ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವರ್ಷಧಾರೆ

ಸಂಮ್ಮೋದ ವಾಡಪ್ಪಿ

Close-Up Photography of Wet Leaves

ಅವಳ ಕಣ್ಣ ನೋಟದಲಿ
ಮಿಂಚು ಹರಿಯುತತಲಿತ್ತು
ಎನ್ನ ಮನದ ಭಾವನೆಗಳ
ಅವಳು ಅರಿತಂತಿತ್ತು

ಪ್ರೀತಿಯ ಕಾರ್ಮೋಡಗಳು
ವರ್ಷಧಾರೆಯ ಮಾಡಲೆಂದು
ಒಟ್ಟಿಗೆ ಬಂದು ನಿಂತಂತ್ತಿತ್ತು
ತಂಗಾಳಿಯು ತಂಪನು ಸೂಸುತಲಿತ್ತು

ಪ್ರೇಮದ ಮಳೆಯ ಸಿಂಚನದಲಿ
ನೆನೆಯಲು ಹವಣಿಸುತಲಿತ್ತು
ಅವಳ ಕಣ್ಣರೆಪ್ಪೆ ಎಲ್ಲ ತಿಳಿಸಿತ್ತು
ಕಾದಿರುವ ಮನದ ದಣಿವಾರಿತ್ತು

ಕಿರುನಗೆಯು ಮೊಗದಲಿ ಹೊರಹೊಮ್ಮಿತ್ತು
ಮನದ‌ ತೊರೆಯು ತುಂಬಿಹರಿದಿತ್ತು
ಬಾಳ ಸಂಗಾತಿಯ ಪ್ರೇಮದ ಪರಿಯೇ
ಬದುಕಲ್ಲಿ ಭರವಸೆಯ ಬಹು ಚೆಲ್ಲಿತ್ತು

ನಲ್ಮೆಯ ಗೆಳತಿಯು ಕೈಹಿಡಿದು ನಡೆವಾಗ
ನೀರು ಗಾಳಿ ಸೇರಿ ಒಲವ ಧಾರೆಯ ಎರೆದು
ನೀರುಣಿಸಿ ಕಾರ್ಮೋಡ ಸರಿದು ಹೋಗಿತ್ತು
ಜೊತೆಯಲಿ ನಡೆವ ದಾರಿಯಲಿ ಬೆಳಕು ಕಂಡಿತ್ತು

*********************************

About The Author

4 thoughts on “”

Leave a Reply

You cannot copy content of this page

Scroll to Top