ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹಕ್ಕು

ರಜನಿ ತೋಳಾರ್

Photo, Image & Picture of Woman Ice Sculpture

ನಿನ್ನನೆನಪುಗಳ ಶಿಖರದಮೇಲೆ
ಮನೆಯಕಟ್ಟಿರುವೆ
ನೀಚೂರುಚೂರುಮಾಡಿದ
ಕನಸುಗಳಚೂರುಗಳ ಮೆಟ್ಟಿಲು
ನೋಡಿದಾಗಲೆಲ್ಲಾ
ಪಾದಗಳಲ್ಲಿನೆತ್ತರು!

ಮಂದಹಾಸದಮರೆಯಲ್ಲಿ
ಬಚ್ಚಿಡುವಹನಿಗಳ
ಕತ್ತಲಲ್ಲಿಬಿಚ್ಚಿದಾಗ
ಹೊತ್ತಿಕೊಳ್ಳುವಹಣತೆಯ
ಪ್ರತಿಉಸಿರಿನಲ್ಲೂ
ನಿನ್ನದೇನಗುವಿನನೆರಳು!

ನಿನ್ನಬರುವಿನ
ಹಂಬಲವೇನಿಲ್ಲ…
ಈನೆನಪುಗಳಮೇಲೆ
ಹಕ್ಕು
ಕೇವಲನನ್ನದಾಗಿರಲಿ
ಎಂಬುದೊಂದೇಛಲವು!

ಹಕ್ಕುಕಾಯಿದೆಗಳ
ಜಾತ್ರೆಗೆಜೊತೆಗೊಯ್ದು
ಕೊಡಿಸಿ
ಹಾಳೆತುಂಬಾಪದಗಳ
ಕ್ಷಣದಲ್ಲೇಕಣ್ಮರೆಯಾದೆ
ಅಂದು
ಉಡುಗೊರೆಯಕೊಟ್ಟು!

ಪದಗಳಬೇಡಿಯಿಂದ
ಅಕ್ಷರಗಳಬಿಡಿಸಿ
ಬಿತ್ತಿರುವೆ
ಬೇಲಿಸುತ್ತಲೂ
ನಿನ್ನನೆನಪಿನಲ್ಲಿ
ಚಿಗುರಿಕವನವಾಗಲು!


About The Author

1 thought on “ಹಕ್ಕು”

Leave a Reply

You cannot copy content of this page

Scroll to Top