ಭಾವದಲೆಯಲಿ ಪ್ರೇಮರಾಗ ಅನಿತಾ ಪಿ. ಪೂಜಾರಿ ತಾಕೊಡೆ ಒಲವೇ ಹೀಗೆ ತರವೇಮೀಟು ಪ್ರೇಮ ಭಾವಗಳಾ… ಬಾನಲ್ಲಿ ನೋಡು ಮೇಘಗಳಾಬಾರೋ ಮಳೆಯಾಗುವಾ…. ಒಲವೇ ಹೀಗೆ ತರವೇಮೀಟು ಪ್ರೇಮ ಭಾವಗಳಾ…ಒಲವೇ…. ಆ ಬಾನಿಗೆಂದೂ ಈ ಭೂಮಿಯೊಲವುಹೂಮಳೆಯ ಜೊತೆ ಸೇರಿ ತಂಪಾಗುವಾಮಳೆಬಿಸಿಲ ಚೆಲುವು ಹದವಾಗುತಿರಲುಬಾರೋ ರಂಗಾಗುವಾ ||ಒಲವೇ|| ಮುಗಿಲಾಚೆ ನೋಡು ಗಿರಿಹಕ್ಕಿ ಸಾಲುನಾವೂನೂ ಅದರಂತೆ ಹಗುರಾಗುವಾಕರಿಮೋಡ ಸರಿದು ತಿಳಿಯಾಗುತಿರಲುಬಾರೋ ಹಿತವಾಗುವಾ ||ಒಲವೇ|| ಜೊತೆಯಾಗಿ ಬೆಸೆದ ಕನಸೊಂದು ಉಂಟುನೀನಿರದೆ ಎಂದೂ ನನಸಾಗದುಈ ಬಂಧ ಅನುದಿನವೂ ಉಸಿರಾಗುತಿರಲಿಬಾರೋ ಬದುಕಾಗುವಾ ||ಒಲವೇ|| ****************************************
ಪ್ರೀತಿಯ ಪಿಸುಮಾತು ಸರಿತಾ ಮಧು ಹೇಳಿಬಿಡಲೇನು ಮನದ ಇಂಗಿತವಸುತ್ತು ಬಳಸುವುದೇನು ನಿನ್ನೊಡನೆ ಬೆನ್ನಿಗಾತು ಕುಳಿತು ಪಿಸುಗುಟ್ಟುವಚಡಪಡಿಕೆ , ಬಚ್ಚಿಟ್ಟ ಮಾತುಗಳಿವುಉಳಿದ ಕಾರಣವೇನೋ ತಿಳಿದಿಲ್ಲಕೊಪ್ಪರಿಗೆಯಷ್ಟು ಕನವರಿಕೆಗಳಿವೆ ನಿನ್ನ ಪ್ರೀತಿಯಲ್ಲಿ ಬಂಧಿ ನಾನುಖುಷಿಯ ಕಬಳಿಸಲೆಂದೇ ನಿರುಕಿಸುತ್ತಿರುವೆಹೃದಯಾಂತರಾಳದಲ್ಲಿ ಖೈದಿಯಾಗಿರುವೆನುಖುಲಾಸೆಯ ಗೊಡವೆ ಎನಗಿಲ್ಲ ದೂರದಿ ಮುಗುಳುನಗೆ ಹೊತ್ತರಜನೀಶನೂ ಮತ್ಸರದಿ ಇಣುಕುತಿಹನುನಮ್ಮೊಲವಿನ ಗಾಢತೆಗೆ ಸಾಕ್ಷಿಯಾಗಿಮನದಿಚ್ಚೆಯ ಮನ್ನಿಸೊಮ್ಮೆ ನನ್ನಿನಿಯ ಮನಸಿನ ಜಪವೂ ನಿನ್ನದೇ ಸದಾಗಮನಿಸದೆ ದೂರ ಸರಿಯುವ ಇರಾದೆ ಏಕೆ?ನಿನ್ನ ಪ್ರೇಮ ಸಾನಿಧ್ಯದ ಹೊರತುಬೇರೆ ಬಿಡಾರವೇನಿದೆ ನನಗೆ ಹೇಳಿಬಿಡಲೇನು ಮನದ ಇಂಗಿತವಸುತ್ತು ಬಳಸುವುದೇನು ನಿನ್ನೊಡನೆಅನುಗಾಲಕೂ ಒಲವ ಸಿಂಚನದಬಯಕೆಯೊಂದೇ ನನ್ನ ಮನಕೆ ********************
ಓ…ಪ್ರೇಮವೇ. ಶಿವಲೀಲಾ ಹುಣಸಗಿ ನಿನ್ನೆದೆಯ ಕುಲುಮೆಯಲಿ ಬೆಂದದ್ದೆ ಬಂತುಬಚ್ಚಿಟ್ಟ ಪ್ರೇಮವನೀಗ ಖಗಗಳು ಬಿಚ್ಚಿಟ್ಟುಬಾನಲಿ ಕಾಮನಬಿಲ್ಲು ಮೂಡಿದಂತಾತುಪ್ರೇಮದ ತಂಗಾಳಿಗೆ ಹೃದಯ ಸಿಕ್ಕು.ಕಂಗಳ ಭಾಷೆಗೆ ವಿರಹದ ಸ್ಪರ್ಶವಾತು…ಓ ಬೆಸುಗೆಯ ಹೊಂಗನಸಿನ ಹೊದಿಕೆಗೆತಾರೆಗಳೇ ಚಪ್ಪರವಾಗಿ ಮಿನುಗಿದಂತೆಪನ್ನಿರು ಹನಿಸುತ ಆವರಿಸಿದಂತೆಲ್ಲಗುಡಿಸಲೊಂದು ಸ್ವರ್ಗವಾದಂತಾತು…ಓ ನಿನ್ನ ಪ್ರೀತಿಯ ಘಮಲಿನ ಸೆಳೆತಕ್ಕೇಹೂಬನಗಳು ಭಾರವಾಗಿ ಒರಗಿವೆನಿನ್ನೂಸಿರಲವಿತ ಹಿಡಿ ಪ್ರೀತಿಯುನನ್ನೆದೆಯಲಿ ಬೆಚ್ಚಗೆ ನಲುಗಿದೆ….ಓ ತುತ್ತುಕೂಳಿಗೂ ತತ್ತರಿಸಿದರೂ ಭಯವಿಲ್ಲಬದುಕು ರಸ್ತೆಯಂಚಲ್ಲಿದ್ದರು ಕೊರಗಿಲ್ಲನಿನ್ನೊರತು ಜಗದೊಳು ನನಗೇನು ಬೇಕಿಲ್ಲಬೇಡಿಬಂದರಿಗೆಲ್ಲ ದಕ್ಕಿತೇ ಈ ಪ್ರೀತಿ?…ಓ ಶೋಕೇಸಿನಲ್ಲಿಟ್ಟು ಮುಟ್ಟುವವರಿಗೇಪ್ರೇಮದ ಬಿಸಿಯುಸಿರು ತಟ್ಟಿತೇನಿಷ್ಕಲ್ಮಶ ಪ್ರೇಮದಲಿ ಮನಸ ಹೊಸೆದುಸಾರಬೇಕಿದೆ ನಿಜಾರ್ಥದ ಒಳಹರಿವುಪ್ರೇಮಕೆ ಬಂಜೆಯಂಬ ಪಟ್ಟವಿಲ್ಲನಾಡಿ ಮಿಡಿತ ಲೆಕ್ಕಕ್ಕೂ ಸಿಗದು…ಓ ಓ.. ಪ್ರೇಮವೇ ನೀ ಬಾನಿನಂತೆ ವಿಶಾಲಮೇಘದೂತನ ಪ್ರೇಮ ಪತ್ರಗಳುಋತುಗಳ ರಂಗಿನಲಿ ರಂಗೇರಿವೆಪ್ರೇಮಕ್ಕಿದೆ ಜಗವ ಗೆಲ್ಲುವ ಶಕ್ತಿಯೆಂದುನಿನ್ನೊಳಿರೆ ಅನುದಿನವು ಸಂತೃಪ್ತಿಯೆಂದುಓ…ಪ್ರೇಮವೇ ನೀ ನನ್ನ ಜೀವವೇ.. *******************************
ಪ್ರೇಮ ಪತ್ರ ಸ್ಮಿತಾ ರಾಘವೇಂದ್ರ ಕಣ್ಣಿಗೊಂದು ಕನ್ನಡಕ ಏರಿಸಿಕೊಂಡುಅದರ ಪ್ರೇಮ್ ಹಿಡಿದುಮೇಲೆ ಕೆಳಗೆ ಮಾಡುತ್ತಹಳೆಯ ಟ್ರಂಕಿನ ಬಂಗಾರದಭದ್ರತೆಯಿಂದ ಹೊರಬಂದಓಲೆ. ಕೊರಳ ಸುತ್ತಿ ಎದೆಯ ಮಿದುವಿನಲಿಮಿಸುಕಾಡಿಆಗಾಗ ಚುಚ್ಚಿ ಕೊಳ್ಳುವ ಸರಮತ್ತೆ,,,ಜೊತೆಯಾದ ಪ್ರೇಮ. ಎಂದೋ ಸಿಕ್ಕ ಮತ್ತೀಗಸಿಗಬೇಕಾದ ಪ್ರತೀಕ್ಷೆ. ಜೀಕುವ ಉತ್ಸಾಹದಲಿಆಗ ತಾನೇ ಕಣ್ ಬಿಟ್ಟ ಕರುಅದುರುವ ಕಾಲುಗಳುಜಾರಿ ಮುಗ್ಗರಿಸಿ,ಏನು ಬೇಕಾದರೂ ಘಟಿಸಬಹುದು,ಕ್ಷಣದ ಕವಲಿನಲಿಹಾಲು ಹಾಲಾಹಲ. ಕೇರಿ ಕೆರೆ ಕುಂಟೆಗಳಲಿಸುಳಿದಾಡಿದ ಒಲವ ಘಮ,ಊರ ಕೊನೆಯ ಬಸ್ಸಿನಲಿಬಂದಿಳಿದ ನೆನಪುಗಳು-ತುಂಬಿಕೊಂಡ ಜೋಳಿಗೆಯತುದಿಗೊಂದು ತೂತು.ಕೊರೆದಿದ್ದು ಯಾರು!?ಆರೋಪ ಪ್ರತ್ಯಾರೋಪ,ಹೆಕ್ಕಿಕೊಂಡರು ಯಾರೋಉಳಿದದ್ದು ಮೌನ. ಅದೆಂತಹ ವಿಧಾಯ ಹೇಳುಮತ್ತೆ ಮತ್ತೆ ಸೇರಿಕೊಳ್ಳುವಶರಧಿ,ನದಿ ನಡುವೆ. ಕೈಲಿಟ್ಟ ಕೊನೆಯ ಓಲೆಯಲಿಏನಿತ್ತು!ತುರುಕಿ ನಡೆದಾಗ ಎದುರಾಗಿದ್ದುಯಾರದ್ದೋ ಶಾಪ,ಒಲವಿನೋಲೆಯಂತೆ ಮನಸೂ ಮುದುಡಿ,ಅದೇ ತಿರುವಿನಹರಿವ ತೊರೆಯಲಿ ಎಸೆದಪ್ರೇಮ ಪತ್ರ,ಖಾತ್ರಿಯಿಲ್ಲ ಕಡಲು ಸೇರಿದ್ದಕ್ಕೆ. ಇಂದು ನೀನೇ ಇದ್ದಿದ್ದರೆ!ಇರಬೇಕಿತ್ತು ನೀನೇ,,ಎಂದು ಕೊನೆಯಾಗುವ ಪ್ರತಿಕ್ಷಣದ ಭಾವ. ನವಿಲು ಗರಿ ಸವರಿ ಕೊಟ್ಟ ಪತ್ರಕ್ಕೆಆಗಾಗ ಗರಿ ಬಿಚ್ಚುವಗಳಿಗೆಭಯದ ನೆರಳಿನಲಿ,ಕೊಚ್ಚಿ ಹೋದ ಅಕ್ಷರಗಳಹುಡುಕಾಟದಲಿ“ಅದಿನ್ನೂ ಜೀವಂತ”.. ***************
ಹೇಗೆ ಪ್ರೀತಿಸಲಿ? ಬೆಂಶ್ರೀ ರವೀಂದ್ರ ಹುಡುಗಿ ಕೇಳಿದಳುಹೂವು ಬಿರಿಯುವ ಸದ್ದುನಿನಗೆ ಕೇಳಿಸಿತೇನು ಹುಡುಗ‘ಇಲ್ಲವಲ್ಲ ಹುಡುಗಿ’ಹಾಗಾದರೆ ಹೇಳುಹೇಗೆ ಪ್ರೀತಿಸಲಿ ನಿನ್ನ! ತುಂಬು ಹುಣ್ಣಿಮೆಯಲಿನೀರವದ ರಾತ್ರಿಯಲಿಗಾಳಿ ಚಲಿಸದ ಗಳಿಗೆಯಲಿನಕ್ಷತ್ರದ ನಗೆಯಕಂಡೆಯಾ ಹುಡುಗಓಹ್ ಇಲ್ಲವೆಂದರೆ ಹೇಳುಹೇಗೆ ಪ್ರೀತಿಸಲಿ ನಿನ್ನ ! ತಿಳಿನೀರ ಕೊಳದಲ್ಲಿಒಂದರ ಹಿಂದೊಂದುಸುಳಿವ ಜೋಡಿ ಮೀನುಗಳಹೆಜ್ಜೆಯ ಗುರುತಿಸಿದೆಯಾಹುಡುಗಇಲ್ಲವಾದರೆ ಹೇಳುಹೇಗೆ ಪ್ರೀತಿಸಲಿ ನಿನ್ನ ! ಸಾಕು ಸಾಕೆಲೆ ಹುಡುಗಿಕೇಳುವೆನೊಂದೇ ಪ್ರಶ್ನೆನಿನ್ನ ಕಂಡೊಡನೆ ಮಿನುಗಿದನನ್ನ ಕಣ್ಣ ಕಾಂತಿಯ ಕಂಡೆಯಾ!ಕಂಡೆನಲ್ಲ ಹುಡುಗ !ಅದಕ್ಕಲ್ಲವೇಇಷ್ಟೊಂದು ಪ್ರಶ್ನೆಗಳು. ಹುಡುಗಿ !ನೋಡು ನೀನೆನ್ನ ಕಂಡಾಗನಿನ್ನ ಕಣ್ಣಲಿ ನಾ ಕಂಡಿದ್ದುಮಿನುಗಲ್ಲ ಕೋಲ್ಮಿಂಚುಅದು ಸುಟ್ಟಿದೆ ನನ್ನೆದೆಯನುಗಾಯ ಮಾಗಬೇಕಿದೆಹ್ಞು..ಅನ್ನುಪ್ರೀತಿಗೇಕೆ ಇಷ್ಟೊಂದು ಪ್ರಶ್ನೆಗಳ ಕಾಟ ! *********************************
ಅಮೂರ್ತ ಮಮತಾ ಶಂಕರ್ ಅವನೆಂದೂ ನನ್ನೊಂದಿಗೆ ಮಾತಾಡಿ ನನ್ನ ಸುತ್ತ ತಿರುಗಿಪ್ರೇಮಗೀಮ ಎಂದು ಹಾಡಿ ಕುಣಿಯುತ ಕಥೆಯಾಗಲಿಲ್ಲಆದರೆ ಮೌನ ವೀಣೆಯ ಶ್ರುತಿ ಮಾಡಿಪಂಚಮದ ಸುಂದರ ಗೀತೆಯಈ ಬಾಳ ಹಾಡಾಗಿಸಿದಅ ಮೌನಿ ಮಾತಾಡಲಿಲ್ಲ ಎಂದು ಹೇಗೆ ಹೇಳಲಿ? ನನ್ನನೆಂದೂ ಅವನು ಸ್ಪರ್ಶಿಸಲಿಲ್ಲಆದರೆ ಅವನ ನೋಟಕೆಎಲೆಯುದುರಿಸಿ ನಿಂತ ಬೋಳುಮರವಸಂತನ ಸ್ಪರ್ಶಕೆ ಚಿಗುರಿ ಮೈತುಂಬಾಹಸಿರು ಎಲೆ ಹೂ ಹೊದ್ದುಕೊಂಡಂತೆನನ್ನ ಬಾಳ ಚೈತ್ರವಾದಅವನು ನನ್ನ ಮುಟ್ಟಲಿಲ್ಲ ಎಂದು ಹೇಗೆ ಹೇಳಲಿ? ನನ್ನ ನಗುವಾದ ನನ್ನ ಮನವಾದನನ್ನ ಉಸಿರಾದ ಎದೆಯ ಬಡಿತವಾದನೋಟದೊಂದು ಕ್ಷಣದಲಿ ಪ್ರೇಮನಿವೇದಿಸದೆ ಪ್ರೇಮಿಯಾದಜೊತೆಗಾರನಾಗದೆ ಜೊತೆಯ ಹೆಜ್ಜೆಯಾದನೆನಪುಗಳ ಅಂಗಳದ ಚಿತ್ತಾರವಾದನೋಡದಿದ್ದರೂ ನೋಟ ಕೂಡಿಸಿದಪ್ರೇಮಿಯಾಗದೆ ಪ್ರೇಮಿಸುವುದ ಕಲಿಸಿದನೀವು ಹೇಳುವಿರಾ ಇದು ಒಲವಲ್ಲವೆಂದು?ನಂಬದಿರಲಿ ಹೇಗೆ ವ್ಯಕ್ತ ಅವ್ಯಕ್ತಗಳನಡುವೆ ನಿಂತಿದೆ ಒಲವು ತೆಳು ಗೆರೆಯಾಗಿ ಓ ಕೇಳೆನ್ನ ಒಲವೇನಿನ್ನ ನೆನಪುಗಳಲ್ಲಿ ನಾನುಕಾಣುತ್ತೇನೆ ಕಳೆದ ಎಲ್ಲವನುಮತ್ತೆ ಬದುಕುವುದೆಂದರೆಇದೇ ಏನು? ******************************************
ಶುಭಾಶಯ ವೀಣಾ ರಮೇಶ್ ಅದೆಷ್ಟೋ ಪ್ರೇಮ ಪತ್ರಗಳುವಸಂತನ ಕುಂಚದಲಿಪ್ರೇಮ ತಳಿರಿನ ಚಿಗುರಿನಲಿ,ಬರೆದುರವಾನಿಸಿದೆ,ಸ್ವೀಕರಿಸು ನಲ್ಲೇ ನಿನ್ನದೊಂದುಮುಗುಳು ನಗೆ ಬೀರಿ ಕೆಂಪು ಗುಲಾಬಿಯಂತೆನಾಚಿ ನಿಂತೆ ನೀನುಇರುಳು ಚಲುವ ಹಣತೆ ಪ್ರೇಮದ ಅರಸಿ ನೀನುಲಜ್ಜೆ ಕೆಂಪಿನಲಿ ಅರಳಿದಪ್ರಣಯ ಪ್ರಣೀತೆ ಎದೆಯ ಸಿಹಿಯೊಳಗೆಚೆಲ್ಲಿರುವುದು ಬರಿದಾಗದಸಂಪ್ರೀತಿಬಣ್ಣದ ಹಚ್ಚೆಯಲಿಬರೆದಿರುವುದು ನಿನ್ನಹೆಸರಿನ ಪ್ರೀತಿ ತೂಗು ಮಂಚದಲ್ಲಿಮೌನ ಪ್ರೇಮ,ಹರೆಯಕೂಗಿದೆ ನಿನ್ನ ಜೊತೆಮೇಘ ಶ್ಯಾಮ ರಾಧೆನಾವಿಬ್ಬರೂ ತೂಗಿದಂತೆ ಕತ್ತಲ ಕಂಬಳಿ ಕಿತ್ತೊಗೆದುಪೂರ್ಣ ಚಂದಿರಹೃದಯ ಬಾನಿಗೆ ಇಳಿದುಪ್ರಣಯ ಹಾದಿಗೆಮಧುಚಂದಿರನ ಸೆಳೆದುಪ್ರೇಮ ಚಂದಿರ ಈಗಸಿಹಿ ನಗೆಯಲಿ ಬಿರಿದು ************************************
ಪ್ರೇಮ ಅರುಣ ರಾವ್ ಹೃದಯದರಮನೆಯಲ್ಲಿ ಹೊಸ ರಾಗತಾಳ ಮೇಳಗಳ ಅಲೆಗಳೆಬ್ಬಿಸುವನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ನೋಡದಿದ್ದರೆ ಸತ್ತೇ ಹೋಗುವೆನೆಂದೆನಿಸಿಇರುಳೆಲ್ಲಾ ಕಾಡಿಸಿ ಹಗಲಲ್ಲಿ ಬೇಯಿಸುವನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ಒಮ್ಮೊಮ್ಮೆ ಸರಸ ಮತ್ತೊಮ್ಮೆ ವಿರಸವಿರಸವನ್ನೂ ಅಮೃತದಂತೆ ಸವಿಜೇನಾಗಿಸುವನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ಕ್ಷಣ ಕ್ಷಣವು ಅನುದಿನವು ನೆನಪಿನಅಂಗಳದಲ್ಲಿ ಹಗುರವಾಗಿ ತೇಲಿಸುವನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ತ್ಯಾಗದ ಪ್ರತಿರೂಪ ಅಭಿಮಾನದ ಅನುರೂಪಮರೆತೆವೆಂದರೂ ಮರೆಯಲಾಗದನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ನಿನಗೆ ನೀ ಸರಿಸಾಟಿ ಗಗನಕ್ಕಿಂತಲೂ ಮೇಟಿಆಸೂರ್ಯ ಚಂದ್ರಾರ್ಕವಾಗಿಹನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ಜಗದಲ್ಲೆಲ್ಲದಕ್ಕೂ ಸಾವುಂಟು ಕೊನೆಯುಂಟುಸಂಜೀವಿನಿ ಚಿರಂಜೀವಿ ಅಜರಾಮರವಾಗಿಹನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? *********************
ಪ್ರೇಮದ ಹನಿಗಳು ಸುವಿಧಾ ಹಡಿನಬಾಳ ೧) ಅವಳು ನಕ್ಕಾಗಮೂಡಿದ ಗುಳಿಕೆನ್ನೆಯ ಸುಳಿಯಲಿಅವ ಬಿದ್ದ ಅವಳಪ್ರೇಮದ ಅಲೆಯಲಿ ೨) ನಲ್ಲ ನೀ ಹಚ್ಚಿದಪ್ರೇಮದ ಹಣತೆನಂದಾದೀಪದಂತೆಮಿನುಗುತಿದೆ ನನ್ನತನುಮನದಲಿ ಅನುದಿನ ೩) ಅವಳ ಪ್ರೀತಿಯ ಕರೆಗೆಅವ ಕರಗುತಿಲ್ಲಒಂಥರಾ ಚ್ಯಾಯಿಂಗ್ಗಮ್ ನಂತೆ ೪) ಪ್ರೇಮವೆಂದರೆಹೃದಯದಾ ಆಲಾಪತನುಮನದಲಿ ಪುಳಕನೆನಪಿನಲ್ಲೆ ಜಳಕಹತ್ತಿರಿರಲು ಬೆರಳತುದಿ ಸೋಂಕಿದರೂಕೆಂಪೇರುವ ಕೆನ್ನೆದೂರಿರಲು ಹಿತವಾಗಿಸುಡುವ ಬೇನೆ ೫) ಬಾನು ಭೂಮಿಒಂದಾಗುವ ಹೊತ್ತುಜಗಕೆ ಸಾರಿದೆ ಪ್ರೇಮನಿತ್ಯ ನಿರಂತರ ಹೊಸತು **************************
ಇನಿಯ ಅಕ್ಷತಾ ಜಗದೀಶ ಪ್ರೇಮದ ಕಡಲಾಚೆ ಇಚೆಗಿನದಡದೊಳು ಮೂಡಿದ ನಮ್ಮ ಪ್ರೇಮ..ಈಗ ಒಂದೇ ದೋಣಿಯೊಳು ಕುಳಿತುಸಾಗಬೇಕೆನಿಸುತಿದೆ …ಈ ನಮ್ಮ ಪಯಣ… ವಿಶಾಲ ಕಡಲಿನಂತೆ ನಿನ್ನ ಪ್ರೇಮಅಪರಿಮಿತ…ನಿನ್ನ ಬಾಹುಬಂಧನದೊಳು ನಾನಾಗಿಹೆಮೂಕ ವಿಸ್ಮಯ….ಬಾಳೆಂಬ ಪ್ರೀತಿಯ ದೋಣಿಗೆಇನಿಯನೇ ನೀನಾಗು ನಾವಿಕನಿನ್ನ ಮಾತಿನ ಅಲೆಯೊಳುಮೌನವಾಗಿ ಸಾಗುವೆ ನಾ ನಿರಂತರ.. ಸ್ನೇಹದ ಈ ಅನುಬಂಧ..ಪ್ರೇಮದ ಬಂಧವಾಯ್ತು..ನನ್ನ ಕನಸಿನ ಲೋಕನಿನ್ನಿಂದ ನನಸಾಯ್ತು…ಸೆರೆ ಹಿಡಿದೆ ಕಣ್ಣಲ್ಲೇ…ಕಡಲಾಳದ ಮುತ್ತಿನ ಹಾಗೆ..ನನ್ನ ನಾಳೆಯ ಬಾಳಿಗೆನೀನಾದೆ ಮಾಸದ ಹಣತೆ.. ***********************************









