊಂಡ ” ತುಂಡು ರೊಟ್ಟಿ ” ಈಗಾಗಲೇ ಕನ್ನಡ ಕಾವ್ಯಾಸಕ್ತರ ಗಮನ ಸೆಳೆದಿದೆ. ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ ಸಿಟ್ಟು ,ಆಕ್ರೋಶ, ಕವಿತೆಯಾಗುವ ಪರಿ, ಪ್ರಭುತ್ವ ಹೋರಾಟದ ಧ್ವನಿ ಹತ್ತಿಕ್ಕಿದಾಗ ; ಪ್ರತಿಕ್ರಿಯೆಯಾಗಿ ಹುಟ್ಟಿದ ಕಾವ್ಯ ತುಂಡು ರೊಟ್ಟಿ. ಆಕ್ರೋಶದ ಕಾವ್ಯ ಪ್ರೀತಿ ,ಕರುಣೆ ಹಂಚಿ, ಪ್ರಭುತ್ವದ ಠೇಂಕಾರ ಸಹ ಕರಗುವಂತೆ ಕವಿತೆ ಬರೆಯುವ, ಅಲ್ಲಾಗಿರಿರಾಜ್ ಸಮಾಜದ ನಡುವೆ ನೋವಿನ ಧ್ವನಿಗಳಿಗೆ ಕಿವಿಯಾದವರು. ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ ಎಂಬ ಉದ್ದದ ಸಾಲನ್ನು ಕವನ ಸಂಕಲನದ ಮುಖಪುಟ ಆವರಿಸಿದೆ. ತುಂಡು ರೊಟ್ಟಿ ಅಥವಾ ರೊಟ್ಟಿ ಎಂದು ಸಂಕಲನದ ಹೆಸರು ಇದ್ದರೂ ಸಾಕಿತ್ತು. ಸಂಕಲನದ ತಲೆ ಬರಹ ಪರಿಣಾಮಕಾರಿಯಾಗಿಯೇ ಇರುತ್ತಿತ್ತು.ರೈತ ,ರೊಟ್ಟಿ, ರೊಕ್ಕ,ಪ್ರಭುತ್ವ, ಕುರುಡು ಪ್ರಭುತ್ವ ಮುಖಾಮುಖಿಯಾಗುವ ಪರಿಯೇ ಓದುಗನಲ್ಲಿ ಕಾವ್ಯದ ಎಚ್ಚರ ಮೂಡಿಸುವಂತಹದ್ದು. ತಾಯ ಮೊಲೆಹಾಲು ವಿಷವಾದ ಕಾಲವಿದು. ಕರುಳು ,ಹೃದಯವಿಲ್ಲದ ಅಧಿಕಾರ , ಆಡಳಿತ ಶಾಹಿಯನ್ನು ಎಚ್ಚರಿಸುವ ಜಾಗೃತ ಕಾವ್ಯ ನಮಗೀಗ ಬೇಕು. ಕನ್ನಡ ಪ್ರಜ್ಞೆ ಪರಿಸರ ಅಂಥದ್ದು. ಅಂತಹ ನಾಡಿ ಮಿಡಿತ ಹಿಡಿದು ಬರೆಯುವ ಕವಿ ಅಲ್ಲಾಗಿರಿರಾಜ್ ರೊಟ್ಟಿ ಕವಿತೆಯಲ್ಲಿ ಅದನ್ನು ಸಾಧಿಸಿದ್ದಾರೆ. ” ನೆತ್ತರಿನ ಮಳೆ ಬಿದ್ದ” ಕವಿತೆಯ ಮೇಲೆ ಲಂಕೇಶರ ಕೆಂಪಾದವೋ ಎಲ್ಲಾ ಕೆಂಪಾದವೋ, ಒಣಗಿದ್ದ ಗಿಡಮರ ನೆತ್ತರ ಕುಡಿದ್ಹಾಂಗ ಕೆಂಪಾದವೋ…ಕವಿತೆಯ ದಟ್ಟ ಛಾಯೆಯಿದೆ. ಲಂಕೇಶರ ಕವಿತೆಯನ್ನು ಮುರಿದು ಕಟ್ಟಿದ ಹಾಗೆ ಇದೆ ನೆತ್ತರಿನ ಮಳೆ ಬಿದ್ದ ಕವಿತೆ.“ಚಪ್ಪಲಿ ಕಥೆ ” ಎಂಬ ಹೆಸರಿನ ಕವಿತೆ ವಾಚ್ಯ ಎನಿಸಿದರೂ ಅಂತಿಮ ಸಾಲಿನಲ್ಲಿ ಧ್ವನಿ ಕಾರಣ ಗೆಲ್ಲುತ್ತದೆ.“ಅಪ್ಪ ಎಂದೂ ಮುಗಿಯದ ಕನಸು” ಕವಿತೆ ಅಪ್ತವಾಗಿದೆ. ‘ಅಪ್ಪ ಕವಿತೆಯ ಕೊನೆಯ ಸಾಲಿನಂತೆ’ ಎನ್ನುವ ಸಾಲು ಮನಮೀಟುತ್ತದೆ. ಅಲ್ಲದೇ” ನನ್ನವ್ವ ತೀರಿಕೊಂಡಾಗನನ್ನಪ್ಪ ಅಂದೇ ಒಳ ಒಳಗೇಸತ್ತಿದ್ದ “ಎನ್ನುವ ಸಾಲು ಸಹೃದನನ್ನು ಕಾಡದೇ ಇರದು. ಲಾಕ್ ಡೌನ್ ಮತ್ತು ನಾಯಿ ದಿನಚರಿ ಕವಿತೆ ೨೦೨೦ ನೇ ವರ್ಷದ ಕೋವಿಡ್ ಕರಾಳತೆಯನ್ನು ರಾಚುತ್ತದೆ. ಮನುಷ್ಯರಾಗೋಣ ಕವಿತೆ ಕೋಮುಸೌಹಾರ್ದತೆ ಹಾಗೂ ಭಾರತೀಯತೆಯನ್ನು ಕಟ್ಟಿಕೊಡುತ್ತದೆ. ಕವಿಯ ಕಳಕಳಿ , ಉದ್ದೇಶ ಇಂತಹ ಕವಿತೆಗಳ ಮೂಲಕ ದಾಖಲಾಗುತ್ತದೆ.” ಲಾಲ್ ಸಲಾಂ ಚೆಗು” ಎಂಬ ಕವಿತೆಯಲ್ಲಿ ಕವಿ ಚೆಗೆವಾರನನ್ನು ನೆನಪಿಸಿಕೊಂಡಿದ್ದಾರೆ. ಇದೊಂದು ಸಶಕ್ತ ಕವಿತೆ.ಕ್ರಾಂತಿ ಗೀತೆಯಂತಿದೆ.” ನಿನ್ನ ಕಣ್ಣ ಕಿಂಡಿಯಲ್ಲಿ ಜಗದ ಹಸಿದವರ ದನಿಯಿದೆಶೋಷಿತರ ಹೆಗಲಮೇಲೆ ನಿನ್ನ ಲಾಲ್ ಝೆಂಡಾ ಇನ್ನೂ ಘರ್ಜಿಸಿದೆ” ಎನ್ನುತ್ತಾನೆ ಕವಿ.ನನ್ನ ಕವಿತೆಯಲ್ಲಿಎಂಜಲು ಅನ್ನ ಕಾಯುವ ಅನಾಥ ಬೀದಿ ಮಕ್ಕಳ ಎದೆಯ ಹಾಡು ನನ್ನ ಕವಿತೆಅಕ್ಕ ತಂಗುಯರ ಎದೆಯ ಹಾಡುಲೋಕದ ಹಸಿವು ನೀಗಿಸಿದ ಅನ್ನದಾತರ ಎದೆಯ ಹಾಡುನನ್ನ ಕವಿತೆನನ್ನದೇ ಅಲ್ಲಹಸಿದವರ ಹಾಡು ” ಎಂಬಲ್ಲಿ ಕವಿತೆ ಸಾರ್ವಜನಿಕರದ್ದು, ಶ್ರಮಜೀವಿಗಳದ್ದು ಎಂಬ ಸಂದೇಶವನ್ನು ಕವಿ ಸಮಾಜಕ್ಕೆ ನೀಡುತ್ತಾ ಸಾಗುತ್ತಾನೆ. ” ಅಲ್ಲಿ ವರ್ಣ- ಇಲ್ಲಿ ಧರ್ಮ ” ಎಂಬ ಕವಿತೆಯಲ್ಲಿ ವರ್ಣ ಬೇಧ , ಧರ್ಮಬೇಧ ಇರುವಾಗ ಮನುಷ್ಯರು ಮನುಷ್ಯರಾಗುವುದು ಯಾವಾಗ ? ಎಂಬ ಪ್ರಶ್ನೆ ಎತ್ತುತ್ತಾನೆ ಕವಿ.ಧರ್ಮದ ಅಮಲು ಬಣ್ಣದ ಧಿಮಾಕು ಇನ್ನೆಷ್ಟು ದಿನ ? ಇಂತಹ ಪ್ರಶ್ನೆಗಳನ್ನು ಎತ್ತುವ ಮೂಲಕ ಸಕಾಲಿಕ ,ಸಮಾಕಾಲಿನ ಸಮಸ್ಯೆಗೆ ಮುಖಾಮುಖಿಯಾಗಿ ಕಾವ್ಯವನ್ನು ಎಚ್ಚರಿಕೆಯ ಗಂಟೆಯಾಗಿ ಭಾರಿಸಿದ್ದಾರೆ.ಗೋಡೆ ಎತ್ತರವಾಗುತ್ತಿದೆ ನಿನ್ನ ನನ್ನ ನಡುವೆ , ಧರ್ಮದ ವಿಷಗಾಳಿ ಕುಡಿದು ಎನ್ನುವ ಆತಂಕ ಸಹ ಕವಿಗಿದೆ. ಮಂದಿರ ಮಸೀದಿ ಮೇಲಿನ ಬಿಳಿ ಪಾರವಾಳ ರಕ್ತ ಕಾರುವ ಮುನ್ನ ಕಫನ್ ಸುತ್ತಿಕೊಳ್ಳಬೇಕು ಎಂದು ತಮಗೆ ತಾವೇ ಹೇಳಿಕೊಂಡ ಆತ್ಮಾವಾಲೋಕನದ ಕವಿತೆಗಳು ಓದುಗುನಲ್ಲಿ ಅಚ್ಚರಿಯ ಬದಲಾವಣೆ ತರದೇ ಇರಲು ಸಾಧ್ಯವೇ? ಹೀಗೆ ಕವಿ ಆತಂಕವನ್ನು ತೋಡಿಕೊಳ್ಳತ್ತಲೇ ಆಶಾವಾದವನ್ನು ಸಹ ಇಲ್ಲಿನ ಕವಿತೆಗಳು ಸಾರುತ್ತವೆ. ************************************** ನಾಗರಾಜ ಹರಪನಹಳ್ಳಿ
You cannot copy content of this page